ಮನೆ Latest News ಕಾಂಗ್ರೆಸ್ ನಲ್ಲಿ ಆಲ್ ಈಸ್ ನಾಟ್ ವೆಲ್ : ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ...

ಕಾಂಗ್ರೆಸ್ ನಲ್ಲಿ ಆಲ್ ಈಸ್ ನಾಟ್ ವೆಲ್ : ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಹೇಳಿಕೆ

0

ಬೆಂಗಳೂರು: ಕಾಂಗ್ರೆಸ್ ನಲ್ಲಿ ಆಲ್ ಈಸ್ ನಾಟ್ ವೆಲ್ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಹೇಳಿದ್ದಾರೆ.

ಡಿಕೆಶಿ ಪಿಎಂ ಮನೆ ಮುಂದೆ ಗುಂಡಿಗಳಿವೆ ಅಂತಾರೆ, ಅಲ್ಲಿ ಗುಂಡಿ ಲೆಕ್ಕ ಹಾಕ್ತಾರೆ. ಲಂಡನ್ ಗುಂಡಿಗಳ ಬಗ್ಗೆ ಮಾತಾಡ್ತಾರೆ, ಅದಕ್ಕೇನಾ ಇವರು ಮಂತ್ರಿ ಆಗಿರೋದು. ಇವತ್ತು ಬೆಂಗಳೂರಿನಲ್ಲಿ ಏನೆಲ್ಲ ಆಗ್ತಿದೆ. ರಸ್ತೆಯಲ್ಲಿ ಗುಂಡಿಯಲ್ಲ, ಗುಂಡಿಯಲ್ಲಿ ರಸ್ತೆ ಇದೆ. ಸರ್ಕಾರದಲ್ಲಿ ಎಲ್ಲವೂ ಗೊಂದಲ ಆಗ್ತಿದೆ ಎಂದಿದ್ದಾರೆ.

ಆಡಳಿತ ಪಕ್ಷದ ಸಚಿವರು, ಶಾಸಕರ ಪ್ರತಿಕ್ರಿಯೆ ನೋಡಿದ್ರೆ ಗೊತ್ತಾಗುತ್ತೆ. ಆಲ್ ಈಸ್ ನಾಟ್ ವೆಲ್.ಬಿಹಾರ ಚುನಾವಣಾ ಬಳಿಕ ಸಾಕಷ್ಟು ಬದಲಾವಣೆ ಆಗುತ್ತೆ. ಈಗಾಗಲೇ ಪ್ರಕ್ರಿಯೆ ಶುರುವಾಗಿದೆ. ನವೆಂಬರ್ ಬದಲಾವಣೆ ಬಗ್ಗೆ ಅವರ ಶಾಸಕರಿಗೆ ಗೊತ್ತಾಗಿದೆ, ನಾವು 6 ತಿಂಗಳ ಹಿಂದೆಯೇ ಹೇಳಿದ್ವಿ.ಯಾರಿಗೆ ಗಂಡಾಂತರ ಕಾದಿದೆಯೋ..!? ಯಾರಿಗೆ ಅದೃಷ್ಟ ಕಾದಿದೆಯೋ..!? ಗೊತ್ತಾಗುತ್ತೆ ಎಂದು ತಿಳಿಸಿದ್ದಾರೆ.

ಜಿಬಿಎ ಮೊದಲ ಸಭೆ ವಿಚಾರದ ಬಗ್ಗೆ ಮಾತನಾಡಿದ ಅವರು ಈ ಸರ್ಕಾರದಲ್ಲಿ ಎಲ್ಲವೂ ಕೂಡ ಆತುರದ ನಿರ್ಧಾರ. ಜಾತಿ ಗಣತಿ ವಿಚಾರದಲ್ಲಿ ಕೂಡ ತಯಾರಿ ಇರಲಿಲ್ಲ. ಈಗ ಅದು ತೊಂದರೆ ಆಗುತ್ತಿದೆ. ಶಿಕ್ಷಕರು ಮನೆ‌ಮಠ ಬಿಟ್ಟು ಕೆಲಸ ಮಾಡ್ತಿದ್ದಾರೆ, ರಜೆಯನ್ನು ಕೂಡ ವಿಸ್ತರಣೆ ಮಾಡಿದ್ದಾರೆ. ಅದು ಮಕ್ಕಳಿಗೆ ಬಹಳ ತೊಂದರೆ ಆಗುತ್ತಿದೆ, ಶಾಲಾ ಮಕ್ಕಳ ಶಿಕ್ಷಣಕ್ಕೆ ತೊಂದರೆ ಆಗುತ್ತಿದೆ. ಜಿಬಿಎ ಇವತ್ತು ಮೊದಲ ಸಭೆ ಸಿಎಂ ಕರೆದಿದ್ದಾರೆ. ಇವತ್ತಿನ ಜಿಬಿಎ ಸಭೆಯ ಅಜೆಂಡಾನೇ ಕೊಟ್ಟಿಲ್ಲ. ಶಾಸಕರಿಗೆ ಮೊದಲ ಸಭೆಯ ಅಜೆಂಡಾ ನೀಡಿಲ್ಲ. ಇವರು ಏನು ಮಾಡಕ್ಕೆ ಹೊರಟ್ಟಿದ್ದಾರೆ ಗೊತ್ತಿಲ್ಲ. ಸುಪ್ರೀಂಕೋರ್ಟ್ ಅಫಿಡವಿಟ್ ಕೂಡ ಸಲ್ಲಿಸಿದ್ದಾರೆ. ಡಿಸೆಂಬರ್ ಅಲ್ಲಿ ಎಲೆಕ್ಷನ್ ಮಾಡ್ತಾರಂತೆ. ನಮ್ಮ ಶಾಸಕರು ಗೈರಾಗುವ ತೀರ್ಮಾನ ಮಾಡಿದ್ದಾರೆ ಎಂದಿದ್ದಾರೆ.