ಬಿಗ್‌ಬಾಸ್ ಕನ್ನಡ ಸೀಸನ್ 11, 13ನೇ ವಾರಕ್ಕೆ ಕಾಲಿಟ್ಟಿದೆ. ವೀಕೆಂಡ್ ಬಂದ್ರೆ ಯಾರು ಹೊರಗಡೆ ಹೋಗ್ತಾರೆ ಅಂತಾ ವೀಕ್ಷಕರು ಕಾಯ್ತಿತಾ ಇರ್ತಾರೆ. ಹಾಗೇ ನಮ್ಮ ನೆಚ್ಚಿನ ಸ್ಪರ್ಧಿ ಹೊರಗಡೆ ಹೋಗೋದು ಬೇಡಪ್ಪಾ ಅಂತಾ ಪ್ರೇ ಮಾಡ್ತಾರೆ. ಈ ವಾರ ಬಿಗ್ ಬಾಸ್ ಮನೆಯಿಂದ ಐಶ್ವರ್ಯಾ ಸಿಂಧೋಗಿ ಅವರು ಬಿಗ್ ಬಾಸ್ ಮನೆಯಿಂದ ಹೊರಗಡೆ ಬಂದಿದ್ದಾರೆ. ಆ ಮೂಲಕ ನಾನು ಬಿಗ್ ಬಾಸ್ ಮನೆಯ ಕ್ಯಾಪ್ಟನ್ ಆಗ್ಬೇಕು ಅನ್ನೋ ಐಶು ಆಸೆ ಈಡೇರದೆ ಅವರು ಬಿಗ್ ಬಾಸ್ ಮನೆಯಿಂದ ಹೊರಗಡೆ ಬಂದಿದ್ದಾರೆ. ಗೆಳೆಯ ಶಿಶಿರ್ ಶಾಸ್ತ್ರಿ ಬಿಗ್ ಬಾಸ್ ಮನೆಯಿಂದ ಹೊರ ಬಂದ ಬೆನ್ನಲ್ಲೇ ಐಶ್ವರ್ಯಾ ಅವರು ಕೂಡ ಹೊರಗಡೆ ಬಂದಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಹಾಗೇ ನೋಡಿದ್ರೆ ಐಶ್ವರ್ಯಾ ಅವರು ಒಬ್ಬ ಸ್ಟ್ರಾಂಗ್ ಕಂಟೆಸ್ಟೆಂಟ್. ಬಿಗ್ ಬಾಸ್ ಮನೆಯಲ್ಲಿ ಸದ್ಯಕ್ಕೆ ಸೇವ್ ಆಗಿರೋ ಚೈತ್ರಾ ಕುಂದಾಪುರ ಮೋಕ್ಷಿತಾ ಪೈ ಅವರಿಗೆ ಕಂಪೇರ್ ಮಾಡಿದ್ರೆ ಐಶ್ವರ್ಯಾ ಅವರು ಸ್ಟ್ರಾಂಗ್ ಸ್ಪರ್ಧಿ. ಅವರು ಹೊರಗಡೆ ಬಂದಿದ್ದು ಅವರ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ಬಿಗ್ ಬಾಸ್ ಮನೆಯಲ್ಲಿ ಅತ್ಯಂತ ಸವಾಲುಗಳನ್ನು ಎದುರಿಸಿದವರಲ್ಲಿ ಐಶ್ವರ್ಯಾ ಶಿಂಧೋಗಿ ಪ್ರಮುಖರು. ಕ್ಯಾಪ್ಟನ್ ಆಗುವ ಅವರ ಅವಕಾಶ ಅನೇಕ ಬಾರಿ ಕೂದಲೆಳೆ ಅಂತರದಲ್ಲಿ ತಪ್ಪಿ ಹೋಗಿದೆ. ಅವರನ್ನು ಕ್ಯಾಪ್ಟನ್ ಆಗಿ ನೋಡ್ಬೇಕು ಅನ್ನೋದು ಅವರ ಅಭಿಮಾನಿಗಳ ಕನಸಾಗಿತ್ತು. ಆದರೆ ಆ ಕನಸು ಕೊನೆಗೂ ನನಸಾಗೇ ಇಲ್ಲ.
ಇನ್ನು ನಿನ್ನೆಯ ಸಂಚಿಕೆಯಲ್ಲಿ ಐಶ್ವರ್ಯಾ ಶಿಂಧೋಗಿ ಅವರಿಗೆ ಬಿಗ್ ಬಾಸ್ ಮನೆಯಲ್ಲಿ ಪ್ರತಿ ಬಾರಿ ಚುಚ್ಚಿ ಮಾತನಾಡುತ್ತಾ, ಸಿಲ್ಲಿ ಸಿಲ್ಲಿ ರಿಸನ್ ಕೊಡುತ್ತಾ ಅವರನ್ನು ನಾಮಿನೇಟ್ ಮಾಡುತ್ತಿದ್ದ ಭವ್ಯಾ ಗೌಡ ಅವರಿಗೆ ಕಿಚ್ಚ ಸುದೀಪ್ ಅವರು ಕ್ಲಾಸ್ ತೆಗೆದುಕೊಂಡಿದ್ದು ವೀಕ್ಷಕರಿಗೆ ಖುಷಿ ಕೊಟ್ಟಿದೆ. ಐಶ್ವರ್ಯಾ ಅವರನ್ನು ಭವ್ಯ ಅವರು ನೇರವಾಗಿ ನಾಮಿನೇಟ್ ಬೇಕು ಅಂತಲೇ ಮಾಡಿದ್ದರು. ಆದರೆ ಭವ್ಯ ಅವರನ್ನು ಕರ್ಮ ಬಿಟ್ಟಿಲ್ಲ. ಅವರ ಮೋಸದ ಆಟವನ್ನು ಇಡೀ ರಾಜ್ಯವೇ ನೋಡುವಂತಾಯಿತು. ಅಲ್ಲದೇ ಕಿಚ್ಚ ಸುದೀಪ್ ಅವರಿಂದಲೂ ಛೀಮಾರಿ ಹಾಕಿಸಿಕೊಳ್ಳುವಂತಾಯಿತು. ಇನ್ನಾದರೂ ಬಿಗ್ ಬಾಸ್ ಮನೆಯಲ್ಲಿ ಭವ್ಯ ಸೊಕ್ಕು ಕಡಿಮೆಯಾಗಲಿ. ಸುಖಾಸುಮ್ಮನೆ ಇನ್ನೊಬ್ಬರನ್ನು ಟಾರ್ಗೆಟ್ ಮಾಡೋದು ಬಿಡಲಿ ಎಂದು ವೀಕ್ಷಕರು ಭವ್ಯಗೆ ಬುದ್ಧಿ ಹೇಳಿದ್ದಾರೆ.
ಐಶ್ವರ್ಯಾ ಶಿಂಧೋಗಿ ಅವರಿಗೆ ಅತೀ ಕಡಿಮೆ ವೋಟುಗಳು ಬಂದಿದ್ದರಿಂದ ಅವರು ಬಿಗ್ ಬಾಸ್ ಮನೆಯಿಂದ ಹೊರಗಡೆ ಬಂದಿದ್ದಾರೆ. ಬಾಟಂ ಟೂನಲ್ಲಿ ಐಶ್ವರ್ಯಾ ಹಾಗೂ ಮೋಕ್ಷಿತಾ ಪೈ ಇದ್ದರು. ಅವರಲ್ಲಿ ಐಶ್ವರ್ಯಾ ಹೊರಗಡೆ ಬಂದಿದ್ದಾರೆ. ಆದರೆ ಅವರ ಒಳ್ಳೆತನ ಗೆದ್ದಿದೆ ಎಂದು ವೀಕ್ಷಕರು ಹೇಳಿದ್ದಾರೆ. ಇನ್ನು ಐಶ್ವರ್ಯಾ ಅವರ ಮನಸ್ಸು ಎಷ್ಟು ಒಳ್ಳೆಯದು ಅಂದ್ರೆ ನೀವು ನಿನ್ನೆಯ ವಾರದ ಕಥೆ ಕಿಚ್ಚನ ಜೊತೆ ಎಪಿಸೋಡಿನಲ್ಲಿ ಗಮನಿಸಿರುತ್ತೀರಿ. ಧನ್ ರಾಜ್ ಆಚಾರ್ ಅವರು ಕಿಚ್ಚನ ಚಪ್ಪಾಳೆ ಪಡೆಯುವಾಗ ಐಶ್ವರ್ಯಾ ಅವರು ಖುಷಿಯಿಂದ ಕಣ್ಣೀರು ಹಾಕ್ತಾರೆ. ಇದು ಅವರ ಒಳ್ಳೆಯತನಕ್ಕೆ ಸಾಕ್ಷಿ . ಆದರೆ ಬ್ಯಾಡ್ ಲಕ್ 13ನೇ ವಾರಕ್ಕೆ ಐಶ್ವರ್ಯಾ ದೊಡ್ಮನೆ ಮನೆಯಿಂದ ಹೊರಗೆ ಬಂದಿದ್ದಾರೆ. ಮುಂದೆ ಅವರಿಗೆ ಇಲ್ಲಿ ಸಿಗದ ಒಳ್ಳೊಳ್ಳೆ ಅವಕಾಶಗಳು ಹೊರಗಡೆ ಸಿಗಲಿ ಅಂತಾ ವೀಕ್ಷಕರು ಹಾರೈಸಿದ್ದಾರೆ.











