ಮನೆ Latest News 2028 ಕ್ಕೆ ಸಿದ್ದರಾಮಯ್ಯ ಅವರೇ ಚುನಾವಣೆ ಲೀಡ್ ಮಾಡ್ತಾರೆ; ಸತೀಶ್ ಜಾರಕಿಹೊಳಿ‌ ಹೇಳಿಕೆ

2028 ಕ್ಕೆ ಸಿದ್ದರಾಮಯ್ಯ ಅವರೇ ಚುನಾವಣೆ ಲೀಡ್ ಮಾಡ್ತಾರೆ; ಸತೀಶ್ ಜಾರಕಿಹೊಳಿ‌ ಹೇಳಿಕೆ

0

2028 ಕ್ಕೆ ಸಿದ್ದರಾಮಯ್ಯ ಅವರೇ ಚುನಾವಣೆ ಲೀಡ್ ಮಾಡ್ತಾರೆ ಎಂದು ಸಚಿವ ಸತೀಶ್ ಜಾರಕಿಹೊಳಿ‌ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು ಅವರು ಸಿಎಂ ಆಗ್ತಾರೆ ಅಂತ ನಾನು ಹೇಳಲ್ಲ. ಸಿದ್ದರಾಮಯ್ಯ ರಾಜಕೀಯದಲ್ಲಿ ಇರ್ತಾರೆ. ಅವರ ನೇತೃತ್ವದಲ್ಲಿ  ಮುಂದಿನ ಚುನಾವಣೆ ‌ನಡೆಯುತ್ತೆ. ೨೦೨೮ರ ಚುನಾವಣೆಗೆ ಅವರು ನಿಲ್ಲಲ್ಲ ಅಂದಿದ್ದಾರೆ. ಅಲ್ಲಿಯವರೆಗೆ ಸಿಎಂ ಚರ್ಚೆ ಏನು ಇಲ್ಲ. ನಿನ್ನೆ ಸಿಎಂ ಹೇಳಿದ ಮೇಲೆ ಮುಗಿತು, ಮತ್ತೆ ಚರ್ಚೆ ಮಾಡುವ ಹಾಗಿಲ್ಲ ಎಂದಿದ್ದಾರೆ.

ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಆಗಬೇಕು. ಈ ಬಗ್ಗೆ ಸಾಕಷ್ಟು ಬಾರಿ ಹೇಳಿದ್ದೇವೆ. ಪದೆ ಪದೆ ಹೇಳುವ ಅವಶ್ಯಕತೆ ಇಲ್ಲ. ಎಲ್ಲವನ್ನೂ ಹೈಕಮಾಂಡ್ ಗಮನಿಸುತ್ತಿದೆ. ಸೂಕ್ತ ನಿರ್ಧಾರ ಹೈಕಮಾಂಡ್ ನಾಯಕರು ಮಾಡ್ತಾರೆ ಎಂದಿದ್ದಾರೆ.

ಇನ್ನು ಡಿಕೆಶಿ ಸಿಎಂ ಆಗಬೇಕು ಎಂಬ ಕೂಗಿನ ವಿಚಾರವಾಗಿ ಸಚಿವ ಎಂ ಬಿ ಪಾಟೀಲ್  ಪ್ರತಿಕ್ರಿಯಿಸಿದ್ದು ಡಿಕೆಶಿ ಪಕ್ಷದ ಹಿರಿಯ ನಾಯಕರು. ಚುನಾವಣೆ ವೇಳೆ ಸಾಕಷ್ಟು ಕೆಲಸ ಮಾಡಿದ್ದಾರೆ. ಇದಷ್ಟೇ ನಾನು ಹೇಳೋದು. ಬಹಿರಂಗವಾಗಿ ಮಾತನಾಡಬಾರದು. ಏನೇ ಇದ್ರೂ ಪಕ್ಷದ ವೇದಿಕೆಯಲ್ಲಿ ಚರ್ಚಿಸಬೇಕು ಎಂದಿದ್ದಾರೆ. ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರದ ಬಗ್ಗೆ ಮಾತನಾಡಿ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ.  ನೀರಾವರಿ ಮಂತ್ರಿ ಇದ್ದಾಗ ಕೇಳಿದ್ದರು. ಕಾಲಕ್ಕೆ ತಕ್ಕಂತೆ ಎಲ್ಲವೂ ಆಗಲಿದೆ. ೧೭% ವೀರಶೈವ ಸಮುದಾಯ ರಾಜ್ಯದಲ್ಲಿದೆ. ವೀರೇಂದ್ರ ಪಾಟೀಲರು ಸಿಎಂ ಆಗಿದ್ದಾಗ, ೧೭೮ ಸೀಟು ಆಗ ಬಂದಿದ್ದವು. ಈಗ ಸಿಎಂ ಕುರ್ಚಿ ಖಾಲಿ ಇಲ್ಲ. ಕೆಪಿಸಿಸಿ ಅಧ್ಯಕ್ಷರ ಕುರ್ಚಿಯೂ ಖಾಲಿ ಇಲ್ಲ. ಪಕ್ಷದ ಹೈಕಮಾಂಡ್ ನಿರ್ಧಾರ ಮಾಡುತ್ತದೆ ಎಂದಿದ್ದಾರೆ.

ಬೆಂಗಳೂರು ಸೆಕೆಂಡ್ ಏರ್ಪೋರ್ಟ್ ವಿಚಾರದ ಬಗ್ಗೆ ಮಾತನಾಡಿ ಏವಿಯೇಷನ್ ಮಿನಿಸ್ಟರ್ ಇರಲಿಲ್ಲ. ಅವರ ಸಮಯವನ್ನ ನಾವು ಕೇಳಿದ್ದೆವು. ಮುಂದಿನ ವಾರ ಮತ್ತೆ ಹೋಗ್ತೇನೆ. ಆಗ ಇದರ ಬಗ್ಗೆ ಚರ್ಚೆ ಮಾಡ್ತೇನೆ. ಸೈಟ್ ಬಗ್ಗೆ ಬೇಗ ಅವರ ಅಭಿಪ್ರಾಯ ಸಿಗಬೇಕು.ಬಂದರೆ ನಾವು ಮುಂದಿನ ನಿರ್ಧಾರ ಮಾಡಬಹುದು. ನವಿಮುಂಬೈ,ನೋಯ್ಡಾದಲ್ಲಿ ಹೇಗಿದೆ. ಅದರಂತೆ ನಾವು ವರ್ಕ್ ಮಾಡಬೇಕಾಗುತ್ತದೆ. ನಮಗೂ ಬೇಕು ಆಗಬೇಕು ಅಂತಿದೆ. ನಾವೇನು‌ ವಿಜಯಪುರಕ್ಕೆ ಕೇಳ್ತಿಲ್ವಲ್ಲ ಎಂದಿದ್ದಾರೆ.