ಮನೆ Latest News ಜೆಎಸ್ ಡಬ್ಲ್ಯೂ ಗೆ ಭೂಮಿ ಮಾರಾಟ ಕುರಿತ ಸಚಿವ ಸಂಪುಟ ನಿರ್ಧಾರ ವಿಚಾರ;ಬೆಂಗಳೂರಿನಲ್ಲಿ ವಿಧಾನಸಭೆ ವಿಪಕ್ಷ...

ಜೆಎಸ್ ಡಬ್ಲ್ಯೂ ಗೆ ಭೂಮಿ ಮಾರಾಟ ಕುರಿತ ಸಚಿವ ಸಂಪುಟ ನಿರ್ಧಾರ ವಿಚಾರ;ಬೆಂಗಳೂರಿನಲ್ಲಿ ವಿಧಾನಸಭೆ ವಿಪಕ್ಷ ಉಪ ನಾಯಕ ಅರವಿಂದ ಬೆಲ್ಲದ್ ಸುದ್ದಿಗೋಷ್ಠಿ

0

ಬೆಂಗಳೂರು; ಜೆಎಸ್ ಡಬ್ಲ್ಯೂ ಗೆ ಭೂಮಿ ಮಾರಾಟ ಕುರಿತ ಸಚಿವ ಸಂಪುಟ ನಿರ್ಧಾರ ವಿಚಾರಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ವಿಧಾನಸಭೆ ವಿಪಕ್ಷ ಉಪ ನಾಯಕ ಅರವಿಂದ ಬೆಲ್ಲದ್ ಸುದ್ದಿಗೋಷ್ಠಿ ನಡೆಸಿದ್ದಾರೆ.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅರವಿಂದ ಬೆಲ್ಲದ್ ಪುರಾತನ ಕಾಲದಿಂದ ಬಂದ ಮಿನರಲ್ ಆಸ್ತಿಯನ್ನು ಎಕರೆಗೆ 1ಲಕ್ಷ 20 ಸಾವಿರಕ್ಕೆ ಕೊಡುತ್ತಿದ್ದಾರೆ.ಇಷ್ಟು ಕಡಿಮೆ ದರಕ್ಕೆ ಮಾರಲು ಇದು ಸಿದ್ದರಾಮಯ್ಯ ಅಪ್ಪನ ಮನೆ ಆಸ್ತಿ ಅಲ್ಲ.ನೀವು ಒಳ ಒಪ್ಪಂದ ಮಾಡಿಕೊಂಡು, ಹಣ ಲೂಟಿ ಹೊಡೆಯುತ್ತಿದ್ದೀರಿ.ಇಂದಿನ ದರಕ್ಕೆ ಮಾರಾಟ ಮಾಡಿ ನಮ್ಮ‌ ವಿರೋಧ ಇಲ್ಲ.ತೀರ್ಪು ಪ್ರಕಾರ ಇಂದಿನ ದರಕ್ಕೆ ಮಾರಾಟ ಮಾಡಿದರೆ ನಮ‌್ಮ ವಿರೋಧ ಇಲ್ಲ.3,666 ಎಕರೆ ಜಾಗ 20 ಕೋಟಿಗೆ ಮಾರಾಟ ಮಾಡುತ್ತಿದ್ದೀರಿ. ನೀವು ಮತ್ತೆ ಸಿಎಂ‌ ಆಗಲ್ಲ ಅಂತ ಕಡಿಮೆ ದರಕ್ಕೆ ಮಾರಾಟ ಮಾಡುತ್ತಿದ್ದೀರಾ?ನಾನು ಮತ್ತು ನಮ್ಮ‌ ಪಕ್ಷದವರು ಇದರ ವಿರುದ್ಧ ಹೋರಾಟ ಮಾಡುತ್ತೇವೆ.ಕೋರ್ಟ್ ಮೆಟ್ಟಿಲೇರಿ ಹೋರಾಟ ಮಾಡುತ್ತೇವೆ ಎಂದಿದ್ದಾರೆ.

ವಯನಾಡಿನಲ್ಲಿ ಏನಾಯ್ತು ಗಮನಿಸಿದ್ದೀರಿ.ಕಾಂಗ್ರೆಸ್ ನವರು ಇದನ್ನು ಕೊಳ್ಳೆ ಹೊಡೆಯಲು ಹೊರಟಿದ್ದಾರೆ, ನಾವು ಬಿಡುವುದಿಲ್ಲ.ಸಿದ್ದರಾಮಯ್ಯ ಅವರೇ ಕೂಡಲೇ ನಿಮ್ಮ ನಿರ್ಧಾರ ಕೂಡಲೇ ವಾಪಸ್ ಪಡೆಯಿರಿ.ಸ್ಪರ್ಧಾತ್ಮಕ ವಲಯದಲ್ಲಿ ನಾವು ಸ್ಪರ್ಧಿಸಬೇಕು.ಇಲ್ಲದಿದ್ದರೆ ಕಂಪನಿಗಳು ಬೇರೆ ರಾಜ್ಯಕ್ಕೆ ಹೋಗುತ್ತವೆ.ಓಲಾ, ಕಿಯಾ ಬೇರೆ ಕಡೆಗೆ ಹೋದವು.ಹೀಗಾಗಿ ಕಂಪನಿಗಳನ್ನು ಆಕರ್ಷಿಸಲು ಭೂಮಿ ನೀಡಿದೆ.ಬಿಜೆಪಿ ತಮ್ಮ ಅವಧಿಯಲ್ಲಿ ನಮ್ಮನ್ನು ವಿಶ್ವಾಸಕ್ಕೆ ಪಡೆಯಲಿಲ್ಲ.ಹೀಗಾಗಿ ನಾವು ವಿರೋಧ ಮಾಡಿದ್ದೇವು.ಈಗ ರಾಜ್ಯದ ಹಿತದೃಷ್ಟಿಯಿಂದ ನಾವು ನಿರ್ಧಾರ ಕೈಗೊಂಡಿದ್ದೇವೆ ಎಂದಿದ್ದಾರೆ.

ಕಳೆದ 15 ತಿಂಗಳಲ್ಲಿ ಕಾಂಗ್ರೆಸ್ ಸರ್ಕಾರದ ಅನೇಕ‌ ಹಗರಣ ಹೊರಗೆ ಬರ್ತಿದೆ.ಅತ್ಯಂತ ಭ್ರಷ್ಟ ಸರ್ಕಾರ ಅನ್ನೋ ಕಿರೀಟ ಕಾಂಗ್ರೆಸ್ ಸರ್ಕಾರಕ್ಕೆ ಬಂದಿದೆ.ಸಿಎಂ ವಿರುದ್ಧ ರಾಜ್ಯಾದ್ಯಂತ ವಿರೋಧ ವ್ಯಕ್ತವಾಗ್ತಿದೆ.ಸಿಎಂ ಸಿದ್ದರಾಮಯ್ಯ ಮನೆಗೆ ಹೋಗುವ ಸಂಧರ್ಭದಲ್ಲಿ ಎಚ್ಚರಿಕೆ ಕೆಲಸ ಮಾಡ್ತಿದ್ರು.ಆದ್ರೆ ಸಿದ್ದರಾಮಯ್ಯ ಅವರು ಕುರ್ಚಿ ಹೇಗೋ ಸಮಯದಲ್ಲಿ ಮತ್ತೊಂದು ಹಗರಣಕ್ಕೆ ಕೈ ಹಾಕಿದ್ದಾರೆ.ಅದು ಜಿಂದಾಲ್ ಕಂಪನಿಗೆ ಅತ್ಯಂತ ಕಡಿಮೆ ಹಣಕ್ಕೆ ಜಾಗ ಕೊಡುವ ಹಗರಣ.ಕೇಂದ್ರ ಸರ್ಕಾರ ಹಿಂದೆ ಸ್ಟೀಲ್‌ ಕಂಪನಿ ಮಾಡಲು ತೆಗೆದುಕೊಂಡ ಜಮೀನಾಗಿತ್ತು.ಕಾರ್ಖಾನೆ ಸ್ಥಗಿತಗೊಂಡಾಗ ಕೇಂದ್ರ ಸರ್ಕಾರ, ರಾಜ್ಯಕ್ಕೆ ಕಡಿಮೆ ಹಣದಲ್ಲಿ ನೀಡಿತು.3,666 ಎಕರೆ ಜಮೀನನ್ನ ನೀಡಿತು.ಕಾಂಗ್ರೆಸ್ ಕಡಿಮೆ ದರಲ್ಲಿ ಮಾರಾಟ ಮಾಡಲು ಕೋಟ್ ಮಾಡಿತ್ತು.1ಲಕ್ಷ 20 ಸಾವಿರ ಎಕರೆಗೆ ಮಾರಾಟಕ್ಕೆ ನಿರ್ಧಾರ ಮಾಡಿತ್ತು.ಬಳಿಕ ಯಡಿಯೂರಪ್ಪ ಸರ್ಕಾರ ಬಂದಾಗಲೂ ಜಿಂದಾಲ್‌ಗೆ ಮಾರಾಟ ಮಾಡಲು ಮುಂದಾದಾಗಲೂ ವಿರೋಧ ಮಾಡಿದೆವು.ನಾವೆಲ್ಲ ಮನವಿ ಮಾಡಿದಾಗ ನಿರ್ಧಾರವನ್ನ ಪೆಂಡಿಂಗ್ ಇಡಲಾಯ್ತು. ಕೋರ್ಟ್ ಮೊರೆ ಹೋದಾಗ ಇಷ್ಟು ಕಡಿಮೆ ದರದಲ್ಲಿ ಮಾರಾಟ ಮಾಡದಂತೆ ಆದೇಶ ನೀಡಿತು.

ಯಡಿಯೂರಪ್ಪ ಅವರ ಸರ್ಕಾರ ಕೋರ್ಟಿಗೆ ಕಡಿಮೆ ದರದಲ್ಲಿ ಕೊಡದೆ, ಹೆಚ್ಚು ದರಕ್ಕೆ ಮಾರಾಟ ಮಾಡೋದಾಗಿ ಸ್ಪಷ್ಟಪಡಿಸಿತು. PIL ಕೇಸ್ ಹಾಕಿದವರಿಗೆ ಅಸಮಾಧಾನ ಇದ್ರೆ ಮತ್ತೆ ಕೋರ್ಟಿಗೆ ಬನ್ನಿ ಅಂತ ಆದೇಶ ಮಾಡಿತ್ತು.ಈಗ ಸಿದ್ದರಾಮಯ್ಯ ಸರ್ಕಾರ ಸಂಡೂರಿನಲ್ಲಿ 2ಸಾವಿರ ಎಕರೆ 1ಲಕ್ಷ 20ಸಾವಿರಕ್ಕೆ.ಅದರಲ್ಲಿ 954 ಎಕರೆ ಕೆಪಿಸಿಎಲ್ ಜಾಗ ಜಿಂದಾಲ್‌ಗೆ ಸೇರಿದೆ.ಕವಡೆ ಕಾಸಿಗೆ ಮಾರಾಟ ಮಾಡಿದ್ರು ಅಂತಾರೆ.ಕವಡೆ ಜಾಗ ಕೂಡ ಇಷ್ಟು ಕಡಿಮೆ ಬೆಲೆಗೆ ಸಿಗಲ್ಲ ಎಂದಿದ್ದಾರೆ.