ಮನೆ Latest News ವಿಜಯಪುರ ಜಿಲ್ಲೆಯಲ್ಲಿ ವಕ್ಫ್ ಆಸ್ತಿ ನೋಂದಣಿ ವಿವಾದ ಹಿನ್ನೆಲೆ; ಬಿಜೆಪಿ ಪರಿಶೀಲನಾ ತಂಡ ಪುನರ್ ರಚನೆ

ವಿಜಯಪುರ ಜಿಲ್ಲೆಯಲ್ಲಿ ವಕ್ಫ್ ಆಸ್ತಿ ನೋಂದಣಿ ವಿವಾದ ಹಿನ್ನೆಲೆ; ಬಿಜೆಪಿ ಪರಿಶೀಲನಾ ತಂಡ ಪುನರ್ ರಚನೆ

0

ಬೆಂಗಳೂರು; ವಿಜಯಪುರ ಜಿಲ್ಲೆಯಲ್ಲಿ ವಕ್ಫ್ ಆಸ್ತಿ ನೋಂದಣಿ ವಿವಾದ ಹಿನ್ನೆಲೆ  ಬಿಜೆಪಿ ಪರಿಶೀಲನಾ ತಂಡ ಪುನರ್ ರಚನೆಯಾಗಿದೆ.ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆಕ್ರೋಶದ ಹಿನ್ನೆಲೆಯಲ್ಲಿ ಬಿಜೆಪಿ ಪರಿಶೀಲನಾ ತಂಡ ಪುನರ್ ರಚನೆ ಮಾಡಲಾಗಿದೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸಂಸದ ರಮೇಶ್ ಜಿಗಜಿಣಗಿ ಮತ್ತು ಶಾಸಕ ಯತ್ನಾಳ್ ಸೇರ್ಪಡೆಗೊಳಿಸಿ ತಂಡ ಪುನರ್ ರಚಿಸಿದೆ. ಸಂಸದ ಗೋವಿಂದ ಕಾರಜೋಳ ನೇತೃತ್ವದ ಬಿಜೆಪಿ ತಂಡ ನಾಳೆ ವಿಜಯಪುರ ಜಿಲ್ಲೆಗೆ ತೆರಳಲಿದೆ.ಇಂದು ತಂಡಕ್ಕೆ ಸಂಸದ ಜಿಗಜಿಣಗಿ, ಶಾಸಕ ಯತ್ನಾಳ್ ಮತ್ತು ಮಾಜಿ ಜಿಲ್ಲಾಧ್ಯಕ್ಷ ಎಂ.ಬಿ. ಜಿರಲಿ ಸೇರ್ಪಡೆಯಾಗಿದ್ದಾರೆ.

ಇಂದು ಮಧ್ಯಾಹ್ನ ಬಿಜೆಪಿ ತಂಡವನ್ನು ಬಹಿಷ್ಕರಿಸುವುದಾಗಿ ಯತ್ನಾಳ್ ಹೇಳಿಕೆ ನೀಡಿದ್ದರು.ಯತ್ನಾಳ್ ಆಕ್ರೋಶದ ಬೆನ್ನಲ್ಲೇ ರಾಜ್ಯಾಧ್ಯಕ್ಷರಿಂದ ತಂಡ ಪುನರ್ ರಚನೆಯಾಗಿದೆ.

ನಿನ್ನೆ ಸಂಸದ ಕಾರಜೋಳ ನೇತೃತ್ವದಲ್ಲಿ ಶಾಸಕರಾದ ಹರೀಶ್ ಪೂಂಜ, ಮಹೇಶ್ ಟೆಂಗಿನಕಾಯಿ, ಮಾಜಿ ಎಂಎಲ್ಸಿ ಅರುಣ್ ಶಹಾಪುರ ಮತ್ತು ರೈತ ಮೋರ್ಛಾ ರಾಜ್ಯ ಪ್ರಧಾನ ಕಾರ್ಯದರ್ಶಿ ಕಲ್ಮರುಡಪ್ಪ ಅವರನ್ನೊಳಗೊಂಡ ತಂಡ ರಚಿಸಿದ್ದ ಬಿಜೆಪಿ ಇಂದು  ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆಕ್ರೋಶದ ಹಿನ್ನೆಲೆಯಲ್ಲಿ ಬಿಜೆಪಿ ಪರಿಶೀಲನಾ ತಂಡ ಪುನರ್ ರಚನೆ ಮಾಡಿದೆ.

ವಿಜಯನಗರದ ವಕ್ಫ್ ಬೋರ್ಡ್ ಹಾಗೂ ರೈತರ ಭೂಮಿ ವಿಚಾರ ; ರೈತರ ಒಂದಿಂಚೂ ಜಾಗವೂ ವಕ್ಫ್ ಬೋರ್ಡ್ ಗೆ ಹೋಗಬಾರದು ಎಂದು ಸ್ಪಷ್ಟವಾಗಿ ಹೇಳಿದ್ದೇನೆ ಎಂದ ಸಚಿವ ಎಂ.ಬಿ. ಪಾಟೀಲ್

ಬೆಂಗಳೂರು; ವಿಜಯನಗರದ ವಕ್ಫ್ ಬೋರ್ಡ್ ಹಾಗೂ ರೈತರ ಭೂಮಿ ವಿಚಾರಕ್ಕೆ ಸಂಬಂಧಪಟ್ಟಂತೆ ರೈತರ ಒಂದಿಚೂ ಜಾಗವೂ ವಕ್ಫ್ ಬೋರ್ಡ್ ಗೆ ಹೋಗಬಾರದು ಎಂದು ಸ್ಪಷ್ಟವಾಗಿ ಹೇಳಿದ್ದೇನೆ ಎಂದು ಸಚಿವ ಎಂ.ಬಿ. ಪಾಟೀಲ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು ವಿಜಯನಗರದ ವಕ್ಫ್ ಬೋರ್ಡ್ ಹಾಗೂ ರೈತರ ಭೂಮಿ ವಿಚಾರ ರಾಷ್ಟ್ರೀಯ, ರಾಜ್ಯ ಮಟ್ಟದಲ್ಲಿ ಬಹಳಷ್ಟು ಚರ್ಚೆ ಆಗುತ್ತಿದೆ.ರೈತರಿಗೆ ನೋಟಿಸ್ ಕೊಟ್ಟಿದ್ದಾರೆ.ನಾನು ರೈತರ ಜೊತೆ ಸಭೆ ಮಾಡಿ, ತಹಶೀಲ್ದಾರರ ಜೊತೆಗೂ ಸಭೆ ಮಾಡಿದ್ದೇನೆ.ರೈತರ ಒಂದಿಚು ಜಾಗವೂ ವಕ್ಫ್ ಬೋರ್ಡ್ ಗೆ ಹೋಗಬಾರದು ಎಂದು ಸ್ಪಷ್ಟವಾಗಿ ಹೇಳಿದ್ದೇನೆ. ತೇಜಸ್ವಿ ಸೂರ್ಯ ರಾಷ್ಟ್ರೀಯ ಮಾಧ್ಯಮದಲ್ಲಿ ಹೈಲೆಟ್ ಮಾಡಿದ್ದಾರೆ .. ವಕ್ಫ್ ಆಸ್ತಿಗಳು 1974, 1978 ಗೆಜೆಟ್ ನೋಟಿಪಿಕೇಷನ್ ಆಗಿದೆ.2016ರಲ್ಲೂ‌ ಗೆಹೆಟ್ ನೋಟಿಫಿಕೇಷನ್ ಆಗಿದೆ ರೈತರಿಗೆ ತಪ್ಪಾಗಿ ನೋಟಿಸ್ ಹೋಗಿದೆ.1200 ಎಕರೆ ಸ್ಮಶಾನ ಭೂಮಿಗೆ ವಕ್ಫ್ ಗೆ ನಮೂದು ಆಗಿದೆ.ರೈತರ ಯಾವುದೆರ ಆಸ್ತಿಯೂ ವಕ್ಫ್ ಆಸ್ತಿ ಅಲ್ಲ. ಅದು ರೈತರ ಜಮೀನು.ಗೆಜೆಟ್ ನಲ್ಲಿ‌ ತಪ್ಪಾಗಿ ನಮೂದು ಆಗಿದೆ.ರೈತರ ಜೊತೆ ಸಭೆ ಮಾಡಿ ತಹಶೀಲ್ದಾರರ ಮಟ್ಟದಲ್ಲಿ ತಿಳಿದ್ದೇನೆ.ಕಂದಾಯ ದಾಖಲೆಗಳನ್ನ ಪರಿಶೀಲನೆ ಮಾಡಿ, ಕಾನೂನಾತ್ಮವಾಗಿ ದಾಖಲೆಗಳನ್ನ ಇಟ್ಟುಕೊಂಡು ಬಗೆಹರಿಸುವುದಾಗಿ ಹೇಳಿದ್ದೇನೆ ಎಂದರು.

ತೇಜಸ್ವಿ ಸೂರ್ಯ ಆತಂಕ‌ಪಡುವ ಪಡುವ ಅಗತ್ಯ ಇಲ್ಲ.1200 ಎಕರೆಯಲ್ಲಿ‌ ಕೇವಲ 11 ಎಕರೆ ಆಸ್ತಿ ಮಾತ್ರ ವಕ್ಫ್ ಗೆ ಸೇರುತ್ತೆ. ಜಮೀರ್ ಅವರು ಅಲ್ಪಸಂಖ್ಯಾತ ಇಲಾಖೆ ಪರಿಶೀಲನೆ ನಡೆಸುವಾಗ ಹೇಳಿದ್ದಾರೆ. ಹೊನವಾಡ ನನ್ನ ಮತಕ್ಷೇತ್ರ ಬರುತ್ತೆ.ತಪ್ಪಾಗಿ ನೋಟಿಫಿಕೇಷನ್ ಆಗಿದೆ. ತಹಶಿಲ್ದಾರರು ಸಹ ಸರ್ವೆ ನಂಬರ್ ತಪ್ಪಿದೆ ಅಂತ ಹೇಳಿದ್ದಾರೆ.ಯಾವುದೇ ಗೊಂದಲ ಇಲ್ಲ.ರೈತರ ಬಗ್ಗೆ ರಾಜಕೀಯ ಮಾಡುವುದು ಸರಿಯಲ್ಲ. ಮತ್ತೊಂದು ಜಮೀನು ತಪ್ಪಾಗಿ ನಮೂದಾಗಿದೆ.ಯತ್ನಾಳ್ ಕೂಡ ರಾಜಕೀಯ ಮಾಡುತ್ತಿದ್ದಾರೆ ಎಂದರು.

ವಕ್ಪ್ ಹಾಗೂ ರೈತರ ಜಮೀನಿಗೆ ಸಂಬಂಧ ಇಲ್ಲ. ತಪ್ಪಾಗಿ‌ ನೋಟಿಫಿಕೇಷನ್ ಆಗಿದೆ ಅಷ್ಟೆ. ವಿಜಯಪುರದಲ್ಲಿ ಎಷ್ಟು ವಕ್ಫ್ ಆಸ್ತಿ ಅಂತ ಸಭೆ ಮಾಡಿ ಮಾಹಿತಿ ಪಡೆಯುತ್ತೀನಿ. ಒಂದೇ ಒಂದು ಇಂಚು ರೈತರದ್ದಾಗಲಿ, ಖಾಸಗಿಯದ್ದಾಗಲಿ‌ ವಕ್ಫ್ ಆಸ್ತಿ ಇಲ್ಲದನ್ನ ಯಾವುದೇ ಕಾರಣಕ್ಕೂ ಬಿಟ್ಟು ಬಿಡುವುದಿಲ್ಲ. ನೋಟಿಸ್ ಕೊಡುವು ಪ್ರಶ್ನೆಯೇ ಇಲ್ಲ.ನಾನು ರೈತರ ಜೊತೆ ಸಭೆ ಮಾಡಿಯೇ ಬಂದಿದ್ದೇನೆ.ತಹಶಿಲ್ದಾರರ ಜೊತೆ ಸಭೆ ಮಾಡಿ ಬಂದಿದ್ದೇನೆ. ತೇಜಸ್ವಿ ಸೂರ್ಯ ರಾಜಕೀಯ ಮಾಡುವುದು ಬೇಡ.ಒಂದೇ ಒಂದು ಇಂಚು ರೈತರ ಜಮೀನು ಬಿಟ್ಟು ಕೊಡುವುದಿಲ್ಲ ಎಂದರು.