ಬೆಂಗಳೂರು; ಅಲ್ಲು ಅರ್ಜುನ್ ಬಂಧನ ವಿಚಾರದಲ್ಲಿ ಕಾಂಗ್ರೆಸ್ ವಿರುದ್ದ ಆರೋಪ ವಿಚಾರಕ್ಕೆ ಸಂಬಂಧಪಟ್ಟಂತೆ ಡಿಕೆಶಿ ಅವರನ್ನು ಮಾಧ್ಯಮದವರು ಪ್ರಶ್ನಿಸಿದ್ದಕ್ಕೆ ಉತ್ತರಿಸಿದ ಡಿಸಿಎಂ ಡಿ ಕೆ ಶಿವಕುಮಾರ್ ಅದರ ಬಗ್ಗೆ ಗೊತ್ತಿಲ್ಲ, ಕಾನೂನಿನ ಮುಂದೆ ಎಲ್ಲರೂ ಒಂದೇ ಎಂದಿದ್ದಾರೆ.
ಆದ್ರೆ ತೆಲಂಗಾಣದ ಯಾವ ಆಧಾರದ ಮೇಲೆ ಆಗಿದೆ ಗೊತ್ತಿಲ್ಲ ನಾನು ನೋಡೋದಕ್ಕೆ ಹೋಗಿಲ್ಲ. ಆದ್ರೆ ಯಾರದ್ದೋ ಒಂದು ದೂರಿನ ಮೇಲೆ ಕ್ರಮ ತೆಗೆದುಕೊಂಡಿದ್ದಾರೆ , ಈಗ ಬೇಲ್ ಸಿಕ್ಕಿದೆ ಎಂದಿದ್ದಾರೆ. ಇನ್ನು ಅಲ್ಲು ಅರ್ಜುನ್ ಬಂಧನ್ ಬಿಡುಗಡೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು ಅಲ್ಲು ಅರ್ಜುನ್ ದೊಡ್ಡ ನಟ, ರಾಷ್ಟ್ರ ಪ್ರಶಸ್ತಿ ಬಂದಿದೆ.ಆದ್ರೆ ರಾಜ್ಯ ಸರ್ಕಾರ ಬಂದೋಬಸ್ತ್ ಮಾಡಬೇಕು. ಇದು ರಾಜ್ಯ ಸರ್ಕಾರದ ಜವಾಬ್ದಾರಿ. ಪುಷ್ಪಾ ೨ ದಿಂದ ೩೦% ಆದಾಯ ಬಂದಿದೆ. ಆದಾಯ ಮಾತ್ರ ಬೇಕು, ಜನರಿಗೆ ರಕ್ಷಣೆ ಕೋಡೋ ಕೆಲಸ ಮಾಡಿಲ್ಲ. ಮೃತ ಪತ್ನಿ ಗಂಡ ಕೇಸ್ ವಾಪಸ್ ಪಡೆದಿದ್ದಾರೆ. ಕಾನೂನು ಸುವ್ಯವಸ್ಥೆ ಕಾಪಾಡಬೇಕು ಎಂದಿದ್ದಾರೆ.
ರೇವಂತ್ ರೆಡ್ಡಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು ನಾವು ಮೃತರ ಕುರಿತು ಸಂತಾಪ ಸೂಚಿಸುತ್ತೇವೆ. ಆದ್ರೆ ಈಗಾಗಲೇ ಅವರ ಗಂಡ ಹೇಳಿದ್ದಾರೆ. ಕೇಸ್ ವಾಪಸ್ ಪಡೆದಿದ್ದಾರೆ. ಇದು ಇಂಟಲಿಜೆನ್ಸ್ ಫೆಲ್ಯೂವರ್ ಅಷ್ಟೇ ಎಂದಿದ್ದಾರೆ. ಅಲ್ಲು ಅರ್ಜುನ್ ಅರೆಸ್ಟ್ ಗೆ ಕಾಂಗ್ರೆಸ್ ಕಾರಣ ಎಂಬ ವಿಪಕ್ಷ ಗಳ ಆರೋಪ ವಿಚಾರಕ್ಕೆ ಪ್ರಕ್ರಿಯೆ ನೀಡದೇ ಡಿಸಿಎಂ ಡಿಕೆ ಶಿವಕುಮಾರ್ ಹೋಗಿದ್ದಾರೆ.
ಅಧಿವೇಶನದಲ್ಲಿ ಉತ್ತರ ಕರ್ನಾಟಕ ಭಾಗದ ಚರ್ಚೆ ಬಗ್ಗೆ ಪ್ರತಿಕ್ರಿಯಿಸಿದ ಅವರು ಅದನ್ನ ನಾವೆಲ್ಲಿ ಚರ್ಚೆ ಮಾಡಬೇಕು, ಅದನ್ನ ಅವರೇ ಚರ್ಚೆ ಮಾಡಬೇಕು .ವಿಪಕ್ಷಗಳು ಚರ್ಚೆ ಮಾಡಬೇಕು ಎಂಬರ್ಥದಲ್ಲಿ ಹೇಳಿ ಸೀದಾ ಹೊರಟು ಹೋಗಿದ್ದಾರೆ ಡಿಸಿಎಂ ಡಿಕೆ ಶಿವಕುಮಾರ್.
ಅಧಿವೇಶನದಲ್ಲಿ ಉತ್ತರ ಕರ್ನಾಟಕ ಭಾಗದ ಚರ್ಚೆ ವಿಚಾರ; ಅದನ್ನು ವಿರೋಧ ಪಕ್ಷದವರು ಚರ್ಚೆ ಮಾಡಬೇಕು ಎಂದ ದಿನೇಶ್ ಗುಂಡೂರಾವ್
ಬೆಂಗಳೂರು; ಅಧಿವೇಶನದಲ್ಲಿ ಉತ್ತರ ಕರ್ನಾಟಕ ಭಾಗದ ಚರ್ಚೆ ವಿಚಾರಕ್ಕೆ ಸಂಬಂಧಪಟ್ಟಂತೆ ಪ್ರತಿಕ್ರಿಯಿಸಿರುವ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅದನ್ನು ವಿರೋಧ ಪಕ್ಷದವರು ಚರ್ಚೆ ಮಾಡಬೇಕು ಎಂದಿದ್ದಾರೆ.
ಉತ್ತರ ಕರ್ನಾಟಕ ಭಾಗದ ಚರ್ಚೆ ಮಾಡೋದನ್ನು ಬಿಟ್ಟು ವಕ್ಫ್ ಮೂಡಾ ಅಂತ ಹೇಳಿ ನಮ್ಮ ಸಿಎಂ ಮೇಲೆ ಆರೋಪ ಹೊರಿಸೋಕೆ ನೋಡ್ತಿದ್ದಾರೆ. ವಕ್ಫ್ ವಿಚಾರದಲ್ಲಿ ಚುನಾವಣೆಗಾಗಿ ಕೋಮು ವಿಚಾರ ಚರ್ಚೆಗೆ ತಂದ್ರು. ಆದ್ರೆ ಬೈ ಎಲೆಕ್ಷನ್ ನಲ್ಲಿ ಮುಸ್ಲಿಂ ಸಮುದಾಯದ ಯೂಸೂಪ್ ಪಠಾಣ್ ಮಾಜಿ ಸಿಎಂ ಮಗನನ್ನ ಸೋಲಿಸಿದ್ರು. ಅಲ್ಲಿ ಎಲ್ಲಾ ಸಮುದಾಯದ ಮತಗಳು ನಮ್ಮ ಪಕ್ಷಕ್ಕೆ ಬಂದಿವೆ. ಇದ್ರಿಂದ ಉಪ ಚುನಾವಣೆಯಲ್ಲಿ ಕೋಮು ವಿಚಾರ ವರ್ಕೌಟ್ ಆಗಿಲ್ಲ ಅನ್ನೋ ಟೆನ್ಶನ್ ನಲ್ಲಿ ಅಶೋಕ್ ವಿಜಯೇಂದ್ರ ಇದ್ದಾರೆ .ಈಗ ಮೂಡ ಅಂತ ಹೇಳ್ತಿದ್ದಾರೆ ಅದನ್ನ ಮಾಡಿರೋದೆ ಬಿಜೆಪಿ ಅಧಿಕಾರದಲ್ಲಿ. 50:50 ಅನುಪಾತ ತಂದಿದ್ದೆ ಅವರು.. ಅದರ ಬಗ್ಗೆ ತನಿಖೆಯಾಗಲಿ .ತಪ್ಪಿಸ್ಥರಿಗೆ ಶಿಕ್ಷೆಯಾಗಲಿ ಎಂದು ಆಗ್ರಹಿಸಿದ್ದಾರೆ.











