ಬೆಂಗಳೂರು; ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅನಾರೋಗ್ಯ ಹಿನ್ನೆಲೆ ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ಸಿಎಂ ಸಿದ್ದರಾಮಯ್ಯ ಭೇಟಿ ನೀಡಿ ಖರ್ಗೆ ಆರೋಗ್ಯ ವಿಚಾರಿಸಿದರು. ಉಸಿರಾಟದ ತೊಂದರೆ ಹಿನ್ನೆಲೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ದಾಖಲಾಗಿದ್ದಾರ. ಹೀಗಾಗಿ ಖರ್ಗೆ ಭೇಟಿ ಮಾಡಿ ಸಿಎಂ ಸಿದ್ದರಾಮಯ್ಯ ಆರೋಗ್ಯ ವಿಚಾರಿಸಿದ್ದಾರೆ. ಸಿಎಂ ಸಿದ್ದರಾಮಯ್ಯಗೆ ಎಂ.ಆರ್.ಸೀತಾರಾಂ ಸಾಥ್ ನೀಡಿದ್ರು.
ಬಳಿಕ ಮಾತನಾಡಿದ ಸಿಎಂ ಸಿದ್ದರಾಮಯ್ಯ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪೇಸ್ಮೇಕರ್ ಅಳವಡಿಸಲು ಸೂಚಿಸಲಾಗಿತ್ತು. ಯೋಜಿತ ಶಸ್ತ್ರಚಿಕಿತ್ಸೆಗಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರು ಸ್ಥಿರವಾಗಿದ್ದಾರೆ ಮತ್ತು ಚೆನ್ನಾಗಿದ್ದಾರೆ. ನಿಮ್ಮೆಲ್ಲರ ಕಾಳಜಿ ಮತ್ತು ಹಾರೈಕೆಗೆ ಧನ್ಯವಾದಗಳು ಎಂದು ತಿಳಿಸಿದ್ರು. ಸ್ವಲ್ಪ ಉಸಿರಾಟ ಸಮಸ್ಯೆಯಿಂದ ನಿನ್ನೆ ಅಡ್ಮಿಟ್ ಆಗಿದ್ದಾರೆ. ನಾಳೆ ಡಿಸ್ಚಾರ್ಜ್ ಆಗ್ತಾರೆ. ರೊಟೀನ್ ಚೆಕಪ್ ಗೋಸ್ಕರ ಬಂದಿದ್ದಾರೆ. ಅವರು ಆರೋಗ್ಯವಾಗಿದ್ದಾರೆ. ಖರ್ಗೆ ಅವರು ಚೆನ್ನಾಗೇ ಮಾತನಾಡಿದ್ರು. ರೊಟೀನ್ ಚೆಕಪ್ ಗೆ ಬಂದಿದ್ರು, ನಾಮರ್ಲ್ ಆಗಿದ್ದಾರೆ ಎಂದಿದ್ದಾರೆ ಎಂದು ತಿಳಿಸಿದ್ರು.
ಇದೇ ವೇಳೆ ಮಾತನಾಡಿದ ಸಿಎಂ ರಾಜ್ಯದ ಜನತೆಗೆ ದಸರಾ ಮಹೋತ್ಸವದ ಶುಭಾಶಯಗಳು ನಾನು ಇವತ್ತು ಮೈಸೂರಿಗೆ ಹೊರಡುತ್ತೇನೆ. ನಾಳೆ ಜಂಬೂಸವಾರಿ ಇದೆ ಮುಗಿಸಿಕೊಂಡು ಬರುತ್ತೇನೆ. ನಿನ್ನೆ ಮಳೆಹಾನಿ ಪ್ರದೇಶಗಳಿಗೆ ಭೇಟಿ ವಿಚಾರದ ಬಗ್ಗೆ ಮಾತನಾಡಿ 95% ಉತ್ತರ ಕರ್ನಾಟಕದಲ್ಲಿ ಪ್ರವಾಹ ಆಗಿದೆ. 8-9 ಜಿಲ್ಲೆಗಳಲ್ಲಿ ಪ್ರವಾಹ ಆಗಿದೆ, ಬೇರೆ ಜಿಲ್ಲೆಗಳಲ್ಲಿ ಕಡಿಮೆ ಇದೆ. ಬೆಳಗಾಂ, ಬಿಜಾಪುರ, ಬಾಗಲಕೋಟೆ, ಬೀದರ್, ಯಾದಗಿರಿ, ಕಲ್ಬುರ್ಗಿ, ಧಾರವಾಡ, ಗದಗ ಜಿಲ್ಲೆಗಳಲ್ಲಿ ಜಾಸ್ತಿ ಪ್ರವಾಹ ಆಗಿದೆ ಎಂದರು.
ಪರಿಹಾರ ವಿಚಾರವಾಗಿ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಹೇಳಿಕೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ ಕುಮಾರಸ್ವಾಮಿ ಹೇಳಿಕೆಯನ್ನ ಸ್ವಾಗತ ಮಾಡ್ತೀನಿ. ಆದರೆ 2023ರಲ್ಲಿ ಬರಗಾಲ ಬಂದಾಗ ನಾವು ಸುಪ್ರೀಂ ಕೋರ್ಟ್ ಗೆ ಹೋಗಿದ್ವಿ. ಸುಪ್ರೀಂ ಕೋರ್ಟ್ ಮೂಲಕ ಪರಿಹಾರ ತೆಗೆದುಕೊಳ್ಳಬೇಕಾದ ಪರಿಸ್ಥಿತಿ ಬಂತು. ಸುಪ್ರೀಂ ಬಾಗಿಲು ತಟ್ಟಿ ಪರಿಹಾರ ತೆಗೆದುಕೊಂಡ್ವಿ.ಕೇಂದ್ರ ಸರ್ಕಾರದ ಮೂಲಕ ಕುಮಾರಸ್ವಾಮಿ ಕೊಡಿಸಿಕೊಡಲಿ, ನಾವು ಮನವಿ ಪತ್ರವನ್ನ ಕೊಡ್ತೀವಿ ಎಂದು ತಿಳಿಸಿದ್ರು.
ಜಾತಿಗಣತಿ ಸಮೀಕ್ಷೆಯಿಂದ ಸಮಾಜ ಉದ್ದಾರ ಆಗಲ್ಲ ಎಂಬ ಕುಮಾರಸ್ವಾಮಿ ಹೇಳಿಕೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ ಪಾಪಾ ಕುಮಾರಸ್ವಾಮಿಗೆ ಇದು ಗೊತ್ತಿಲ್ಲ. ಇದು ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸರ್ವೇ.ಸಮಾಜದಲ್ಲಿ ಸಮಾನತೆ ಇರಬೇಕು. ಸಮಾನತೆಗೆ ಬರಬೇಕು ಅಂದ್ರೆ ಏನು ಮಾಡ್ಬೇಕು? ಅಂಕಿ ಅಂಶಗಳು ಬೇಕು.ಯಾವ ಜಾತಿಯಲ್ಲಿ ಬಡತನ, ನಿರುದ್ಯೋಗ, ಅನಕ್ಷರಸ್ಥರು, ಜಮೀನು ಇಲ್ಲ ಅಂತ ಗೊತ್ತಾಗಬೇಕು ಅಲ್ವಾ ?.ಇದು ಗೊತ್ತಾದರೆ ಮಾತ್ರ ಸಮಾನತೆ ಕೊಡಲು ಸಾಧ್ಯ.ಬಾಬಾ ಸಾಹೇಬ್ ಅಂಬೇಡ್ಕರ್ ಏನು ಹೇಳಿದ್ರು? ಅಸಮಾನತೆ ತೊಲಗಿಸಿ ಅಂದಿದ್ದಾರೆ. ಅಸಮಾನತೆ ಹೋಗಲಾಡಿಸಲು ಸಮಾನತೆ ಬರಬೇಕು ಅಲ್ವಾ ?. ಎಲ್ಲರಿಗೂ ಸಮಾನ ಅವಕಾಶ ಸಿಗಬೇಕು ಅಲ್ವಾ ?.ಹಾಗೆಯೇ ಸೊಸೈಟಿಯನ್ನ ಮುಂದುವರಿಸಬೇಕಾ?. ಬಿಜೆಪಿಯವರಿಗೆ ಸಮಾಜದಲ್ಲಿ ಅಸಮಾನತೆ ಹೀಗೆ ಇರಬೇಕು.ಸಮಾನತೆ ಇರಬಾರದು ಅಂತ ಬಯಸುತ್ತಾರೆ.ಒಂದು ಸಮಾಜಕ್ಕೆ ಸಿಕ್ಕರೆ ಸಾಕಾ?.ಜಾತಿಗಣತಿಯನ್ನ ಕೇಂದ್ರ ಸರ್ಕಾರವೂ ಮಾಡ್ತಿದ್ಯಲ್ಲಾ.ಯಾಕೆ ಮಾಡ್ತಿದ್ದಾರೆ? ಅವ್ರು ನಮ್ಮ ಒತ್ತಾಯದ ಮೇಲೆ ಮಾಡ್ತಿರೋದು.ರಾಹುಲ್ ಗಾಂಧಿ ಒತ್ತಾಯದ ಮೇಲೆ ಮಾಡ್ತಿದ್ದಾರೆ ಎಂದರು.











