ಬೆಂಗಳೂರಿನಲ್ಲಿ ಉಗ್ರರಿಗೆ ನೆರವು ನೀಡಿದವರ ಬಂಧನ ಹಿನ್ನೆಲೆ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ್ರು.
ಈ ವೇಳೆ ಮಾತನಾಡಿದ ಅವರು ಎನ್ ಐಎಗೆ ಸಿಗುವ ಮಾಹಿತಿ ನಮ್ಮ ಗುಪ್ತಚರ ಇಲಾಖೆಗೆ ಯಾಕೆ ಸಿಗಲ್ಲ?. ನಮ್ಮ ಇಂಟೆಲಿಜೆನ್ಸ್ ಕೋಮಾ ಸ್ಥಿತಿಗೆ ಏನಾದರೂ ತಲುಪಿದ್ಯಾ?. ಅಥವಾ ಗೊತ್ತಿದ್ದೂ ಗೊತ್ತಿಲ್ಲದೇ ಇರುವ ಸ್ಥಿತಿ ಇದ್ಯಾ?. ದುರ್ದೈವ ಅಂದರೆ ನಮ್ಮ ಇಂಟೆಲಿಜೆನ್ಸ್ ಗೆ ಜನ ಸೇರುವುದೂ ಗೊತ್ತಾಗಲ್ಲ, ಜನ ಸಾಯುವುದೂ ಗೊತ್ತಾಗಲ್ಲ. ಜೈಲ್ ಅನ್ನು ಒಂದು ರೀತಿ ಸೂಪರ್ ಮಾರ್ಕೆಟ್ ಮಾಡಿಕೊಂಡಿದ್ದಾರೆ.ಡಾ. ನಾಗರಾಜ್ ರನ್ನು ನಿರಂತರ ತಪಾಸಣೆ ಯಾಕೆ ಮಾಡುತ್ತಿರಲಿಲ್ಲ?. ಜೈಲನ್ನೇ ಕೇಂದ್ರವಾಗಿಟ್ಟುಕೊಂಡು ಕೆಲಸ ಮಾಡುವುದು ಅಂದರೆ ಏನು ಹೇಳಬೇಕೋ ಗೊತ್ತಾಗಲ್ಲ. ಸಿಎಂಗೆ ಏನಾದರೂ ಕೇಳಿದರೆ ನನಗೆಲ್ಲಾ ಗೊತ್ತು ಅಂತಾರೆ. ಗೃಹ ಸಚಿವರನ್ನು ಕೇಳಿದರೆ ಅವರ ಇಲಾಖೆಯಲ್ಲಿ ಏನು ನಡೆದರೂ ಗೊತ್ತಾಗಲ್ಲ, ಮಾಹಿತಿ ಇಲ್ಲ ಅಂತಾದರೆ ಡಿಸಿಎಂ ಕೇಳಿದರೆ ಯಾವನು ಹೇಳಿದವನು ನಟ್, ಬೋಲ್ಟ್ ಟೈಟ್ ಮಾಡುತ್ತೇನೆ ಅಂತಾರೆ. ಸಿಎಂ ಭೂತ, ವರ್ತಮಾನ, ಭವಿಷ್ಯ ತಿಳಿದಿರುವ ಸರ್ವಜ್ಞ. ಸರ್ಕಾರದ ರೇಟ್ ಕಾರ್ಡ್ ನಿಂದಾಗಿ ದಕ್ಷ ಅಧಿಕಾರಿಗಳಿಗೆ ಸೂಕ್ತ ಸ್ಥಳ ಸಿಗುತ್ತಿಲ್ಲ. ಐಎಸ್ ಡಿ ವಿಭಾಗ ಸಂಪೂರ್ಣ ವಿಫಲ ಆಗಿದೆ. ಕಾಂಗ್ರೆಸ್ ಪಕ್ಷಕ್ಕೆ ಯಾವುದೇ ಘಟನೆಗಳು ಗಂಭೀರ ಪ್ರಕರಣಗಳೇ ಅಲ್ಲ ಎಂದು ವಾಗ್ದಾಳಿ ನಡೆಸಿದ್ರು.
ಕಾಂಗ್ರೆಸ್ ನಲ್ಲಿ ರಾಜಕೀಯ ಚಟುವಟಿಕೆಗಳನ್ನು ಟೂರಿಂಗ್ ಟೆಂಟ್ ಮಾಡಿಕೊಂಡಿದ್ದಾರೆ. ಇವರ ನಾಟಕದ ಟೆಂಟ್ ಮೈಸೂರು, ಬೆಂಗಳೂರು, ದೆಹಲಿ, ಕಲ್ಬುರ್ಗಿಗೆ ಶಿಫ್ಟ್ ಆಗುತ್ತಿದೆ. ಸರ್ಕಾರದ ಆಡಳಿತ, ಗುಪ್ತಚರ ವ್ಯವಸ್ಥೆಗೆ ಏನಾಗಿದೆ?. ನಿಮಗೆ ಅಧಿಕಾರ ನಡೆಸಲು ಸಾಧ್ಯವಿಲ್ಲ ಎಂದಾದರೆ ಬಿಟ್ಟು ತೊಲಗಿ. ನಿಮ್ಮಿಂದ ರಾಜ್ಯ ಹಾಳಾಗುವುದು, ಉಗ್ರರ ತಾಣವಾಗುವುದು ಬೇಡ. ನೀವು ಗಂಭೀರವಾಗಿ ತೆಗೆದುಕೊಂಡಿಲ್ಲ ಎಂಬುದಕ್ಕೆ ಇದಕ್ಕಿಂತ ನಿದರ್ಶನ ಬೇಕಾ?. ಕೆಟ್ಟ ಕಾರಣಕ್ಕೆ ಮಾತ್ರ ಕರ್ನಾಟಕ ಸುದ್ದಿ ಆಗುತ್ತಿದೆ. ಕೆಲವು ಸತ್ಯ ಹೇಳಿದರೆ ಅವರಿಗೆ ಸಂಕಟ ಆಗುತ್ತದೆ. ಜನ ಸತ್ತಾಗ ಮಸಾಲೆ ದೋಸೆ ತಿನ್ನುತ್ತಿರುತ್ತಾರೆ ಎಂದು ವ್ಯಂಗ್ಯವಾಡಿದರು.
ಕಾಂಗ್ರೆಸ್ ನಲ್ಲಿ ಪವರ್ ಶೇರಿಂಗ್ ಇಲ್ಲ ಎಂಬರ್ಥದಲ್ಲಿ ಸಿಎಂ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿದ ಅವರು ಸಿಎಂ ಬದಲಾವಣೆ ಪ್ರಶ್ನೆ ಬಿಜೆಪಿ ಎತ್ತಿದ್ದಲ್ಲ. ಸರ್ಕಾರ ಬಂದು ಮೂರು ತಿಂಗಳಾದಾಗ ಡಿ.ಕೆ. ಸುರೇಶ್ ಏನು ಒಪ್ಪಂದ ಆಗಿದೆ ಅಂತಾ ಹೈಕಮಾಂಡ್, ಸಿಎಂಗೆ ಗೊತ್ತಿದೆ ಅಂತಾ ಹೇಳಿದಾಗ ಇದು ಶುರುವಾಯಿತು. ಬಸವರಾಜ ಶಿವಗಂಗಾ, ಇಕ್ಬಾಲ್ ಹುಸೇನ್, ಆರ್.ವಿ. ದೇಶಪಾಂಡೆ ಇವರೆಲ್ಲಾ ಬಿಜೆಪಿಯವರಾ?. ಬೆಲೆ ಏರಿಕೆ ಆಗಿ ಜನ ಚಳಿವಳಿಯ ಹಾದಿ ಹಿಡಿದಿದ್ದಾರೆ. ಇದರ ಮಧ್ಯೆ ನೀವು ನಾನೇ ನಾನೇ ಅನ್ನುತ್ತಿದ್ದೀರಿ. ಜಾಸ್ತಿ ನಾನೇ ನಾನೇ ಅಂದಾಗ ಅನುಮಾನ ಶುರುವಾಗುತ್ತದೆ ಎಂದರು.
2000 ರೂ. ಗ್ಯಾರಂಟಿಯಿಂದ ಒಂದು ಕುಟುಂಬ ನಡೆಯುತ್ತದೆ ಎಂಬ ಸಿಎಂ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿ ಸ್ವಲ್ಪ ಭೂಮಿಗೆ ಇಳಿದು ಕೆಳಗಡೆ ನೋಡಲಿ. ಸಿಎಂ ಸ್ಯಾಚುರೇಷನ್ ಲೆವೆಲ್ ತಲುಪಿ ಭೂಮಿಯ ಸಂಪರ್ಕ ಕಳೆದುಕೊಂಡುಬಿಟ್ಟಿದ್ದಾರೆ. ಅವರಿಗೆ ಪಕ್ಷದಲ್ಲಿ ಏನಾಗುತ್ತಿದೆ ಅಂತಾನೇ ಗೊತ್ತಾಗುತ್ತಿಲ್ಲ, ಇನ್ನು ಭೂಮಿಯಲ್ಲಿ ಏನಾಗುತ್ತಿದೆ ಅಂತಾ ಹೇಗೆ ಗೊತ್ತಾಗುತ್ತದೆ?. ಸಿದ್ದರಾಮಯ್ಯ ಭೂಮಿಯಿಂದ ಡಿಸ್ ಕನೆಕ್ಟ್ ಆಗಿದ್ದಾರೆ. ಅವರ ಸುತ್ತ ಹೊಗಳು ಭಟರು ತುಂಬಿದ್ದಾರೆ. ಅಧಿಕಾರ ಇದ್ದಾಗ ಎಲ್ಲರೂ ಇಂದ್ರ, ಚಂದ್ರ ಅಂತಾರೆ, ಕೆಳಗೆ ಬಿದ್ದಾಗಲೇ ಗೊತ್ತಾಗುವುದು. ಕಾಂಗ್ರೆಸ್ ನಲ್ಲಿ ಕ್ರಾಂತಿ ಆದರೆ ನಮಗೇನ್ರೀ ಸಂಬಂಧ? ನಮಗೆ ಸಂಬಂಧ ಇರುವುದು ಜನರ ಜೊತೆ ಎಂದು ಹೇಳಿದರು.
ನಾವು ಬಿಜೆಪಿ ರೀತಿ ಹಿರಿಯರನ್ನು ನಡೆಸಿಕೊಳ್ಳಲ್ಲ ಎಂಬ ಸುರ್ಜೇವಾಲಾ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿ ಗುಲಾಂ ನಬಿ ಆಜಾದ್, ಸೀತಾರಾಮ ಕೇಸರಿ, ವೀರೇಂದ್ರ ಪಾಟೀಲ್, ಪಿ.ವಿ. ನರಸಿಂಹರಾವ್ ಇವರನ್ನೆಲ್ಲಾ ಹೇಗೆ ನಡೆಸಿಕೊಂಡಿದ್ದಾರೆ ಅಂತಾ ಸ್ಚಲ್ಪ ತಿಳಿದುಕೊಳ್ಳಬೇಕಾಗುತ್ತದೆ. ಶಶಿ ತರೂರ್ ಅವರ ಭವಿಷ್ಯದ ಬಗ್ಗೆ ಪ್ರಶ್ನಾರ್ಥಕ ಚಿಹ್ನೆ ಇದೆ. ಸತ್ಯ ಹೇಳಿದರೆ ಕಾಂಗ್ರೆಸ್ ನಲ್ಲಿ ಭವಿಷ್ಯ ಇಲ್ಲ ಎಂದರು.
ರಾಜ್ಯದಲ್ಲಿ ದ್ವಿಭಾಷಾ ಸೂತ್ರ ಅಳವಡಿಕೆಗೆ ಸರ್ಕಾರ ಸಿದ್ಧತೆ ಬಗ್ಗೆ ಮಾತನಾಡಿ ದೇಶಕ್ಕೆ ತ್ರಿಭಾಷಾ ಸೂತ್ರ ಕೊಟ್ಟಿದ್ದು ಇಂದಿರಾಗಾಂಧಿ, ನೆಹರು . ತ್ರಿಭಾಷಾ ಸೂತ್ರ ಕೊಟ್ಟಿದ್ದು ಬಿಜೆಪಿ ಅಲ್ಲ. ತನ್ನ ಪಕ್ಷದ ನೀತಿಗೇ ಅವರು ಬದ್ಧರಿಲ್ಲ ಎಂಬುದನ್ನು ಇದು ತೋರಿಸುತ್ತದೆ. ಕನ್ನಡ ಶಾಲೆಗಳನ್ನೇ ನಾವು ಉಳಿಸಿಕೊಳ್ಳಲಾಗುತ್ತಿಲ್ಲ.ಈಗ ಇರುವುದೇ ಬೆರಕೆ ಕನ್ನಡ . 25-30 ವರ್ಷಗಳ ಬಳಿಕ ಕನ್ನಡ ಹುಡುಕಬೇಕಾದ ಸ್ಥಿತಿ ಬರುತ್ತದೆ ಎಂದರು.











