ಬೆಂಗಳೂರು; ಗುತ್ತಿಗೆದಾರ ಚೆಲುವರಾಜು ಅವರಿಗೆ ಶಾಸಕ ಮುನಿರತ್ನ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸತಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಇಂದು ಗುತ್ತಿಗೆದಾರ ಚೆಲುವರಾಜು ನಿವಾಸಕ್ಕೆ ಭೇಟಿ ನೀಡಿದರು.
ಸಚಿವರ ಭೇಟಿ ಬಳಿಕ ತಮ್ಮ ನಿವಾಸದಲ್ಲಿ ಮಾಧ್ಯಮವರೊಂದಿಗೆ ಮಾತನಾಡಿದ ಅವರು ಇವತ್ತು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮನೆಗೆ ಬಂದಿದ್ರು.ನಿಮ್ಮ, ನಿಮ್ಮ ಕುಟಬದ ಹಿಂದೆ ನಾನಿದ್ದೀನಿ, ಕುಟುಂಬಕ್ಕೆ ರಕ್ಷಣೆ ಕೊಡ್ತೀನಿ ಅಂದಿದ್ದಾರೆ.ಈಗ ನನಗೆ ಧೈರ್ಯ ಬಂದಿದೆ.ನನಗೆ ಜೀವ ಭಯ ಇದೆ.ನಿನಗೆ ನೂರರಲ್ಲಿ ಹೊಡೆದು ಹಾಕ್ತೀನಿ ಅಂದಿದ್ದಾರೆ.ನನಗೆ ರಕ್ಷಣೆ ಬೇಕೇಬೇಕು.ಪೊಲೀಸ್ ಪ್ರೊಟೆಕ್ಷನ್ ಬೇಕು.ಮುನಿರತ್ನ ಅವರ ಕುರಿತ ಇನ್ನೂ ಎರಡು ಆಡಿಯೋ ಇದೆ.ನಾಳೆ ಎರಡು ಆಡಿಯೋ ರಿಲೀಸ್ ಮಾಡ್ತಿನಿ.ತನಿಖೆ ನಡಿತಿದೆ, ನಾಳೆ ಮಾಧ್ಯಮದವರಿಗೆ ಈ ಆಡಿಯೋ ಬಿಡ್ತಿನಿ.ಇನ್ನೂ ಎರಡು ಸಿಡಿ ಇದೆ ಎಂದಿದ್ದಾರೆ.
30% ವಿಚಾರ, ಹನುಮಂತರಾಯಪ್ಪನವರ ಜತೆ ಮಾತನಾಡಿರುವ ವಿಚಾರ ಎರಡು ಆಡಿಯೋ ಇದೆ.ಹನುಮಂತರಾಯಪ್ಪನ ಜತೆ ಮಾತನಾಡಿರುವ ದನಿ ನನ್ನದೇ.ಅವರು ಗಲಾಟೆ ಸೃಷ್ಟಿ, ವೇಲು ನಾಯಕ್ ಮೇಲೆ ಹಾಕಿ, ಹನುಮಂತನ ರಾಯಪ್ಪನ ಮೂಲಕ ಡೈವರ್ಟ್ ಮಾಡೋ ಕುತಂತ್ರ ನಡಿತಿದೆ.ಬೆಳಗ್ಗೆ ನನ್ನನ್ನು ಕರೆದು ನ್ಯಾಯ ಕೊಡಿಸ್ತಿನಿ ಅಂದ್ರು, ದುಡ್ಡು ಡಿಮ್ಯಾಂಡ್ ಮಾಡಿದ್ರು.ಇದಕ್ಕೆ ನಾನು ಈಗಾಗಲೇ ಉತ್ತರ ಕೊಟ್ಟಿದ್ದೀನಿ.ತನಿಖೆ ನಡಿತಿದೆ.ಹನುಮಂತರಾಯಪ್ಪನವರ ಜತೆ ಮಾತಾಡಿರೋದು ಸತ್ಯ, ಎಂಎಲ್ ಎ ನ ಬೈಯೋಕ್ಕೆ ಆಗುತ್ತಾ.೩ ವರ್ಷದಿಂದ ಎಷ್ಟು ಕಷ್ಟ ಪಟ್ಟಿದ್ದೀನಿ ಅಂತ ನನಗೆ ಗೊತ್ತಿದೆ.ಇದು ಒಂದು ತಿಂಗಳ ಹಿಂದೆ ನಡೆದಿರೋ ಪ್ರಕರಣ.ರೇಣುಕಾಸ್ವಾಮಿ ಅವರನ್ನು ಹೊಡೆದು ಹಾಕಿರೋದು ಯಾರು ಗೊತ್ತ ನನ್ನ ತಂಗಿ ಮಗ ಅಂದಿದ್ರು.ಅವತ್ತೇ ನಾನು ಕಂಪ್ಲೆಂಟ್ ಕೊಟ್ಟಿದ್ದೆ. ಲೋಕಾಯುಕ್ತಗೂ ದೂರು ನೀಡಿದ್ದೀನಿ ಎಂದಿದ್ದಾರೆ.
ಗುತ್ತಿಗೆದಾರ ಚಲುವರಾಜುಗೆ ಶಾಸಕ ಮುನಿರತ್ನ ಅವಾಚ್ಯ ಶಬ್ದದಿಂದ ನಿಂದಿಸಿದ ಪ್ರಕರಣ; ಚಲುವರಾಜು ಭೇಟಿ ಮಾಡಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್
ಬೆಂಗಳೂರು: ಗುತ್ತಿಗೆದಾರ ಚಲುವರಾಜುಗೆ ಶಾಸಕ ಮುನಿರತ್ನ ಅವಾಚ್ಯ ಶಬ್ದದಿಂದ ನಿಂದಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಚಲುವರಾಜು ಅವರನ್ನು ಭೇಟಿ ಮಾಡಿದ್ದಾರೆ. ಬೆಂಗಳೂರಿನ ಭಾರತ್ ನಗರದಲ್ಲಿರುವ ಚಲುವರಾಜು ಮನೆಗೆ ಭೇಟಿ ನೀಡಿ ಸಚಿವೆ ಲಕ್ಷ್ಮೀ ಹೆಬ್ಬಾಕ್ಳರ್ ಮಾತನಾಡಿದ್ದಾರೆ. ಇದೇ ವೇಳೆ ನಮ್ಮ ಪತಿ ಹಾಗೂ ನಮ್ಮ ಮನೆಗೆ ಭದ್ರತೆ ಕೊಡಿ ಎಂದು ಚೆಲುವರಾಜು ಪತ್ನಿ ಸಚಿವರ ಬಳಿ ಮನವಿ ಮಾಡಿದ್ದಾರೆ.ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮುಂದೆ ಚಲುವರಾಜು ಹಾಗು ಪತ್ನಿ ಕಣ್ಣೀರು ಹಾಕಿದ್ದಾರೆ.ಹಣಕ್ಕಾಗಿ ಹಿಂಸೆ ಕೊಟ್ಟಿದ್ದಾರೆ ಎಂದು ಚೆಲುವರಾಜು ಹೇಳಿದ್ದಾರೆ.
ನಾವು ನಿಮ್ಮ ಪರ ಇದ್ದೇವೆ, ಈಗಾಗಲೇ ಗೃಹ ಸಚಿವರ ಬಳಿ ಮಾತನಾಡಿದ್ದೇನೆ.ನಿಮ್ಮ ಭೇಟಿ ಮಾಡಿದ ನಂತ್ರ ಸಿಎಂ ಭೇಟಿ ಮಾಡ್ತೀನಿ.ರೂಮಿನಲ್ಲಿ ಚಿತ್ರ ಹಿಂಸೆ ಕೊಟ್ಟಿದ್ದಾರೆ.ರೇಣುಕಾಸ್ವಾಮಿಯನ್ನು ಹೊಡೆದು ಹಾಕಿದ್ದು ಮುನಿರತ್ನ ಬಾಮೈದ ಎಂದು ಮುನಿರತ್ನ ಪಟಾಲಂಗಳು ಭಯಪಡಿಸಿದ್ರು.ರೇಣುಕಾಸ್ವಾಮಿಯನ್ನು ಕೊಲೆ ಮಾಡಿದ್ದು ಯಾರು ಗೊತ್ತಾ ಅಂತ ಕೇಳ್ತಿದ್ರು.ನಿಮ್ಮ ಹೆಂಡತಿ ಫೋಟೋ ಕಳ್ಸಿ ಎಂದು ಫೋರ್ಸ್ ಮಾಡ್ತಿದ್ರು ಎಂದು ಸಂಪೂರ್ಣ ಘಟನೆಯನ್ನು ಸಚಿವೆಗೆ ಗುತ್ತಿಗೆದಾರ ಚಲುವರಾಜು ವಿವರಿಸಿದ್ದಾರೆ.
ಇನ್ನು ಗುತ್ತಿಗೆದಾರ ಚೆಲುವರಾಜು ನಿವಾಸದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಮಾತನಾಡಿ ಕಳೆದ 2-3 ದಿನಗಳಲ್ಲಿ ಮಾಧ್ಯಮಗಳಲ್ಲಿ ಬಂದಿದ್ದನ್ನು ಗಮನಿಸಿದ್ದೇನೆ .ಮುನಿರತ್ನರ ಬಗ್ಗೆ ರಾಜ್ಯದ ಜನತೆಗೆ ಬಿತ್ತರಿಸಿದ್ದೀರಿ.ಮಹಿಳೆಗೆ ಧೈರ್ಯ ತುಂಬಲು ಬಂದಿರುವೆ.ಸುಮಾರು ಜನ ನನಗೆ ಹೇಳಿದ್ರು, ತುಂಬಾ ಕೆಟ್ಟದಾಗಿ ಮಾತಾಡಿದ್ದಾರೆ ಎಂದು.ಸರ್ಕಾರ, ನಾವು ನಿಮ್ಮ ಜೊತೆಗೆ ಇದ್ದೇವೆ.ಸರ್ಕಾರ ತಮ್ಮ ಜೊತೆಗೆ ಇದ್ದೇವೆ ಎಂದು ಹೇಳಲು ಬಂದಿದ್ದೇವೆ .ನಾವು ರಾಜಕಾರಣಿಗಳು ಮಾಡೆಲ್, ಇಮೇಜ್ ಸೆಟ್ ಮಾಡಬೇಕು.ಇಂತಹ ರಾಜಕಾರಣಿಗಳಿಗೆ ಶೋಭೆ ತರಲ್ಲ.ಜಾತಿ ಹಿಡಿದು ಬೈಯೋದು ತರವಲ್ಲ.ಸರ್ಕಾರ ಕುಟುಂಬಕ್ಕೆ ಭದ್ರತೆ ನೀಡಲಿದೆ .ಸಿಎಂ ಭೇಟಿಯಾಗಿ, ಅವರ ಗಮನಕ್ಕೆ ತರುವೆ .ಸರ್ಕಾರ ಯಾವ ಪ್ರಕರಣದಲ್ಲಿ ಕ್ರಮ ತೆಗೆದುಕೊಂಡಿಲ್ಲ ಎಂದು ಬಿಜೆಪಿಯವರು ಹೇಳಲಿ.FSL ವರದಿ ಬರಲಿ, ನಿಷ್ಪಕ್ಷಪಾತ ತನಿಖೆ ಮಾಡ್ತೇವೆ.ಅಶೋಕಣ್ಣ ಬಹಳ ಬುದ್ದಿವಂತರು, ಅವರೂ ಅನ್ಯಾಯಕ್ಕೆ ಒಳಗಾದವರು.ಅನ್ಯಾಯ ಏನಾಗಿದೆ ಎಂದು ಅವರಿಗೂ ಗೊತ್ತಿದೆ ಎಂದಿದ್ದಾರೆ.