ಬೆಂಗಳೂರು: ಆಗಸ್ಟ್ 5 ಕ್ಕೆ ಬೃಹತ್ ಪ್ರತಿಭಟನೆ ಹಿನ್ನೆಲೆ ಕೆಪಿಸಿಸಿ ಕಚೇರಿಯಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ ಕೆ ಶಿವಕುಮಾರ್, ಉಸ್ತುವಾರಿ ಸುರ್ಜೇವಾಲಾ ನೇತೃತ್ವದಲ್ಲಿ ಸಭೆ ನಡೆಯಿತು. ಸಭೆಯಲ್ಲಿ ಮತಗಳ್ಳತನದ ಹೋರಾಟದ ರೂಪುರೇಷೆಗಳ ಬಗ್ಗೆ ಚರ್ಚೆ ನಡೆಯಿತು. ಸಭೆಯಲ್ಲಿ ಭಾಗಿಯಾದ ಸಚಿವರಾದ ಮುನಿಯಪ್ಪ, ರಾಮಲಿಂಗಾರೆಡ್ಡಿ, ಚೆಲುವರಾಯಸ್ವಾಮಿ, ದಿನೇಶ್ ಗುಂಡೂರಾವ್, ಕೃಷ್ಣ ಬೈರೇಗೌಡ, ಬೈರತಿ ಸುರೇಶ್, ಎಂ ಸಿ ಸುಧಾಕರ್ ಸೇರಿ ಹಲವರು ಭಾಗಿಯಾಗಿದ್ದರು. ಬೆಂಗಳೂರು, ತುಮಕೂರು, ಕೋಲಾರ, ಬೆಂಗಳೂರು ದಕ್ಷಿಣ, ಬೆಂಗಳೂರು ಗ್ರಾಮಾಂತರ, ಮಂಡ್ಯ ಕಾಂಗ್ರೆಸ್ ಶಾಸಕರು,ಕೆಪಿಸಿಸಿ ಪದಾಧಿಕಾರಿಗಳು ಭಾಗಿಯಾಗಿದ್ದರು.
ಸಭೆಯಲ್ಲಿ ಫ್ರೀಡಂಪಾರ್ಕ್ ನಲ್ಲಿ ಆಗಸ್ಟ್ 5 ರಂದು ಪ್ರತಿಭಟನಾ ಸಭೆ ಮಾಡಲು ನಿರ್ಧರಿಸಲಾಯಿತು. ಬಹಿರಂಗ ಸಭೆ ಬಳಿಕ ಚುನಾವಣಾ ಆಯೋಗದವರೆಗೆ ಕಾಲ್ನಡಿಗೆ ನಡೆಯಲಿದೆ.ಕಾಲ್ನಡಿಗೆಯಲ್ಲಿ ಹೋಗಿ ರಾಹುಲ್ ಗಾಂಧಿ ಚುನಾವಣಾ ಆಯೋಗದ ಅಧ್ಯಕ್ಷರಿಗೆ ದೂರು ನೀಡಲಿದ್ದಾರೆ. ರಾಹುಲ್ ಗಾಂಧಿಗೆ ಎಐಸಿಸಿ ಅಧ್ಯಕ್ಷ ಖರ್ಗೆ, ಸಿಎಂ, ಡಿಸಿಎಂ ಮತ್ತು ಎಐಸಿಸಿ ಪದಾಧಿಕಾರಿಗಳು ಸಾಥ್ ನೀಡಲಿದ್ದಾರೆ.
ಇನ್ನು ಸಭೆ ಬಳಿಕ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್ ಇವತ್ತು ಬೆಂಗಳೂರು ವಿಭಾಗದ ಸಭೆ ಕರೆದಿದ್ವಿ. ಶಾಸಕರು ಎಲ್ಲರು ಈ ಸಭೆಗೆ ಬಂದಿದ್ದರು. 5 ನೇ ತಾರೀಖು ಕಾಂಗ್ರೆಸ್ ಪ್ರತಿಭಟನೆ ಇದೆ. ಏನು ಮಾಡಬೇಕು, ಎಲ್ಲಿ ಮಾಡಬೇಕು ಹೇಗೆ ಮಾಡಬೇಕು ಎಂದು ಚರ್ಚೆ ಮಾಡಿದ್ವಿ. ಎಲ್ಲರು ಕೂಡ ಅಭಿಪ್ರಾಯ ತಿಳಿಸಿದ್ದಾರೆ. ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ಮಾಡ್ತೇವೆ. ನಂತರ ಚುನಾವಣಾ ಆಯೋಗಕ್ಕೆ ದೂರು ಕೊಡ್ತೇವೆ. ಸರ್ಕಾರದ ಆದೇಶ, ಕಾನೂನಿನ ಚೌಕಟ್ಟಿನಲ್ಲಿ ನಮ್ಮ ಪ್ರತಿಭಟನೆ ಏನಿದೆ ಅದನ್ನ ಮಾಡ್ತೇವೆ. ನಾವು ಎಲ್ಲರನ್ನೂ ಆಹ್ವಾನಿಸಲಿದ್ದೇವೆ. ಮತದಾರರ ಹಕ್ಕು, ಸಂವಿಧಾನ ರಕ್ಷಣೆ ಆಗಬೇಕಿದೆ.ಹೀಗಾಗಿ ಎಲ್ಲರೂ ಈ ಪ್ರತಿಭಟನೆಗೆ ಬರಬೇಕು. ಕರ್ನಾಟಕದಿಂದಲೇ ಈ ಪ್ರತಿಭಟನೆ ಶುರುವಾಗ್ತಿದೆ ಎಂದರು.
ಇದೇ ವೇಳೆ ಮಾತನಾಡಿದ ಅವರು ಬೆಂಗಳೂರು ವಿಭಾಗ ಮಟ್ಟದ ಸಭೆಯನ್ನು ಮಾಡಿದ್ವಿ. ಐದನೇ ತಾರೀಕು ಪ್ರತಿಭಟನೆ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಎಲ್ಲಿ ಮಾಡಬೇಕು ಹೇಗೆ ಮಾಡಬೇಕು ಯಾವ ರೀತಿ ಮಾಡಬೇಕು ಅಂತ ಚರ್ಚೆ ಮಾಡಿದ್ವಿ. ನಾನು ಸಿಎಂ ಎಐಸಿಸಿ ಜನರಲ್ ಸೆಕ್ರೆಟರಿ ಶಾಸಕರು ಮಂತ್ರಿಗಳು ಸೇರಿ ಚರ್ಚೆ ಮಾಡಿದ್ದೇವೆ.ಎಲ್ಲರ ಅಭಿಪ್ರಾಯದಂತೆ ಈ ಪ್ರತಿಭಟನೆಯನ್ನು ಫ್ರೀಡಂ ಪಾರ್ಕ್ ನಲ್ಲಿ ಮಾಡ್ತಾ ಇದ್ದೇವೆ. ಪ್ರತಿಭಟನೆ ಮಾಡಿ ಅದಾದ ಮೇಲೆ ಎಲೆಕ್ಷನ್ ಕಮಿಷನ್ ಹೋಗಿ ಮನವಿ ಕೊಡ್ತೇವೆ.ಯಾರ್ಯಾರು ಹೋಗಿ ಮನವಿ ಸಲ್ಲಿಸಬೇಕು ಅನ್ನೋದನ್ನ ಸಂಜೆ ಅಂತಿಮಗೊಳಿಸುತ್ತೇವೆ.ನಾವೇ ಮಾಡಿರುವ ಕಾನೂನು, ಕೋರ್ಟ್ ಮಾರ್ಗದರ್ಶನ ಕೊಟ್ಟಿದೆ. ಆ ಕಾನೂನಿನ ಚೌಕಟ್ಟಿನಲ್ಲೇ ಕಾರ್ಯಕ್ರಮ ಮಾಡುತ್ತೇವೆ. ನಾವು ಯಾರಿಗೂ ತೊಂದರೆ ಕೊಡುವ ಉದ್ದೇಶ ಇಲ್ಲ. ನಾವು ಎಲ್ಲರಿಗೂ ಮನವಿ ಮಾಡಿದ್ದೇವೆ. ಎಲ್ಲಾ ನಾಯಕರು ಈ ಹೋರಾಟಕ್ಕೆ ಭಾಗಿಯಾಗಬೇಕು ಅಂತ. ನಮ್ಮ ಕಾರ್ಯಕರ್ತರು, ಮುಖಂಡರು ಬರಬೇಕು ಅಂತ ಆಹ್ವಾನ ಕೊಟ್ಟಿದ್ದೇವೆ. ರಾಜ್ಯದ ಎಲ್ಲಾ ಬ್ಲಾಕ್ ಕಾಂಗ್ರೆಸ್ ಪ್ರತಿನಿಧಿಗಳು ಬರಬೇಕು ಅಂತ ಹೇಳಿದ್ದೇವೆ. ಸುತ್ತಮುತ್ತ ಇರುವ ನಾಯಕರು ಕಾಂಗ್ರೆಸ್ ಕಾರ್ಯಕರ್ತರನ್ನ ಕರೆ ತರಬೇಕು ಅಂತ ಮಾರ್ಗದರ್ಶನ ಕೊಟ್ಟಿದ್ದೇವೆ. ಅಲ್ಲಿ ಎಷ್ಟು ಜನ ಹಿಡಿಯುತ್ತೆ ನೋಡಿ ಆಹ್ವಾನ ಕೊಟ್ಟಿದ್ದೇವೆ. ಚುನಾವಣಾ ಅಕ್ರಮದ ಬಗ್ಗೆ ನಮಗೆ ಬೇಕಾದಷ್ಟು ಉದಾಹರಣೆಗಳು ಇವೆ. ನಾವು ರಿಸರ್ಚ್ ಮಾಡಿದ್ದೇವೆ .ಯಾವ ರೀತಿ ಮಾಡಿದ್ದೇವೆ ಅನ್ನೋದನ್ನ ನಮ್ಮ ನಾಯಕರು ತಿಳಿಸುತ್ತಾರೆ. ನಾವು ಎಷ್ಟು ಜನ ಸೇರಿಸುತ್ತೇವೆ ಅಂತ ನಿರ್ಧಾರ ಮಾಡಿಲ್ಲ ಎಂದಿದ್ದಾರೆ.
ಇದು ನಮ್ಮ ಮತದಾನದ ಹಕ್ಕು, ಸಂವಿಧಾನದ ರಕ್ಷಣೆ ಪ್ರಜಾಪ್ರಭುತ್ವದ ಉಳಿವಿಗಾಗಿ ನಡೆಯುತ್ತಿರುವ ಹೋರಾಟ .ಹೀಗಾಗಿ ರಾಷ್ಟ್ರೀಯ ನಾಯಕರದ ರಾಹುಲ್ ಗಾಂಧಿ ಅವರು ಪಾರ್ಲಿಮೆಂಟ್ ಇದ್ದರೂ ಬರ್ತಿದ್ದಾರೆ.ಕರ್ನಾಟಕ ಭೂಮಿಯಿಂದಲೇ ಹೋರಾಟ ಪ್ರಾರಂಭ ಮಾಡಿದ್ರೆ ಈ ಹೋರಾಟಕ್ಕೆ ಇನ್ನಷ್ಟು ಶಕ್ತಿ ಬರುತ್ತೆ ಅಂತ ಬರುತ್ತಿದ್ದಾರೆ.ಈ ಹಿಂದೆ ಕೂಡ ಲೋಕಸಭೆ ಅಸೆಂಬ್ಲಿ ಎಲೆಕ್ಷನ್ ನಲ್ಲಿ ಲೋಪದೋಷ ಕಂಡುಹಿಡಿದಿದ್ದೇವೆ. ಇದನ್ನ ಜನರಿಗೆ ಮನದಟ್ಟು ಮಾಡಿಕೊಡುವ ಸಲುವಾಗಿ ಈ ಹೋರಾಟವನ್ನು ಮಾಡುತ್ತಿದ್ದೇವೆ. ರಾಹುಲ್ ಗಾಂಧಿ, ಎಐಸಿಸಿ ಪದಾಧಿಕಾರಿಗಳು ಎಲ್ಲರೂ ಕೂಡ ಕಾರ್ಯಕ್ರಮಕ್ಕೆ ಆಗಮಿಸ್ತಾರೆ.ಪಾದಯಾತ್ರೆಯಲ್ಲ ಕಾನೂನು ಚೌಕಟ್ಟಿನಲ್ಲಿ ಏನು ಮಾಡಬೇಕು ಮಾಡುತ್ತೇವೆ . ಸರ್ಕಾರ ಹೊರಡಿಸಿರುವ ನೋಟಿಫಿಕೇಶನ್ ಪ್ರಕಾರ ನಾವು ನಡೆದುಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.