ಮನೆ ಪ್ರಸ್ತುತ ವಿದ್ಯಮಾನ ನೀವು ಪ್ರಾಮಾಣಿಕರಾಗಿದ್ರೆ ಪ್ರಕರಣವನ್ನು ಸಿಬಿಐಗೆ ವಹಿಸಿ; ಸಿಎಂ ಸಿದ್ದರಾಮಯ್ಯಗೆ ಬಿ ಎಸ್ ಯಡಿಯೂರಪ್ಪ ಸವಾಲು

ನೀವು ಪ್ರಾಮಾಣಿಕರಾಗಿದ್ರೆ ಪ್ರಕರಣವನ್ನು ಸಿಬಿಐಗೆ ವಹಿಸಿ; ಸಿಎಂ ಸಿದ್ದರಾಮಯ್ಯಗೆ ಬಿ ಎಸ್ ಯಡಿಯೂರಪ್ಪ ಸವಾಲು

0

ಬೆಂಗಳೂರು; ಸಿಎಂ ಸಿದ್ದರಾಮಯ್ಯ ಮುಡಾ ಹಗರಣಕ್ಕೆ ಸಂಬಂಧಪಟ್ಟಂತೆ ನಿನ್ನೆ ಲೋಕಾಯುಕ್ತ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾದ್ರು. ಈ ಬಗ್ಗೆ ಪ್ರತಿಕ್ರಿಯಿಸಿದ  ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಮುಖ್ಯಮಂತ್ರಿ ಸಿದ್ದರಾಮಯ್ಯ ಲೋಕಾಯುಕ್ತ ತನಿಖೆ ವಿಚಾರಣೆ ಎದುರಿಸುತ್ತಿದ್ದಾರೆ.ಲೋಕಾಯುಕ್ತ ತನಿಖೆಯಿಂದ ಏನೂ ಆಗಲ್ಲ. ರಾಜಕೀಯ ದೊಂಬರಾಟ ಮಾಡಿ ನಾನು ಸಾಚಾ ಅಂತಾ ತೋರಿಸಿಕೊಳ್ಳಲು ಹೊರಟಿದ್ದಾರೆ. ಪ್ರಕರಣವನ್ನು ಸಿಬಿಐ ತನಿಖೆಗೆ ಕೊಡಬೇಕು.ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕು ಎಂದಿದ್ದಾರೆ.

ಲೋಕಾಯುಕ್ತದಿಂದ ಏನೂ ಮಾಡಲು ಸಾಧ್ಯವಿಲ್ಲ ಎಂದು ಎಲ್ಲರಿಗೂ ಗೊತ್ತಿದೆ.ಅವರೇ ಇದನ್ನು ರಾಜಕೀಯ ದೊಂಬರಾಟ ಮಾಡಿದಂತೆ ಮಾಡುತ್ತಿದ್ದಾರೆ . ನಾನು ಸಾಚಾ ಅಂತ ತೋರಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಪ್ರಾಮಾಣಿಕರಾಗಿದ್ದರೆ ಸಿಬಿಐಗೆ ಕೊಟ್ಟು ತನಿಖೆ ಮಾಡಿಸಲಿ. ಎಲ್ಲರೂ ಈ ಒತ್ತಾಯ ಮಾಡುತ್ತಿದ್ದಾರೆ.ಇದನ್ನು ಸಿಬಿಐಗೆ ಕೊಡಬೇಕು ಅಂತ ನಾನು ಒತ್ತಾಯ ಮಾಡುತ್ತಿದ್ದೇನೆ. ನೀವು ಭ್ರಷ್ಟಾಚಾರದಲ್ಲಿ ಮುಳುಗಿದ್ದೀರಿ ಎಂಬುದು ಜಗತ್ತಿಗೆ ಗೊತ್ತಿದೆ. ಸಿಬಿಐಗೆ ವಹಿಸಿದರೆ ಸತ್ಯ ಹೊರ ಬರುತ್ತದೆ.ನನ್ನದು ತೆರದ ಪುಸ್ತಕ ಅಂತ ಹೇಳುತ್ತಿರುವ ನೀವು ಪ್ರಾಮಾಣಿಕರಿದ್ದರೆ ಸಿಬಿಐಗೆ ವಹಿಸಿ ಎಂದಿದ್ದಾರೆ.

ಮುಡಾ ಸೈಟ್ ಅಕ್ರಮ ಹಂಚಿಕೆ ಪ್ರಕರಣ; ವಿಚಾರಣೆಗೆ ಹಾಜರಾದ ಸಿಎಂ ಸಿದ್ದರಾಮಯ್ಯ

ಮೈಸೂರು; ಮುಡಾ ಸೈಟು ಅಕ್ರಮ ಹಂಚಿಕೆ ಹಗರಣಕ್ಕೆ ಸಂಬಂಧಪಟ್ಟಂತೆ ಲೋಕಾಯುಕ್ತ ಅಧಿಕಾರಿಗಳು ಇಂದು ವಿಚಾರಣೆಗೆ ಬರುವಂತೆ ಸಿಎಂ ಸಿದ್ದರಾಮಯ್ಯ ಅವರಿಗೆ ನೋಟಿಸ್ ನೀಡಿದ್ದರು ಅದರಂತೆ ಸಿಎಂ ಸಿದ್ದರಾಮಯ್ಯ ಅವರು ಇಂದು  ಮೈಸೂರಿನ ಲೋಕಾಯುಕ್ತ ಕಚೇರಿಯಲ್ಲಿ ವಿಚಾರಣೆಗೆ ಹಾಜರಾದ್ರು.

ಬೆಳಗ್ಗೆ 10 ಗಂಟೆಗೆ ಮೈಸೂರಿನ ಲೋಕಾಯುಕ್ತ ಕಚೇರಿಗೆ ಆಗಮಿಸಿದ ಸಿಎಂ ಸಿದ್ದರಾಮಯ್ಯ ಅವರು ಸುಮಾರು 12 ಗಂಟೆಯವರೆಗೆ ಅಂದರೆ ಸುಮಾರು 2 ಗಂಟೆಗಳ ಕಾಲ ವಿಚಾರಣೆ ಎದುರಿಸಿದ್ರು. ಸಿದ್ದರಾಮಯ್ಯ ಅವರು ತಮ್ಮ 40 ವರ್ಷದ ರಾಜಕೀಯ ಜೀವನಲ್ಲಿ ಇದೇ ಮೊದಲ ಬಾರಿಗೆ  ಪ್ರಕರಣವೊಂದರ ಆರೋಪಿಯಾಗಿ ವಿಚಾರಣೆ ಎದುರಿಸಿದ್ರು.

ಈಗಾಗಲೇ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರಕರಣದ ಎ2 ಆರೋಪಿಯಾಗಿರುವ ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ, ಎ3 ಪಾರ್ವತಿ ಅವರ ಸಹೋದರ ಮಲ್ಲಿಕಾರ್ಜುನ ಸ್ವಾಮಿ, ಹಾಗೇನೆ ಸೈಟು ಮಾರಾಟ ಮಾಡಿದ ದೇವರಾಜು ಅವರನ್ನು ಲೋಕಾಯುಕ್ತ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.

ಇನ್ನು ವಿಚಾರಣೆ ಬಳಿಕ ಮಾತನಾಡಿದ ಸಿಎಂ ಸಿದ್ದರಾಮಯ್ಯ ಮೈಸೂರು:ಸೈಟ್ ವಿಚಾರ ಎಲ್ಲವೂ ಕಾನೂನು ಪ್ರಕಾರವೇ ನಡೆದಿದೆ. ಬಿಜೆಪಿ ಜೆಡಿಎಸ್‌ ಅವರು ನನ್ನ ಮೇಲೆ ಸುಳ್ಳು ಆರೋಪ ಮಾಡಿದ್ದಾರೆ. ನಾನು ಲೋಕಾಯುಕ್ತ ಅವರು ಕೇಳಿದ  ಎಲ್ಲಾ ಪ್ರಶ್ನೆಗಳಿಗೆ ಉತ್ತರ  ಕೊಟ್ಟಿದ್ದೇನೆ. ಅವರು ಎಲ್ಲಾ ರೆಕಾರ್ಡ್ ಮಾಡಿಕೊಂಡಿದ್ದಾರೆ.ಲೋಕಾಯುಕ್ತ ಅಧಿಕಾರಿಗಳು ಮುಂದಿನ ತನಿಖೆ ಮಾಡ್ತಾರೆ ಎಂದರು.

ನಾವು ಸೈಟ್ ವಾಪಸ್ಸು ನೀಡಿರೋದು ತಪ್ಪು ಮಾಡಿದ್ದೇವೆ ಅಂತಾ ಅಲ್ಲ. ನನ್ನ ಮೇಲೆ ಸುಳ್ಳು ಆರೋಪ ಮಾಡಿದ್ರು ಅಂತಾ ನನ್ನ ಹೆಂಡತಿ ತೀರ್ಮಾನ ತಗೊಂಡಿರೋದು. ಈ ಕೇಸ್‌ಗಳನ್ನು ನಮ್ಮ ಬಳಿ ಇರುವ ಲಾಯರ್‌ಗಳು ಫೇಸ್ ಮಾಡ್ತಾರೆ. ಸುಳ್ಳು ಆರೋಪಗಳು ಬಂದಾಗ ವಿಚಾರಣೆಗೆ ಹಾಜರಾಗಬೇಕಾಗಿದೆ.ನನ್ನ ಬಳಿ ಯಾವುದೇ ಡಾಕ್ಯುಮೆಂಟ್ ಇಲ್ಲ. ಇದು ನನಗೆ ಸಂಬಂಧವೇ ಇಲ್ಲ.ಕೋರ್ಟ್‌ನಲ್ಲಿ ತೀರ್ಮಾನ ಆಗುವವರೆಗೆ ಅದು ಆರೋಪ ಅಷ್ಟೇ.ಇದು ನನಗೆ ಕಪ್ಪು ಮಸಿ ಅಲ್ಲ, ಆರೋಪ ಅಷ್ಟೇ. ಲೋಕಾಯುಕ್ತ ಅವರಿಗೆ ನಾನು ಎಲ್ಲಾ ಉತ್ತರ ಕೊಟ್ಟಿದ್ದೇನೆ, ಕೊಡ್ತೀನಿ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.