ಬೆಂಗಳೂರು; ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರನ್ನು ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ ಭೇಟಿಯಾದರು. ಸೆವೆನ್ ಮಿನಿಸ್ಟರ್ ಕ್ವಾರ್ಟರ್ಸ್ ನಲ್ಲಿ ಅನಿಲ್ ಕುಂಬ್ಳೆ ಸಚಿವ ಈಶ್ವರ್ ಖಂಡ್ರೆ ಅವರನ್ನು ಭೇಟಿಯಾದರು. ಅನಿಲ್ ಕುಂಬ್ಳೆ ಅರಣ್ಯ ಇಲಾಖೆಯ ರಾಯಭಾರಿಯಾಗಿದ್ದಾರೆ.
ಬಳಿಕ ಮಾತನಾಡಿಡ ಸಚಿವ ಈಶ್ವರ್ ಖಂಡ್ರೆ ಅನಿಲ್ ಕುಂಬ್ಳೆ ಅಂತರಾಷ್ಟ್ರೀಯ ಕ್ರಿಕೆಟಿಗರು. ಕರ್ನಾಟಕ,ದೇಶವನ್ನ ಪ್ರತಿನಿಧಿಸಿದವರು. ಒಂದೇ ಇನ್ನಿಂಗ್ಸ್ ನಲ್ಲಿ ೧೦ ವಿಕೆಟ್ ಪಡೆದವರು. ಅರಣ್ಯ,ಪರಿಸರದ ಬಗ್ಗೆ ಅವರಿಗೆ ವಿಶೇಷ ಕಾಳಜಿ. ವನ್ಯಜೀವಿ ಮಂಡಳಿ ಉಪಾಧ್ಯಕ್ಷರಾಗಿದ್ದರು. ವನ್ಯಜೀವಿ,ಪ್ರಕೃತಿ ಬಗ್ಗೆ ಕಳಕಳಿ ಇದೆ. ನಮ್ಮ ಇಲಾಖೆಯ ರಾಯಭಾರಿಯಾಗಿದ್ದಾರೆ. ಅವರಿಗೆ ಅಭಿನಂದನೆ ಸಲ್ಲಿಸ್ತೇನೆ. ಅವರ ಅಪಾಯ್ಟ್ ಮೆಂಟ್ ಲೆಟರ್ ಕೊಡ್ತೇವೆ.ಅವರು ಬಂದಿದ್ದಕ್ಕೆ ಸ್ವಾಗತ ಮಾಡ್ತೇವೆ.ಅವರನ್ನ ಒಪ್ಪಿಸಿದ್ದು ರಘುನಂದನ್ ರಾಮಣ್ಣ ಎಂದು ತಿಳಿಸಿದ್ರು.
ಇದೇ ವೇಳೆ ಮಾತನಾಡಿದ ಮಾಜಿ ಕ್ರಿಕೆಟರ್ ಅನಿಲ್ ಕುಂಬ್ಳೆ ಸರ್ಕಾರ ನನಗೆ ಒಂದುಅವಕಾಶ ಕೊಟ್ಟಿದೆ. ರಘುನಂದನ್ ಜವಾಬ್ದಾರಿ ಕೊಟ್ಟಿದ್ದಾರೆ. ಮುಂಚೆಯೂ ವನ್ಯಜೀವಿ ಮಂಡಳಿ ಉಪಾಧ್ಯಕ್ಷನಾಗಿದ್ದೆ. ಆಗ ಪುಷ್ಕರ್ ಅವರನ್ನ ಭೇಟಿ ಮಾಡಿದ್ದೆ. ಈಗ ಅವರನ್ನ ಭೇಟಿ ಮಾಡ್ತಿದ್ದೇನೆ. ಸಿಎಂ,ಡಿಸಿಎಂ,ಖಂಡ್ರೆ ಅವಕಾಶ ಕೊಟ್ಟಿದ್ದಾರೆ.ವನ್ಯಜೀವಿಗಳ ಮೇಲೆ ನನಗೆ ಕಾಳಜಿ ಇದೆ. ನನ್ನ ಕೈಯಲ್ಲಾಗುವ ಸೇವೆಯನ್ನ ಸಲ್ಲಿಸ್ತೇನೆ. ಸರ್ಕಾರಕ್ಕೆ ನಾನು ಧನ್ಯವಾದ ಸಲ್ಲಿಸ್ತೇನೆ.ಮಾಧ್ಯಮಗಳ ಸಹಕಾರ ಕೂಡ ಮುಖ್ಯ. ಅರಣ್ಯ,ವನ್ಯಜೀವಿಗಳ ಬಗ್ಗೆ ತಿಳಿಸಲು ಸಹಕಾರಿ ಎಂದರು.
ಮಾಜಿ ಕ್ರಿಕೆಟರ್ ಅನಿಲ್ ಕುಂಬ್ಳೆ ಮಾತನಾಡಿ ನಾನು ಎರಡು ಟೀಮ್ ನಲ್ಲೂ ಇದ್ದೆ. ಆರ್ ಸಿಬಿ,ಪಂಜಾಬ್ ಎರಡರಲ್ಲೂ ಇದ್ದೆ. ನನ್ನ ಸ್ಟಾಂಡ್ ಆರ್ ಸಿಬಿ ಗೆಲ್ಲಬೇಕು. ಹಿಂದೆ ನಾನು ಆರ್ ಸಿಬಿ ಕ್ಯಾಫ್ಟನ್ ಆಗಿದ್ದೆ. ಯಾರೇ ಗೆದ್ರೂ ಹೊಸಬರೇ ವಿನ್ನರ್ ಆಗ್ತಾರೆ. ಆದ್ರೂ ಆರ್ ಸಿಬಿಯೇ ವಿನ್ ಆಗ್ತಾರೆ. ಕೋಹ್ಲಿ ತುಂಬಾ ಚೆನ್ನಾಗಿ ಆಡ್ತಿದ್ದಾರೆ ಎಂದರು.