ಮನೆ ಪ್ರಸ್ತುತ ವಿದ್ಯಮಾನ ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ಎಐಸಿಸಿಯ ಒಬಿಸಿ ಸಲಹಾ ಮಂಡಳಿ ಸಭೆ

ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ಎಐಸಿಸಿಯ ಒಬಿಸಿ ಸಲಹಾ ಮಂಡಳಿ ಸಭೆ

0

ಬೆಂಗಳೂರು ; ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ಎಐಸಿಸಿಯ ಒಬಿಸಿ ಸಲಹಾ ಮಂಡಳಿ ಸಭೆ ನಡೆಯಿತು. ಸಭೆ ಬಳಿಕ‌ ಸಿಎಂ ಸಿದ್ದರಾಮಯ್ಯ ಸುದ್ದಿಗೋಷ್ಠಿ ನಡೆಸಿದರು.

ಈ ವೇಳೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ಕರ್ನಾಟಕದಲ್ಲಿ ಮೊದಲ ಬಾರಿಗೆ ಸಭೆ ನಡೆಸಲಾಗಿದೆ. ನಿನ್ನೆ ಹಾಗೂ ಇಂದು ಚರ್ಚೆ ಮುಂದುವರೆಸಿದ್ವಿ. ಸದಸ್ಯರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಪ್ರಮುಖವಾಗಿ ಮೂರು ನಿರ್ಣಯವನ್ನು ತೆಗೆದುಕೊಂಡಿದ್ದೇವೆ. ಸಭೆ ಸರ್ವಾನುಮತದಿಂದ ನಿರ್ಣಯ ಮಾಡ್ತು. ಎಲ್ಲರೂ ಕೈ ಎತ್ತುವ ಮೂಲಕ ನಿರ್ಣಯವನ್ನು ಬೆಂಬಲಿಸಿದ್ರು ಎಂದರು.

ಇದಾದ ಬಳಿಕ ಸಿಎಂ ಸಭೆಯಲ್ಲಿ‌ ತೆಗೆದುಕೊಂಡ ನಿರ್ಣಯವನ್ನು ಓದಿದರು. ಬೆಂಗಳೂರು ಡಿಕ್ಲೇರೇಶನ್ ನಿರ್ಧಾರವಾಗಿದೆ. ರಾಹುಲ್ ಗಾಂಧಿ ಧೈರ್ಯದಿಂದ ತಗೊಂಡಿದ್ದಾರೆ. ಹಿಂದುಳಿದ ವರ್ಗಗಳ ಹಿತಾಸಕ್ತಿಗೆ ಅವರಿದ್ದಾರೆ. ಹಿಂದುಳಿದ ವರ್ಗಗಳ ಅಭಿವೃದ್ಧಿ ನಮ್ಮ ಉದ್ದೇಶ. ಸಾಮಾಜಿಕ ನ್ಯಾಯ ಕೊಡೋದು ಮುಖ್ಯ. ಆ ನಿಟ್ಟಿನಲ್ಲಿ ನಮ್ಮ ಹೆಜ್ಜೆಯು ಮೈಲಿಗಲ್ಲು. ಸಂವಿಧಾನ ಉದ್ದೇಶದಂತೆ ಸಮಾಜ ನಿರ್ಮಾಣ. ಸಮಾನತೆಯ ಸಮಾಜ ನಿರ್ಮಾಣ ಮಾಡಬೇಕು. ಆ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷವು ಮಾಡುತ್ತಿದೆ. ನ್ಯಾಯ ಯೋಧ ಅಡಿಯಲ್ಲಿ ಪಕ್ಷ ನಡೆಯುತ್ತಿದೆ.ಜಾತಿಗಣತಿ ಮೊದಲು ಒಳಪಡಬೇಕಾದ್ದು. ಶಿಕ್ಷಣ, ಆರ್ಥಿಕ, ಸಾಮಾಜಿಕ ಅಂಶದ ಮೇಲೆ.ಮೀಸಲಾತಿ ೧೫-೪ ಖಾಸಗೀ ವಲಯದಲ್ಲಿದೆ ಎಂದು ಹೇಳಿದರು.

2015ರಲ್ಲಿ‌ ಹಿಂದುಳಿದ ಆಯೋಗಕ್ಕೆ ಬಗ್ಗೆ ಸರ್ಕಾರ ಆದೇಶ ಕೊಟ್ಟಿತ್ತು. ಸಾಮಾಜಿಕ ಮತ್ತು‌ ಶೈಕ್ಷಣಿಕ ಸಮೀಕ್ಷೆಗೆ ನಡೆಸುವಂತೆ ತಿಳಿಸಿದ್ವಿ. 2018ರಲ್ಲೇ ಮಾಡಿ ಮುಗಿಸಿದ್ರು, ಆಗ ನಮ್ಮ ಸರ್ಕಾರ ಕಳೆದುಕೊಂಡಿದ್ವಿ. ಸಮ್ಮಿಶ್ರ ಸರ್ಕಾರ ಬಂದ್ಮೇಲೆ ಕುಮಾರಸ್ವಾಮಿ‌ ಸಿಎಂ ಆದ್ರು. ವರದಿ ಕೊಡೋಕೆ ಕಾಂತರಾಜ್ ಸಮಯ ಕೇಳಿದ್ರೂ ಕೊಡಲಿಲ್ಲ. ಹಿಂದುಳಿವ ವರ್ಗಗಳ ಸಚಿವರಿಗೂ ವರದಿ ಬೇರೆ ಅಂತ ಕುಮಾರಸ್ವಾಮಿ ಸೂಚನೆ ಕೊಟ್ರು. ಅದಾದ್ಮೇಲೆ ಬಿಜೆಪಿ ಸರ್ಕಾರ ಬಂತು, ಅವರೂ ತೆಗೆದುಕೊಂಡಿಲ್ಲ. ನಂತರ ಜಯಪ್ರಕಾಶ್ ಹೆಡ್ಗೆ ಆಯೋಗರ ಅಧ್ಯಕ್ಷರಾದ್ರು . ಆಗ 10 ವರ್ಷಗಳ ಹಳೆಯ ವರದಿ ಹೇಳಿದ್ರು. ಈಗ ಮತ್ತೆ ಸರ್ವೆಗೆ ಸೂಚಿಸಿದ್ದೇವೆ, 3 ತಿಂಗಳೊಳಗೆ ಆಗುತ್ತೆ. ಇದು ಕರ್ನಾಟಕದ ಮಾದರಿ, ಮೊದಲ ಬಾರಿಗೆ ನಾವು ಮಾಡಿದ್ದೇವೆ ಎಂದರು.

ಕಾಂಗ್ರೆಸ್ ಪಕ್ಷ ಏನೇ ಮಾಡಿದ್ರೂ ಸಂವಿಧಾನ ಪರ. ಅಹಿಂದ ಅಂದ್ರೆ ಎಲ್ಲರಿಗೂ ಸಮಪಾಲು, ಸಮಬಾಳು. ಜಾತಿ ಹೋಗಬೇಕಾದ್ರೆ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹೋಗ್ಬೇಕು. ಜಾತಿಗಣತಿ ಅಲ್ಲ, ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಮತ್ತು ರಾಜಕೀಯ ಸಮೀಕ್ಷೆ. ಅವಕಾಶ ವಂಚಿತರನ್ನ ಮೇಲೆತ್ತಲು ಇದರಿಂದ ಅನುಕೂಲ. ಇಂತಹ ಪ್ರಯತ್ನವನ್ನ ಯಾರೂ ಮಾಡಿರಲಿಲ್ಲ. ರಾಹುಲ್ ಗಾಂಧಿ ತೆಗೆದುಕೊಂಡಿದ್ದಾರೆ ಎಂದು ಹೇಳಿದರು.