ಮನೆ Latest News ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಭಯೋತ್ಪಾದಕ ಫೋನ್ ನಲ್ಲಿ ಯಾರ್ಯಾರ ಜೊತೆಗೆ ಮಾತಾಡಿದ್ದಾನೆ ಎಂಬುದು ತನಿಖೆ ಆಗಬೇಕು:...

ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಭಯೋತ್ಪಾದಕ ಫೋನ್ ನಲ್ಲಿ ಯಾರ್ಯಾರ ಜೊತೆಗೆ ಮಾತಾಡಿದ್ದಾನೆ ಎಂಬುದು ತನಿಖೆ ಆಗಬೇಕು: ಬೆಂಗಳೂರಿನಲ್ಲಿ ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ಸುದ್ದಿಗೋಷ್ಠಿ

0

ಬೆಂಗಳೂರು; ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಭಯೋತ್ಪಾದಕ ಫೋನ್ ನಲ್ಲಿ ಯಾರ್ಯಾರ ಜೊತೆಗೆ ಮಾತಾಡಿದ್ದಾನೆ ಎಂಬುದು ತನಿಖೆ ಆಗಬೇಕು ಎಂದು ಬೆಂಗಳೂರಿನಲ್ಲಿ ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ಹೇಳಿದ್ದಾರೆ.

ದೆಹಲಿ ಕಾರ್ ಸ್ಫೋಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾತನಾಡಿದ ಅವರು ಕೇಂದ್ರ ಸರ್ಕಾರ ಈಗಾಗಲೇ ಕ್ರಮ ತೆಗೆದುಕೊಳ್ಳುತ್ತಿದೆ. ಇದು ಪಾಕಿಸ್ತಾನ ಪ್ರೇರಿತ ಭಯೋತ್ಪಾದನಾ ಚಟುವಟಿಕೆ ಇರಬಹುದು ಎಂಬ ಮಾಹಿತಿ ಇದೆ. ಇದು ಇನ್ನಷ್ಟೇ ಖಚಿತಪಡಬೇಕಾಗಿದೆ. ಕರ್ನಾಟಕದಲ್ಲಿ ಕೂಡಾ ಜೈಲುಗಳಲ್ಲಿರುವ ಭಯೋತ್ಪಾದಕರು ಎಲೆಕ್ಟ್ರಾನಿಕ್ ವಸ್ತುಗಳನ್ನು, ಮೊಬೈಲ್ ಬಳಸಿ ಅವರ ಜೊತೆ ಸಂಪರ್ಕದಲ್ಲಿದ್ದರಾ ಎಂಬುದು ಕೂಡಾ ತನಿಖೆಯಾಗಬೇಕು. ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಭಯೋತ್ಪಾದಕ ಫೋನ್ ನಲ್ಲಿ ಯಾರ್ಯಾರ ಜೊತೆಗೆ ಮಾತಾಡಿದ್ದಾನೆ ಎಂಬುದು ತನಿಖೆ ಆಗಬೇಕು. ದೆಹಲಿ ಸ್ಫೋಟಕ್ಕೂ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಭಯೋತ್ಪಾದಕನಿಗೂ ಲಿಂಕ್ ಇದ್ಯಾ ಎಂಬ ಅನುಮಾನ ಇದೆ. ಸಿಕ್ಕಿಹಾಕಿಕೊಂಡಿರುವವರು ಎಲ್ಲರೂ ಹೈಟೆಕ್ ಭಯೋತ್ಪಾದಕರು, ವೈದ್ಯರು. ಕಾಂಗ್ರೆಸ್ ವಲಯದಲ್ಲಿ ಯಾವಾಗಲೂ ಅವಿದ್ಯಾವಂತರು ಎಂಬ ಮಾತು ಕೇಳಿ ಬರುತ್ತಿತ್ತು ಎಂದಿದ್ದಾರೆ.

ವೋಟ್ ಬ್ಯಾಂಕ್ ಗಾಗಿ ಓಲೈಕೆ ಮಾಡುವುದನ್ನು ಕಾಂಗ್ರೆಸ್ ಬಿಡಬೇಕು. ಕಾಂಗ್ರೆಸ್ ಸರ್ಕಾರ ಬಂದ ಬಳಿಕ ಅವರಿಗೊಂದು ಸ್ಪೆಷಲ್ ಗ್ರೇಡ್  ಇರುತ್ತದೆ. ಸ್ಥಳೀಯ ಪೊಲೀಸ್ ಠಾಣೆಗಳಲ್ಲಿ ಇದ್ದ ವಿಶೇಷ ಆದ್ಯತೆ ಈಗ ಪರಪ್ಪನ ಅಗ್ರಹಾರಕ್ಕೆ ವಿಸ್ತರಣೆಯಾಗಿದೆ. ರಾಜ್ಯ ಸರ್ಕಾರ ಓಲೈಕೆ ಮಾಡುವುದನ್ನು ಬಿಟ್ಟಿದ್ದರೆ ಭಯೋತ್ಪಾದಕನ ಕೈಗೆ ಮೊಬೈಲ್ ಹೋಗುತ್ತಿರಲಿಲ್ಲ. ರಾಜ್ಯ ಸರ್ಕಾರದ ವೈಫಲ್ಯ ಇದು. ಇದು ಮನಮೋಹನ್ ಸಿಂಗ್, ಸೋನಿಯಾ, ರಾಹುಲ್ ಗಾಂಧಿ ಸರ್ಕಾರ ಅಲ್ಲ. ಕೇಂದ್ರ ಸರ್ಕಾರ ನೇರವಾದ ಕ್ರಮಗಳನ್ನು ತೆಗೆದುಕೊಂಡೇ ತೆಗೆದುಕೊಳ್ಳುತ್ತದೆ. ಉಕ್ಕಿನ ಮನುಷ್ಯನ ರೀತಿ ಕೇಂದ್ರ ಗೃಹ ಸಚಿವರು ಕೆಲಸ ಮಾಡುತ್ತಿದ್ದಾರೆ. ಮುಸ್ಲಿಂ ಭಯೋತ್ಪಾದಕರನ್ನು ನಾವು ಸಹಿಸಲ್ಲ ಎಂದು ವಿಶ್ವಕ್ಕೆ ಗೊತ್ತಿದೆ. ಭಯೋತ್ಪಾದಕರಿಗೆ ಗುಂಡಿಗೆ ಗುಂಡು ಉತ್ತರ ಎಂದು ಕೇಂದ್ರ ಸರ್ಕಾರ ತೀರ್ಮಾನ ಮಾಡಿದೆ. ಇದು ಪಾಕಿಸ್ತಾನ ಪ್ರೇರಿತ ಭಯೋತ್ಪಾದನಾ ದಾಳಿ. ಕಾಂಗ್ರೆಸ್ ಇದ್ದಾಗ ನಕ್ಸಲ್ ಚಟುವಟಿಕೆ ದಿನನಿತ್ಯದ ಕಾಯಕ ಆಗಿದೆ .ಅಮಿತ್ ಷಾ ಬಂದ ಬಳಿಕ ನಕ್ಸಲ್ ವಾದವನ್ನು ನಿರ್ಮೂಲನೆ ಮಾಡಿದ್ದಾರೆ. ಭಯೋತ್ಪಾದನೆಯನ್ನೂ ಅಮಿತ್ ಷಾ ನಿರ್ಮೂಲನೆ ಮಾಡುತ್ತಾರೆ. ಬಿಜೆಪಿ ಕಾಂಗ್ರೆಸ್ ರೀತಿ ಓಲೈಕೆ ಮಾಡಲ್ಲ. ಕಾಂಗ್ರೆಸ್ ಅವರಿಗೆ ಬಿರಿಯಾನಿ‌ ಕೊಡುತ್ತಿದ್ದರು, ನಾವು ಗುಂಡು ಕೊಡುತ್ತಿದ್ದಾರೆ. ನಗರ ನಕ್ಸಲರ ರೀತಿ ಇವರು ವೈಟ್ ಕಾಲರ್ ಟೆರರಿಸ್ಟ್ ಗಳು ಎಂದು ಹೇಳಿದ್ದಾರೆ.

ಆರ್ ಎಸ್ ಎಸ್ ನವರನ್ನು ಗಡಿಗೆ ಕಳಿಸಿ ಎಂಬ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿದ ಅವರು ಪ್ರಿಯಾಂಕ್ ಖರ್ಗೆ ಬಗ್ಗೆ ಮಾತಾಡಿದರೆ ಶಬ್ದಗಳು ವೇಸ್ಟ್. ಅದಕ್ಕೆ ಅವರ ಬಗ್ಗೆ ‌ಮಾತಾಡಲ್ಲ. ಸಂತೋಷ್ ಲಾಡ್ ಹೇಳಿಕೆಗಳಿಗೂ ಪ್ರತಿಕ್ರಿಯಿಸಲ್ಲ. ಹಿಂದೂ ಎನ್ನುವುದು ಒಂದು ಜೀವನ ಪದ್ದತಿ. ರಾಮಮಂದಿರ ಆಗಲ್ಲ ಎಂದು ಹೇಳುತ್ತಿದ್ದರು, ಆಯಿತು. 370 ರದ್ದು ಮಾಡಲು ಆಗಲ್ಲ ಎನ್ನುತ್ತಿದ್ದರು, ಆಯಿತು. ನರೇಂದ್ರ ಮೋದಿ ಅಂದರೆ ಭದ್ರತೆ. ಪಾಕಿಸ್ಥಾನದ ಜನ ರಾಹುಲ್ ಗಾಂಧಿಯನ್ನು ಪ್ರೀತಿಸುತ್ತಾರೆ ಎಂದು ಪ್ರಪಂಚಕ್ಕೆ ಗೊತ್ತಿದೆ. ಪಾಕಿಸ್ತಾನದಲ್ಲಿ ರಾಹುಲ್ ಗಾಂಧಿ ಫೋಟೋ ಫೇಮಸ್. ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಕಳೆದ ಆರು ತಿಂಗಳಿನಿಂದ ಐಸಿಯುನಲ್ಲಿದೆ. ಯಾರು ಸಿಎಂ, ಯಾರು ಸಿಎಂ ಆಗುತ್ತಾರೆ ಎಂಬುದೇ ಗೊತ್ತಿಲ್ಲ.ಮೊದಲ ಬಾರಿಯ ಶಾಸಕರೇ ನಾನು ಮಂತ್ರಿಯಾಗುತ್ತೇನೆ ಎಂದು ಹೇಳಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಪುನರ್ ರಚನೆಗೆ ಅವಕಾಶ ಕೊಟ್ಟರೆ ಸಿದ್ದರಾಮಯ್ಯ ಮುಂದುವರಿಕೆಯಾಗ್ತಾರೆ. ಬದಲಾವಣೆಗೆ ಅವಕಾಶ ಕೊಟ್ಟರೆ ಡಿ.ಕೆ. ಶಿವಕುಮಾರ್ ಇನ್ ಕಮಿಂಗ್ ಆಗ್ತಾರೆ. ಅಧಿಕಾರ ಹಸ್ತಾಂತರದಲ್ಲಿ ಹೆಚ್ಚು ಕಡಿಮೆ ಆದರೆ ಸರ್ಕಾರ ಬಿದ್ದು ಹೋಗುತ್ತದೆ. ಸರ್ಕಾರ ಬಿದ್ದು ಹೋದರೆ ಬಿಜೆಪಿ ಚುನಾವಣೆಗೆ ಹೋಗುತ್ತದೆ ತಿಳಿಸಿದ್ದಾರೆ.

ಜೆಡಿಎಸ್ ಜೊತೆ ನಾವು ಈಗಾಗಲೇ ಚುನಾವಣಾ ತಯಾರಿ ಶುರು ಮಾಡಿದ್ದೇವೆ. ನಮ್ಮಲ್ಲಿ ವಂಶ ಪಾರಂಪರ್ಯ ನಾಯಕತ್ವ ಇಲ್ಲ. ಬಿಜೆಪಿ ನೇತೃತ್ವದಲ್ಲಿ ಚುನಾವಣೆಗೆ ಹೋಗುತ್ತೇವೆ. ಜಿಬಿಎ ಚುನಾವಣೆಗೆ ಮೊದಲೇ ವಿಧಾನಸಭೆ ಚುನಾವಣೆ ಎದುರಾಗುವ ರೀತಿ ಕಾಣುತ್ತಿದೆ.ಇವರಿಬ್ಬರನ್ನು ಮೂರನೇಯವರನ್ನು ಸಿಎಂ ಮಾಡುವ ಯೋಚನೆಯಲ್ಲಿ ಕಾಂಗ್ರೆಸ್ ಇದೆ. ನಮ್ಮದು ವಂಶ ಪಾರಂಪರ್ಯ ನೇತೃತ್ವ ಇಲ್ಲ. ಬಿಜೆಪಿ ಚಿಹ್ನೆಯೇ ನೇತೃತ್ವ. ನಮ್ಮದು ವ್ಯಕ್ತಿ ನಿರ್ಮಿತ ಪಾರ್ಟಿ ಅಲ್ಲ. ಕಮಲದ ಮೇಲೆ ನಾವು ಚುನಾವಣೆಗೆ ಹೋಗುತ್ತೇವೆ. ಆರ್ ಎಸ್ಎಸ್ ಗೆ ಭಗವಾ ಧ್ವಜ ಗುರು. ಬಿಜೆಪಿಗೆ ಕಮಲ ಗುರು ಎಂದು ತಿರುಗೇಟು ಕೊಟ್ಟಿದ್ದಾರೆ.