ಮನೆ Latest News ವಕ್ಫ್ ಆಸ್ತಿ ವಿವಾದ ವಿಚಾರದಲ್ಲಿ ಕಾಂಗ್ರೆಸ್ ಪಕ್ಷದಿಂದ ದ್ವಂದ್ವ ನಿಲುವು; ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿಕೆ

ವಕ್ಫ್ ಆಸ್ತಿ ವಿವಾದ ವಿಚಾರದಲ್ಲಿ ಕಾಂಗ್ರೆಸ್ ಪಕ್ಷದಿಂದ ದ್ವಂದ್ವ ನಿಲುವು; ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿಕೆ

0

ಬೆಳಗಾವಿ; ವಕ್ಫ್ ಆಸ್ತಿ ವಿವಾದ ವಿಚಾರದಲ್ಲಿ ಕಾಂಗ್ರೆಸ್ ಪಕ್ಷದಿಂದ ದ್ವಂದ್ವ ನಿಲುವು ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿಕೆ ನೀಡಿದ್ದಾರೆ.

ಸುವರ್ಣಸೌಧದಲ್ಲಿ ಮಾತನಾಡಿದ ಅವರು,ಕಾಂಗ್ರೆಸ್ ಪಕ್ಷದಿಂದ ದ್ವಂದ್ವ ನಿಲುವು.ಒಂದು ಕಡೆ ಮಾಣಿಪ್ಪಾಡಿ ವರದಿ ಒಪ್ಪಲ್ಲ ಅಂತಾರೆ.ಇನ್ನೊಂದು ಕಡೆ ಅವರನ್ನಿಟ್ಟುಕೊಂಡೇ ಮಾತನಾಡ್ತಾರೆ. ಕೇವಲ ಹೇಳಿಕೆಗೆ ಮಾತ್ರ ಸೌಮ್ಯ ಪ್ರದರ್ಶನ ಮಾಡ್ತಾರೆ. ಅವರಿಗೆ ಯಾವ ಬದ್ಧತೆ ಇಲ್ಲ.ಆರೋಪ‌ ಬಂದಿರೋದು ಬಿಜೆಪಿ‌ ಮೇಲಲ್ಲ.ವಕ್ಫ್ ಆಸ್ತಿ ಕಬಳಿಸಿದ್ದು ಬಿಜೆಪಿ ನಾಯಕರಲ್ಲ.ಕಾಂಗ್ರೆಸ್ ನ ಘಟಾನುಘಟಿ ನಾಯಕರು ವಕ್ಫ್ ಆಸ್ತಿ ಅಕ್ರಮವಾಗಿ ಪಡೆದಿದ್ದಾರೆ.ಯಾರು ಆಸ್ತಿ ಹೊಡೆದಿದ್ದಾರೆ ಅವರನ್ನ ಹೇಗೆ ಹೇಳ್ತಾರೆ.ಕಾಂಗ್ರೆಸ್ ನಾಯಕರನ್ನ ನಾವ್ಯಾಕೆ ರಕ್ಷಣೆ ಮಾಡಬೇಕು ಎಂದಿದ್ದಾರೆ.

ಅನ್ವರ್ ಮಾಣಿಪ್ಪಾಡಿ ವಿಡಿಯೋ ನನಗೆ ಗೊತ್ತಿಲ್ಲ. ಸಿಎಂಗೆ  ಅಷ್ಟೊಂದು ಕಾಳಜಿ ಇದ್ದರೆ ಸಿಬಿಐ ತನಿಖೆಗೆ ಕೊಡಿ ಎಂದು ಮಾಜಿ ಸಚಿವ ಸಿ.ಟಿ.ರವಿ ಆಗ್ರಹಿಸಿದ್ದಾರೆ.

ಅನ್ವರ್ ಮಾಣಿಪ್ಪಾಡಿ ವರದಿಯನ್ನು ಸ್ವತಃ ಬಿಜೆಪಿಯೇ ತಿರಸ್ಕಾರ ಮಾಡಿದೆ: ಬೆಳಗಾವಿಯಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆ

ಬೆಳಗಾವಿ; ಅನ್ವರ್ ಮಾಣಿಪ್ಪಾಡಿ ವರದಿಯನ್ನು ಸ್ವತಃ ಬಿಜೆಪಿಯೇ ತಿರಸ್ಕಾರ ಮಾಡಿದೆ ಎಂದು ಬೆಳಗಾವಿಯಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆ ನೀಡಿದ್ದಾರೆ.
ಬೆಳಗಾವಿಯಲ್ಲಿ ಮಾತನಾಡಿದ ಅವರು ಯಡಿಯೂರಪ್ಪ, ಸದಾನಂದಗೌಡ, ಜಗದೀಶ್ ಶೆಟ್ಟರ್, ಮಾಣಿಪ್ಪಾಡಿ ಅವರ ವರದಿಯನ್ನು ಮಂಡನೆ ಮಾಡಿಲ್ಲ. ಇದಕ್ಕೆ ಉತ್ತರವನ್ನು ಬಿಜೆಪಿಯವರು ತಮ್ಮ ಸ್ವಂತ ಕಚೇರಿಯಲ್ಲಿ ಹುಡುಕಾಡಲಿ. ಈ ಗೊಂದಲವನ್ನು ಕಾಂಗ್ರೆಸ್ ಸೃಷ್ಟಿ ಮಾಡಿಲ್ಲ.ಈ ಆರೋಪ ಮಾಡಿದ್ದು ಬಿಜೆಪಿಯವರು ಎಂದಿದ್ದಾರೆ.
ಈಗ ಅವರೇ ಇದಕ್ಕೆ ಸ್ಪಷ್ಟನೆ ನೀಡಲಿ.ಮಾಣಿಪ್ಪಾಡಿ ಅವರು ಇವಾಗ ನಿಜ ಹೇಳುತ್ತಿದ್ದಾರಾ? ಇವಾಗ ನಿಜ ಹೇಳುತ್ತಿದ್ದಿದ್ದಾರಾ?. ಅವರ ನಾಯಕರ ವಿರುದ್ಧ ಮಾಣಿಪ್ಪಾಡಿ ಆರೋಪ ಮಾಡಿದರು .ಅವರನ್ನು ಯಾಕೆ ಉಚ್ಚಾಟನೆ ಮಾಡಿಲ್ಲ?.ಯಾಕೆ ಅವರ ಮೇಲೆ ಕ್ರಮ ಯಾಕೆ ಆಗಿಲ್ಲ.ನಮ್ಮ ಹತ್ತಿರ ಕೂಗಾಡಿದ್ರ ಹಾಗಲ್ಲ ಅವರ ಪಕ್ಷ ಕಚೇರಿಯಲ್ಲಿ ಉತ್ತರ ಹುಡುಕಲಿ.ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ 1,500 ಆರೋಪ ಹೇಳಿಕೆ ನಿಜ ಇರಬಹುದು.ಇದರಲ್ಲಿ ಒಟ್ಟು 4 ಲಕ್ಷ ಕೋಟಿ ಆರೋಪ ಕೇಳಿ ಬಂದಿದೆ. 1500 ಕೋಟಿ ಆರೋಪ ನಿಜ ಇರಬಹುದು ಎಂದಿದ್ದಾರೆ.
ಜೋಶಿ ಅವರಿಗೆ ಕೇಂದ್ರದಿಂದ ‌ರಾಜ್ಯಕ್ಕೆ ಆಗುತ್ತಿರುವ ಅನ್ಯಾಯ ಬಗ್ಗೆ ಮಾತನಾಡಲು ಸಮಯ ಇಲ್ಲ.ಇಂತಹ ತಪ್ಪು ವಿಚಾರ ಮಾತನಾಡುತ್ತಾರೆ. ಇಂತಹ ವಿಚಾರಕ್ಕೆ ಇಂದ್ರ ಚಂದ್ರ ಅಂತ ಕಥೆ ಕಟ್ತಾರೆ.ಅವರು ಕೇಂದ್ರ ಸಚಿವರು ಅವರ ಹೇಳಿಕೆ ನೀಜ ಇರಬಹುದು ಎಂದಿದ್ದಾರೆ.