ಬಾರ್ಬಡೋಸ್ : ಬರೋಬ್ಬರಿ 17 ವರ್ಷಗಳ ಟೀಂ ಇಂಡಿಯಾ ಟಿ 20 ವಿಶ್ವಕಪ್ ಟ್ರೋಫಿಗೆ ಮುತ್ತಿಟ್ಟಿದೆ. ಹಲವು ಭಾವನಾತ್ಮಕ ಸನ್ನಿವೇಶಗಳಿಗೆ ಪಾತ್ರವಾದ ಈ ಪಂದ್ಯದಲ್ಲಿ ಟೀಂ ಇಂಡಿಯಾ ದಕ್ಷಿಣ ಆಫ್ರಿಕಾ ವಿರುದ್ಧ 7 ರನ್ ಗಳ ಜಯ ಸಾಧಿಸಿ ವಿಶ್ವಕಪ್ ಟ್ರೋಫಿಗೆ ಮುತ್ತಿಕ್ಕಿತು.ಆ ಮೂಲಕ ದಕ್ಷಿಣ ಆಫ್ರಿಕಾ ತೀವ್ರ ನಿರಾಸೆಯನ್ನು ಅನುಭವಿಸಿತು.
ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಭಾರತ ವಿರಾಟ್ ಕೊಹ್ಲಿ ಮತ್ತು ಅಕ್ಷರ್ ಪಟೇಲ್ ಅವರ ಆಟದ ಸಹಾಯದಿಂದ 7 ವಿಕೆಟ್ ನಷ್ಟಕ್ಕೆ 176 ರನ್ ಗಳಿಸಿದ್ರೆ, ಈ ಗುರಿಯನ್ನು ಬೆನ್ನತ್ತಿದ ಸೌತ್ ಆಫ್ರಿಕಾ ಆರಂಭಿಕ ಆಘಾತ ಅನುಭವಿಸಿತು. 4 ರನ್ ಗಳಿಸಿದ್ದ ರೀಜಾ ಹೆಂಡ್ರಿಕ್ಸ್ ರನ್ನು ಬುಮ್ರಾ ಕ್ಲೀನ್ ಬೌಲ್ಡ್ ಮಾಡಿದರೆ, 4 ರನ್ ಗಳಿಸಿದ್ದ ನಾಯಕ ಐಡೆನ್ ಮಾರ್ಕ್ರಾಮ್ ಅರ್ಷದೀಪ್ ಸಿಂಗ್ ಎಸೆತಕ್ಕೆ ಪೆವಿಲಿಯನ್ ಸೇರಿದ್ರು.
ಇನ್ನು ಅತ್ಯಂತ ತಾಳ್ಮೆಯ ಆಟವಾಡಿದಂತಹ ಕ್ವಿಂಟನ್ ಡಿ ಕಾಕ್ 31 ಎಸೆತಕ್ಕೆ 39 ರನ್ ಗಳಿಸಿ ಪೆವಿಲಿಯನ್ ನತ್ತ ಮುಖ ಮಾಡಿದ್ರು. ಅಕ್ಷರ್ ಪಟೇಲ್ ಬೌಲಿಂಗ್ ಗೆ 21 ಎಸೆತದಲ್ಲಿ 31 ರನ್ ಗಳಿಸಿದ್ದ ಟ್ರಿಸ್ಟಾನ್ ಸ್ಟಬ್ಸ್ ಔಟ್ ಆದರು. ಇನ್ನು 2 ಬೌಂಡರಿ ಮತ್ತು 5 ಸಿಕ್ಸರ್ ಸಿಡಿಸಿ ಹೆನ್ರಿಚ್ ಕ್ಲಾಸೆನ್ 27 ಎಸೆತಗಳಲ್ಲಿ 52 ರನ್ ಗಳಿಸಿ ಗಮನ ಸೆಳೆದರು. ಕೊನೆಗೆ ಹಾರ್ದಿಕ್ ಪಾಂಡ್ಯ ಬೌಲಿಂಗ್ ಬಲೆಗೆ ಬಿದ್ದು ಪೆವಿಲಿಯನ್ ಸೇರಿದ್ರು.
ದಕ್ಷಿಣ ಆಫ್ರಿಕಾಕ್ಕೆ ಕೊನೆಯ ಓವರ್ ನಲ್ಲಿ 16 ರನ್ ಬೇಕಾಗಿತ್ತು. ಆಗ ಡೇವಿಡ್ ಮಿಲ್ಲರ್ ಪಾಂಡ್ಯ ಎಸೆದ ಮೊದಲ ಎಸೆತವನ್ನು ಸಿಕ್ಸರ್ ನತ್ತ ಅಟ್ಟಿದ್ರು. ಆಗ ಬೌಂಡರಿ ಲೈನ್ ನಲ್ಲಿದ್ದ ಸೂರ್ಯ ಕುಮಾರ್ ಯಾದವ್ ಅತ್ಯಮೋಘ ಕ್ಯಾಚ್ ಭಾರತವನ್ನು ಗೆಲುವಿನತ್ತ ಕೊಂಡೊಯ್ಯುವಲ್ಲಿ ಪ್ರಮುಖ ಪತ್ರ ವಹಿಸಿತು.ಆ ಕ್ಯಾಚ್ ಅಭಿಮಾನಿಗಳಲ್ಲಿ ಮಿಂಚಿನ ಸಂಚಾರವನ್ನೇ ಮಾಡಿಸಿತ್ತು.
ಮಿಲ್ಲರ್ 21 ರನ್ ಗಳಿಸಿ ಪೆವಿಲಿಯನ್ ಗೆ ವಾಪಾಸ್ಸಾದರು. ರಬಾಡಾ ಎರಡನೇ ಎಸೆತದಲ್ಲಿ ಬೌಂಡರಿ ಸಿಡಿಸಿದರು. ಮೂರನೇ ಎಸೆತದಲ್ಲಿ ಒಂದು ರನ್ ಅಷ್ಟೇ ಬಂತು. ಕೊನೆಯ ಎರಡು ಎಸೆತಗಳಲ್ಲಿ 10 ರನ್ ಗಳ ಅವಶ್ಯಕತೆಯಿತ್ತು.ಆಗ ಪಾಂಡ್ಯ ಒಂದು ವೈಡ್ ಎಸೆದರು. ಆಗ ರಬಾಡಾ ಕ್ಯಾಚಿತ್ತು ನಿರ್ಗಮಿಸಬೇಕಾಯಿತು. ಕೊನೆಯ ಎಸೆತದಲ್ಲಿ ಒಂದು ರನ್ ಮಾತ್ರ ಬಂತು. ಕೊನೆಗೆ ಅಂತಿಮ ಕ್ಷಣದವರೆಗೂ ಹೋರಾಟ ನಡೆಸಿದ ಸೌತ್ ಆಫ್ರಿಕಾ 8 ವಿಕೆಟ್ ನಷ್ಟಕ್ಕೆ 169 ರನ್ ಗಳಿಸಿ ಟೀಂ ಇಂಡಿಯಾ ಎದುರು ಮಂಡಿಯೂರಿತು. ಕೊನೆಯ ಓವರ್ ನಲ್ಲಿ ರನ್ ಗಳಿಗೆ ಬ್ರೇಕ್ ಹಾಕಿದ ಪಾಂಡ್ಯ ಕೋಟ್ಯಂತರ ಅಭಿಮಾನಿಗಳ ಪಾಲಿಗೆ ರಿಯಲ್ ಅನ್ನಿಸಿಕೊಂಡ್ರು.
ಸ್ಕೋರ್ ವಿವಿರ ಇಂತಿದೆ
ಟೀಂ ಇಂಡಿಯಾ
ರೋಹಿತ್ ಶರ್ಮ ಸಿ ಕ್ಲಾಸೆನ್ ಬಿ ಮಹಾರಾಜ್ 9
ವಿರಾಟ್ ಕೊಹ್ಲಿ ಸಿ ರಬಾಡ ಬಿ ಜಾನ್ಸನ್ 76
ರಿಷಭ್ ಪಂತ್ ಸಿ ಡಿ ಕಾಕ್ ಬಿ ಮಹಾರಾಜ್ 0
ಸೂರ್ಯ ಕೆ. ಯಾದವ್ ಸಿ ಕ್ಲಾಸೆನ್ ಬಿ ರಬಾಡ 3
ಅಕ್ಷರ್ ಪಟೇಲ್ ರನೌಟ್ 47
ಶಿವಂ ದುಬೆ ಸಿ ಮಿಲ್ಲರ್ ಬಿ ನೋರ್ಜೆ 27
ಹಾರ್ದಿಕ್ ಪಾಂಡ್ಯ ಔಟಾಗದೆ 5
ರವೀಂದ್ರ ಜಡೇಜ ಸಿ ಮಹಾರಾಜ ಬಿ ನೋರ್ಜೆ 2
ಇತರ 7
ಒಟ್ಟು (20 ಓವರ್‌ಗಳಲ್ಲಿ 7 ವಿಕೆಟಿಗೆ) 176
ವಿಕೆಟ್ ಪತನ: 1-23, 2-23, 3-34, 4-106, 5-163, 6-174, 7-176
ಬೌಲಿಂಗ್: ಮಾರ್ಕೋ ಜಾನ್ಸನ್4-0-49-1
ಕೇಶವ ಮಹಾರಾಜ 3-0-23-2
ಕಾಗಿಸೊ ರಬಾಡ 4-0-36-1
ಐಡನ್ ಮಾರ್ಕ್‌ರಮ್ 2-0-16-0
ಆಯನ್ರಿಚ್ ನೋರ್ಜೆ 4-0-26-2
ಟಬ್ರೈಜ್ ಶಮಿ 3-0-26-0
ದಕ್ಷಿಣ ಆಫ್ರಿಕಾ
ರೀಝ ಹೆಂಡ್ರಿಕ್ಸ್ ಬಿ ಬುಮ್ರಾ 4
ಕ್ವಿಂಟನ್ ಡಿ ಕಾಕ್ ಸಿ ಯಾದವ್ ಬಿ ಅರ್ಷದೀಪ್ 39
ಐಡೆನ್ ಮಾರ್ಕ್‌ರಮ್ ಸಿ ಪಂತ್ ಬಿ ಅರ್ಷದೀಪ್ 4
ಟ್ರಿಸ್ಟನ್ ಸ್ಟಬ್ಸ್ ಬಿ ಪಟೇಲ್ 31
ಹೆನ್ರಿಚ್ ಕ್ಲಾಸೆನ್ ಸಿ ಪಂತ್ ಬಿ ಪಾಂಡ್ಯ 52
ಡೇವಿಡ್ ಮಿಲ್ಲರ್ ಸಿ ಯಾದವ್ ಬಿ ಪಾಂಡ್ಯ 21
ಮಾರ್ಕೊ ಜಾನ್ಸೆನ್ ಬಿ ಬುಮ್ರಾ 2
ಕೇಶವ ಮಹಾರಾಜ್ ಔಟಾಗದೆ 2
ಕಾಗಿಸೊ ರಬಾಡ ಸಿ ಯಾದವ್ ಬಿ ಪಾಂಡ್ಯ 4
ಆಯನ್ರಿಚ್ ನೋರ್ಜೆ ಔಟಾಗದೆ 1
ಇತರ: 9
ಒಟ್ಟು (20 ಓವರ್‌ಗಳಲ್ಲಿ 8 ವಿಕೆಟಿಗೆ) 169
ವಿಕೆಟ್ ಪತನ: 1-7, 2-12, 3-70, 4-106, 5-151, 6-156, 7-161, 8-168
ಬೌಲಿಂಗ್:ಅರ್ಷದೀಪ್ ಸಿಂಗ್ 4-0-202
ಜಸ್‌ಪ್ರೀತ್ ಬುಮ್ರಾ 4-0-18-1
ಅಕ್ಷರ್ ಪಟೇಲ್ 4-0-49-1
ಕುಲದೀಪ್ ಯಾದವ್ 4-0-45-0
ಹಾರ್ದಿಕ್ ಪಾಂಡ್ಯ 3-0-20-3
ರವೀಂದ್ರ ಜಡೇಜ 1-0-12-0
ಪಂದ್ಯಶ್ರೇಷ್ಠ: ವಿರಾಟ್ ಕೊಹ್ಲಿ
ಇನ್ನು ಒಂದು ಕಡೆ ಟೀಂ ಇಂಡಿಯಾ ಟ್ರೋಫಿ ಗೆದ್ದ ಸಂತೋಷದಲ್ಲಿದ್ರೆ ಮತ್ತೊಂದು ಕಡೆ ಹಲವು ಎಮೋಷನಲ್ ಕ್ಷಣಗಳಿಗೆ ಸಾಕ್ಷಿಯಾಯಿತು. ಟ್ರೋಫಿಗೆ ಮುತ್ತಿಕ್ಕುತ್ತಲೇ ವಿರಾಟ್ ಕೊಹ್ಲಿ ಅಂತರಾಷ್ಟ್ರೀಯ ಪಂದ್ಯಕ್ಕೆ ವಿದಾಯ ಘೋಷಿಸಿದರು. ಇತ್ತ ವಿಶ್ವಕಪ್ ಟೀಂ ಇಂಡಿಯಾದ ನಾಯಕರಾಗಿದ್ದ ರೋಹಿತ್ ಶರ್ಮಾ ಕೂಡ ನಿವೃತ್ತಿ ಘೋಷಿಸಿದರು. ಕೋಚ್ ಹುದ್ದೆಗೆ ಟೀಂ ಇಂಡಿಯಾ ವಾಲ್ ರಾಹುಲ್ ದ್ರಾವಿಡ್ ಕೂಡ ಟಾಟಾ ಹೇಳಿದ್ರು. ಹೀಗೆ ಖುಷಿ, ಅಳು, ನಗು ಎಲ್ಲಾ ಕ್ಷಣಗಳಿಗೆ ಈ ಪಂದ್ಯ ಸಾಕ್ಷಿಯಾಯಿತು.