ಬೆಂಗಳೂರು; ದೇಶದ ಅಭಿವೃದ್ಧಿಗೆ ಮಹಿಳೆಯರ ಪಾತ್ರ ದೊಡ್ಡದಾಗಿದೆ ಎಂದು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾಜಿ ಶಾಸಕಿ ಅನಿತಾ ಕುಮಾರಸ್ವಾಮಿ ಹೇಳಿದ್ದಾರೆ.
ಬೆಂಗಳೂರಿನ ಜೆಡಿಎಸ್ ಕಛೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಜೆಡಿಎಲ್ ಪಿ ನಾಯಕ ಸುರೇಶ್ ಬಾಬು, ನಿಖಿಲ್ ಕುಮಾರಸ್ವಾಮಿ, ಮಾಜಿ ಶಾಸಕಿ ಅನಿತಾ ಕುಮಾರಸ್ವಾಮಿ ಭಾಗಿಯಾಗಿದ್ದರು. ಮಾಜಿ ಶಾಸಕ ವೆಂಕಟರಾವ್ ನಾಡಗೌಡ ಸೇರಿದಂತೆ ಹಲವಾರು ಭಾಗಿಯಾಗಿದ್ದರು.
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಮಾಜಿ ಶಾಸಕಿ ಅನಿತಾ ಕುಮಾರಸ್ವಾಮಿ ಎಲ್ಲರಿಗೂ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಶುಭಾಶಯಗಳು. ದೇಶದ ಅಭಿವೃದ್ಧಿಗೆ ಮಹಿಳೆಯರ ಪಾತ್ರ ದೊಡ್ಡದಾಗಿದೆ. ರಾಜಕೀಯ, ವಿಜ್ಞಾನ, ತಾಂತ್ರಿಕ ಕ್ಷೇತ್ರದಲ್ಲಿ ಎಲ್ಲಾ ಕ್ಷೇತ್ರದಲ್ಲಿ ಮಹಿಳೆಯರು ಇದ್ದಾರೆ.ಬುಡುಕಟ್ಟು ಸಮುದಾಯಕ್ಕೆ ಸೇರಿದ ಮಹಿಳೆ ದ್ರೌಪದಿ ಮುರ್ಮು ನಮ್ಮ ದೇಶದ ರಾಷ್ಟ್ರಪತಿಯಾಗಿರೋದು ನಮ್ಮ ಹೆಮ್ಮೆ. ಈ ದಿನವನ್ನ ಮಹಿಳೆ ಸಾಧಕರಿಗೆ ಅರ್ಪಣೆ ಮಾಡಬೇಕಿದೆ.ಸಮಾಜದಲ್ಲಿ ಮಹಿಳಾ ಸಬಲೀಕರಣ, ಸಮಾನ ಅವಕಾಶ , ಗೌರವ ಸಿಗಬೇಕು ಎಂದರು.
ಮುಂದಿನ ದಿನಗಳಲ್ಲಿ ವಿಧಾನಸಭೆಗೆ ಇನ್ನಷ್ಟು ಮಹಿಳೆಯರು ಆಯ್ಕೆಯಾಗಬೇಕು.ಸಮಾಜವನ್ನ ಸರಿಯಾದ ಮಾರ್ಗದಲ್ಲಿ ತೆಗೆದುಕೊಂಡು ಹೋಗೊದ್ರಲ್ಲಿ ಮಹಿಳೆಯರ ಪಾತ್ರ ಮಹತ್ವದ್ದು.ರಾಮನಗರ ಶಾಸಕಿಯಾಗಿ ಹಲವು ಸಮಸ್ಯೆಗಳನ್ನ ಎದುರಿಸಿದ್ದೆ. ಹಾರೋಹಳ್ಳಿ ತಾಲ್ಲೂಕು ಮಾಡೋದಕ್ಕೆ ಕೆಲವರು ಬಿಡಲಿಲ್ಲ.ವಿಧಾನಸೌದದಲ್ಲಿ ಫೈಲ್ ಗಳನ್ನ ಮುಚ್ಚಿಡಿಸಿದ್ರು.ರಾಮನಗರ ಎಲ್ಲಿ ಇತ್ತು ಅಂತ ಅವರಿಗೆ ಗೊತ್ತಿರಲಿಲ್ಲಾ, ಅವರು ವೀರವೇಷದ ಭಾಷಣ ಮಾಡ್ತಿದ್ರು. ರಾಮನಗರಕ್ಕೆ ನಮ್ಮ ಕೊಡುಗೆ ಇದೆ ಅಂತಾ ವೇದಿಕೆಯಲ್ಲೆ ಅವರಿಗೆ ನಾನು ಹೇಳಿದ್ದೆ. ಯಾರೆ ದೊಡ್ಡವರಿದ್ರು ನಾನು ಹೆದರೊಲ್ಲ. ಭಾಗ್ಯ ಲಕ್ಷ್ಮಿ ಬಾಂಡ್ ಯೋಜನೆ, ರೈತರ ಸಾಲಮನ್ನಾ ಮಾಡಿದ್ದು ಕುಮಾರಸ್ವಾಮಿ ಅವರು. ನಮ್ಮ ಮಹಿಳಾ ಕಾರ್ಯಕರ್ತರಿಗೆ ಸ್ಪೂರ್ತಿ ತುಂಬೇಕೆಂದು ದೇವೇಗೌಡರಿಗೆ ಅನಿತಾ ಕುಮಾರಸ್ವಾಮಿ ಮನವಿ ಮಾಡಿದ್ದಾರೆ. ಬೂತ್ ಮಟ್ಟದಲ್ಲಿ ಮಹಿಳೆಯರಿಗೆ ಜವಾಬ್ದಾರಿ ಕೊಡಬೇಕು. ೨.೬೮ ರಿಂದ ಮಹಿಳಾ ಮತದಾರರು ಇದ್ದಾರೆ ಎಂದರು.
ನಾವು ಎಲ್ಲರಿಗೂ ಸಮನರಾಗಿದ್ದೇವೆ. ನಮ್ಮ ಪಕ್ಷ ಸೂರ್ಯಚಂದ್ರ ಇರೋವರೆಗೆ ಇರಬೇಕು.ನಮ್ಮ ಪಕ್ಷದ ಮಹಿಳೆಯರಿಗೆ ಮೀಟಿಂಗ್ ಬರೋದಕ್ಕೆ ಮಾತ್ರ ಫೋನ್ ಮಾಡಬೇಡಿ. ಮಹಿಳೆಯರಿಗೆ ಗೌರವ ಕೊಡಬೇಕು ಎಂದು ಹೇಳಿದ್ದಾರೆ.
ನನಗೆ ರಾಜ್ಯದ ಜನರ ಆಶೀರ್ವಾದ ಸಿಗುವ ವಿಶ್ವಾಸ ಇದೆ; ನಿಖಿಲ್ ಕುಮಾರಸ್ವಾಮಿ ಹೇಳಿಕೆ
ಬೆಂಗಳೂರು: ನನಗೆ ರಾಜ್ಯದ ಜನರ ಆಶೀರ್ವಾದ ಸಿಗುವ ವಿಶ್ವಾಸ ಇದೆ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ. ಜೆಡಿಎಸ್ ಕಚೇರಿಯಲ್ಲಿ ಮಹಿಳೆ ದಿನಾಚರಣೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಪ್ರತಿನಿತ್ಯ ಮಹಿಳೆಯರು ದಿನಾಚರಣೆ ಹೃದಯದಲ್ಲಿ ನಾವೆಲ್ಲರೂ ಮಾಡಬೇಕು.ದೇವೇಗೌಡರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ಆಗಿದೆ.ಮಹಿಳೆಯರಿಗೆ ಮೊದಲ ಆದ್ಯತೆ ಕೊಡಬೇಕು ಅಂತ ಜೆಡಿಎಲ್‌ಪಿ ನಾಯಕರ ಕೆಳಗೆ ಕೂತಿದ್ದಾರೆ.ಸಣ್ಣ ವಯಸ್ಸಿನಲ್ಲಿ ಮೂರು ಚುನಾವಣೆಯಲ್ಲಿ ಎಡವಿದ್ದೇನೆ ಎಂದಿದ್ದಾರೆ.
ರಾಜಕೀಯ ಸಂದರ್ಭದಲ್ಲಿ ಚುನಾವಣೆಯಲ್ಲಿ ಏಳು ಬೀಳು ಸಾಮಾನ್ಯ. ಒಳ್ಳೆಯ ಉದ್ದೇಶ ಇದ್ದರೆ ಗುರಿ ಮುಟ್ಟುತ್ತೇವೆ.ಆ ಭಗವಂತನ ಆಶೀರ್ವಾದ ಮುಖ್ಯ, ದೇವೇಗೌಡರ ಆಶೀರ್ವಾದ ಇದೆ.ರಾಜ್ಯದ ಜನರ ಆಶೀರ್ವಾದ ಸಿಗುವ ವಿಶ್ವಾಸ ಇದೆ.ನಮ್ಮ ದೇಶ ಆರ್ಥಿಕವಾಗಿ ಮುನ್ನುಗ್ಗುತ್ತದೆ. ನರೇಂದ್ರ ಮೋದಿಯವರ ಹತ್ತು ವರ್ಷದ ಆಡಳಿತವನ್ನು ಮೆಚ್ಚಬೇಕು.ಭಾರತಕ್ಕೆ ವಿಶ್ವದಲ್ಲಿ ಯಾವ ಗೌರವ ಸಿಕ್ಕಿದೆ ಅದಕ್ಕೆ ಮೋದಿ ಕಾರಣ. ದೇವೇಗೌಡ ಸಾಹೇಬರು ದೇಶದ ಪ್ರಧಾನಿಯಾಗಿ, ರಾಜ್ಯದ ಮುಖ್ಯಮಂತ್ರಿಯಾಗಿರುವುದಕ್ಕೆ ಶಕ್ತಿ ನಮ್ಮ ಅಜ್ಜಿ ಚನ್ನಮ್ಮಜ್ಜಿ. ಅವರನ್ನ ಹಳ್ಳಿಗಳಿಂದ ಜನರು ಹುಡುಕಿಕೊಂಡು ಬರುತ್ತಿದ್ದರು. ಅವರಿಗೆಲ್ಲ ಅತ್ಯಂತ ಸೌಜನ್ಯದಿಂದ ಊಟ ಬಡಿಸುತ್ತಿದ್ದರು. ಚನ್ನಮ್ಮ ಅವರ ತ್ಯಾಗ ಎಲ್ಲರಿಗೂ ಗೊತ್ತಿದೆ. ಅವರ ತ್ಯಾಗವನ್ನು ಯಾರು ಕೂಡ ಮರೆಯಲು ಸಾಧ್ಯವಿಲ್ಲ. ಅವರ ಆದರ್ಶ ಜೀವನ ಮಾಡಿದ್ದಾರೆ.ಈಗಲೂ ಮನೆಗೆ ಹೋದ್ರೆ ದೇವೆಗೌಡರ ಜೊತೆಗೆ ಊಟ ಮಾಡ್ತಿರ್ತಾರೆ. ಅವರ ಆರೋಗ್ಯದಲ್ಲಿ ಸ್ವಲ್ಪ ಏರುಪೇರಾಗಿದೆ ಎಂದಿದ್ದಾರೆ.
ಯಾರೇ ಮನೆಗೆ ಹೋದರು ಅರಿಶಿನ ಕುಂಕುಮ ಕೊಟ್ಟು ಕಳುಹಿಸುತ್ತಾರೆ.ಅನಿತಾ ಕುಮಾರಸ್ವಾಮಿ ಎರಡು ಬಾರಿ ಶಾಸಕಿ ಆಗಿದ್ದರು.ಅವರು ರಾಜಕೀಯಕ್ಕೆ ಬರಬೇಕು ಅಂತ ಇರಲಿಲ್ಲ.ಅತ್ಯಂತ ಪ್ರಭಾವಿ ನಾಯಕರನ್ನ ಸೋಲಿಸಿದ್ದಿರಿ.ರಾಮನಗರದಲ್ಲಿ ಉತ್ತಮ ಕೆಲಸ ಮಾಡಿದ್ದಿರಿ.ಈಗ ಶಾರದಮ್ಮ, ಕರೆಮ್ಮ ಇಬ್ಬರು ಶಾಸಕರು ನಮ್ಮ ಪಕ್ಷದಲ್ಲಿದ್ದಾರೆ. ಮಹಿಳೆಯರ ಕಣ್ಣೀರು ಹಾಕುತ್ತಾರೆ ಅಂತಾರೆ. ಮಾನಸಿಕವಾಗಿ ಕುಗ್ಗಿದಾಗ ಧೈರ್ಯ ತುಂಬುವ ಕೆಲಸ ಮಹಿಳೆಯರ ಮಾಡ್ತಾರೆ.ಅವರು ಯಾವತ್ತೂ ಕುಗ್ಗುವುದಿಲ್ಲ.ಚಿಕ್ಕೋಡಿಯಲ್ಲಿ ಒಂದು ಲಕ್ಷ ಮತಗಳ ಅಂತರದಿಂದ ಗೆದ್ದವರು ನಮ್ಮ ಮುಂದೆ ಇದ್ದಾರೆ.ಲೀಲಮ್ಮ ಅವರಿಗೆ ಅವತ್ತು ದೇವೇಗೌಡರು ಟಿಕೆಟ್ ನೀಡಿದ್ದರು.ಕುಮಾರಣ್ಣನ ನಾಯಕತ್ವಕ್ಕೆ ನೀವೆಲ್ಲ ಗೌರವ ಕೊಡ್ತಿದ್ದಿರಿ. ನೀವೆಲ್ಲರೂ ಒಗ್ಗಟ್ಟಾಗಿ ಪಕ್ಷದ ಕೆಲಸ ಮಾಡಬೇಕು.ಅನಿತಾ ಕುಮಾರಸ್ವಾಮಿ ಅವರು ಹೆಚ್ಚು ಕಾರ್ಯಕ್ರಮದಲ್ಲಿ ಪಾಲ್ಗೊಳ್ತಿರಲಿಲ್ಲ.ಇವತ್ತು ಮಹಿಳೆಯರ ಕಾರ್ಯಕ್ರಮ ಬಂದಿದ್ದಾರೆ ಎಂದಿದ್ದಾರೆ.











