ಮನೆ ಪ್ರಸ್ತುತ ವಿದ್ಯಮಾನ ಉತ್ತರ ಕನ್ನಡ: ಶಿರೂರಿನಲ್ಲಿ ಗುಡ್ಡ ಕುಸಿತದಲ್ಲಿ ನಾಪತ್ತೆಯಾಗಿದ್ದ ಲಾರಿ ಚಾಲಕ ಅರ್ಜುನ್ ಲಾರಿ ಪತ್ತೆ

ಉತ್ತರ ಕನ್ನಡ: ಶಿರೂರಿನಲ್ಲಿ ಗುಡ್ಡ ಕುಸಿತದಲ್ಲಿ ನಾಪತ್ತೆಯಾಗಿದ್ದ ಲಾರಿ ಚಾಲಕ ಅರ್ಜುನ್ ಲಾರಿ ಪತ್ತೆ

0

ಉತ್ತರ ಕನ್ನಡ: ಜುಲೈ 16 ರಂದು ಅಂಕೋಲಾ ತಾಲೂಕಿನ ಶಿರೂರು ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ  ಭಾರೀ ಪ್ರಮಾಣದಲ್ಲಿ ಗುಡ್ಡ ಕುಸಿದಿತ್ತು. ಹೆದ್ದಾರಿ ಪಕ್ಕದ ಅಂಗಡಿ, ಮನೆಗಳಲ್ಲಿರುವ ಸುಮಾರು  11  ಮಂದಿ ಮಣ್ಣಿನ ಅಡಿ ಸಿಲುಕಿದ್ದರು. ಲಾರಿ ಸೇರಿದಂತೆ ಕೆಲವು ವಾಹನಗಳು ಮಣ್ಣಿನ ಅಡಿ ಸಿಲುಕಿದ್ದವು. ಅಲ್ಲದೇ ನದಿಯಲ್ಲಿ ಗ್ಯಾಸ್ ಟ್ಯಾಂಕರ್ ಒಂದು ತೇಲಿ ಹೋಗಿತ್ತು.

ಈ ಘಟನೆಯಲ್ಲಿ ನಾಪತ್ತೆಯಾದ 11 ಮಂದಿಯಲ್ಲಿ 8 ಮಂದಿಯ ಮೃತದೇಹ ಈಗಗಾಲೇ ಪತ್ತೆಯಾಗಿದೆ. ಆದರೆ ಕೇರಳ ಮೂಲದ ಲಾರಿ ಚಾಲಕ ಅರ್ಜುನ್ ಸೇರಿದಂತೆ ಮೂವರ ಮೃತದೇಹ ಪತ್ತೆಯಾಗಿರಲಿಲ್ಲ. ಎರಡು ಬಾರಿ ಕಾರ್ಯಾಚರಣೆ ನಡೆಸಿದಾಗ ಎರಡನೇ ಬಾರಿಮುಳುಗುತಜ್ಞ ಈಶ್ವರ್ ಮಲ್ಪೆ ತಂಡಕ್ಕೆ ಅರ್ಜುನ್ ನ ಲಾರಿಯ ಜಾಕ್ ಪತ್ತೆಯಾಗಿತ್ತು. ಬೇರೆ ಸುಳಿವು ಸಿಗದ ಹಿನ್ನೆಲೆ ಕಾರ್ಯಾಚರಣೆ ಸ್ಥಗಿತವಾಗಿತ್ತು.

 

ನಿನ್ನೆಯಿಂದ ಮತ್ತೆ ಮೂರನೇ ಹಂತದ ಕಾರ್ಯಾಚರಣೆ ಆರಂಭವಾಗಿತ್ತು. ಅದರಂತೆ ಮುಳುಗು ತಜ್ಞ ಈಶ್ವರ್ ಮಲ್ಪೆ  ತಂಡ ಕಾರ್ಯಾಚರಣೆ ನಡೆಸುತ್ತಿತ್ತು. ಇಂದು ಅರ್ಜುನ್ ಓಡಿಸುತ್ತಿದ್ದ ಲಾರಿ ಪತ್ತೆಯಾಗಿದೆ. ಅದನ್ನು ಮೇಲಕ್ಕೆತ್ತುವ ಪ್ರಯತ್ನ ನಡೆಯುತ್ತಿದೆ.

ಅಂಕೋಲಾದ ಶಿರೂರು ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡಕುಸಿತ ಪ್ರಕರಣ; ಮೂರನೇ ಹಂತದ ಕಾರ್ಯಾಚರಣೆ ಆರಂಭ

ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರು ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡ ಕುಸಿತ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೂರನೇ ಹಂತದ ಕಾರ್ಯಾಚರಣೆ ಇಂದಿನಿಂದ ಆರಂಭವಾಗಿದೆ.ಡ್ರೆಜ್ಜರ್ ಹಾಗೂ ಬಾರ್ಜ್ ಯಂತ್ರವನ್ನು ಬಳಸಿಕೊಂಡು ಮೂರನೇ ಹಂತದ ಕಾರ್ಯಾಚರಣೆ ಆರಂಭಿಸಲಾಗಿದೆ.

ಗಂಗಾವಳಿ ನದಿಯಲ್ಲಿನ ಮಣ್ಣು ಗುಡ್ಡೆ ತೆರವು ಮಾಡುವ ಕಾರ್ಯ ಆರಂಭವಾಗಿದ್ದು, ಶಾಸಕ ಸತೀಶ್ ಸೈಲ್, ಜಿಲ್ಲಾಧಿಕಾರಿ ಲಕ್ಷ್ಮೀ ಪ್ರಿಯಾ, ಎಸ್ ಪಿ ಎಂ.ನಾರಾಯಣ ದಿಂದ ಕಾರ್ಯಾಚರಣೆಗೆ ಚಾಲನೆ ನೀಡಿದ್ದಾರೆ. ಬಾರ್ಜ್ ಗೆ ವಿಶೇಷ ಪೂಜೆ ಸಲ್ಲಿಸಿ ಕಾರ್ಯಾಚರಣೆಗೆ ಚಾಲನೆ ನೀಡಲಾಗಿದೆ. ಇಂದಿನಿಂದ ಆರಂಭಗೊಂಡಿರುವ ಈ ಕಾರ್ಯಾಚರಣೆ ಹತ್ತು ದಿನಗಳ ಕಾಲ ನಡೆಯಲಿದೆ.

ಶಿರೂರು ಗುಡ್ಡಕುಸಿತ ದುರಂತದಲ್ಲಿ 11 ಮಂದಿ ಕಣ್ಮರೆಯಾಗಿದ್ದರು. ಅವರಲ್ಲಿ ಇದುವರೆಗೆ 8 ಮಂದಿ ಮೃತದೇಹ ಮಾತ್ರ ಪತ್ತೆಯಾಗಿದೆ.  ಇನ್ನುಳಿದ ಮೂವರಿಗಾಗಿ ಶೋಧ ಕಾರ್ಯ ಮುಂದುವರಿದೆ. ಜಗನ್ನಾಥ ನಾಯ್ಕ, ಲೋಕೇಶ್, ಕೇರಳದ ಅರ್ಜುನ್‌ಗಾಗಿ ಇಂದಿನಿಂದ ಮೂರನೇ ಹಂತದ ಶೋಧ ಕಾರ್ಯಾಚರಣೆ ಆರಂಭವಾಗಿದೆ. ಇಂದಿನಿಂದ 10 ದಿನಗಳ ಕಾಲ ಗಂಗಾವಳಿ ನದಿಯಲ್ಲಿ ಡ್ರೆಜ್ಜರ್ ಕಾರ್ಯಾಚರಣೆ ನಡೆಸಲಿದೆ. ಕಾರ್ಯಾಚರಣೆ ಹಿನ್ನಲೆ ಎನ್‌ಡಿಆರ್‌ಎಫ್, ಪೊಲೀಸ್, ತಾಲೂಕು ಆಡಳಿತದ ಸಿಬ್ಬಂದಿ ಸ್ಥಳದಲ್ಲಿ ಬೀಡು ಬಿಟ್ಟಿದ್ದಾರೆ.