ಬೆಂಗಳೂರು; ಏಷ್ಯಾದ ಅತಿದೊಡ್ಡ ಟೆಕ್ ಕಾನ್ ಕ್ಲೇವ್ ಬೆಂಗಳೂರು ಟೆಕ್ ಸಮ್ಮಿಟ್ ಗೆ ಇಂದು ತೆರೆ ಬಿದ್ದಿದೆ. ಕಳೆದ 3 ದಿನಗಳಿಂದ ನಡೆಯುತ್ತಿರುವ ಟೆಕ್ ಸಮ್ಮೇಳನಕ್ಕೆ ಇಂದು ಬೆಂಗಳೂರು ಅರಮನೆ ಮೈದಾನದಲ್ಲಿ ಅದ್ಧೂರಿ ತೆರೆ ಬಿದ್ದಿದೆ. ಅತಿದೊಡ್ಡ ಟೆಕ್ ಕಾನ್ ಕ್ಲೇವ್ ಬೆಂಗಳೂರು ಟೆಕ್ ಸಮ್ಮಿಟ್ ನಲ್ಲಿ ಆಸ್ಟ್ರೇಲಿಯಾ, ಯುಕೆ, ಫ್ರಾನ್ಸ್, ಆಸ್ಟ್ರಿಯಾ, ಇಯು, ಡೆನ್ಮಾರ್ಕ್, ಫಿನ್‌ಲ್ಯಾಂಡ್, ಪೋಲೆಂಡ್, ಜಪಾನ್, ಜರ್ಮನಿ, ಸ್ವಿಟ್ಜರ್‌ಲ್ಯಾಂಡ್ ಸೇರಿದಂತೆ 15ಕ್ಕೂ ಹೆಚ್ಚು ದೇಶಗಳು ಭಾಗಿಯಾಗಿದ್ದರು.
ಸಮ್ಮೇಳನದಲ್ಲಿ ಭಾಗಿಯಾದವರಿಗೆ ಹೊಸ ಹೊಸ ತಂತ್ರಜ್ಞಾನ ಆವಿಷ್ಕಾರ ಮತ್ತು ಅನ್ವೇಷಣೆಗಳ ರಸದೌತಣ ದೊರೆಯಿತು. ವಿವಿಧ ಸ್ಟಾರ್ಟ್ ಅಪ್ ಕಂಪನಿಗಳು ಒಂದೇ ಕಡೆ ಸಮಾಗಮವಾಗದವು. ಇಂದು ಕೊನೆ ದಿನ ಹಿನ್ನೆಲೆ ಸಾಕಷ್ಟು ಸಂಖ್ಯೆಯಲ್ಲಿ ಜನ ಆಗಮಿಸಿದ್ರು. ವಿವಿಧ ವಲಯಗಳ ಉದ್ಯಮಿಗಳು, ಐಟಿ-ಬಿಟಿ ಮುಖ್ಯಸ್ಥರು, ವಿದ್ಯಾರ್ಥಿಗಳಿಂದ ಟೆಕ್ ಸಮ್ಮಿಟ್ ವೀಕ್ಷಣೆ ಮಾಡಿದ್ರು. ವಿವಿಧ ಕಂಪನಿಗಳಿಂದ ಬ್ಯುಸಿನೆಸ್ ಕುರಿತಾದ ಕಾರ್ಯಗಾರ ನಡೆಯಿತು. ಮೂತನ ತಂತ್ರಜ್ಞಾನ, ವಿಭಿನ್ನ ಶೈಲಿನ ಅನ್ವೇಷಣೆಗಳಿಗೆ ಬಂದ ಜನ ಮನ ಸೋತರು.
ಇನ್ನು ಬೆಂಗಳೂರು ಟೆಕ್ ಸಮ್ಮಿಟ್ ಸಮಾರೋಪದ ಬಳಿಕ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಬೆಂಗಳೂರು ಟೆಕ್ ಸಮ್ಮಿಟ್ ನಲ್ಲಿ ಕಳೆದ ಎರಡೂವರೆ ದಿನ ಮಾಹಿತಿ ನೀಡುತ್ತಿದ್ದೇವೆ. ಸಮ್ಮೇಳನದಲ್ಲಿ ಒಟ್ಟು 51 ದೇಶಗಳು ಭಾಗಿಯಾಗಿದ್ದರು. 51 ಭಾಷಣಕಾರರು ಮಾತನಾಡಿದ್ದಾರೆ. ಕಾರ್ಯಗಾರದಲ್ಲಿ 5210 ರಷ್ಟು ಮಂದಿ ಭಾಗಿಯಾಗಿದ್ದಾರೆ. ಒಟ್ಟಾರೆ 15 ಸಾವಿರ ನೋಂದಣಿ ಡೆಲಿಗೇಟ್ಸ್ ಇದ್ದಾರೆ. ಈವರೆಗೆ ಒಟ್ಟು 37 ಸಾವಿರ ಮಂದಿ ಟೆಕ್ ಸಮ್ಮಿಟ್ ನಲ್ಲಿ ಭಾಗಿಯಾಗಿದ್ದರು. ಸಂಜೆ ವೇಳೆಗೆ 40 ಸಾವಿರ ದಾಟುವ ಸಾಧ್ಯತೆ ಇದೆ. 51 ದೇಶಗಳ ಪೈಕಿ 20 ಅತ್ಯುನ್ನತ ದೇಶಗಳು ಭಾಗಿಯಾಗಿದ್ದವು. ಜರ್ಮನಿ ಜೊತೆಗೆ ಹಲವು ವಿಚಾರಗಳ ಕುರಿತು ಒಡಂಬಡಿಕೆ ಆಗಿದೆ. UAE ಜೊತೆ ಕೆಲವು ಒಪ್ಪಂದಗಳು ಆಗಿದೆ ಎಂದರು.
ಮುಂದುವರೆದು ಮಾತನಾಡಿದ ಅವರು 1500 ಸ್ಟಾರ್ಟ್ ಅಪ್ ಸಹಭಾಗಿತ್ವದಲ್ಲಿ ಸೇರಿ ಹಲವು ಕಾರ್ಯಗಾರ ನಡೆಸಿದ್ದೇವೆ. ನಮ್ಮ ರಾಜ್ಯದ ಚಳ್ಳಕೆರೆ ಹುಡುಗ ಬೆಲ್ಜಿಯಂನಲ್ಲಿ ಕಂಪನಿ ಓಪನ್ ಮಾಡಿದ್ದಾರೆ. 15 ನವೋದ್ಯಮಗಳು ಜಪಾನಿಗೆ ಹೋಗೋಕೆ ಅವಕಾಶ ಇರುತ್ತೆ. ಮೊದಲ ಬಾರಿಗೆ ವಿನೂತ ಡ್ರಾಪ್ ಸ್ಪೇಸ್ ಟೆಕ್ ಪಾಲಿಸಿವನ್ನ ಲಾಂಚ್ ಮಾಡಿದ್ದೇವೆ. ಇದು 2033ರಲ್ಲಿ 44 ಬಿಲಿಯನ್ ಡಾಲರ್ಸ್ ಆಗಲಿದೆ. ಕರ್ನಾಟಕ ಪಾಲು ಕನಿಷ್ಠ 50% ಇರಬೇಕು ಅಂತ ಮಹತ್ವದ ತೀರ್ಮಾನ ತೆಗೆದುಕೊಂಡಿದ್ದೇವೆ. ಸ್ಪೇಸ್ ಟೆಕ್ನಾಲಜಿ ಬಾಹ್ಯಾಕಾಶದಲ್ಲಿ ಮಾತ್ರ ಉಪಯೋಗ ಆಗಲ್ಲ. ಸ್ಪೇಸ್ ಸೆನ್ಸಾರ್ ನ ರಾಕೆಟ್ ಗೆ ಬಳಕೆ ಮಾಡುತ್ತಿದ್ದೇವೆ. ಅದನ್ನ ಬೈಕ್ ಹಾಗೂ ಕಾರುಗಳಿಗೆ ಬಳಕೆ ಮಾಡಲಾಗ್ತಿದೆ ಎಂದರು.
ಗ್ಲೋಬಲ್ ಸಮ್ಮೇಳನ ಈ ಬಾರೀ ಬೆಂಗಳೂರಿನಲ್ಲೇ ನಡೆಯಲಿದೆ. ಅಂತರಾಷ್ಟ್ರೀಯ ಮಟ್ಟದ ನವೋದ್ಯಮ ಉತ್ಸವವದು. 10 ಸಾವಿರ ನವೋದ್ಯಮಗಳು ಭಾಗಿಯಾಗಲಿದ್ದಾರೆ. 30 ದೇಶಗಳು ಭಾಗಿಯಾಗಲಿವೆ. ಡಿ.೯- ೧೧ರವರೆಗೆ ನಡೆಯಲಿದೆ ಎಂದರು.











