ಬೆಂಗಳೂರು; ಮಾಜಿ ಡಾನ್ ದಿವಂಗತ ಮುತ್ತಪ್ಪ ರೈ ಕಿರಿಯ ಪುತ್ರ ರಿಕ್ಕಿ ರೈ ಮೇಲೆ ಗುಂಡಿನ ದಾಳಿ ನಡೆದಿದೆ. ಬಿಡದಿಯ ಮುತ್ತಪ್ಪ ರೈ ನಿವಾಸದ ಮುಂದೆಯೇ ತಡರಾತ್ರಿ 11.30 ಸುಮಾರಿಗೆ ಗುಂಡಿನ ದಾಳಿ ನಡೆದಿದೆ. ರಿಕ್ಕಿ ರೈ ಮೇಲೆ ಎರಡು ಸುತ್ತಿನ ಗುಂಡಿನ ದಾಳಿ ಮಾಡಲಾಗಿದೆ.
ಸದಾಶಿವನಗರದ ತಮ್ಮ ಮನೆಯಿಂದ ರಿಕ್ಕಿ ರೈ ಬಿಡದಿಯ ಮನೆಗೆ ತೆರಳಿ ವಾಪಾಸ್ ಸದಾಶಿವನಗರಕ್ಕೆ ಬರಲು ಬಿಡದಿಯ ಮನೆಯಿಂದ ಆಚೆ ಬರ್ತಿದ್ದಂತೆ ಮನೆಯ ಮುಖ್ಯ ದ್ವಾರದ ಕೂಗಳತೆ ದೂರದಲ್ಲೆ ಫೈರಿಂಗ್ ನಡೆದಿದೆ. ಪರಿಣಾಮ ರಿಕ್ಕಿ ರೈ ಮೂಗಿಗೆ ಹಾಗೂ ಭುಜಕ್ಕೆಗಾಯಗಳಾಗಿವೆ.ಸದ್ಯ ಅವರು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ರಿಕ್ಕಿ ರೈ ಮೇಲೆ ಫೈರಿಂಗ್ ವಿಚಾರಕ್ಕೆ ಸಂಬಂಧಪಟ್ಟಂತೆ ಗೃಹ ಸಚಿವ ಡಾ ಜಿ ಪರಮೇಶ್ವರ್ ಪ್ರತಿಕ್ರಿಯಿಸಿದ್ದು ನನಗೆ ವಿಷಯ ಗೊತ್ತಾಗಿದೆ, ಡಿಟೇಲ್ ಕೇಳಿದ್ದೇನೆ. ರಾತ್ರಿ ಒಂದೂವರೆಗೆ ಆಗಿದೆ. ಹೆಚ್ಚುವರಿ ಮಾಹಿತಿ ಬಂದ್ಮೇಲೆ ಇನ್ನಷ್ಟು ಗೊತ್ತಾಗುತ್ತದೆ. ಫೈರಿಂಗ್ ಆಗಿದೆ, ಇನ್ನಷ್ಟು ಡಿಟೇಲ್ ಹೇಳಿದ್ದೇನೆ. ಪೊಲೀಸರು ಹೆಚ್ಚುವರಿ ತನಿಖೆ ಮಾಡ್ತಾರೆ.ಬಂದ್ಮೇಲೆ ಎಲ್ಲಾ ಹೇಳುತ್ತೇನೆ ಎಂದಿದ್ದಾರೆ.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸರಿಯಿಲ್ಲ ಎಂಬ ವಿಪಕ್ಷ ಗಳ ಆರೋಪ ವಿಚಾರದ ಬಗ್ಗೆ ಮಾತನಾಡಿದ ಅವರು ನಾನು ಏನಾದರೂ ಹೇಳಿದ್ರೆ ತಿರಿಚಿ ಬರೀತೀರಾ?. ಪೊಲೀಸ್ ಕಮಿಷನರ್ ಬ್ರೀಫ್ ಮಾಡಿದ್ದಾರೆ.ಕಳೆದ ವರ್ಷ ಕ್ಕೆ ಹೋಲಿಸಿದ್ರೆ ಈ ವರ್ಷ ಕಡಿಮೆಯಾಗಿದೆ. ಸೈಬರ್ ಕೇಸ್ ಕಡಿಮೆಯಾಗಿದೆ. ಲಾ ಆ್ಯಂಡ್ ಆರ್ಡರ್ ಎಲ್ಲಾ ಸರಿಯಾಗಿದೆ ಎಂದರು. ಇದೇ ವೇಳೆ ಜಾತಿಗಣತಿ ವಿಚಾರದ ಬಗ್ಗೆ ಮಾತನಾಡಿದ ಅವರು ಎಲ್ಲರಿಗೂ ಅವರವರ ಅಭಿಪ್ರಾಯ ಹೇಳೋಕೆ ಹೇಳಿದ್ದಾರೆ. ಚರ್ಚೆ ಮುಂದುವರಿಯುತ್ತದೆ .ಅವರ ಅಭಿಪ್ರಾಯ ಹೇಳಿರ್ತಾರೆ. ಸಿಎಂ ಮತ್ತು ಸರ್ಕಾರ ತೀರ್ಮಾನ ತೆಗೆದುಕೊಳ್ಳುತ್ತದೆ. ಜಾತಿಗಣತಿ ಎಲ್ಲವೂ ಕ್ಯಾಬಿನೆಟ್ ನಿರ್ಧಾರ ತೆಗೆದುಕೊಳ್ಳುತ್ತದೆ. ವಿಪಕ್ಷ ಗಳ ಆರೋಪ ಹೇಳ್ತಾರೆ, ಟೀಕೆ ಟಿಪ್ಪಣಿ ಗಮನಿಸಿದ್ದೇನೆ. ಮುಖ್ಯ ಉದ್ದೇಶ ಏನು, ಯಾವ ಸಮುದಾಯ ಎಷ್ಟಿದೆ? ಅಂತ ತಿಳಿಸಬೇಕು ಅಂತ ಸಮೀಕ್ಷೆ ಆಗಿದೆ. ಸಮುದಾಯ ವಾರು ಅಂಕಿ ಅಂಶಗಳು ತೆಗೆದುಕೊಳ್ಳಬೇಕು. ಕೆಲವರು ಅವರ ಆತಂಕ ವ್ಯಕ್ತ ಪಡಿಸಿದ್ದಾರೆ. ನಾನು ಅಧ್ಯಯನ ಮಾಡಿದ್ಮೇಲೆ ಮೋಸ್ಟ್ ಸೈಂಟಿಫೀಕ್ ಡೇಟಾ ಅಂತ ಗೊತ್ತಾಗಿದೆ. ಡೇಟಾ ಕಲೆಕ್ಟ್ ಮಾಡಿ ಸಹಿ ಮಾಡಿಸಿಕೊಂಡಿದ್ದಾರೆ, ಆ ಡೇಟಾ ಕೂಡ ನಮ್ಮ ಬಳಿ ಇದೆ. ಯಾರೋ ಮರದ ಕೆಳಗೆ ಬರೆದುಕೊಂಡು ಬಂದಿದ್ದಾರೆ ಅಂತ ಹೇಳ್ತಾರೆ ಎಂದರು.
ಈ ಸರ್ವೆಯ ಉದ್ದೇಶ ಸಾಮಾಜಿಕ ಶೈಕ್ಷಣಿಕ, ಆರ್ಥಿಕವಾಗಿ ಯಾವ ಸಮುದಾಯ ಹೇಗಿದೆ ಅಂತ ನೋಡೋದು. ಅದ್ರಲ್ಲಿ ಜಾತಿ ಎಷ್ಟಿದೆಯೋ ಅಂತ ಸರ್ಕಾರಕ್ಕೆ ಕೊಟ್ಟಿದೆ. ಸರ್ಕಾರ ಇದನ್ನ ಒಪ್ಪಿ ಕಾರ್ಯಕ್ರಮ ಕೊಡಬೇಕಿದೆ. ಕೆಲವರು ನಮ್ಮ ಸಮುದಾಯ ಹೆಚ್ಚಿರಬೇಕಿತ್ತು ಅಂತ ಆತಂಕ ವ್ಯಕ್ತಪಡಿಸಿದ್ದಾರೆ. ನಾನು ಇದನ್ನ ಅದ್ಯಯನ ಮಾಡಿದ್ಮೆಲೆ ಇದು ಅತ್ಯಂತ ವೈಜ್ಞಾನಿಕ ಸಮೀಕ್ಷೆ ಅನಿಸಿದೆ. ಯಾಕಂದ್ರೆ ಒಬ್ಬ ಬೋರ್ ವೆಲ್ ಹಾಕಿದ್ರೆ ಅಲ್ಲಿ ನೀರು ಬಂತಾ ಇಲ್ವಾ? ಒಣಗಿ ಹೋಗಿದ್ಯಾ ಅಂತಲೂ ಮಾಹಿತಿ ಕಲೆ ಹಾಕಿದ್ದಾರೆ. ಇಂತಹ ಮನೆಯ ಡಾಟಾ ಸಂಗ್ರಹಿಸಿ ಅವರ ಕೈಯಲ್ಲಿ ಸಹಿ ಮಾಡಿಸಿ. ಸೂಪರ್ ವೈಸರ್ ಕೂಡ ಸಹಿ ಮಾಡಿದ್ದಾರೆ. ಈ ದಾಖಲೆ ಕೂಡ ನಮ್ಮ ಹತ್ತಿರ ಇದೆ. 1.37 ಕೋಟಿ ಕುಟುಂಬಕ್ಕೆ ಬೇಟಿ ಕೊಟ್ಟಿದ್ದು ಇದರ ಸಹಿ ಹಾಕಿದ ಡಾಟಾ ಇದೆ ಎಂದ್ರು.ಒಳಮೀಸಲಾತಿ ಗೆ ಜಾತಿಗಣತಿ ವರದಿ ಬಳಸೋ ಚರ್ಚೆ ವಿಚಾರದ ಬಗ್ಗೆ ಮಾತನಾಡಿದ ಅವರು ನಾಗಮೋಹನ್ ದಾಸ್ ಗೆ ಈಗಾಗಲೇ ಕೊಟ್ಟಿದ್ದೆವೆ. ಈ ಜಾತಿಗಣತಿ ವರದಿಯನ್ನು ಅದರೊಂದಿಗೆ ಹೋಲಿಸ್ತಾರೆ. ಡಬಲ್ ಆದ್ರೆ ಒಳ್ಳೆಯದಲ್ವಾ?. ಕಮೀಷನ್ ಡಾಟಾ ಕಲೆಕ್ಟ್ ಮಾಡಲು ಶುರು ಮಾಡಿದೆ.ಈಗ ನಿಲ್ಲಿಸಿ ಅಂತ ಹೇಳೋದು ಸರಿಯಲ್ಲ ಎಂದ್ರು.
ಜನಿವಾರ ತೆಗೆಸಿರೋ ವಿಚಾರದ ಬಗ್ಗೆ ಮಾತನಾಡಿದ ಅವರು ಅದು ಬಹಳ ದೊಡ್ಡ ತಪ್ಪು.ನಾನು ಕೂಡ ಅದನ್ನ ಒಪ್ಪೋದಿಲ್ಲ. ನಾವು ಪರೀಕ್ಷೆ ಮಾಡೋ ಸಂದರ್ಭದಲ್ಲಿ ನಿಯಮ ಪಾಲನೆ ಮಾಡೋಕೆ ಹೇಳಿರ್ತಾರೆ.ಅದನ್ನ ಅಧಿಕಾರಿಗಳು ಸರಿ ಪಡಿಸುತ್ತಾರೆ ಎಂದ್ರು,