ಮನೆ Latest News ಹಿಮಾಲಯ ಬೆಟ್ಟ ಎಷ್ಟು ಎತ್ತರ ಇದ್ಯೋ, ಇವರ ಸಾಧನೆಯೂ ಅಷ್ಟೇ ಎತ್ತರ; ಸ್ಪೀಕರ್ ಯು.ಟಿ ಖಾದರ್...

ಹಿಮಾಲಯ ಬೆಟ್ಟ ಎಷ್ಟು ಎತ್ತರ ಇದ್ಯೋ, ಇವರ ಸಾಧನೆಯೂ ಅಷ್ಟೇ ಎತ್ತರ; ಸ್ಪೀಕರ್ ಯು.ಟಿ ಖಾದರ್ ಹೇಳಿಕೆ

0

ಬೆಳಗಾವಿ; ಹಿಮಾಲಯ ಬೆಟ್ಟ ಎಷ್ಟು ಎತ್ತರ ಇದ್ಯೋ, ಇವರ ಸಾಧನೆಯೂ ಅಷ್ಟೇ ಎತ್ತರ ಎಂದು ಸ್ಪೀಕರ್ ಯು.ಟಿ ಖಾದರ್ ಹೇಳಿದ್ದಾರೆ.

ಸರ್ವ ಶಾಸಕರ ಮಿತ್ರರಾಗಿದ್ದ ಶಾಮನೂರು ಸಾಹೇಬರು ನಿಧನ ಆಗಿದ್ದಾರೆ. ಹಿಮಾಲಯ ಬೆಟ್ಟ ಎಷ್ಟು ಎತ್ತರ ಇದ್ಯೋ, ಇವರ ಸಾಧನೆಯೂ ಅಷ್ಟೇ ಎತ್ತರ. ಅನೇಕ ಸಾಮಾಜಿಕ, ಶೈಕ್ಷಣಿಕ ಕೆಲಸಗಳನ್ನು ಮಾಡಿ ತೋರಿಸಿದ್ದಾರೆ. ರಾಜಕೀಯ, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರಗಳಿಗೆ ಕೊಡುಗೆ ಕೊಟ್ಟಿದ್ದಾರೆ. ಅವರ ಜೀವನವೇ ಒಂದು ಸಂದೇಶ. 10.20 ಕ್ಕೆ ಸದನ ಆರಂಭ ಮಾಡ್ತೀವಿ. ಹಿರಿಯ ನಾಯಕರಿಗೆ ಸಂತಾಪ ಸೂಚನೆ‌ ಮಾಡ್ತೀವಿ.ಅಧಿವೇಶನದ ಸಮಯವನ್ನು ವಿಸ್ತರಿಸಬೇಕೋ ಬೇಡ್ವೋ ತೀರ್ಮಾನ ಮಾಡಿ ಹೇಳ್ತೇವೆ ಎಂದಿದ್ದಾರೆ.

ಅತ್ಯಂತ ಹಿರಿಯರು , ಗೌರವಿತರು, ಮಾಜಿ ಸಚಿವರು, ಶಾಸಕರು ಆಗಿರುವ ಶಾಮನೂರು ಶಿವಶಂಕರಪ್ಪ ಅಗಲಿಗೆ ನೋವಿನ ಸಂಗತಿ. ಹಿಮಾಲಯ ಬೆಟ್ಟದ ಎಷ್ಟು ಎತ್ತರವಿದೆಯೋ ಅಷ್ಟೇ ಎತ್ತರ ಕೆಲಸ ಮಾಡಿದ್ದಾರೆ. ಅದು ಸಾಮಾಜಿಕ, ರಾಜಕೀಯವಾಗಿ, ಧಾರ್ಮಿಕ ಮತ್ತು ಸಾಂಸ್ಕೃತಿಕವಾಗಿ ಬೆಟ್ಟದಷ್ಟು ಕೆಲಸ ಕಾರ್ಯಕ್ರಮಗಳನ್ನ ಮಾಡಿದ್ದಾರೆ. ಸಂಘಟನೆ ಮಾಡುವುದು ಹೇಗೆ ಅಂತ ತೋರಿಸಿದ್ದಾರೆ.ಸಮಾಜಕ್ಕೆ ಸಾಕಷ್ಟು ಕೊಡುಗೆ ಕೊಟ್ಟು ಸಮಾಜವನ್ನ ಒಟ್ಟುಗೂಡಿಸುವ ಕೆಲಸ ಮಾಡಿದ್ದಾರೆ. ನನ್ನ ತಂದೆಗೆ ಅತ್ಯಂತ ಆತ್ಮೀಯರು.ನಾನು ನೋಡಿದ ವ್ಯಕ್ತಿತ್ವ ಯುವಜನಾಂಗಕ್ಕೆ ಸ್ಪೂರ್ತಿಯಾಗುತ್ತಾರೆ. ಅವರದ್ದು ನಗುಮುಖ ತಾಳ್ಮೆಯಿಂದ ಇದ್ರು.ಅವರ ಅಗಲಿಕೆಯ ನೋವನ್ನು ತಡೆದುಕೊಳ್ಳುವ ಶಕ್ತಿ ನೀಡಲಿ.10.30 ಕ್ಕೆ ಅಧಿವೇಶ ಶುರು ಮಾಡಿ. ಅಧಿವೇಶನದಲ್ಲಿ ಸಂತಾಪ ಸೂಚಿಸಿ.ಪ್ರಥಮವಾಗಿ ನಮ್ಮನ್ನ ಅಗಲಿದ ಶಾಮನೂರು ಶಿವಶಂಕರಪ್ಪ ಅವರಿಗೆ ಸಂತಾಪ ಸೂಚಿಸುತ್ತೇವೆ. ಸಿಎಂ, ಸಚಿವರು, ಶಾಸಕರು  ಮಾತನಾಡಿ ಸಂತಾಪ ಸೂಚಿಸಿ ಸದನ ಮುಂದೂಡುತ್ತೇವೆ. ಸಿಎಂ, ಪ್ರತಿಪಕ್ಷ ನಾಯಕರ ಜೊತೆ ಚರ್ಚೆ ಮಾಡಿ ಅಧಿವೇಶದ ಅವಧಿ ವಿಸ್ತರಿಸುವ ಬಗ್ಗೆ ಚರ್ಚೆ ಮಾಡುತ್ತೇವೆ. BAC ಸಭೆ ಕರೆದು ಚರ್ಚೆ ಮಾಡಿ ತೀರ್ಮಾನ ಕೈಗೊಳ್ಳುತ್ತೇವೆ ಹೇಳಿದ್ದಾರೆ.