ಬೆಂಗಳೂರು; ಕೈಲಾಗದ ಹೇಡಿಗಳು ಮೈ ಪರಚಿಕೊಂಡಂತೆ ಸರ್ಕಾರದ ಕೆಲಸ ಆಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಸರ್ಕಾರದ ವಿರುದ್ಧ ಶಾಸಕ ಡಾ.ಸಿ.ಎನ್. ಅಶ್ವಥ ನಾರಾಯಣ ಆಕ್ರೋಶ ಹೊರ ಹಾಕಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು ಸರ್ಕಾರ ವಿವಿಗಳನ್ನು ಮುಚ್ಚುತ್ತಿರುವುದು ರಾಜ್ಯದ ಪ್ರಗತಿಗೆ ಮಾರಕ.ಮಲತಾಯಿ ಧೋರಣೆ ಇಟ್ಟುಕೊಂಡು ಸರ್ಕಾರ ಈ ತೀರ್ಮಾನ ಮಾಡಿದೆ.ಶಿಕ್ಷಣ ವಿರೋಧಿ ನಡೆ ಇದು, ನಾವು ತೀವ್ರವಾಗಿ ಖಂಡಿಸುತ್ತೇವೆ ಎಂದಿದ್ದಾರೆ.
ಕ್ಯಾಬಿನೆಟ್ ಸಬ್ ಕಮಿಟಿ 9 ವಿವಿಗಳಲ್ಲಿ 8 ಮುಚ್ಚುತ್ತೇವೆ ಅಂತ ಹೇಳಿದ್ದಾರೆ.ರಾಜ್ಯ ಮತ್ತು ಯುವಕರ ಹಿತಕ್ಕೆ ವಿರುದ್ಧಗಾಗಿ ಸಬ್ ಕಮಿಟಿ ನಿರ್ಣಯ ಇದೆ.ಅಂಬೇಡ್ಕರ್ ರೂಪಿಸಿದ ಸಂವಿಧಾನದ ಆಶಯದಂತೆ ಕರ್ನಾಟಕ ರೂಪಿಸಲು ಹೆಜ್ಜೆ ಇಡುತ್ತೇವೆ ಅಂತ ಬಜೆಟ್ ನಲ್ಲಿ ಹೇಳಿದ್ದರು.ಹಲವಾರು ವಚನ ಹೇಳಿದ್ದರು, ಈಗ ಇವರಿಗೆ ಮನಸ್ಸು ಇಲ್ವಾ? ಎಂದು ಪ್ರಶ್ನಿಸಿದ್ದಾರೆ.
21ನೇ ಶತಮಾನ ಜ್ಞಾನ ಆಧಾರಿತ ಸಮಾಜವಾಗಿದೆ.ಜಿಲ್ಲೆಯಲ್ಲಿ ಹೋದ ತಕ್ಷಣ ನೋಡುವುದು ವಿಶ್ವವಿದ್ಯಾನಿಲಯ ಮತ್ತು ವಿದ್ಯಾರ್ಹತೆ ಬಗ್ಗೆ.ಹಣ ಇಲ್ಲ ಅಂತ ಹೇಳಿ ವಿಶ್ವವಿದ್ಯಾನಿಲಯ ಮುಚ್ಚಲು ಹೋಗುತ್ತಿದ್ದಾರೆ. ಹೊಸದಾಗಿ ಹುದ್ದೆ ಮತ್ತು ಹಣ ಕೊಡಬೇಕಾಗಿಲ್ಲ.ಎರಡು ಸಮಿತಿ ಮಾಡಿ ಹುದ್ದೆ ಮತ್ತು ಮಾನವ ಸಂಪನ್ಮೂಲಗಳ ಬಗ್ಗೆ ಈಗಾಗಲೇ ನಿರ್ಧಾರ ಮಾಡಿದ್ದಾರೆ.ಕೈಲಾಗದ ಹೇಡಿಗಳು ಮೈ ಪರಚಿಕೊಂಡಂತೆ ಸರ್ಕಾರದ ಕೆಲಸ ಆಗಿದೆ. ಈಗ ಯುನಿವರ್ಸಿಟಿಗೆ ಕೊಡಲು ಹಣ ಇಲ್ಲ ಅಂತಾ ಹೇಳುತ್ತಿದ್ದಾರೆ.ವಿದ್ಯಾರ್ಥಿಗಳು ರಾಜ್ಯದಲ್ಲಿ ಸಮಾನತೆ ಮತ್ತು ಹೇಗೆ ಭವಿಷ್ಯ ರೂಪಿಸಿಕೊಳ್ಳುತ್ತಾರೆ?.ವಿಶ್ವವಿದ್ಯಾಲಯಗಳು ಸರ್ಕಾರದ ಅಂಗಡಿಗಳಾ? .ಶಿಕ್ಷಣ ಕೊಡುವುದು ಸರ್ಕಾರದ ಕರ್ತವ್ಯ.ವಿಶ್ವವಿದ್ಯಾಲಯ ಬಂದ್ ಮಾಡಬೇಕು ಅಂತ ಅಧಿಕಾರಕ್ಕೆ ಬಂದ ಮೊದಲ ದಿನವೇ ಹೇಳಿದ್ದಾರೆ.ಯಾವುದೇ ವರದಿ ಇಲ್ಲದೇ ಈ ನಿಲುವು ತೆಗೆದುಕೊಳ್ಳುತ್ತಿದ್ದಾರೆ.ಹಲವಾರು ಯುನಿವರ್ಸಿಟಿ ಕಾಂಗ್ರೆಸ್ ಅವಧಿಯಲ್ಲೇ ಆಗಿರುವುದು.ಇವರು ದುರುದ್ದೇಶ ಇಟ್ಟುಕೊಂಡು ಕೆಲಸ ಮಾಡುತ್ತಿದ್ದಾರೆ.ಸರ್ಕಾರ ಪರಿಶೀಲನಾ ಆಯೋಗ ರಚನೆ ಮಾಡಲಿ ಎಂದಿದ್ದಾರೆ.
ಮೈಸೂರಿನಲ್ಲಿ ನಡೆದಿರೋದು ಪೂರ್ವ ನಿಯೋಜಿತ ಗಲಭೆ; ಸುದ್ದಿಗೋಷ್ಟಿಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ವಿಪಕ್ಷ ನಾಯಕ ಆರ್ ಅಶೋಕ್ ಆಕ್ರೋಶ
ಬೆಂಗಳೂರು; ಮೈಸೂರಿನಲ್ಲಿ ನಡೆದಿರೋದು ಪೂರ್ವ ನಿಯೋಜಿತ ಗಲಭೆ ಎಂದು ಸುದ್ದಿಗೋಷ್ಟಿಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ವಿಪಕ್ಷ ನಾಯಕ ಆರ್ ಅಶೋಕ್ ಆಕ್ರೋಶ ಹೊರ ಹಾಕಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಆರ್ ಅಶೋಕ್, ಉಚಿತ ಯೋಜನೆಗಳ ಬಗ್ಗೆ ಕಾಂಗ್ರೆಸ್ ನಿಲುವು ವಿಚಾರದ ಬಗ್ಗೆ ಮಾತನಾಡಿ ಕೇಂದ್ರ ಕಾಂಗ್ರೆಸ್ ನಾಯಕರ ನಿಲುವು ಒಂದು ರೀತಿ, ರಾಜ್ಯದ ಕಾಂಗ್ರೆಸ್ ನಾಯಕರ ನಿಲುವು ಒಂದು ರೀತಿ. ಕಾಂಗ್ರೆಸ್ ಗೋಮುಖ ವ್ಯಾಘ್ರದ ರೀತಿ ಎಂದ್ದಾರೆ.
ಮೈಸೂರು ಗಲಭೆ ಪೂರ್ವ ನಿಯೋಜಿತ ಗಲಭೆ.ಒಂದೇ ಬಾರಿಗೆ ಸಾವಿರ ಜನ ಹೇಗೆ ಬರಲು ಸಾಧ್ಯ? ಒಂದೇ ಬಾರಿಗೆ 20 ಮೂಟೆ ಕಲ್ಲು ಹೇಗೆ ಸಂಗ್ರಹಿಸಲು ಸಾಧ್ಯ?. ಮುಲ್ಲಾ ಪ್ರಚೋದನಾಕಾರಿ ಭಾಷಣ ಮಾಡಿದ್ದರೂ ಇನ್ನೂ ಕ್ರಮ ಆಗಿಲ್ಲ.ಘಟನೆ ಬಗ್ಗೆ ಕಾಂಗ್ರೆಸ್ ನಲ್ಲೇ ಎರಡು ಗುಂಪುಗಳಾಗಿವೆ. ಸಚಿವ ರಾಜಣ್ಣ ಪೊಲೀಸರಿಗೆ ಸ್ಟಾರ್ ಯಾರು ಕೊಟ್ಟರು ಅಂತಾ ಹೇಳಿದ್ದಾರೆ.ಏನು ಕಾಂಗ್ರೆಸ್ ನವರ ಅಪ್ಪನ ಮನೆಯಿಂದ ಸ್ಟಾರ್ ತಂದು ಕೊಟ್ಟಿದ್ದಾರಾ?.ಕಾಂಗ್ರೆಸ್ ನವರೇನೂ ಅಂಗಡಿ ಇಟ್ಟುಕೊಂಡಿದ್ದಾರಾ?. ಡಿಸಿಎಂ ಡಿ.ಕೆ. ಶಿವಕುಮಾರ್ ಕಲ್ಲು ಹೊಡೆದವರು ಸಣ್ಣ ಮಕ್ಕಳು ಎಂದಿದ್ದಾರೆ.ಅವರೇನು ಬೇಬಿ ಸಿಟ್ಟಿಂಗ್ ನವರಾ?.ಕಾಂಗ್ರೆಸ್ ನವರು ಮುಸ್ಲಿಮರ ಭಿಕ್ಷೆಯಲ್ಲಿದ್ದಾರೆ.ಋಣ ತೀರಿಸಲು ಕಾಂಗ್ರೆಸ್ ನವರು ಹೀಗೆ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಮೈಸೂರಿನಲ್ಲಿ ಭಗವಾನ್ ರಾಮನನ್ನು ಬೈಯುತ್ತಾನೆ.ಅವನಿಗೆ ಭಗವಾನ್ ಅಂತಾ ಹೆಸರು ಯಾರು ಇರಿಸಿದರೋ ಗೊತ್ತಿಲ್ಲ. ಹಿಂದೂಗಳು ಯಾವತ್ತಾದರೂ ಹೋಗಿ ಪೊಲೀಸ್ ಠಾಣೆ ಸುಟ್ಟಿದ್ದಾರಾ?.ಮೈಸೂರು ಘಟನೆಯಲ್ಲಿ ಕೊನೆಗೆ ಪೊಲೀಸರೇ ಸಸ್ಪೆಂಡ್ ಆಗುತ್ತಾರೆ.ರಾಜ್ಯದಲ್ಲಿ ಮುಂದೆ ಏನಾದರೂ ಗಲಾಟೆ ಆದರೆ ಕಾಂಗ್ರೆಸ್ ಕಾರಣ ಎಂದಿದ್ದಾರೆ. ಆರ್ ಎಸ್ ಎಸ್ ನವರೇ ವೇಷ ಧರಿಸಿ ಬಂದಿದ್ದರು ಎಂಬ ಕಾಂಗ್ರೆಸ್ ನಾಯಕರ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿದ ಅವರು ಒಂದೇ ದಿನದಲ್ಲಿ ಅಷ್ಟು ಗಡ್ಡ ಬಿಟ್ಟುಕೊಂಡು ಹೇಗೆ ಬರಲು ಸಾಧ್ಯ?.ಕಾಂಗ್ರೆಸ್ ನವರು ಏನು ಹುಚ್ಚರಾ?.ಸಿಸಿಟಿವಿಯಲ್ಲಿ ಯಾವ ಆರ್ ಎಸ್ ಎಸ್ ನವರು ಬಂದಿದ್ದಾರೆ ಅಂತಾ ಕಾಂಗ್ರೆಸ್ ನವರು ತೋರಿಸಲಿ. ಎಲ್ಲಾ ಕಾಣುತ್ತಿರೋದು ಅದೇ ದಾಡಿಗಳೇ ಎಂದಿದ್ದಾರೆ.
ರಾಜ್ಯ ಸರ್ಕಾರ ವಿವಿಗಳನ್ನು ಮುಚ್ಚುವ ಹೊಸ ಭಾಗ್ಯ ಕೊಡುತ್ತಿದೆ.ಮಾರಿ ಕಣ್ಣು ಹೋರಿ ಮೇಲೆ ಅನ್ನುವಂತೆ ಸಿದ್ದರಾಮಯ್ಯ ಕಣ್ಣು ವಿವಿಗಳ ಮೇಲೆ ಬಿದ್ದಿದೆ.9 ವಿವಿಗಳನ್ನು ಮುಚ್ಚಲು ಸರ್ಕಾರ ಹೊರಟಿದೆ.ಯುವಕರು ಪದವೀಧರರಾದರೆ ಯುವನಿಧಿ ಕೊಡಬೇಕು ಅಂತ ವಿವಿ ಮುಚ್ಚುತ್ತಿದ್ದಾರೆ.ಕಾಂಗ್ರೆಸ್‌ನವರು ಖತರ್ನಾಕ್‌ಗಳು.ಮೊದಲು ಮಂಡ್ಯ ವಿವಿ ಮುಚ್ಚುತ್ತಿದ್ದಾರೆ.ಮಂಡ್ಯ ಗಂಡು ನಾಡು, ಅಲ್ಲೇ ವಿವಿಗೆ ಕೊಡಲಿ ಪೆಟ್ಟು ಹಾಕುತ್ತಿದ್ದಾರೆ ಎಂದರು.ವಿವಿ ಮುಚ್ಚಿ ಅಮ್ಯೂಸ್‌ಮೆಂಟ್ ಪಾರ್ಕ್ ಮಾಡುವುದಂತೆ.ಅಪರೂಪದ ಪೀಸ್‌ಗಳು ಇವರು.ಕನ್ನಡದವರು ಇರುವ ಜಾಗದಲ್ಲೇ ವಿವಿ ಮುಚ್ಚುತ್ತಿದ್ದಾರೆ.ನಮಗೆ ಅಮ್ಯೂಸ್‌ಮೆಂಟ್ ಪಾರ್ಕ್ ಬೇಡ, ಜಲ ಕ್ರೀಡೆಯೂ ಬೇಡ.ಅತಿಥಿ ಉಪನ್ಯಾಸಕರಿಗೆ ಸಂಬಳ ಕೊಡುತ್ತಿಲ್ಲ, ಉಪನ್ಯಾಸಕರ ನೇಮಕ ಆಗುತ್ತಿಲ್ಲ.ಶಿಥಿಲ ವ್ಯವಸ್ಥೆಯಲ್ಲಿರುವ ಶಾಲೆಗಳ ರಿಪೇರಿಗೆ ಕೊಡಲು ಹಣ ಇಲ್ಲ. ಕೆಪಿಎಸ್‌ಸಿ ಪರೀಕ್ಷೆ ನಡೆಸಲು ನಿಮಗೆ ಯೋಗ್ಯತೆ ಇಲ್ಲ.ಇಂಜಿನಿಯರಿಂಗ್ ಕಾಲೇಜು ಓಪನ್ ಏನಾದರೂ ಮಾಡಿದ್ದಾರಾ?.4 ಲಕ್ಷ ಕೋಟಿ ಬಜೆಟ್ ಮಂಡಿಸಲು ಹೋಗುತ್ತಿದ್ದೀರಿ.340 ಕೋಟಿ ವಿಶ್ವವಿದ್ಯಾಲಯಕ್ಕೆ ಕೊಡಲು ಯೋಗ್ಯತೆ ಇಲ್ಲದೇ ನಾಲ್ಕು ಲಕ್ಷ ಕೋಟಿ ಬಜೆಟ್ ಹೇಗೆ ಮಂಡಿಸುತ್ತಿದ್ದಿರಾ?.ಮೂರು ಸಾವಿರ ಬಾರ್ ಮುಚ್ಚುತ್ತೇವೆ ಅಂತ ಹೇಳಿ ನೋಡೋಣ?.ಬಾರ್ ಮತ್ತು ವೈನ್ ಸ್ಟೋರ್ ಮುಚ್ಚಲ್ವಂತೆ, ಯುನಿವರ್ಸಿಟಿ ಮುಚ್ಚುತ್ತಾರಂತೆ, ಎಂತಹ ನೀತಿ ನಿಮ್ಮದು.ಗಡಿ ನಾಡು ಜಿಲ್ಲೆಗಳ ವಿದ್ಯಾರ್ಥಿಗಳು ಆಂಧ್ರ ಪ್ರದೇಶ, ತಮಿಳುನಾಡು, ಕೇರಳಕ್ಕೆ ಹೋಗುತ್ತಾರೆ.ಯಾವ ಮನೆ ಹಾಳಿಗಾಗಿ ಇನ್ವೆಸ್ಟ್ ಕರ್ನಾಟಕ ಮಾಡಿದ್ರಿ?.ಯುನಿವರ್ಸಿಟಿ ಮುಚ್ಚಿದರೆ ಹೇಗೆ ಇನ್ವೆಸ್ಟ್ ಮಾಡುತ್ತಾರೆ? ಎಂದು ಪ್ರಶ್ನಿಸಿದ್ದಾರೆ.