ಮನೆ Latest News ಕಾಂಗ್ರೆಸ್ ಸರ್ಕಾರ ಮುಸ್ಲಿಂ ಸಮುದಾಯದ ಓಲೈಕೆಯಲ್ಲಿ ತೊಡಗಿದೆ; ಬೆಂಗಳೂರಿನಲ್ಲಿ ಶಾಸಕ ಡಾ. ಅಶ್ವಥನಾರಾಯಣ...

ಕಾಂಗ್ರೆಸ್ ಸರ್ಕಾರ ಮುಸ್ಲಿಂ ಸಮುದಾಯದ ಓಲೈಕೆಯಲ್ಲಿ ತೊಡಗಿದೆ; ಬೆಂಗಳೂರಿನಲ್ಲಿ ಶಾಸಕ ಡಾ. ಅಶ್ವಥನಾರಾಯಣ ಹೇಳಿಕೆ

0

ಬೆಂಗಳೂರು;  ಕಾಂಗ್ರೆಸ್ ಸರ್ಕಾರ ಮುಸ್ಲಿಂ ಸಮುದಾಯದ ಓಲೈಕೆಯಲ್ಲಿ ತೊಡಗಿದೆ ಎಂದು ಬೆಂಗಳೂರಿನಲ್ಲಿ ಶಾಸಕ ಡಾ.  ಅಶ್ವಥನಾರಾಯಣ ಹೇಳಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಶಾಸಕ ಡಾ.  ಅಶ್ವಥನಾರಾಯಣ  ವಕ್ಫ್ ಹೊಸ ಕಾನೂನು ಬರುತ್ತದೆ ಅಂತ ರೈತರ ಆಸ್ತಿ, ಶಾಲೆ, ಮಠ ಮಂದಿರಗಳ ಆಸ್ತಿ ವಶಪಡಿಸಿಕೊಳ್ಳುವ ಪ್ರಯತ್ನ ನಡೆಸಿದೆ. ಈ ಸಂಬಂಧ ಜನ‌ ಜಾಗೃತಿಯಾಗಿದ್ದಾರೆ. ಜಮೀರ್ ಅಹಮದ್ ಸಿಎಂ ಆದೇಶ ಬಂದಿದೆ ಅಂತ ಇಂಡೀಕರಣಕ್ಕೆ, ವಕ್ಫ್ ಹೆಸರು ನೋಂದಣಿಗೆ ಮುಂದಾಗಿದ್ದರು. ಈ ವಿಚಾರದಲ್ಲಿ ಬಿಜೆಪಿ ಸಾಕಷ್ಟು ಹೋರಾಟ ಮಾಡಿದೆ. ಸಾಕಷ್ಟು ಒತ್ತಡ ಸರ್ಕಾರದ ಮೇಲೆ ಬಿಜೆಪಿ ಹೇರಿದೆ. ಇದರ ಪರಿಣಾಮ ಸರ್ಕಾರ ವಕ್ಫ್ ನೋಟೀಸ್ ಹಿಂಪಡೆಯಲು ಸೂಚಿಸಿದೆ. ಆದರೆ ನಮ್ಮ ಒತ್ತಾಯ 1974 ರ ವಕ್ಫ್ ಗೆಜೆಟ್ ಅಧಿಸೂಚನೆ ಹಿಂಪಡೆಯಬೇಕು. ಇದಕ್ಕಾಗಿ ನಮ್ಮ ಭೂಮಿ ನಮ್ಮ ಹಕ್ಕು ಅಡಿ ಬಿಜೆಪಿ ಹೋರಾಟ ನಡೆಸಲು ಮುಂದಾಗಿದೆ ಎಂದರು.

ನವೆಂಬರ್ 21 ಮತ್ತು 22 ರಂದು ಎಲ್ಲಾ ಜಿಲ್ಲೆ, ತಾಲ್ಲೂಕುಗಳ ಡಿಸಿ, ತಾಲ್ಲೂಕು ಕಚೇರಿ ಎದುರು ದಿನವಿಡೀ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ. ಬೆಂಗಳೂರಿನಲ್ಲಿ ಅಂದು ಫ್ರೀಡಂ ಪಾರ್ಕ್ ನಲ್ಲಿ ವಕ್ಫ್ ವಿರುದ್ಧ ದಿನವಿಡೀ ಹೋರಾಟ ನಡೆಯಲಿದೆ. ವಕ್ಫ್ ವಿರುದ್ಧ ಒಟ್ಟಾರೆ ಮೂರು ತಂಡಗಳಿಂದ ಪ್ರತಿಭಟನೆ ನಡೆಸಲಾಗುತ್ತದೆ. ಬಿಜೆಪಿಯ ಮೂರು ತಂಡಗಳು ಡಿಸೆಂಬರ್ ಮೊದಲ ವಾರದಿಂದ ರಾಜ್ಯ ಪ್ರವಾಸ ನಡೆಸಲಿವೆ. ವಕ್ಫ್ ತೊಂದರೆಗೊಳಗಾದವರ ಅಹವಾಲು ಆಲಿಸಲಾಗುತ್ತದೆ. ನಂತರ ಅಧಿವೇಶನದಲ್ಲಿ ವಕ್ಫ್ ಕುರಿತು ನೈಜ ವಿಚಾರ ಸರ್ಕಾರದ ಮುಂದಿಟ್ಟು ಚರ್ಚೆ ಮಾಡುತ್ತೇವೆ. ಅಧಿವೇಶನದ ಮೊದಲು ಬೃಹತ್ ಸಮಾವೇಶ ಇಟ್ಟುಕೊಂಡಿದ್ದೇವೆ. ಬೆಳಗಾವಿಯಲ್ಲಿ ವಕ್ಫ್ ವಿರುದ್ಧ ಬೃಹತ್ ಸಮಾವೇಶ ನಡೆಸುತ್ತೇವೆ ಎಂದಿದ್ದಾರೆ.

ಯತ್ನಾಳ್, ಜಾರಕಿಹೊಳಿ ಮತ್ತು ಲಿಂಬಾವಳಿ ಅವರ ಹೆಸರೂ ನಮ್ಮ ತಂಡದಲ್ಲಿದೆ. ನಾವೆಲ್ಲರೂ ಒಟ್ಟಿಗೆ ವಕ್ಫ್ ಹೋರಾಟ ನಡೆಸುತ್ತೇವೆ. ಪಕ್ಷದಿಂದ ಅಧಿಕೃತವಾಗಿ ತಂಡಗಳ ಘೋಷಣೆ ಆಗಿದೆ, ಇದರಲ್ಲಿ ಅವರೂ ಇರುತ್ತಾರೆ. ಬೇರೆಯವರು ವೈಯಕ್ತಿಕವಾಗಿ ಹೋರಾಟ ಮಾಡಿದರೆ ಮಾಡಲಿ. ಆದರೆ ಅಧಿಕೃತವಾಗಿ ಪಕ್ಷದ ಮೂರು ತಂಡಗಳಲ್ಲಿ ಅವರೂ ಇದ್ದಾರೆ ಎಂದಿದ್ದಾರೆ.

ಉತ್ಸಾಹದಿಂದ ವಕ್ಫ್ ಸಮಸ್ಯೆ ವಿಚಾರವಾಗಿ ಯಾರೇ ಮಾಹಿತಿ ಕಲೆ ಹಾಕಿ ಕೊಟ್ಟರೂ ಉತ್ತಮವೇ. ಪಕ್ಷದಿಂದ ಅಧಿಕೃತವಾಗಿ ಪ್ರವಾಸ ಪಟ್ಟಿ ಘೋಷಣೆಯಾಗಿದೆ. ನೀವು ಭಿನ್ನರೆಂದು ಹೇಳುವವರ ಹೆಸರುಗಳೂ ಈ ಪಟ್ಟಿಯಲ್ಲಿವೆ. ಶಿಸ್ತಿನ ಪಕ್ಷ ನಮ್ಮದು ಎಲ್ಲರೂ ಒಟ್ಟಾಗಿ ಹೋರಾಟ ಮಾಡುತ್ತೇವೆ. ಜನರ ಸಮಸ್ಯೆ ಪರಿಹಾರಕ್ಕೆ ಎಲ್ಲರೂ ಹೋರಾಟ ಮಾಡುತ್ತಿದ್ದೇವೆ. ವೈಯುಕ್ತಿಕವಾಗಿ ಮಾಹಿತಿ ಕಲೆ ಹಾಕಿ ಕೊಡುವುದು ಬಿಡುವುದು ಅವರವರಿಗೆ ಬಿಟ್ಟಿದ್ದು. ಪಕ್ಷದ ವತಿಯಿಂದ ನಡೆಯುವುದು ಅಧಿಕೃತ ಪ್ರವಾಸ ಮತ್ತು ವರದಿ ಸಲ್ಲಿಕೆ ಆಗಲಿದೆ. ವಕ್ಫ್ ಆಸ್ತಿಗಳನ್ನು ರಾಷ್ಟೀಕರಣ ಮಾಡುವ ವಿಚಾರಕ್ಕೆ ಸಂಬಂಧಪಟ್ಟಂತೆ ಮಾತನಾಡಿದ ಅವರು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬರೆದಿದ್ದ ಪತ್ರ ಸ್ವೀಕೃತವಾಗಿರುವ ಬಗ್ಗೆ ಮಾಹಿತಿ ನೀಡಿದ್ರು. ಯತ್ನಾಳ್ ಗೆ ಪ್ರಧಾನಿ ಕಚೇರಿ ಸ್ವೀಕೃತಿ ಪತ್ರ ಬರೆದಿದೆ. ಎಂದಿದ್ದಾರೆ.