ಬೆಂಗಳೂರು; ರಾಜ್ಯ ಬಿಜೆಪಿಯಿಂದ ಇಂದು ರಾಜ್ಯಾದ್ಯಂತ ವಕ್ಫ್ ವಿರೋಧಿ ಪ್ರತಿಭಟನೆ ನಡೆಯಿತು. ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ನಮ್ಮ ಭೂಮಿ-ನಮ್ಮ ಹಕ್ಕು ಪ್ರತಿಭಟನೆ ನಡೆಯಿತು. ಪ್ರತಿಭಟನೆ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಕಾರ್ಯಕರ್ತರು ಧಿಕ್ಕಾರದ ಘೋಷಣೆ ಕೂಗಿದ್ರು.
ಪ್ರತಿಭಟನೆಯಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ಮತ್ತು ಸಂಸದ ಪಿ.ಸಿ. ಮೋಹನ್, ಶಾಸಕ ಸಿ.ಕೆ. ರಾಮಮೂರ್ತಿ, ಬಿಜೆಪಿ ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್. ಹರೀಶ್, ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷ ಸಪ್ತಗಿರಿ ಗೌಡ, ಬಿಬಿಎಂಪಿ ಮಾಜಿ ಮೇಯರ್ ಗೌತಮ್ ಕುಮಾರ್ , ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ, ಶಾಸಕರಾದ ಮುನಿರತ್ನ, ಉದಯ ಗರುಡಾಚಾರ್ ಭಾಗಿಯಾಗಿದ್ರು.
ಇನ್ನು ಅತ್ಯಾಚಾರ ಆರೋಪ ಪ್ರಕರಣದಲ್ಲಿ ಬಂಧನಕ್ಕೊಳಪಟ್ಟು ಬಿಡುಗಡೆಯಾದ ಬಳಿಕ ಮೊದಲ ಬಾರಿಗೆ ಪಕ್ಷದ ಕಾರ್ಯಕ್ರಮದಲ್ಲಿ ಶಾಸಕ ಮುನಿರತ್ನ ಭಾಗಿಯಾಗಿದ್ರು. ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಅವರು ವಕ್ಫ್ ಬೋರ್ಡ್ ಇವತ್ತಿನ ಉದ್ದೇಶಕ್ಕೆ ಮಾಡಿರುವ ಪಹಣಿಗಳಲ್ಲ. ಮುಂದಿನ ನೂರು ವರ್ಷಗಳಿಗೆ ಮಾಡಿರುವ ಗುದ್ದಲಿ ಪೂಜೆ. ಬೆಂಗಳೂರಿನ ಸೋಮೇಶ್ವರ ದೇಗುಲಕ್ಕೆ ಪಹಣಿ ಸಿದ್ಧವಾಗುತ್ತಿದೆ. ಗವಿ ಗಂಗಾಧರೇಶ್ವರ ದೇಗುಲ, ಕೆಂಪೇಗೌಡರು ಕಟ್ಟಿರುವ ನಾಲ್ಕು ಗಡಿ ಗೋಪುರಗಳು ಕೂಡ ಪಹಣಿಯಲ್ಲಿ ಸೇರಿಸಲು ಸಿದ್ದತೆ ಆಗಿದೆ. ಇವತ್ತು ಆಗದೇ ಹೋದರೂ ಮುಂದಿನ 50 ವರ್ಷದಲ್ಲಿ ನಮ್ಮದಾಗಲಿದೆ ಎಂದು ಮಾಡಿದ್ದಾರೆ. ಮುಖ್ಯಮಂತ್ರಿ ವಾಪಸ್ ಮಾಡುತ್ತೇವೆ ಅಂತ ಹೇಳಿರುವುದು ಕಣ್ಣೊರೆಸುವ ತಂತ್ರ. ಡಿಸಿಗೂ ಪಹಣಿ ಬದಲಿಸುವ ಶಕ್ತಿ ಇಲ್ಲ ಎಂದರು.
ನಾನು ಕಾಲು ಹಿಡಿದುಕೊಡರೂ ನನಗೆ ಅನುದಾನ ಕೊಟ್ಟಿಲ್ಲ, ಇನ್ನು ನಿನಗೆ ಕೊಡ್ತಾರಾ?. ಯಾವ ರೂಪದಲ್ಲಿ ಅನುದಾನ ಕೊಡುತ್ತಾರೆ ನೋಡುತ್ತಿರು. ನಾನು ತಿರುಪತಿಗೆ ಹೋಗುವಾಗ ಟೋಲ್ ನಲ್ಲಿ ಅನುದಾನ ಕೊಟ್ಟು ಕರೆದುಕೊಂಡು ಬಂದರು. ಎಂದು ಜಯನಗರ ಶಾಸಕ ಸಿ.ಕೆ. ರಾಮಮೂರ್ತಿ ಉದ್ದೇಶಿಸಿ ಮುನಿರತ್ನ ಹೇಳಿದ್ರು.
ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಮಾತನಾಡಿ ಕಾಂಗ್ರೆಸ್ ಗೆ ಅಧಿಕಾರವನ್ನು ಕೊಟ್ಟಿದ್ದು ಭಸ್ಮಾಸುರನಿಗೆ ಅವಕಾಶ ಕೊಟ್ಟಂತಾಗಿದೆ. ಅವಕಾಶ ಕೊಟ್ಟ ಜನರನ್ನೇ ಸುಡಲು ಕಾಂಗ್ರೆಸ್ ಹೊರಟಿದೆ. ಭಸ್ಮಾಸುರನ ಪಾತ್ರವನ್ನು ಕಾಂಗ್ರೆಸ್ ನಿರ್ವಹಿಸುತ್ತಿದ್ದರೆ, ಬಕಾಸುರನ ಪಾತ್ರವನ್ನು ವಕ್ಫ್ ಬೋರ್ಡ್ ನಿರ್ವಹಿಸುತ್ತಿದೆ. 1500 ವರ್ಷಗಳ ಹಿಂದೆ ಅಲ್ಲಾನೂ ಇರಲಿಲ್ಲ, ಮುಲ್ಲಾನೂ ಇರಲಿಲ್ಲ. ವಿಧಾನಸೌಧನೂ ನಮ್ಮದು ಅಂದರೆ ಈ ಸೊಕ್ಕು ಎಲ್ಲಿಂದ ಬಂತು?. ಈ ಸೊಕ್ಕು ಕಾಂಗ್ರೆಸ್ ಕೊಟ್ಟ ಪರಮಾಧಿಕಾರದಿಂದ ಬಂದಿದೆ. ನಾಳೆ ವಿಧಾನಸೌಧ ನಮ್ಮದು ನಮಾಜ್ ಮಾಡಬೇಕು ಅಂದರೆ ಸಿದ್ದರಾಮಯ್ಯ ಕೂಡಾ ಪಂಚೆ ಎತ್ತಿಕೊಂಡು ಓಡಬೇಕಾಗುತ್ತದೆ. ಮಾತು ಎತ್ತಿದರೆ ಕಾಂಗ್ರೆಸ್ ಮುಖಂಡರು ಅವರು ನಮ್ಮ ಬ್ರದರ್ಸ್ ಎನ್ನುತ್ತಾರೆ. ಗಿಲಾನಿ ಸಹೋದರರು ಅಳಿಯ ರಾಮರಾಮನ ತಲೆ ಕಡಿದಂತೆ ನೀವು ಹೀಗೆಯೇ ನಂಬಿಕೊಂಡು ಇದ್ದರೆ ನಿಮ್ಮ ತಲೆಯನ್ನೂ ಕಡಿಯುತ್ತಾರೆ. ಸಿದ್ದರಾಮಯ್ಯ ಈಗ ಜಮೀರ್ ಅಹಮದ್ ನ ನಂಬಿಕೊಂಡಿದ್ದಾರೆ. ಸಂವಿಧಾನಕ್ಕೆ ಬೆದರಿಕೆ ಹಾಕುವವರನ್ನು ಇಲ್ಲಿ ನಾವು ಉಳಿಸಬೇಕಾ?. ಅಂದು ಹೆದರಿಸಿ ಪಾಕಿಸ್ತಾನ ತೆಗೆದುಕೊಂಡಿರಿ, ಈಗ ಆ ಬೆದರಿಕೆ ನಡೆಯಲ್ಲ. ಸಂವಿಧಾನ ನಂಬಿಕೊಂಡು ಇದ್ದವರೆಗೆ ಮಾತ್ರ ಇಲ್ಲಿ ಜಾಗ ಇದೆ. ಷರಿಯಾ ಕಾನೂನು ತರಲು ಮುಂದಾದರೆ ಭಾರತೀಯರು ಇನ್ನೂ ಜೀವಂತ ಇದ್ದಾರೆ. ನಾವು ಹೋರಾಟಕ್ಕೇ ಬಂದಿದ್ದೇವೆ. ನೀವು ಯಾವ ರೀತಿ ಹೋರಾಟ ಮಾಡುತ್ತೀರೋ ಅದೇ ರೀತಿ ನಾವು ಎದುರಿಸುತ್ತೇವೆ. ಯಾರಪ್ಪನ ಮನೆ ಆಸ್ತಿ ವಕ್ಪ್ ಗೆ ಕೊಟ್ಟರು ಅಂತಾ ತೀರ್ಮಾನ ಆಗಬೇಕು. ಕಂಡವರ ಮನೆ ಆಸ್ತಿ ಎಲ್ಲಾ ಕೊಡಲು ಆಗಲ್ಲ. ಕಾಂಗ್ರೆಸ್ ಷರಿಯಾ ಪರ ಇಲ್ಲ ಅಂತಾದರೆ ತಮ್ಮ ನಿಲುವು ಸ್ಪಷ್ಟಪಡಿಸಲಿ. ಗೋಮುಖ ವ್ಯಾಫ್ರಗಳಾಗಿ ದೇಶ ಹಾಳು ಮಾಡಲು ಬಿಡಲ್ಲ ಎಂದ್ರು.