ತುಮಕೂರು; ನನಗೆ ತಿಳಿದ ಮಟ್ಟಿಗೆ ಇನ್ನೊಂದೆರಡು ದಿನಗಳಲ್ಲಿ ಇನ್ನು ಎರಡು ಮೂರು ಹಡಗುಗಳು ಭಾರತಕ್ಕೆ ಬರ್ತಿದೆ ಎಂದು ತುಮಕೂರಿನಲ್ಲಿ ಕೇಂದ್ರ ಸಚಿವ ವಿ. ಸೋಮಣ್ಣ ಹೇಳಿದ್ದಾರೆ.
ಮಧ್ಯಪ್ರಾಚ್ಯ ರಾಷ್ಟ್ರಗಳ ಯುದ್ಧದಿಂದ ಭಾರತಕ್ಕೆ ಎಫೆಕ್ಟ್ ವಿಚಾರದ ಬಗ್ಗೆ ಮಾತನಾಡಿದ ಅವರು ಎಲ್ಲೋ ಒಂದು ಕಡೆ ರಾಷ್ಟ್ರದ ಪ್ರಧಾನ ಮಂತ್ರಿಗಳ ದೂರದೃಷ್ಟಿ ಚಿಂತನೆ. ನಿರೀಕ್ಷಿತವಾಗಿ ಆಗಿರುವಂತಹ ಈ ಒಂದು ಕಹಿ ಘಟನೆ. ಭಾರತದ ಮೇಲೆ ಇನ್ನು ಆ ತರದ ಪರಿಣಾಮ ಬೀರಿಲ್ಲ. ಎಲ್ಲೋ ಒಂದು ಕಡೆ ಮಧ್ಯವರ್ತಿಗಳು ಅಲ್ಲಲ್ಲೇ ಕೆಲವು ಹಳೆಯ ಕಸುಬುಗಳನ್ನ ಮಾಡುವುದಂತಹರಲ್ಲಿ ಹೀಗೆ ಆಗಿರಬಹುದು. ನಾನು ಅಧಿಕಾರಿಗಳಿಗೆ ಸಾಮಾನ್ಯ ಜನರ ನೋವನ್ನ ಅರ್ಥಮಾಡಿಕೊಂಡು ಕೆಲಸ ಮಾಡೋದಿಕ್ಕೆ ಸೂಚನೆ ಕೊಡ್ತಿನಿ.ಈಗಾಗಲೇ ರಾಜ್ಯದ ಆಹಾರ ಸರಬರಾಜು ಇಲಾಖೆ ಮಂತ್ರಿಗಳಾದ ಮುನಿಯಪ್ಪ ಅವ್ರು ತಿಳಿಸಿದ್ದಾರೆ. ನನಗೆ ತಿಳಿದ ಮಟ್ಟಿಗೆ ಇನ್ನೊಂದೆರಡು ದಿವಸದಲ್ಲಿ ಇನ್ನು ಎರಡು ಮೂರು ಹಡಗುಗಳು ಭಾರತ ದೇಶಕ್ಕೆ ಬರ್ತಾ ಇದೆ. ಅಂತಹ ಕಠಿಣವಾದ ಸಮಸ್ಯೆ ಸಂದರ್ಭ ಬರೋದಿಲ್ಲ. ಭಾರತ ಸರ್ಕಾರದ ವ್ಯವಸ್ಥೆಯಲ್ಲಿ ಇರೋದ್ರಿಂದ ಆತಂಕ ಪಡುವಂತಹ ಪರಿಸ್ಥಿತಿ ಇಲ್ಲ ಎಂದಿದ್ದಾರೆ.
ಬೇರೆ ಭಾಗದಲ್ಲಿ ಆಗುವಂತಹ ಅನಾಹುತಗಳಿಂದ ನಮ್ಮ ದೇಶವನ್ನ ಯಾವ ರೀತಿ ಸಂರಕ್ಷಣೆ ಮಾಡಬೇಕು ಅನ್ನೋದನ್ನ ಭಾರತ ಸರ್ಕಾರ ಎಲ್ಲಾ ಕ್ರಮ ತೆಗೆದುಕೊಂಡಿದೆ. ಮೂರು ನಾಲ್ಕು ದಿನಗಳಲ್ಲಿ ತಿಳಿ ವಾತಾವರಣ ಆಗುತ್ತೆ ಅನ್ನೋದು.ಕೆಲ ಸಂದರ್ಭ, ಸನ್ನಿವೇಶವನ್ನ ಅರ್ಥ ಮಾಡಿಕೊಂಡು ಗೊಂದಲವನ್ನ ನಿವಾರಣೆ ಮಾಡೋದಿಕ್ಕೆ ಭಾರತ ಸರ್ಕಾರ ಎಲ್ಲಾ ಕ್ರಮ ತಗೊಂಡಿದೆ ಎಂದ ಅವರು ಯುದ್ಧ ಎಫೆಕ್ಟ್ ನಿಂದ ರಾಜ್ಯದಲ್ಲಿ ಪೆಟ್ರೋಲ್ ಡಿಸೇಲ್ ದರ ಹೆಚ್ಚಳವಾಗಿದೆ ಎಂಬ ಬಗ್ಗೆ ಮಾತನಾಡಿದ ಅವರು ಅದರ ಬಗ್ಗೆ ನನಗೆ ಮಾಹಿತಿ ಇಲ್ಲ. ನಾನು ಮೂರು ದಿನ ಆಯ್ತು ಕರ್ನಾಟಕಕ್ಕೆ ಬಂದು ಅಲ್ಲಿ ಇಲ್ಲಿ ಸುತ್ತಾಡುತ್ತಿದ್ದೇನೆ.ಅದರ ಬಗ್ಗೆ ಸ್ಪಷ್ಟವಾದ ಮಾಹಿತಿ ಇಲ್ಲ.ನಾಳೆ ನಾನು ಡೆಲ್ಲಿಗೆ ಹೋಗ್ತಿದೀನಿ. ಅದರ ಬಗ್ಗೆ ಮನವರಿಕೆ ಮಾಡಿ ತಿಳಿಸ್ತೀನಿ ಎಂದು ತಿಳಿಸಿದ್ದಾರೆ.
ಕರ್ನಾಟಕದಲ್ಲಿ ಬೈ ಎಲೆಕ್ಷನ್ ವಿಚಾರದ ಬಗ್ಗೆ ಮಾತನಾಡಿದ ಅವರು ಚುನಾವಣೆ ಬಂದಿದೆ, ರಿ ಎಲೆಕ್ಷನ್ ಇದೆ. ಎರಡು ಬೈ ಎಲೆಕ್ಷನ್. ಕರ್ನಾಟಕದಲ್ಲಿರುವಂತಹ ದಾವಣಗೆರೆ ಮತ್ತು ಬಾಗಲಕೋಟೆಯನ್ನ ಬಿಜೆಪಿ ನಿರಾಯಸವಾಗಿ ಗೆಲ್ಲುತ್ತೆ ಎಂದ ಅವರು ಟಿಕೆಟ್ ಘೋಷಣೆ ಆಗದೇ ಶ್ಯಾಮನೂರು ಶಿವಶಂಕರಪ್ಪ ಮೊಮ್ಮಗ ನಾಮಪತ್ರ ಸಲ್ಲಿಕೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು ಅದನ್ನ ಅವರಿಗೆ ಕೇಳಬೇಕು. ಕಾಂಗ್ರೆಸ್ ನಲ್ಲಿ ಏನಾಗಿದೆ, ಕಾಂಗ್ರೆಸ್ ಅವ್ರ ಮನೆಯಲ್ಲಿ ಎಷ್ಟು ಹೆಗ್ಗಣ ಸತ್ತೊಗಿದೆ ಅಂತ ನನ್ನ ಕೇಳಿದ್ರೆ ನನಗೇನು ಗೊತ್ತಿರುತ್ತೆ.ನನಗೆ ಅದರ ವಾಸನೆನೆ ಗೊತ್ತಿಲ್ಲ.ಈ ಎರಡು ಉಪ ಚುನಾವಣೆಗಳು ರಾಜ್ಯದಲ್ಲಿರುವಂತಹ ಅರಾಜಕತೆ.ಈ ರಾಜ್ಯದ ಜನರಲ್ಲಿ ಇರುವಂತಹ ನೋವನ್ನು, ಚುನಾವಣಾ ಮುಖೇನಾ ತೋರಿಸುವ ಸದಾವಕಾಶವನ್ನ ಪ್ರಜ್ಞಾವಂತ ಮತದಾರರಾದ ದಾವಣಗೆರೆ ಮತ್ತು ಬಾಗಲಕೋಟೆ ಜನರು, ಯುವಕರು ಮಾಡಿ ತೋರಿಸುತ್ತಾರೆ.ಎರಡು ಚುನಾವಣೆಯಲ್ಲೂ ಬಿಜೆಪಿ ಗೆಲ್ಲುತ್ತೆ ಎಂದಿದ್ದಾರೆ.










