ಮನೆ Latest News ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾಲ್ತುಳಿತ ಹಿನ್ನೆಲೆ; ರಾಜ್ಯ ಸರ್ಕಾರದ ವಿರುದ್ಧ ವಿಧಾನಸೌಧದಲ್ಲಿ ಬಿಜೆಪಿ ಮತ್ತು ಜೆಡಿಎಸ್...

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾಲ್ತುಳಿತ ಹಿನ್ನೆಲೆ; ರಾಜ್ಯ ಸರ್ಕಾರದ ವಿರುದ್ಧ ವಿಧಾನಸೌಧದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಪ್ರತಿಭಟನೆ

0

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಪಟ್ಟಂತೆ  ರಾಜ್ಯ ಸರ್ಕಾರದ ವಿರುದ್ಧ ವಿಧಾನಸೌಧದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಪ್ರತಿಭಟನೆ ನಡೆಸಿತು. ಗಾಂಧಿ ಪ್ರತಿಮೆ ಎದುರು ಬಿಜೆಪಿ-ಜೆಡಿಎಸ್ ವಿಧಾನಸಭೆ ಮತ್ತು ವಿಧಾನ ಪರಿಷತ್ ಸದಸ್ಯರು ಪ್ರತಿಭಟನೆ ನಡೆಸಿದರು. ವಿಪಕ್ಷ ಶಾಸಕರು  ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಘೋಷಣೆ ಕೂಗಿದರು. ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್, ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ‌, ವಿಧಾನಸಭೆ ವಿಪಕ್ಷ ಉಪ ನಾಯಕ ಅರವಿಂದ ಬೆಲ್ಲದ್, ವಿಧಾನ ಪರಿಷತ್ ನಲ್ಲಿ ಜೆಡಿಎಸ್ ನಾಯಕ ಎಸ್.ಎಲ್. ಭೋಜೇಗೌಡ ಸೇರಿದಂತೆ ಬಿಜೆಪಿ ಮತ್ತು ಜೆಡಿಎಸ್ ಶಾಸಕರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು

ಪ್ರತಿಭಟನೆಯಲ್ಲಿ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ ಆರ್ ಸಿಬಿ ಗೆಲುವಿನ ಲಾಭ ಪಡೆಯಲು ಮುಂದಾಗಿದ್ದರು. ಮೊದಲು ಪೊಲೀಸರ ತಪ್ಪಿಲ್ಲ ಎಂದರು, ಬಳಿಕ ಪೊಲಿಸರದ್ದೇ ತಪ್ಪು ಎಂದು ಹೇಳಿದರು.11 ಜನರ ಸಾವಿಗೆ ಸರ್ಕಾರ ಕಾರಣ.ರೈತರಿಗೆ ರಸಗೊಬ್ಬರ ಕೊಡುತ್ತಿಲ್ಲ. ಸಂಪೂರ್ಣ ಭ್ರಷ್ಟಾಚಾರದಲ್ಲಿ ಮುಳುಗಿದೆ.ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದರು.

ಪ್ರತಿಭಟನೆಯಲ್ಲಿ ವಿಧಾನ ಪರಿಷತ್ ನಲ್ಲಿ ಜೆಡಿಎಸ್ ನಾಯಕ ಎಸ್.ಎಲ್. ಭೋಜೇಗೌಡ ಮಾತನಾಡಿ ರಾಜ್ಯದಲ್ಲಿ ಸರ್ಕಾರ ಇದೆಯೋ ಇಲ್ಲವೋ ಎಂಬಂತಿದೆ. ವಿಧಾನಸೌಧದಲ್ಲಿ ಸಭೆ ಆರಂಭು ಮುನ್ನವೇ ಕಾಲ್ತುಳಿತ ಆಗಿತ್ತು. ಇದು ಸಿಎಂ, ಡಿಸಿಎಂ ಗೂ ಗೊತ್ತಿತ್ತು .ವಿಧಾನಸೌಧದ ಬಳಿ ಈ ಘಟನೆ ಆಗಿಲ್ಲ ಎಂದು ಸಿಎಂ ಹೇಳುತ್ತಾರೆ.ಸಿಎಂ ಮಾತು ಅಕ್ಷಮ್ಯ.ಅಮಾಯಕ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಿದರು.ನೇರವಾಗಿ ಸಿಎಂ, ಡಿಸಿಎಂ ಹೊಣೆ ಹೊರಬೇಕು ಎಂದು ಆಗ್ರಹಿಸಿದ್ರು.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮಾತನಾಡಿ ಬೇಜವಾಬ್ದಾರಿ ಸರ್ಕಾರ ಇದು.ಕಾಲ್ತುಳಿತ ಪ್ರಕರಣದಲ್ಲಿ ಸಿಎಂ, ಡಿಸಿಎಂ, ಗೃಹ ಸಚಿವರು ಜವಾಬ್ದಾರಿ ತೆಗೆದುಕೊಳ್ಳಬೇಕು.ಅಮಾಯಕ ಪೊಲಿಸ್ ಅಧಿಕಾರಿಗಳ ಮೇಲೆ ಕ್ರಮ ತೆಗೆದುಕೊಂಡರು. ಇನ್ನೊಂದೆಡೆ ರೈತರು ಗೊಬ್ಬರಕ್ಕಾಗಿ ಹೋರಾಡುತ್ತಿದ್ದಾರೆ.ಉತ್ತರ ಕರ್ನಾಟಕಕ್ಕೆ ನೀರಾವರಿ ಯೋಜನೆ ಇಲ್ಲ.ಪಿಎಸ್ ಐ ನೇಮಕಾತಿ ಆದೇಶ ಮಾಡುತ್ತಿಲ್ಲ.ಎಲ್ಲಾ ವಿಚಾರ ಇಟ್ಟುಕೊಂಡು ಸದನದ ಒಳಗೆ ಹೊರಗೆ ಹೋರಾಟ ಮಾಡುತ್ತೇವೆ ಎಂದು ಹೇಳಿದರು.

ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ಮಾತನಾಡಿ ಕಾಂಗ್ರೆಸ್ ನವರು ಕಾಟಾಚಾರಕ್ಕೆ ಅಧಿವೇಶನ ನಡೆಸುತ್ತಿದ್ದಾರೆ.ಬರೀ ಎರಡು ವಾರ ಅಧಿವೇಶನ ನಡೆಸುತ್ತಿದ್ದಾರೆ.ಆರ್ ಸಿಬಿ ಕಪ್ ಗೆದ್ದ ಸಂದರ್ಭದಲ್ಲಿ ಸಿಎಂ, ಡಿಸಿಎಂ ಫ್ಯಾಮಿಲಿ ಫೋಟೋ ತೆಗೆಸಿಕೊಳ್ಳಲು 11 ಜನರ ಅಮಾಯಕರ ಮನೆಯಲ್ಲಿ ಪೋಟೋ ಹಾಕಿಕೊಳ್ಳುವಂತಾಯ್ತು. ಕಾಲ್ತುಳಿತದಲ್ಲಿ ಸಾವಾದರೂ ದೋಸೆ ತಿನ್ನಲು ಹೋಟೆಲ್ ಗೆ ಹೋಗುತ್ತಾರೆ.ವಿಧಾನಸೌಧದ ಮುಂದೆಯೇ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಆಗಿಲ್ಲ ಅವರಿಗೆ.11 ಜನರ ಸಾವಿಗೆ ನ್ಯಾಯ ಕೇಳಲು ವಿಧಾನ ಸಭೆಯಲ್ಲಿ, ಪರಿಷತ್ ನಲ್ಲಿ ಹೋರಾಟ ಮಾಡುತ್ತೇವೆ. ಈ ಸರ್ಕಾರ ಪಕ್ಕಾ 60% ಸರ್ಕಾರ ಎಂದು ವಾಗ್ದಾಳಿ ನಡೆಸಿದರು.