ಬೆಂಗಳೂರು; ರಾಜ್ಯದಲ್ಲಿ ಸದ್ಯ ನಡೆಯುತ್ತಿರುವ ಶಾಂತಿ ಕೆಡಿಸುವ ಘಟನೆಗಳ ಕುರಿತಾಗಿ ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ಆಕ್ರೋಶ ಹೊರ ಹಾಕಿದ್ದಾರೆ. ಬೆಂಗಳೂರಿನಲ್ಲಿ ಈ ಬಗ್ಗೆ ಮಾತನಾಡಿ ಅವರು ನಾಗಮಂಗಲದಲ್ಲಿ ಸರ್ಕಾರ ಓಲೈಕೆ ರಾಜಕಾರಣ ನಡೆಸುತ್ತಿದೆ.ಮೊದಲ 25 ಜನರು ಹಿಂದೂಗಳ ಹೆಸರೇ ಇದೆ.ಚಿಕ್ಕಮಗಳೂರಿನಲ್ಲಿ ಪ್ಯಾಲಸ್ತೀನ್ ಧ್ವಜ ಪ್ರದರ್ಶಿಸಿದ್ದಾರೆ.ಈ ಸರ್ಕಾರ ಬಂದ ನಂತರ ಭಯವೇ ಇಲ್ಲದಂತಾಗಿದೆ.ಇವೆಲ್ಲಾ ನೋಡಿದರೆ ರಾಜ್ಯದಲ್ಲಿ ದೇಶ ವಿರೋಧಿ ಶಕ್ತಿಗಳು ಹೆಚ್ಚಾಗುತ್ತಿವೆ ಎಂದಿದ್ದಾರೆ.
ಕಳೆದ 15 ತಿಂಗಳಿಂದ ರಾಜ್ಯದಲ್ಲಿ ಹಿಂದೂಗಳ ಮೇಲೆ ಹಲ್ಲೆ ಆಗುತ್ತಿವೆ.ಸಿಎಂ, ಡಿಸಿಎಂ ತಮ್ಮದೇ ಗೊಂದಲಗಳಲ್ಲಿ ಸಿಕ್ಕಿಕೊಂಡಿದ್ದಾರೆ.ರಾಜ್ಯದಲ್ಲಿ ಭಯೋತ್ಪಾದಕರ ಅಟ್ಟಹಾಸ ನಡೆಯುತ್ತಿದೆ.ನಾಗಮಂಗಲಕ್ಕೆ ನಾವು ಹೋಗಿದ್ದಾಗ ಅಲ್ಲಿನ ಕೆಲವರು ಗಲಾಟೆ ವೇಳೆ ಪಾಕ್ ಪರ ಘೋಷಣೆ ಕೂಗಿದರು ಅಂತ ನಮಗೆ ಹೇಳಿದರು.ಅಲ್ಲಿನ ಸ್ಥಳೀಯರು ನಮಗೆ ಹೇಳಿದ್ದ ಬಗ್ಗೆ ನಾನು ಟ್ವೀಟ್ ಮಾಡಿದ್ದೇನೆ.ಪಾಕ್ ಪರ ಘೋಷಣೆ ಕೂಗಿದ್ದರ ಬಗ್ಗೆ ತನಿಖೆ ಆಗಲಿ, ಸತ್ಯಾಸತ್ಯತೆ ಗೊತ್ತಾಗಲಿ.ನನ್ನ ಎಕ್ಸ್ ಖಾತೆಯಲ್ಲಿ ಬೇರೆ ಬೇರೆ ಕಡೆ ಆಗಿರುವ ವೀಡಿಯೋ ಹಾಕಲಾಗಿದೆ ಅಷ್ಟೇ ಎಂದಿದ್ದಾರೆ.
ನಾಗಮಂಗಲ ಗಲಭೆಯಲ್ಲಿ ನಲ್ಲಿ ಹಿಂದೂಗಳ ಮೇಲೆ ಹೆಚ್ಚು ಕೇಸ್ ಹಾಕಲಾಗಿದೆ.ಗಲಭೆಯಲ್ಲಿ ಪಿಎಫ್ಐ ಲಿಂಕ್ ಇದ್ದವರೂ ಇದ್ದರು ಎನ್ನಲಾಗಿದೆ.ಅವರನ್ನು ಕೇರಳದಿಂದ ಕರೆಸುವ ಕೆಲಸ ಕಿಡಿಗೇಡಿ ಮುಸ್ಲಿಮರು ಮಾಡಿದ್ದಾರೆ.ಮಂಗಳೂರಿನಲ್ಲೂ ಕೋಮುಗಲಭೆ ಆಗುತ್ತಿದೆ .ಚಿಕ್ಕಮಗಳೂರಿನಲ್ಲಿ ಪ್ಯಾಲೆಸ್ಟೈನ್ ಧ್ವಜ ಹಿಡಿದು ರಾಜಾರೋಷವಾಗಿ ಘೋಷಣೆ ಕೂಗುತ್ತಾ ಹೋಗಿದ್ದಾರೆ.ಈ ಸರ್ಕಾರ ಬಂದ ಮೇಲೆ ಭಯೋತ್ಪಾದಕರಿಗೆ, ಪಿಎಫ್ಐನವರಿಗೆ ಭಯ ಇಲ್ಲದಂತಾಗಿದೆ.ಒಂದು ಕಡೆ ರಾಹುಲ್ ವಿದೇಶಗಳಲ್ಲಿ ಭಾರತ ಬಗ್ಗೆ ಟೀಕೆ ಮಾಡುತ್ತಿದ್ದಾರೆ.ಮತ್ತೆ ವಿಭಜನೆ ಹುನ್ನಾರಕ್ಕೆ ಕಾಂಗ್ರೆಸ್ ಮುಂದಾಗಿದೆ.ನಾಗಮಂಗಲ, ಮಂಗಳೂರು, ಚಿಕ್ಕಮಗಳೂರು ಘಟನೆಗಳಿಂದ ಮತ್ತೆ ವಿಭಜನೆ ಕೆಲಸಕ್ಕೆ ಮುಂದಾಗಿದೆ.ಪ್ರಗತಿಪರರು, ನಗರ ನಕ್ಸಲರು ಕಾಂಗ್ರೆಸ್ ಗೆ ಕುಮ್ಮಕ್ಕು ಕೊಡ್ತಿದ್ದಾರೆ.ಈ ಪ್ರಗತಿಪರರು, ನಗರ ನಕ್ಸಲರು ಯಾಕೆ ಈ ಘಟನೆಗಳನ್ನು ಖಂಡಿಸ್ತಿಲ್ಲ?.ಮಂಗಳೂರು, ಚಿಕ್ಕಮಗಳೂರು, ನಾಗಮಂಗಲ ಘಟನೆಗಳ ತನಿಖೆಯನ್ನು ಎನ್ಐಎಗೆ ವಹಿಸಬೇಕು ಅಂತ ಆಗ್ರಹಿಸುತ್ತೇನೆ ಎಂದಿದ್ದಾರೆ.
ಬಾಂಬ್ ತಯಾರಿಗೆ ಕಚ್ಚಾ ವಸ್ತು, ಜಾಗ ಕೊಟ್ಟಿದ್ದು, ಎಲ್ಲಿ ಇದನ್ನು ತಯಾರು ಮಾಡಿದ್ರು?.ಇಲ್ಲಿನ ಮಸೀದಿಗಳಲ್ಲಿ ತಯಾರಿಸಿದ್ರಾ, ಹೊರಗಿಂದ ತಂದಿದ್ರಾ? .ದೇಶದ ಭದ್ರತೆ ದೃಷ್ಟಿಯಿಂದ ಇದೆಲ್ಲದರ ತನಿಖೆ ಆಗಲು ಎನ್ಐಗೆ ವಹಿಸಲಿ ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್ ಅಶೋಕ್ ಆಗ್ರಹಿಸಿದ್ದಾರೆ.
ಮಂಡ್ಯದಲ್ಲಿ ಆರ್ ಎಸ್ ಎಸ್ ಕಚೇರಿಗೆ ಪೊಲೀಸ್ ಪ್ರವೇಶ ವಿಚಾರ;ಸಂಘದ ಕಾರ್ಯಾಲಯಕ್ಕೆ ಪೊಲೀಸ್ ಹೇಗೆ ಹೋದರು?; ಬೆಂಗಳೂರಿನಲ್ಲಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್ ಹೇಳಿಕೆ
ಮಂಡ್ಯದಲ್ಲಿ ಆರ್ ಎಸ್ ಎಸ್ ಕಚೇರಿಗೆ ಪೊಲೀಸ್ ಪ್ರವೇಶ ವಿಚಾರಕ್ಕೆ ಸಂಬಂಧಪಟ್ಟಂತೆ ಬೆಂಗಳೂರಿನಲ್ಲಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್ ಹೇಳಿಕೆ ನೀಡಿದ್ದಾರೆ. ಸಂಘದ ಕಾರ್ಯಾಲಯಕ್ಕೆ ಪೊಲೀಸ್ ಹೇಗೆ ಹೋದರು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್ ಪ್ರಶ್ನೆ ಮಾಡಿದ್ದಾರೆ.
ಮಂಡ್ಯದಲ್ಲಿ ಆರ್ ಎಸ್ ಎಸ್ ಕಚೇರಿಗೆ ಪೊಲೀಸರು ಹೇಗೆ ಹೋದರು. ಸಂಘದ ಕಾರ್ಯಾಲಯಕ್ಕೆ ಪೊಲೀಸ್ ಹೇಗೆ ಹೋದರು?ಅವರ ಬಳಿ ಸರ್ಚ್ ವಾರೆಂಟ್ ಇತ್ತಾ? ಎಂದು ಪ್ರಶ್ನಿಸಿದ್ದಾರೆ.ಪೊಲೀಸರು ಅನುಚಿತವಾಗಿ ನಡೆದುಕೊಂಡಿದ್ದಾರೆ. ಕೂಡಲೇ ಡಿವೈಎಸ್ ಪಿ ಅಮಾನತು ಆಗಬೇಕು.ಈ ಸರಕಾರದ ಪಾಪದ ಕೊಡ ತುಂಬಿದೆ.ಒಂದು ತನಿಖಾ ಸಮಿತಿಯನ್ನು ರಚಿಸಬೇಕು ಎಂದಿದ್ದಾರೆ.
ಬಿ.ಸಿ. ರೋಡ್ ನಲ್ಲಿ ಹಿಂದು ಮುಸ್ಲಿಂ ನಡುವೆ ಪ್ರಕ್ಷುಬ್ಧ ವಾತಾವರಣ ವಿಚಾರಕ್ಕೆ ಪ್ರತಿಕ್ರಿಯೆಸಿದ ಅವರು ಒಂದು ಸರ್ಕಾರದ ಮೇಲೆ ನಂಬಿಕೆ ಕಳೆದುಕೊಂಡಾಗ ಸೆಲ್ಫ್ ಡಿಫೆನ್ಸ್ ತಪ್ಪಲ್ಲ.ಸೆಲ್ಪ್ ಡಿಫೆನ್ಸ್ ಗೆ ಕಾನೂನು ಅವಕಾಶ ಇದೆ.ರಾಜ್ಯದಲ್ಲಿ ಅರಾಜಕತೆ ನೆಲೆಸಿದ್ದು, ತುಷ್ಠೀಕರಣದ ಪರಾಕಾಷ್ಠೆ ನಡೆಯುತ್ತಿದೆ.ಆರ್ ಎಸ್ ಎಸ್ ಕಚೇರಿಗೆ ಸರ್ಚ್ ವಾರಂಟ್ ಇಲ್ಲದೇ ಬಂದಿದ್ದಾರೆ.ಸರ್ಚ್ ವಾರಂಟ್ ಇಲ್ಲದಿದ್ದರೂ ಸ್ಟೇಷನ್ ಡೈರಿಯಲ್ಲಿ ಸೂಕ್ತ ಕಾರಣ ಬಗ್ಗೆ ಬರೆದು ಬರಬೇಕು.ಆದರೆ ಪಾಂಡವಪುರ ಆರ್ ಎಸ್ ಎಸ್ ಕಚೇರಿಗೆ ಪೊಲೀಸರು ಅತಿಕ್ರಮಣ ಪ್ರವೇಶ ಮಾಡಿದ್ದಾರೆ ಎಂದಿದ್ದಾರೆ.
ಪ್ರವೇಶ ಮಾಡಿದ ಮೇಲೆ ಯಾರನ್ನು ಬಂಧಿಸಿದ್ದಾರೆ? ಏನನ್ನು ಸೀಜ್ ಮಾಡಿದ್ದಾರೆ?ಒಂದು ಸಮುದಾಯದ ಓಲೈಕೆ ಉದ್ದೇಶ ಇದರ ಹಿಂದೆ ಇದೆ.ಒಂದು ರಾಷ್ಟ್ರಾಭಿಮಾನಿ ಸಂಸ್ಥೆಯ ಒಳಗೆ ಪೊಲೀಸರು ಯಾವ ಧೈರ್ಯದ ಮೇಲೆ ಪ್ರವೇಶ ಮಾಡಿದರು?ಇದು ಆರ್ ಎಸ್ ಎಸ್ ಗೆ ಕಳಂಕ ಮೆತ್ತುವ ಸಂಚು.ಆರ್ ಎಸ್ ಎಸ್ ಕಚೇರಿಯಲ್ಲಿ ಸ್ವಯಂ ಸೇವಕರ ಜತೆ ಪೊಲೀಸರು ಸರಿಯಾಗಿ ನಡೆದುಕೊಂಡಿಲ್ಲ.ಪೊಲೀಸರು ದುರ್ವರ್ತನೆ ತೋರಿದ್ದಾರೆ ಎಂದಿದ್ದಾರೆ.