ಮನೆ Latest News ಅಶೋಕ್, ವಿಜಯೇಂದ್ರ, ನಾರಾಯಣ ಸ್ವಾಮಿ ತ್ರೀ ಈಡಿಯಟ್ಸ್ ; ಬಿಜೆಪಿ ನಾಯಕರ ವಿರುದ್ಧ ಮೈಸೂರು ಎಂ...

ಅಶೋಕ್, ವಿಜಯೇಂದ್ರ, ನಾರಾಯಣ ಸ್ವಾಮಿ ತ್ರೀ ಈಡಿಯಟ್ಸ್ ; ಬಿಜೆಪಿ ನಾಯಕರ ವಿರುದ್ಧ ಮೈಸೂರು ಎಂ ಪಿ ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಲಕ್ಷ್ಮಣ್ ಆಕ್ರೋಶ

0

ಮೈಸೂರು; ಅಶೋಕ್, ವಿಜಯೇಂದ್ರ, ನಾರಾಯಣ ಸ್ವಾಮಿ ತ್ರೀ ಈಡಿಯಟ್ಸ್ ಎಂದು ಬಿಜೆಪಿ ನಾಯಕರ ವಿರುದ್ಧ ಮೈಸೂರು ಎಂ ಪಿ ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಲಕ್ಷ್ಮಣ್ ಆಕ್ರೋಶ ಹೊರ ಹಾಕಿದ್ದಾರೆ.

ಬಿಜೆಪಿಯವರಿಗೆ ಇಡೀ ದೇಶದಲ್ಲೇ ಕಿಡಿ ಹೊತ್ತಿಸೋದೆ ಕೆಲಸ. ಮೈಸೂರಿನಲ್ಲಿ ಮಾಡಲು ಏನೇನೊ ಮಾಡ್ತಿದಾರೆ, ಅದು ಆಗುತ್ತಿಲ್ಲ. ಇವರಿಗೆ ಏನೂ ಪರಿಜ್ಞಾನ ಬೇಡವಾ ?. ವಿಜಯೇಂದ್ರ, ಛಲವಾದಿ ನಾರಾಯಣಸ್ವಾಮಿ ಬಾಯಿ ಬಡ್ಕೊಳ್ತಿದಾರೆ. ಮೈಸೂರಿನಲ್ಲಿ ಜಾಥಾ ಮಾಡುತ್ತಿದ್ದಾರೆ. ಜಾಥಾ ಮಾಡುತ್ತಿರೋದು ಯಾರು, ಆರ್‌ಎಸ್‌ಎಸ್ ನವರು ಅಲ್ಲವಾ ?. ಈಗ ಬೆಂಕಿ ಹಚ್ಚೋಕೆ ಹೊರಟಿದ್ದಾರೆ. ಇವರು ಮೈಸೂರಿಗೆ ಯಾಕೆ ಬರ್ತಿದ್ದಾರೆ .ಯಾವ ಕಿಡಿ ಹಚ್ಚಿಸಲು ನಾವು ಬಿಡೋದಿಲ್ಲ. ತ್ರಿ ಈಡಿಯಟ್ಸ್ ಅಂತಾ ಪ್ರಚೋದನಾತ್ಮಕವಾಗಿ ಭಾವಚಿತ್ರ ಹಾಕಿದ್ದರು. ರಾಹುಲ್ ಗಾಂಧಿ, ಅರವಿಂದ್ ಕೇಜ್ರಿವಾಲ್ ಭಾವಚಿತ್ರವನ್ನ ಸಾಮಾಜಿಕ ಜಾಲತಣದಲ್ಲಿ ಹಾಕಿದ್ದಾರೆ.ಇದೇ ಆರ್‌ಎಸ್‌ಎಸ್ ನವರೇ ಹಾಕಿರೋದು. ಇದೇ ಅಶೋಕ್, ವಿಜಯೇಂದ್ರ, ನಾರಾಯಣ ಸ್ವಾಮಿ ತ್ರೀ ಈಡಿಯಟ್ಸ್.ಇವರನ್ನ ಮೊದಲು ಒದ್ದು ಒಳಗೆ ಹಾಕಬೇಕು ಎಂದಿದ್ದಾರೆ.