ಮನೆ Latest News ಡಿ.ಕೆ. ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾದ ಮೇಲೆ ಸರ್ಕಾರಕ್ಕೂ ಕಾಂಗ್ರೆಸ್ ಪಕ್ಷಕ್ಕೂ ವ್ಯತ್ಯಾಸವೇ ಇಲ್ಲದಂತಾಗಿದೆ; ವಿಪಕ್ಷ ನಾಯಕ...

ಡಿ.ಕೆ. ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾದ ಮೇಲೆ ಸರ್ಕಾರಕ್ಕೂ ಕಾಂಗ್ರೆಸ್ ಪಕ್ಷಕ್ಕೂ ವ್ಯತ್ಯಾಸವೇ ಇಲ್ಲದಂತಾಗಿದೆ; ವಿಪಕ್ಷ ನಾಯಕ ಆರ್. ಅಶೋಕ್ ಹೇಳಿಕೆ

0

ಬೆಂಗಳೂರು; ಡಿ.ಕೆ. ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾದ ಮೇಲೆ ಸರ್ಕಾರಕ್ಕೂ ಕಾಂಗ್ರೆಸ್ ಪಕ್ಷಕ್ಕೂ ವ್ಯತ್ಯಾಸವೇ ಇಲ್ಲದಂತಾಗಿದೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಹೇಳಿದ್ದಾರೆ.

ವಿಧಾನಸಭೆಯಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಮಾತನಾಡಿದ ಅವರು ಡಿ.ಕೆ. ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾದ ಮೇಲೆ ಸರ್ಕಾರಕ್ಕೂ ಕಾಂಗ್ರೆಸ್ ಪಕ್ಷಕ್ಕೂ ವ್ಯತ್ಯಾಸವೇ ಇಲ್ಲದಂತಾಗಿದೆ. ಸರ್ಕಾರದ ದುಡ್ಡು ತೆಗೆದುಕೊಂಡು ಹೋಗಿ ಅಲ್ಲಿ ಹಂಚುತ್ತಾರೆ. ನಮ್ಮ ತೆರಿಗೆ ಹಣವನ್ನು ಹೇಗೆ ನೀವು ಕಾಂಗ್ರೆಸ್ ಕಾರ್ಯಕರ್ತರಿಗೆ ಕೊಡುತ್ತೀರಿ?. ಬೇಕಾದರೆ ಕಾಂಗ್ರೆಸ್ ನವರು ಭಿಕ್ಷೆ ಬೇಡಿ ಹಣ ಕೊಡಲಿ. ರೋಡ್ ರೋಡ್ ನಲ್ಲಿ ಕಾಂಗ್ರೆಸ್ ನವರು ಭಿಕ್ಷೆ ಬೇಡಲಿ. ರಾಜ್ಯದಲ್ಲಿ ಅಧಿಕಾರಿಗಳು ಸತ್ತು ಹೋಗಿದ್ದರೆ ನೀವು ಕೆಲಸ ಮಾಡಲು ಕಾಂಗ್ರೆಸ್ ಕಾರ್ಯಕರ್ತರಿಗೆ ಕೊಡಿ. ಅಧಿಕಾರಿಗಳು ಬದುಕಿರುವಾಗ ಹೇಗೆ ಕೆಲಸ ಮಾಡಲು ಬಿಡುತ್ತೀರಿ ಎಂದು ಸರ್ಕಾರದ ವಿರುದ್ದ ವಿಪಕ್ಷ ನಾಯಕ ಅಶೋಕ್ ತೀವ್ರ ಹರಿಹಾಯ್ದಿದ್ದಾರೆ.

ಈ ವೇಳೆ ಸ್ಪೀಕರ್ ರಾಜಕೀಯ ಭಾಷಣ ಯಾಕೆ ಎಂದಿದ್ದಾರೆ. ಈ ವೇಳೆ ಸ್ಪೀಕರ್ ಮಾತಿಗೆ ಬಿಜೆಪಿ ಶಾಸಕರು ಸಿಟ್ಟಾಗಿದ್ದಾರೆ. ಈ ವೇಳೆ ವೇತನ ಪಾವತಿ ಸಮರ್ಥಿಸಿಕೊಂಡಿದ್ದಾರೆ. ಡಿಸಿಎಂ ಡಿ.ಕೆ. ಶಿವಕುಮಾರ್. ಇದು ಸರ್ಕಾರದ ಬದ್ಧತೆ, ಸರ್ಕಾರ ತಂದ ಕಾರ್ಯಕರ್ತರಿಗೆ ಕಾರ್ಯಕ್ರಮ ಕೊಡುವ, ಸಂಬಳ ತೆಗೆದುಕೊಳ್ಳುವ ಹಕ್ಕಿದೆ ಎಂದು ಡಿಸಿಎಂ ಹೇಳಿದ್ದಾರೆ. ಈ ವೇಳೆ ವಿಪಕ್ಷ ನಾಯಕ ಅಶೋಕ್ ಸೂಚನೆಗೂ ಕಾಯದೇ ಬಿಜೆಪಿ ಮತ್ತು ಜೆಡಿಎಸ್ ಶಾಸಕರು ಧರಣಿಗೆ ಮುಂದಾಗಿದ್ದಾರೆ.ಅಶೋಕ್ ಕಾಯುವಂತೆ ಹೇಳಿದರೂ ಕೇಳದೇ ಸದನದ ಬಾವಿಗೆ ಇಳಿಯಲು ಮುಂದಾಗಿದ್ದಾರೆ ಬಿಜೆಪಿ ಶಾಸಕರು. ಈ ವೇಳೆ ಸದನವನ್ನು ಹತ್ತು‌ ನಿಮಿಷಗಳ ಕಾಲ ಸ್ಪೀಕರ್ ಮುಂದೂಡಿದ್ದಾರೆ.

ಬೆಂಗಳೂರು: ಗ್ಯಾರಂಟಿ ಅನುಷ್ಠಾನ ಸಮಿತಿ ರಚನೆ ವಿಚಾರದ ಬಗ್ಗೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಪ್ರತಿಕ್ರಿಯಿಸಿದ್ದಾರೆ.

ಗ್ಯಾರಂಟಿ ಯೋಜನೆಗಳನ್ನ ಅನುಷ್ಠಾನ ಮಾಡಬೇಕು ಅಂತ ಹೇಳಿ. ಸರ್ಕಾರ ಕಾಂಗ್ರೆಸ್ ಪದಾಧಿಕಾರಿಗಳಿಗೆ ಸರ್ಕಾರ ಪ್ರತಿ ತಿಂಗಳು ೧೫ ರಿಂದ ೨೦ ಕೋಟಿ ರೂಪಾಯಿ ಹಣ ಕೊಡ್ತಾ ಇದ್ದಾರೆ. ಅದರ ಜೊತೆಗೆ ಪ್ರತಿ ತಾಲ್ಲೂಕುಗಳಲ್ಲಿ ಆಫೀಸ್ ಕೊಟ್ಟು, ಆಫೀಸ್ ಖರ್ಚಿನ್ನ  ಸರ್ಕಾರದ ಮೇಲೆ ಬರುತ್ತೆ. ಒಬ್ಬರಿಗೆ ರಾಜ್ಯ ಮಟ್ಟದಲ್ಲಿ ೪೦ ಸಾವಿರ ಸಂಬಳ. ತಾಲ್ಲೂಕು ಮಟ್ಟದಲ್ಲಿ ೨೫ ಸಾವಿರ ಸಂಬಳ. ಇದು ಕಾಂಗ್ರೆಸ್ ಆಫೀಸ್ ನಿಂದ ದುಡ್ಡು ಕೊಡ್ತಾ ಇಲ್ಲ.ಸರ್ಕಾರದ ತೆರಿಗೆದಾರರ ಹಣವನ್ನ ಕಾಂಗ್ರೆಸ್ ಕಾರ್ಯಕರ್ತರು ಮಜಾ ಮಾಡೋಕೆ ಲೂಟಿ ಮಾಡೋಕೆ ಮಾಡ್ತಾ ಇದ್ದಾರೆ ಎಂದಿದ್ದಾರೆ.

ಈಗಾಗಲೇ ಎಲ್ಲ ರೇಷನ್ ಅಂಗಡಿಗಳನ್ನ ಮಿಟೀಂಗ್ ಕರೆದು ಪ್ರತಿತಿಂಗಳು ಹಣ ಕೊಡಬೇಕು ಅಂತ ಫಿಕ್ಸ್ ಮಾಡ್ತಾ ಇದ್ದಾರೆ. ಹಣ ಕೊಡಬೇಕು ಅಂತ ಹೇಳಿ ಬೆದರಿಕೆ ಹಾಕ್ತಾ ಇದ್ದಾರೆ. ಸರ್ಕಾರದ ಖಜಾನೆ ಖಾಲಿಯಾಗಿದೆ.ನಮ್ಮ ಜಿಟಿಪಿ ಬೆಳವಣಿಗೆ ಕಡಿಮೆ ಆಗಿದೆ, ಹಣದುಬ್ಬರ ಜಾಸ್ತಿಯಾಗಿದೆ. ಅಂಗನವಾಡಿಯಲ್ಲಿ ಕೆಲಸ ಮಾಡೋರಿಗೆ ಆಶಾ ಕಾರ್ಯಕರ್ತರಿಗೆ ೩ ಸಾವಿರ ಸಂಬಳ. ಅಡುಗೆ ಮಾಡೋರಿಗೆ ,ಬಿಸಿಯೂಟ ಮಾಡೋರಿಗೆ ಮೂರು ಸಾವಿರ ಸಂಬಳ. ಈ ಕಾಂಗ್ರೆಸ್ ಚೇಲಾಗಳಿಗೆ 25-40  ಸಾವಿರ ಸಂಬಳ. ಇವರು ಯಾರಾದರೂ ಅಂಗನವಾಡಿಯಲ್ಲಿ ಕೆಲಸ ಮಾಡ್ತಾರಾ. ಅಧಿಕಾರ ಕೊಟ್ಟವರು ಕೆಲಸ ಮಾಡ್ತಾರಾ. ಅದು ಸರ್ಕಾರದ ದುಡ್ಡು. ಅದರಿಂದ  ನಾವು ವಿರೋಧ ಮಾಡ್ತಾ ಇದ್ದೀವಿ. ಈಗಾಗಲೇ ಅಲ್ಲಿ  ಎಂಎಲ್ಎ ಇರ್ತಾರೆ. ಅವರೇ ನಿರ್ವಹಣೆ ಮಾಡಬಹುದು. ತಹಶಿಲ್ದಾರರ್ ಇರ್ತಾರೆ ಅವರಿಗೆ ಲಕ್ಷಾಂತರ ರೂಪಾಯಿ ಸಂಬಳ ಕೊಡ್ತಾರೆ.ತಹಶಿಲ್ದಾರ್ ,ಎಂಎಲ್ಎ,ಎಂಪಿ ಎಲ್ಲ ಇರ್ತಾರೆ. ಅವರ ಅಧಿಕಾರ ಮೊಟಕು ಮಾಡಿ. ಅವರಿಗೆ ಯೋಗ್ಯತೆ ಇಲ್ಲ ಅಂತ ಹೇಳ್ತಾ ಇದ್ದೀರಾ ನೀವು. ಎಂಎಲ್ಎ ಗಳಿಗೆ ಅವಮಾನ ಮಾಡುವ ರೀತಿ ಕಾಮಿಡಿ ಮಾಡಿ. ತೆರಿಗೆದಾರರಿಗೆ ಅವಮಾನ ಮಾಡಿದ್ದೀರಾ. ಇಂತಹ ಬರಗಾಲದಲ್ಲಿ ಸಾಲ ಮಾಡಿ ತುಪ್ಪ ತಿನ್ನಿ ಅಂತ ಹೇಳ್ತಾರೆ ಅಲ್ವಾ. ಕರ್ನಾಟಕ ಸರ್ಕಾರ ಸಾಲದಲ್ಲಿದೆ.ಅದರ ವಿರುದ್ಧ ಹೋರಾಟ ಮಾಡಿ ಧರಣಿ ಮಾಡ್ತಾ ಇದ್ದೀವಿ ಎಂದಿದ್ದಾರೆ.

ರನ್ಯಾ ಕೇಸ್ ನಲ್ಲಿ ತನಿಖಾಧಿಕಾರಿ ನೇಮಕ ವಿಚಾರದ ಬಗ್ಗೆ ಮಾತನಾಡಿದ ಅವರು ಇದು ಸರ್ಕಾರಕ್ಕೆ ನಿನ್ನೆ ಹೇಳಿದ್ದೀನಿ. ಪೊಲೀಸ್ ಜೀಪ್ ನಲ್ಲಿ ಕರೆದುಕೊಂಡು ಬರ್ತಾ ಇದ್ರು ಅಂತ. ಕಳ್ಳತನ ಮಾಡಿದ ಮೇಲೆ ಪೊಲೀಸ್ ಜೀಪ್ ನಲ್ಲಿ ಕರೆದುಕೊಂಡು ಬರ್ತಾ ಇದ್ರು ಅಂತೆ. ಸರ್ಕಾರನೇ ಇದರಲ್ಲಿ ಭಾಗಿಯಾಗಿದೆ ಅಂತ ನಮ್ಮ ನೇರ ಆಪಾದನೆ. ಅವರಿಗೆ ಪ್ರೋಟೋಕಾಲ್ ಹೇಗೆ ಕೊಟ್ರು. ಇದೆಲ್ಲ ತನಿಖೆ ಆಗಬೇಕು. ಪ್ರೋಟೋಕಾಲ್ ಮಿಸ್ ಯೂಸ್ ಆಗಿದೆ. ಸಿಬಿಐ ತನಿಖೆಗೆ ಹೋಗಿದೆ.ಯಾರು ಮಂತ್ರಿ ಇದ್ದಾರೆ ಅವರ ಮೇಲೆ ಕ್ರಮ ಆಗಲಿ ಎಂದು ಒತ್ತಾಯ. ಈಗಾಗಲೇ ಸಿಬಿಐ ತನಿಖೆಗೆ ನೀಡಲಾಗಿದೆ ಎಂದರು.

ರನ್ಯಾ ರಾವ್ ಪ್ರಕರಣದಲ್ಲಿ‌ ಸಚಿವರು ಹೆಸರು ವಿಚಾರದಲ್ಲಿ ಡಿಕೆ ಕ್ಲೀನ್ ಚಿಟ್ ನೀಡಿರುವ ವಿಚಾರದ ಬಗ್ಗೆ ಮಾತನಾಡಿದ ಅವರು ಡಿಕೆ ಶಿವಕುಮಾರ್ ಯಾರು? ತನಿಖಾ ಏಜೆನ್ಸಿ ಹೇಳಬೇಕು. ತನಿಖೆ‌ಗೂ ಮುನ್ನ ಇವರು ಹೇಳಿದ್ದರೆ ಹೇಗೆ?. ತನಿಖಾ ಸಂಸ್ಥೆ ಗೆ ಹೇಳ್ತಿದ್ದಾರಾ ಕ್ಲೀನ್‌ಚಿಟ್ ಕೋಡೋಕೆ?.ರಾಜ್ಯ ಸರ್ಕಾರ ತನಿಖೆ‌ ಮಾಡ್ತಿದೆ. ಆದ್ರೆ ಸರ್ಕಾರ ಕ್ಲೀನ್ ಚಿಟ್ ಕೊಡೋಕೆ‌ ಹೊದ್ರೆ ಇದ್ದರಲ್ಲಿ ಯಾವ ಭಯ ಇಲ್ಲ‌ ಅಂತ ಅರ್ಥ.ತನಿಖಾ ಆಯೋಗ ಕ್ಲೀನ್‌ ಚಿಟ್ ಕೊಡಬೇಕು. ಕ್ಲೀನ್‌ ಚಿಟ್ ಕೊಡಬೇಕು ಅಂತ ಡಿಸಿಎಂ ಹೇಳಿದಂತಿದೆ ಎಂದರು.

ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಗೆ ಆಯ್ಕೆಯಾಗಿರೋ ಕಾಂಗ್ರೆಸ್ ಕಾರ್ಯಕರ್ತರಿಗೆ ಸಂಬಳ ವಿಚಾರದ ಬಗ್ಗೆ ಮಾತನಾಡಿದ ಅವರು ಶಾಸಕರು ಹೋರಾಟ ಮಾಡ್ತಿದ್ದಾರೆ. ೧೫-೨೦ ಕೋಟಿ‌ ಹಣ ಲೂಟಿ ಮಾಡ್ತಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರಿಗೆ ಮಜಾ ಮಾಡೋಕೆ ಕೊಡ್ತಿದ್ದಾರೆ. ಯಾಕೆ ಶಾಸಕರು, ಪಿಡಿಓ,‌ ತಹಶೀಲ್ದಾರ ಇರಬೇಕು. ಕಾಂಗ್ರೆಸ್ ಕಚೇರಿಯಿಂದ. ಕೊಡಬೇಕಾದ ಹಣ ಸರ್ಕಾರದಿಂದ ನೀಡಲಾಗ್ತಿದೆ. ಈಗಾಗಲೇ ಸರ್ಕಾರ ಪಾಪರ್ ಆಗಿದೆ. ಬೆಲೆ ಏರಿಕೆ ಆಗ್ತಿದೆ,  ಟ್ಯಾಕ್ಸ್ ಹೆಚ್ಚಳ ಮಾಡಿದ್ದಾರೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.