ಮುಂಬೈ: ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ಪ್ರಯಾಣಿಸುತ್ತಿದ್ದ ವಿಮಾನ ಪತನವಾಗಿದ್ದು ಅಜಿತ್ ಪವಾರ್ ದುರ್ಮರಣಕ್ಕೀಡಾಗಿದ್ದಾರೆ.ವಿಮಾನದಲ್ಲಿದ್ದ ಡಿಸಿಎಂ ಅಜಿತ್ ಪವಾರ್ ಸೇರಿ ಆರು ಜನರ ಸಾವನ್ನಪ್ಪಿದ್ದು ಮಹಾರಾಷ್ಟ್ರದ ಬಾರಾಮತಿ ಬಳಿ ಖಾಸಗಿ ವಿಮಾನ ಪತನಗೊಂಡಿದೆ.
ಅಜಿತ್ ಪವಾರ್ ಚುನಾವಣಾ ಪ್ರಚಾರ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ವೇಳೆ ಬಾರಾಮತಿಯಲ್ಲಿ ಲ್ಯಾಂಡಿಂಗ್ ವೇಳೆ ವಿಮಾನ ಪತನಗೊಂಡಿದೆ.ದೆಹಲಿಯಿಂದ ಮಹಾರಾಷ್ಟ್ರದ ಬಾರಾಮತಿಗೆ ವಿಮಾನದಲ್ಲಿ ಬರುತ್ತಿದ್ದಾಗ ಈ ದುರಂತ ಸಂಭವಿಸಿದೆ.ಅಜಿತ್ ಪವಾರ್ ನೇತೃತ್ವದ ಎನ್ ಸಿಪಿ ಎನ್ ಡಿಎಯ ಭಾಗವಾಗಿದ್ದು, ದೇಶದ ಹಲವು ರಾಜಕೀಯ ನಾಯಕರು ಪವಾರ್ ನಿಧನಕ್ಕೆ ಶೋಕ ವ್ಯಕ್ತಪಡಿಸಿದ್ದಾರೆ.
ಇನ್ನು ಬೆಂಗಳೂರಿನಲ್ಲಿ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್ ಅಜಿತ್ ಪವಾರ್ ಅವರು ಹಿರಿಯ ನಾಯಕರು. ಪಾಸಿಟಿವ್ ಆಗಿ ಆಲೋಚನೆ ಮಾಡುತ್ತಿದ್ದರು. ಪಾರ್ಟಿ ಬಿಟ್ಟು ಹೋದಾಗ ಬಹಳ ಮನಸ್ಸಿಗೆ ನೋವು ಆಗಿತ್ತು. ರಾಜಕೀಯ ಭವಿಷ್ಯ ದ ಬಗ್ಗೆ ಅವರು ತೀರ್ಮಾನ ಮಾಡಿದರು.ಮೊನ್ನೆ ತಾನೇ ಸಿಎಂ ಹೇಳುತ್ತಿದ್ದರು, ಬಹಳ ಸಹಕಾರ ಕೊಟ್ಟು ಕೆಲಸ ಮಾಡುತ್ತಿದ್ದಾರೆ ಅಂದಿದ್ದರು.ವಿರೋಧ ಪಕ್ಷ ಇದ್ದರೂ ಒಳ್ಳೇ ನಿರ್ಣಯ ತೆಗೆದುಕೊಂಡಿದ್ದರು. ಇಂದು ಡಿಸಿಎಂ ಆಗಿದ್ದರು, ಆದ್ರೆ ನಮ್ಮಿಂದ ದೂರ ಆಗಿದ್ದಾರೆಅವರ ಆತ್ಮಕ್ಕೆ ಶಾಂತಿ ಸಿಗಲಿ, ದುಃಖ ಭರಿಸುವ ಶಕ್ತಿ ನೀಡಲಿ ಎಂದಿದ್ದಾರೆ.
ಅವರ ಕುಟುಂಬದವರು ಬೆಂಗಳೂರಲ್ಲಿ ಇದ್ದಾರೆ. ನಿನ್ನೆ ತಾನೇ ಬೀಗರನ್ನ ಭೇಟಿ ಮಾಡಿದ್ದೇನೆ. ರಾಜಕಾರಣಿಗಳು ಬಹಳ ಹುಷಾರ್ ಆಗಿರಬೇಕು.ಅನೇಕ ನಾಯಕರನ್ನ ನಾವು ಕಳೆದುಕೊಂಡಿದ್ದೇವೆ.ಸ್ಪೀಕರ್ ಆಗಿದ್ದರು, ಸಿಂಧ್ಯಾ, ಪೈಲೇಟ್ ಅವರನ್ನ ಕಳೆದುಕೊಂಡಿದ್ದೇವೆ. ತಾಂತ್ರಿಕ ದೋಷ ದ ಬಗ್ಗೆ ಗೊತ್ತಿಲ್ಲ. ನನಗೆ ಸ್ನೇಹಿತರು ತಿಳಿಸಿದರು.ಯಾರ್ಯಾರು ಒಳಗಡೆ ಇದ್ದರು ಅನ್ನೋದು ಗೊತ್ತಿಲ್ಲ
ವಿಮಾನ ಅಪಘಾತ ಹೆಚ್ಚಾಗ್ತಿರುವ ವಿಚಾರ
ಇದರ ಬಗ್ಗೆ ಈಗೇನು ನಾನು ಮಾತಾಡೋದಿಲ್ಲ..
ವರದಿ ಬರಲಿ ನೋಡೋಣ











