ಬೆಂಗಳೂರು; ಬಿಜೆಪಿಯಲ್ಲಿ ನಡೆಯುತ್ತಿರುವ ಬಣಗಳ ಬಡಿದಾಟ ಇದೀಗ ಮತ್ತೊಂದು ಹಂತಕ್ಕೆ ಹೋಗಿದೆ. ರಾಜ್ಯ ಬಿಜೆಪಿಯಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮತ್ತು ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧದ ಪತ್ರ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಬಿಜೆಪಿ ಕೆಳ ಹಂತದ ಕಾರ್ಯಕರ್ತರ ಗುಂಪು ಎಂದು ಹೇಳಿಕೊಂಡು ಬರೆದಿರುವ ಪತ್ರ ವೈರಲ್ ಆಗಿದೆ. ಆರ್ ಎಸ್ ಎಸ್ ಸಂಘ ಚಾಲಕ ಮೋಹನ್ ಭಾಗವತ್ ವಿಳಾಸ ಬರೆಯಲ್ಪಟ್ಟಿರುವ ಪತ್ರ ವೈರಲ್ ಆಗಿದೆ. ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಜೊತೆ ವಿಜಯೇಂದ್ರ ಮತ್ತು ಯಡಿಯೂರಪ್ಪ ಒಪ್ಪಂದ ರಾಜಕೀಯ ಮಾಡಿಕೊಂಡಿದ್ದಾರೆ. ಚನ್ನಪಟ್ಟಣದಲ್ಲಿ ನಿಖಿಲ್ ಕುಮಾರಸ್ವಾಮಿ ಸೋಲಲು ಕಾರಣವಾಗಿದ್ದಾರೆ.ಡಿ.ಕೆ. ಶಿವಕುಮಾರ್ ಮತ್ತು ವಿಜಯೇಂದ್ರ ವ್ಯಾಪಾರ ಹಿತಾಸಕ್ತಿ ಹೊಂದಿದ್ದಾರೆ. ವಿಪಕ್ಷ ನಾಯಕರಾಗಿ ಆರ್. ಅಶೋಕ್ ವಿಫಲರಾಗಿದ್ದಾರೆ. ಕೂಡಲೇ ರಾಜ್ಯ ಬಿಜೆಪಿ ವಿಚಾರದಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಮೋಹನ್ ಭಾಗವತ್, ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಉಲ್ಲೇಖಿಸಿ ಬರೆಯಲ್ಪಟ್ಟಿರುವ ಪತ್ರ ವೈರಲ್ ಆಗಿದ್ದು ರಾಜ್ಯ ರಾಜಕೀಯದಲ್ಲಿ ಭಾರೀ ಸದ್ದು ಮಾಡುತ್ತಿದೆ.
ಬಿ ವೈ ವಿಜಯೇಂದ್ರಗೆ ರಾಜ್ಯಾಧ್ಯಕ್ಷ ಸ್ಥಾನ ಬಿಡುವಂತೆ ರಮೇಶ್ ಜಾರಕಿಹೊಳಿ ಸಲಹೆ
ಬೆಳಗಾವಿ; ವಿಜಯೇಂದ್ರಗೆ ರಾಜ್ಯಾಧ್ಯಕ್ಷ ಸ್ಥಾನ ಬಿಡುವಂತೆ ರಮೇಶ್ ಜಾರಕಿಹೊಳಿ ಸಲಹೆ ಕೊಟ್ಟಿದ್ದಾರೆ. ಬೆಳಗಾವಿಯಲ್ಲಿ ಶಾಸಕ ಯತ್ನಾಳ್ ಗೆ ನೋಟಿಸ್ ವಿಚಾರಕ್ಕೆ ಸಂಬಂಧಪಟ್ಟಂತೆ ಮಾತನಾಡಿದ ಅವರು ವಿಜಯೇಂದ್ರಗೆ ನೋಟಿಸ್ ಬಂದು ಎರಡು ದಿನ ಆಯ್ತು ಎಂದು ಬೆಳಗಾವಿಯಲ್ಲಿ ಶಾಸಕ ರಮೇಶ್ ಜಾರಕಿಹೊಳಿ ಹೇಳಿಕೆ ನೀಡಿದ್ದಾರೆ.
ಯತ್ನಾಳ್ ಗೆ ನೋಟಿಸ್ ಬಂದು ಎರಡು ದಿನ ಆಯ್ತು. ನನ್ನ ಬಳಿ ನೋಟಿಸ್ ಇದ್ದು ಎರಡು ದಿನ ಆಯ್ತು. ಯತ್ನಾಳ್ ಅವರು ಮಾತಾಡಿದ್ದು ಕಟ್ ಆ್ಯಂಡ್ ಪೀಸ್ ಮಾಡಿ. ಮಾನು ಬರಲ್ಲ ಅಂದಿದ್ದನ್ನ ಮಾತ್ರ ಹೈಕಮಾಂಡ್ ಗೆ ತೋರಿಸಿದ್ದಾರೆ. ಅದರ ಬಗ್ಗೆ ನೋಟಿಸ್ ನೀಡಿರಬಹುದು ವಿಷಯವನ್ನ ಓದಿ ಎಂದು ರಮೇಶ್ ಜಾರಕಿಹೊಳಿ ಹೇಳಿದ್ದಾರೆ.
ಹೈಕಮಾಂಡ್ ಕೊಟ್ಟಿದ್ದಕ್ಕೆ ಸಮರ್ಥವಾಗಿ ಉತ್ತರ ಕೊಡ್ತೇವಿ. ಅದೇನು ದೊಡ್ಡದು ಅಲ್ಲಾ . ಕಟ್ ಆ್ಯಂಡ್ ಪೀಸ್ ಮಾಡಿದ ವಿಡಿಯೋ ಹೈಕಮಾಂಡ್ ಗೆ ತೋರಿಸಿದ್ದಾರೆ. ಹೈಕಮಾಂಡ್ ಯಾಕೆ ಹೆದರಿಸುತ್ತಾರೆ.ಹೆದರಿಸುವವರು ನಮ್ಮನ್ನ ಟೂರ್ ಮಾಡಲು ಯಾಕೆ ಬಿಡ್ತಿದ್ರೂ. ವಿಜಯೇಂದ್ರ ಅವರು ಪಾಪ ಸಣ್ಣ ಹುಡುಗಾ.ಅವನಿಗೆ ರಾಜಕಾರಣ ಗೊತ್ತಿಲ್ಲ, ಬಿಎಸ್ ಯಡಿಯೂರಪ್ಪ ಅವರು ಹುಟ್ಟು ಹೋರಾಟಗಾರ.ಅವರಿಗೆ ರಾಜಕಾರಣ ಗೊತ್ತಿದೆ, ವಿಜಯೇಂದ್ರ ಸಣ್ಣ ಹುಡುಗ. ದಯವಿಟ್ಟು ಅವನು ಇದನ್ನ(ರಾಜ್ಯಾಧ್ಯಕ್ಷ) ತ್ಯಾಗ ಮಾಡಿದ್ರೇ ಒಳ್ಳೆಯದು..ಮುಂದಿನ ದಿನ ವಯಸ್ಸು ಆದಾಗ ಅಧ್ಯಕ್ಷ ಆಗೋದು ಒಳ್ಳೆಯದು.ಇವತ್ತು ಬಿಟ್ರೇ ಒಳ್ಳೆಯದು ಎಂದು ವಿಜಯೇಂದ್ರಗೆ ರಾಜ್ಯಾಧ್ಯಕ್ಷ ಸ್ಥಾನ ಬಿಡುವಂತೆ ರಮೇಶ್ ಜಾರಕಿಹೊಳಿ ಸಲಹೆ ಕೊಟ್ಟಿದ್ದಾರೆ.
ನನಗೆ ಈ ತನಕ ಅಧಿಕೃತ ವಾಗಿ ನೋಟೀಸ್ ಬಂದಿಲ್ಲ; ನವದೆಹಲಿಯಲ್ಲಿ ಶಾಸಕ ಯತ್ನಾಳ್ ಹೇಳಿಕೆ
ಬೆಂಗಳೂರು: ಬಿಜೆಪಿಯಲ್ಲಿ ಬಂಡಾಯವೆದ್ದಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ ಎಂಬ ವಿಚಾರಕ್ಕೆ ಸಂಬಂಧಪಟ್ಟಂತೆ ನವದೆಹಲಿಯಲ್ಲಿ ಶಾಸಕ ಯತ್ನಾಳ್ ಸ್ಪಷ್ಟನೆ ನೀಡಿದ್ದಾರೆ.
ನನಗೆ ಈ ತನಕ ಅಧಿಕೃತ ವಾಗಿ ನೋಟೀಸ್ ಬಂದಿಲ್ಲ. ವಾಟ್ಸಾಪ್ ಬಂದರೆ ಅದನ್ನು ಅಧಿಕೃತ ಎಂದು ಹೇಳಲು ಆಗೋದಿಲ್ಲ. ರಿಜಿಸ್ಟರ್ ಪೋಸ್ಟ್ ಬರಬೇಕು. ಫೇಕ್ ಇರಬಹುದು. ಇದನ್ನು ವಿಜಯೇಂದ್ರನೇ ಮಾಡಿಸಿರಬಹುದು.ಅವರ ಅಪ್ಪನ ಸಹಿಯನ್ನೇ ವಿಜಯೇಂದ್ರ ನಕಲಿ ಮಾಡಿಸಿದ್ದ. ನನ್ನ ಬಳಿ ಉತ್ತರ ಸಿದ್ದವಾಗಿದೆ. ಆದ್ರೆ ಅಧಿಕೃತ ವಾಗಿ ಬಂದಿಲ್ಲ ಎಂದಿದ್ದಾರೆ.
ಪ್ರತ್ಯೇಕ ಸಭೆ ಎಲ್ಲಿದೆ.. ವಕ್ಫ್ ಬಗ್ಗೆ ಹೋರಾಟ ಮಾಡೋದು ತಪ್ಪಾ ಎಂದು ಪ್ರಶ್ನಿಸಿದ್ದಾರೆ. ವಿಜಯೇಂದ್ರ ಏನು ಕೆಲಸ ಮಾಡ್ತಾ ಇಲ್ಲ.ಡಿಕೆಶಿ ಗಂಭೀರ ಆರೋಪ ಮಾಡಿದ ಮೇಲೂ ವಿಜಯೇಂದ್ರ ಪ್ರತಿಕ್ರಿಯೆ ಕೊಟ್ಟಿಲ್ಲ.ಡಿಕೆಶಿ ಜೊತೆ ಶಾಮೀಲು ಆಗಿದ್ದಾರೆ ಎಂದಿದ್ದಾರೆ. ಡಿಕೆ ಸುರೇಶ್ ಗೆ ಮಾನ ಮರ್ಯಾದೆ ಇದ್ರೆ ಒಂದೇ ಒಂದು ಫ್ರೂಫ್ ಕೊಡಲಿ. ಸಿದ್ದರಾಮಯ್ಯ ಸಿಎಂ ಆದ ಬಳಿಕ ಡಿಕೆಶಿ ಡಿಸಿಎಂ ಆದ ಮೇಲೆ ನಾನು ಒಮ್ಮೆ ಒಮ್ಮೆ ಭೇಟಿಯಾಗಿಲ್ಲ.. ನಾನು ಯಾವುದಕ್ಕೂ ಸಹಿ ಹಾಕಿಸಿಕೊಂಡಿಲ್ಲ..ಡಿಕೆಶಿ ಮತ್ತು ವಿಜಯೇಂದ್ರ ಅನೋನ್ಯವಾಗಿದ್ದಾರೆ ನಾನು ಯಾಕೆ ಹೋಗ್ಲಿ.. ಹಾಗಾದ್ರೆ ಡಿಕೆಶಿ ವಿರುದ್ದ ಸಿಬಿಐ ಕೇಸ್ ಯಾಕೆ ಹಾಕುತ್ತಿದೆ ಎಂದು ಪ್ರಶ್ನೆ ಮಾಡಿದ್ದಾರೆ.