ಮನೆ Latest News ಹೈಕಮಾಂಡ್ ನವ್ರು ರೀಶಫಲ್ ಮಾಡಲು ಸಿದ್ದರಾಮಯ್ಯಗೆ ಅವಕಾಶ ಕೊಟ್ರೆ ಅವರ ಸ್ಥಾನ ಅಬಾಧಿತ;: ಬೆಂಗಳೂರಿನಲ್ಲಿ ಮಾಜಿ...

ಹೈಕಮಾಂಡ್ ನವ್ರು ರೀಶಫಲ್ ಮಾಡಲು ಸಿದ್ದರಾಮಯ್ಯಗೆ ಅವಕಾಶ ಕೊಟ್ರೆ ಅವರ ಸ್ಥಾನ ಅಬಾಧಿತ;: ಬೆಂಗಳೂರಿನಲ್ಲಿ ಮಾಜಿ ಸಚಿವ ಕೆ ಎನ್ ರಾಜಣ್ಣ ಹೇಳಿಕೆ

0

ಬೆಂಗಳೂರು: ಹೈಕಮಾಂಡ್ ನವ್ರು ರೀಶಫಲ್ ಮಾಡಲು ಸಿದ್ದರಾಮಯ್ಯಗೆ ಅವಕಾಶ ಕೊಟ್ರೆ ಅವರ ಸ್ಥಾನ ಅಬಾಧಿತ ಎಂದು ಬೆಂಗಳೂರಿನಲ್ಲಿ ಮಾಜಿ ಸಚಿವ ಕೆ ಎನ್ ರಾಜಣ್ಣ ಹೇಳಿದ್ದಾರೆ.

ಸಿದ್ದರಾಮಯ್ಯ ನವರಿಗೆ ಐದಾರು ತಿಂಗಳ ಹಿಂದೆಯೇ ರೀಶಫಲ್ ಮಾಡಿ ಅಂತ ಹೈಕಮಾಂಡ್ ಹೇಳಿದ್ರು ಅಂತ ಅವರೇ ಹೇಳಿದ್ದಾರೆ. ಹೈಕಮಾಂಡ್ ನವ್ರು ರೀಶಫಲ್ ಮಾಡಲು ಸಿದ್ದರಾಮಯ್ಯಗೆ ಅವಕಾಶ ಕೊಟ್ರೆ ಅವರ ಸ್ಥಾನ ಅಬಾಧಿತ. ಇಲ್ಲದಿದ್ರೆ ರಾಜಕೀಯ ಚಟುವಟಿಕೆ ನಡೆಯುತ್ತವೆ ಎಂದಿದ್ದಾರೆ. ಡಿಕೆಶಿ ದೆಹಲಿ ಭೇಟಿ, ರಾಹುಲ್ ಗಾಂಧಿ ಭೇಟಿಗೆ ಸಮಯ ಕೇಳಿದ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು ಅದರಲ್ಲೇನು ವಿಶೇಷ ಇಲ್ಲ. ನಾವು ರಾಹುಲ್ ಗಾಂಧಿ ಸಮಯ ಕೇಳಿದ್ರೆ ಅದರಲ್ಲಿ ಅಜೆಂಡಾ ಇರುತ್ತದೆ. ಡಿಕೆಶಿ ಸಮಯ ಕೇಳಿರೋದ್ರಲ್ಲಿ ಯಾವುದೇ ಅಜೆಂಡಾ ಇಲ್ಲ. ಪಕ್ಷದ ಬಗ್ಗೆ ಮಾತಾಡೋದಿಕ್ಕೆ ಸಮಯ ಕೇಳಿರ್ತಾರೆ ಕೋರ್ಟ್ ಕೇಸ್ ಅದೂ ಇದೂ ಇರುತ್ತೆ. ಅದಕ್ಕೇ ಡಿಕೆಶಿ ದೆಹಲಿಗೆ ಹೋಗಿರಬಹುದು ಎಂದಿದ್ದಾರೆ.

ನಾಳೆ ಚಿತ್ತಾಪುರದಲ್ಲಿ ಶಾಂತಿ ಸಭೆ ವಿಚಾರದ ಬಗ್ಗೆ ಮಾತನಾಡಿದ ಅವರು ಹೈಕೋರ್ಟ್ ಸೂಚನೆ ಮೇರೆಗೆ ಶಾಂತಿ ಸಭೆ ಕರೆದಿದ್ದಾರೆ. ಅಲ್ಲಿ ಚರ್ಚೆ ಮಾಡಿ ವರದಿ ಕೊಟ್ಟ ನಂತರ ಹೈಕೋರ್ಟ್ ತೀರ್ಮಾನ ಮಾಡುತ್ತೆ. ಕೋರ್ಟ್ ಮುಂದೆ ಬಂದ ಮೇಲೆ ಯಾರ ಪ್ರತಿಷ್ಠೆಯೂ ಇರಲ್ಲ ಎಂದರು. ಕಾಂಗ್ರೇಸ್ ಗೆ ಸಿದ್ದರಾಮಯ್ಯ ಅನಿರ್ವಾಯ. ಬಿಜೆಪಿಗೆ ಯಡಿಯೂರಪ್ಪ, ಜೆಡಿಎಸ್‌ಗೆ ದೇವೆಗೌಡರ ಕುಟುಂಬ ಹೇಗೆ ಅನಿವಾರ್ಯನೋ  ಹಾಗೆಯೇ ಕಾಂಗ್ರೆಸ್ ಗೆ ಸಿದ್ದರಾಮಯ್ಯ ಅನಿವಾರ್ಯ. ಇದನ್ನು ಎಲ್ರೂ ಒಪ್ತಾರೆ.ನನ್ನ ಅನುಭವದ ಪ್ರಕಾರ ಸಿದ್ದರಾಮಯ್ಯ ಕಾಂಗ್ರೆಸ್ ಗೆ ಅನಿವಾರ್ಯ ನಾಯಕ. ವಿಪಕ್ಷ ಬಿಜೆಪಿಯಲ್ಲೂ ಮುಂದೆ ಬದಲಾವಣೆ ಆಗುತ್ತೆ ಎಂದು ತಿಳಿಸಿದ್ದಾರೆ.

ದಲಿತ ಸಿಎಂ ಕೂಗು ವಿಚಾರದ ಬಗ್ಗೆ ಮಾತನಾಡಿ ದಲಿತರು ಮುಂದಿನ ಸಿಎಂ ಆಗೋದ್ರಲ್ಲಿ ತಪ್ಪೇನಿದೆ?. ಒಬ್ಬರು ದಲಿತರು ಸಿಎಂ ಆದರೆ ಸಂತೋಷ ಪಡಬೇಕು. ಅದನ್ನು ಹೈಕಮಾಂಡ್ ನಿರ್ಧಾರ ಮಾಡ್ತಾರೆ. ಸಿದ್ದರಾಮಯ್ಯ ಅವರೇ ಸಿಎಂ ಆಗಿ ಇರಲಿ ಅಂತ ಹೈಕಮಾಂಡ್ ಘೋಷಣೆ ಮಾಡ್ತಾರೆ ಅಂತ ನಾನು ಅಂದುಕೊಂಡಿದ್ದೀನಿ. ಒಂದು ಪಕ್ಷ ಬದಲಾವಣೆ ಅದೂ ಇದೂ ಅನ್ನೋದು ನಡೆದರೆ ಹೈಕಮಾಂಡ್ ಏನು ತೀರ್ಮಾನ ಮಾಡ್ತಾರೋ ಅದು ನಡೆಯುತ್ತೆ ಎಂದು ಹೇಳಿದ್ದಾರೆ.