ಉತ್ತರಕನ್ನಡ : ಸತತ 10 ಗಂಟೆ ಕಾರ್ಯಾಚರಣೆ ಬಳಿಕ ಕಾಳಿ ನದಿಯಲ್ಲಿ ಬಿದ್ದಿದ್ದ ಲಾರಿಯನ್ನು ದಡಕ್ಕೆ ತರುವಲ್ಲಿ ಐಆರ್ ಬಿ , ಜಿಲ್ಲಾಡಳಿತ ಹಾಗೂ ಮುಳುಗು ತಜ್ಞ ಈಶ್ವರ್ ಮಲ್ಪೆ ಅವರ ತಂಡ ಯಶಸ್ವಿಯಾಗಿದೆ.
ಇಂದು ಬೆಳಗ್ಗೆ ಬೆಳಿಗ್ಗೆ 10 ಗಂಟೆಯಿಂದ ನಿರಂತರ ಕಾರ್ಯಾಚರಣೆ ನಡೆಯಿತು.ಟೊಯಿಂಗ್ ಹಾಗೂ ಕ್ರೇನ್ ಗೆ ರೋಪ್ ಕಟ್ಟಿ ಕಾರ್ಯಾಚರಣೆ ನಡೆಯಿತು. ಆದರೆ ಎರಡು ಮೂರು ಬಾರಿ ರೋಪ್ ಕಟ್ ಆಗಿ ಕಾರ್ಯಾಚರಣೆ ತಡವಾಯಿತು. ಆಗಸ್ಟ್ 7 ರ ಮಧ್ಯ ರಾತ್ರಿ ಸೇತುವೆ ಕುಸಿದು ಕಾಳಿ ನದಿಗೆ ಲಾರಿ ಬಿದ್ದಿಚತ್ತುಯ ಐಆರ್ ಬಿ ಹಾಗೂ ಜಿಲ್ಲಾಡಳಿತ ಕಾರ್ಯಾಚರಣೆಯಿಂದ ಲಾರಿ ಮೇಲೆತ್ತುವ ಕಾರ್ಯ ಇಂದು ನಡೆಯಿತು.
ಇನ್ನು ಲಾರಿ ಎಳೆಯುವಾಗ ಒಂದು ರೋಪ ಕಟ್ ಆದ ಹಿನ್ನೆಲೆ ನದಿಗಿಳಿದು ಮೂರನೆ ರೋಪನ ಹುಕ್ ನ್ನು ಲಾರಿಗೆ ಹಾಕಿ ಬಂದಿದ್ದರು ಈಶ್ವರ ಮಲ್ಫೆ. ಬಳಿಕ ಕಾರ್ಯಾಚರಣೆ ಮುಂದುವರಿಸಲಾಯಿತು. ಇನ್ನು ಲಾರಿಯನ್ನು ಮೇಲೆತ್ತು ಕಾರ್ಯಾಚರಣೆಗಾಗಿ ಬೆಳಗ್ಗಿಯಿದ 10 ಬಾರಿ ಮುಳುಗುತಜ್ಞ ಈಶ್ವರ ಮಲ್ಫೆ ನದಿಗೆ ಇಳಿದಿದ್ದರು. ಸ್ಕೂಬಾ ಡೈವ್ ಮಾಡುವುದರ ಮೂಲಕ ಲಾರಿ ಎತ್ತಲು ಈಜು ತಜ್ಞ ಈಶ್ವರ ಮಲ್ಫೆ ತಂಡ ಸಹಕರಿಸಿತು.
ಲಾರಿಯನ್ನು ರೋಪ್ ನಿಂದ ಎಳೆಯುವಾಗ ಬಂಡೆಯೊಂದು ತಲೆನೋವಾಗಿ ಪರಿಣಮಿಸಿತು. ಲಾರಿ ಎಳೆಯುವ ಸಂದರ್ಭದಲ್ಲಿ ಲಾರಿ ಬಂಡೆಯೊಂದು ಅಡ್ಡ ಬಂದಿದೆ.ಕಾಳಿ ನದಿಯಲ್ಲಿನ ಬಂಡೆ ಲಾರಿಗೆ ಅಡ್ಡಲಾಗಿರುವ ಹಿನ್ನೆಲೆ ಲಾರಿ ಏಳೆಯುತ್ತಿರುವಾಗ ರೋಪ್ ಕಟ್ ಆಗಿದೆ. ಬಳಿಕ ಮೂರನೆ ರೋಪ್ ಕಟ್ಟಿ ಕಾರ್ಯಾಚರಣೆ ಮುಂದುವರೆಸಲಾಯಿತು. ಲಾರಿಯ ಹಿಂಭಾಗದಲ್ಲಿ ಮೂರನೇ ರೋಪ್ ಕಟ್ಟಿ ಕಾರ್ಯಾಚರಣೆ ಮಾಡಲಾಯಿತು. ಬಳಿಕ ಲಾರಿಯನ್ನ ಬಂಡೆಯಿಂದ ತಪ್ಪಿಸಿ ದಡದ ಕಡೆಗೆ ಎಳೆದು ತರಲು ಹರಸಾಹಸ ಪಡಬೇಕಾಯಿತು.
ಬಂಡೆ ಅಡ್ಡ ಬರದೆ ಇದ್ದಿದ್ರೆ ಲಾರಿ ಬೇಗನೆ ದಡ ಸೇರುತ್ತಿತ್ತು. ಆದರೆ ಕಾರ್ಯಾಚರಣೆಗೆ ಬಂಡೆ ದೊಡ್ಡ ಅಡ್ಡಿಯಾಗಿ ಪರಿಣಮಿಸಿತು. ಮೂರು ರೋಪ್ ಹಾಗೂ ಮೂರು ಟೋಯಿಂಗ್ ವಾಹನಗಳ ಮೂಲಕ ಬಂಡೆಯನ್ನು ದಡಕ್ಕೆ ಎಲೆದು ತರಲು ನಿರಂತರ ಕಾರ್ಯಾಚರಣೆ ನಡೆಸಲಾಯಿತು. ಕೊನೆಗೆ ನಿರಂತರ 10 ಗಂಟೆಗಳ ಕಾರ್ಯಾಚರಣೆ ಬಳಿಕ ಲಾರಿಯನ್ನು ಮೇಲಕ್ಕೆ ಎತ್ತಲಾಯಿತು. ಎರಡು ಕ್ರೇನ್, ಮೂರು ಟೊಯಿಂಗ್ ವೆಹಿಕಲ್ , ಈಶ್ವರ ಮಲ್ಫೆ ಈಜು ತಜ್ಞರ ತಂಡ, ಜಿಲ್ಲಾಡಳಿತದ ಅಧಿಕಾರಿಗಳು, ಸಿಬ್ಬಿಂದಿ ಸೇರಿದಂತೆ 100 ಕ್ಕೂ ಹೆಚ್ಚು ಜನರ ಪ್ರಯತ್ನದ ಫಲವಾಗಿ ಕೊನೆಗೆ ಲಾರಿ ದಡ ಸೇರಿತ್ತು.
ತಮಿಳುನಾಡು ಮೂಲದ ಸೆಂಥಿಲ್ ಓಡೆತನದ ಲಾರಿ ಆಗಸ್ಟ್ 7 ರಂದು ಕೋಡಿಭಾಗ್ ಸೇತುವೆಯಿಂದ ಕಾಳಿ ನದಿಗೆ ಬಿದ್ದಿತ್ತು.ಲಾರಿ ಚಾಲಕ ಮುರುಗನ್ ಪವಾಡಸದೃಶ ರೀತಿಯಲ್ಲಿ ಪಾರಾಗಿದ್ದರು. ಅಲ್ಲದೇ ಘಟನೆ ತೀವ್ರ ಶಾಕ್ ಗೆ ಒಳಗಾಗಿ ಮುರುಗನ್ ಆಸ್ಪತ್ರೆಗೆ ದಾಖಲಾಗಿದ್ದರು. ಬಳಿಕ ಚೇತರಿಸಿಕಕೊಂಡಿದ್ದರು. ನಿರಂತರವಾಗಿ ಮಳೆ ಬರುತ್ತಿದ್ದರಿಂದ ಕಾಳಿ ನದಿ ತುಂಬಿ ಹರಿದು ಲಾರಿಯ್ನು ಮೇಲೆತ್ತಲು ಸಾಧ್ಯವಾಗಿರಲಿಲ್ಲ. ಆದರೆ ಇಂದು ಮಳೆ ಕೊಂಚ ತಗ್ಗಿದ್ದರಿಂದ ಕಾರ್ಯಾಚರಣೆಗೆ ನಿರ್ಧರಿಸಿದ್ದಾರೆ. ಅದರಂತೆ ನಿರಂತರವಾಗಿ 10 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಕಾಳಿ ನದಿಯಲ್ಲಿ ಮುಳುಗಿದ್ದ ಲಾರಿಯನ್ನು ಮೇಲಕ್ಕೆ ಎತ್ತಲಾಯಿತು. ಲಾರಿ ಮೇಲೆ ಬರುತ್ತಲೇ ಲಾರಿ ಮಾಲೀಕ ಸೆಂಥಿಲ್ ನಿಟ್ಟುಸಿರು ಬಿಟ್ಟಿದ್ದಾರೆ.










