ಪ್ರಜ್ವಲ್ ರೇವಣ್ಣ ವಿರುದ್ದ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣಕ್ಕೆ ಸಂಬಂಧಪಟ್ಟಂತೆ ಡಿ ಎನ್ ಎ ಪರೀಕ್ಷೆ ವೇಳೆ ಸಂತ್ರಸ್ತೆಯರ ಬಟ್ಟೆಯಲ್ಲಿ ಸಿಕ್ಕ ವೀರ್ಯ ಹಾಗೂ ಕೂದಲಿನ ಹೋಲಿಕೆಗೆ ಇದೀಗ ಎಸ್ ಐ ಟಿ ಮುಂದಾಗಿದೆ. ಹೀಗಾಗಿ ಮಾಜಿ ಸಸದ ಪ್ರಜ್ವಲ್ ರೇವಣ್ಣಗೆ ಇದೀಗ ಸಂತ್ರಸ್ತೆಯರು ಧರಿಸಿದ್ದ ಬಟ್ಟೆಯೇ ಸಂಕಷ್ಟ ತಂದೊಡ್ಡೋದು ಬಹುತೇಕ ಖಚಿತವಾಗಿದೆ.
ಈ ಹಿಂದೆ ಪ್ರಜ್ವಲ್ ರೇವಣ್ಣ ರನ್ನ ಎಸ್ ಐ ಟಿ ಅಧಿಕಾರಿಗಳು ಡಿಎನ್ ಎ ಪರೀಕ್ಷೆಗೆ ಒಳಪಡಿಸಿದ್ದರು. ಅದರಂತೆ ಇದೀಗ ಡಿ ಎನ್ ಎ ಪರೀಕ್ಷೆಯಲ್ಲಿ ಸಂತ್ರಸ್ತೆಯರ ಬಟ್ಟೆಯಲ್ಲಿ ಸಿಕ್ಕ ವೀರ್ಯ ಹಾಗೂ ಕೂದಲಿನ ಹೋಲಿಕೆಗೆ ಎಸ್ ಐ ಟಿ ಮುಂದಾಗಿದೆ.ಇನ್ನು 2 ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಸ್ ಐಟಿ ಈಗಾಗಲೇ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದೆ. ಚಾರ್ಜ್ ಶೀಟ್ ನಲ್ಲಿ ಪ್ರಜ್ವಲ್ ರೇವಣ್ಣ ರಾಕ್ಷಸಿ ಕೃತ್ಯ ಇಂಚಿಂಚೂ ಬಯಲಾಗಿದೆ.
ಇನ್ನು ಪ್ರಕರಣದ ತನಿಖಾ ಹಂತದಲ್ಲೇ ಎಸ್ ಐ ಟಿ ಸಂತ್ರಸ್ತೆಯರ ಬಟ್ಟೆಗಳನ್ನ ವಶಕ್ಕೆ ಪಡೆದಿತ್ತು.ಜೊತೆಗೆ ವಶಕ್ಕೆ ಪಡೆಯಲಾಗಿತ್ತು. ಬಸವನಗುಡಿ ಹಾಗೂ ಹೊಳೆನರಸೀಪುರ ಮನೆಗಳಲ್ಲಿ ಪ್ರಜ್ವಲ್ ಬಳಸಿದ್ದ ದಿಂಬು ಬೆಡ್ ಶೀಟ್ ಗಳನ್ನ ಎಸ್ ಐ ಟಿ ವಶಕ್ಕೆ ಪಡೆದಿತ್ತು. ಅಲ್ಲದೇ ಹಾಸನದ ಪ್ರಜ್ವಲ್ ಅತಿಥಿ ಗೃಹದಲ್ಲೂ ಬಟ್ಟೆಗಳನ್ನ ವಶಕ್ಕೆ ಪಡೆಯಲಾಗಿತ್ತು. ಹೊಳೆ ನರಸೀಪುರ ತೋಟದ ಮನೆಯಲ್ಲಿ ಸೀರೆಗಳು ಪೆಟಿಕೋಟ್ ಗಳು ಪತ್ತೆಯಾಗಿತ್ತು.ಇದೀಗ ಈ ಎಲ್ಲಾ ವಸ್ತುಗಳಲ್ಲಿ ಸಿಕ್ಕ ವೀರ್ಯ ಹಾಗೂ ಕೂದಲಿನ ಮಾದರಿಯನ್ನ ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ.ಇದರ ವರದಿಗಾಗಿ ಎಸ್ ಐ ಟಿ ತಂಡ ಕಾಯುತ್ತಿದೆ.ವರದಿ ಬಂದ ಕೂಡಲೇ ಪ್ರಜ್ವಲ್ ಡಿ ಎನ್ ಎ ಗೆ ಹೋಲಿಕೆ ಮಾಡಲಾಗುತ್ತೆ.ಎರೆಡೂ ಹೋಲಿಕೆಯಾದ್ರೆ ಪ್ರಜ್ವಲ್ ರೇವಣ್ಣ ದೊಡ್ಡ ಸಂಕಷ್ಟ ಎದುರಾಗಲಿದೆ. ಈಗಾಗಲೇ ಎರಡು ಚಾರ್ಜ್ ಶೀಟ್ ಸಲ್ಲಿಕೆ ಮಾಡಿರುವ ಎಸ್ ಐಟಿ ತಂಡ ವೈದ್ಯಕೀಯ ವರದಿ ಬಂದ ನಂತರ ಹೆಚ್ಚುವರಿ ಚಾರ್ಜ್ ಶೀಟ್ ಸಲ್ಲಿಕೆ ಗೆ ಸಿದ್ದತೆ ಮಾಡಿಕೊಂಡಿದೆ.
ಹಾಸನ ಪೆನ್ ಡ್ರೈವ್ ಪ್ರಕರಣ; ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಹಾಗೂ ಶಾಸಕ ರೇವಣ್ಣ ವಿರುದ್ಧ 2 ಸಾವಿರಕ್ಕೂ ಅಧಿಕ ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ
ಹಾಸನ ಪೆನ್ ಡ್ರೈವ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಹಾಗೂ ಶಾಸಕ ರೇವಣ್ಣ ವಿರುದ್ಧ 2 ಸಾವಿರಕ್ಕೂ ಅಧಿಕ ಪುಟಗಳ ಚಾರ್ಜ್ ಶೀಟ್ ನ್ನು ಎಸ್ ಐಟಿ ಅಧಿಕಾರಿಗಳು ಸಲ್ಲಿಕೆ ಮಾಡಿದ್ದಾರೆ. 42 ಬೆಂಗಳೂರಿನ 42ನೇ ಜನಪ್ರತಿನಿಧಿ ನ್ಯಾಯಾಲಯಕ್ಕೆ ಎಸ್ ಐಟಿ ಅಧಿಕಾರಿಗಳು ದೋಷಾರೋಪಣ ಪಟ್ಟಿ ಸಲ್ಲಿಸಿದ್ದಾರೆ.
ಶಾಸಕ ಹೆಚ್ ಡಿ ರೇವಣ್ಣ ಹಾಗೂ ಅವರ ಮಗ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ದಾಖಲಾದ ಕೇಸು ಗಳಿಗೆ ಸಂಬಂಧಪಟ್ಟಂತೆ ದೋಷಾರೋಪಣ ಪಟ್ಟಿ ( ಚಾರ್ಜ್ ಶೀಟ್) ಅನ್ನು ಎಸ್ ಐಟಿ ಅಧಿಕಾರಿಗಳು ಬೆಂಗಳೂರಿನ 42ನೇ ಜನಪ್ರತಿನಿಧಿ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಅಲ್ಲದೇ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಸ್ ಐಟಿ ಅಧಿಕಾರಿಗಳು 123 ಸಾಕ್ಷ್ಯಗಳು ಕಲೆಕ್ಟ್ ಮಾಡಿದ್ದಾರೆ ಎನ್ನಲಾಗಿದೆ.
ಶಾಸಕ ಹೆಚ್ ಡಿ ರೇವಣ್ಣ ಹಾಗೂ ಅವರ ಮಗ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ 2144 ಪುಟಗಳ ಚಾರ್ಜ್ ಶೀಟ್ ಅನ್ನು ಬೆಂಗಳೂರಿನ 42ನೇ ಜನಪ್ರತಿನಿಧಿ ನ್ಯಾಯಾಲಯಕ್ಕೆ ಎಸ್ ಐಟಿ ಅಧಿಕಾರಿಗಳು ಸಲ್ಲಿಸಿದ್ದಾರೆ. ಇನ್ನು ಈ ಪ್ರಕರಣದ ತನಿಖೆ ನಡೆಸುವ ವೇಳೆ ಎಸ್ ಐಟಿ ಅಧಿಕಾರಿಗಲು 150ಕ್ಕೂ ಅಧಿಕ ಸಾಕ್ಷಿಗಳನ್ನು ವಿಚಾರಣೆಗೆ ಒಳಪಡಿಸಿದ್ದರು. ಇನ್ನು ಪ್ರಕರಣದ ಪ್ರಮುಖ ಸಾಕ್ಷಿಗಳು, ಸಂತ್ರಸ್ತರು ನೀಡಿರುವ ಹೇಳಿಕೆಗಳನ್ನು ಎಸ್ ಐಟಿ ಅಧಿಕಾರಿಗಳು ಚಾರ್ಜ್ ಶೀಟ್ ನಲ್ಲಿ ದಾಖಲಿಸಿದ್ದಾರೆ.











