ಮನೆ Latest News ರೈತರಿಗೆ ಹೆಚ್ಚುವರಿಯಾಗಿ ರಾಜ್ಯ ಸರ್ಕಾರದಿಂದ ಬೆಳೆಹಾನಿಯ ಪರಿಹಾರ

ರೈತರಿಗೆ ಹೆಚ್ಚುವರಿಯಾಗಿ ರಾಜ್ಯ ಸರ್ಕಾರದಿಂದ ಬೆಳೆಹಾನಿಯ ಪರಿಹಾರ

0

ಬೆಂಗಳೂರು: ರೈತರಿಗೆ ಹೆಚ್ಚುವರಿಯಾಗಿ ರಾಜ್ಯ ಸರ್ಕಾರದಿಂದ ಬೆಳೆಹಾನಿಯ ಪರಿಹಾರ ಬಿಡುಗಡೆ ಮಾಡಲಾಯಿತು. ರಾಜ್ಯದಲ್ಲಿ ಮುಂಗಾರು ಮಳೆಯಿಂದ ಬೆಳೆಹಾನಿಗೊಳಗಾದ ರೈತರಿಗೆ ಗೃಹ ಕಚೇರಿ ಕೃಷ್ಣ ದಲ್ಲಿ ಪರಿಹಾರ ಬಿಡುಗಡೆ ಮಾಡಲಾಯಿತು.

ಈ ವೇಳೆ ಮಾತನಾಡಿದ ಸಚಿವ ಕೃಷ್ಣಭೈರೇಗೌಡ ಸಂಪುಟದ ತೀರ್ಮಾನದಿಂದ ಪ್ರಾಥಮಿಕ ಸಮೀಕ್ಷೆ ಮಾಡಿದ್ವಿ. ಎಲ್ಲಾ ಇಲಾಖೆಗಳ ಸಹಕಾರದಿಂದ ಜಂಟಿ ಸಮೀಕ್ಷೆ ಮಾಡಿದ್ವಿ. ತಳಮಟ್ಟದಲ್ಲಿ ಅಂದಾಜು ಮಾಡಿದ್ದೇವೆ. ೧೦೧೮ ಕೋಟಿ ಈಗಾಗಲೇ ರೈತರಿಗೆ ಸಂದಾಯ ಆಗಿದೆ. ಆದ್ರೆ ರೈತರ ಬೇಡಿಕೆ ಹಾಗೂ ಜನಪ್ರತಿನಿಧಿಗಳು ಶಾಸಕರು ಮನವಿ ಮಾಡಿದ್ದರು. ಇನ್ನೂ ಹೆಚ್ಚುವರಿ ಪರಿಹಾರಕ್ಕೆ ಒತ್ತಾಯ ಮಾಡಿದರು. ಇದನ್ನ ಸಂಪುಟದಲ್ಲಿ ಚರ್ಚೆ ಮಾಡಿ ತೀರ್ಮಾನ ತೆಗೆದುಕೊಳ್ಳೋದಾಗಿ ಹೇಳಿದ್ದರು. ಹೆಕ್ಟೇರ್ ಗೆ ರೂ ೮೦೦೦ ಹೆಚ್ಚುವರಿ ಯಾಗಿ ಹಣ ನೀಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಈಗ ೧೦೩೩ ಕೋಟಿ ರೂಪಾಯಿ ಹೆಚ್ಚು ವರಿ ಹಣ ನೀಡುವ ಕಾರ್ಯಕ್ರಮ ಇದಾಗಿದೆ. ೧೪ ಲಕ್ಷ ಫಲಾನುಭವಿಗಳಿಗೆ ಇಂದು ಹೆಚ್ಚುವರಿ ಪರಿಹಾರ ಬಿಡುಗಡೆ ಯಾಗಲಿದೆ ಎಂದರು.

ಸಿಎಂ ಸಿದ್ದರಾಮಯ್ಯ ಮಾತನಾಡಿ ಈಗಾಗಲೇ ಕೃಷ್ಣ ಭೈರೇಗೌಡರು ಎಲ್ಲಾ ಹೇಳಿದ್ದಾರೆ ರಾಜ್ಯದಲ್ಲಿ ಅತೀವೃಷ್ಠಿ ಆಗಿದೆ. ೧೪ ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ.ಬೆಳೆ ಪರಿಹಾರ ನೀಡಬೇಕು ಎಂದು ರೈತರು ಆಗ್ರಹಿಸಿದರು. ಕಲಬುರಗಿ, ಬೀದರ್ ಯಾದಗಿರಿ ಗೆ ಹೋಗಿದ್ದೆ. ಅಲ್ಲಿ ಹೆಚ್ಚು ಬೆಳೆ ಹಾನಿಯಾಗಿದೆ ಅನ್ನೋದು ಗೊತ್ತಾಯ್ತು. ಮೆಕ್ಕೆಜೋಳ ಕಬ್ಬು ತೊಗರಿ ಬೆಳೆ ನಷ್ಟ ಆಗಿದೆ.ಒಳ್ಳೇ ಮಳೆಯಾದರೂ ಕೂಡ ನಷ್ಟ ಉಂಟಾಗಿತ್ತು. ಕೇಂದ್ರ ಸರ್ಕಾರಕ್ಕೂ ಮನವಿ ಮಾಡಿದ್ದೇವೆ. ಒಂದು ಟೀಮ್ ಕಳಿಸುತ್ತೇವೆ ಎಂದಿದ್ದಾರೆ, ಪರಿಹಾರ ನೀಡುವ ನಿರೀಕ್ಷೆ ಇದೆ. ಅದಕ್ಕೆ ಕಾಯೋದು ಬೇಡ ಎಂದು ರಾಜ್ಯ ಸರ್ಕಾರವೇ ಪರಿಹಾರ ನೀಡುತ್ತಿದೆ. ಇವತ್ತು ೧೦೩೩ ಕೋಟಿ ಹೆಚ್ಚು ವರಿ ಪರಿಹಾರ ನೀಡುತ್ತಿದ್ದೇವೆ.೧೪ ಸಾವಿರ ಹೆಕ್ಟೇರ್ ೧೦೩೩ ಕೋಟಿ ಸರ್ಕಾರದಿಂದ.ಎಸ್‌ಡಿಆರ್ ಎಫ್ ಫಂಡ್ ನಿಂದಲೂ ಹಣ ಬಿಡುಗಡೆ ಆಗಲಿದೆ ಎಂದು ತಿಳಿಸಿದರು

ಇದೇ ವೇಳೆ ಸಿಎಂ ಸಿದ್ದರಾಮಯ್ಯ ರೈತರಿಗೆ ಹೆಚ್ಚುವರಿಯಾಗಿ ರಾಜ್ಯ ಸರ್ಕಾರದಿಂದ ಬೆಳೆಹಾನಿಯ ಪರಿಹಾರ ಬಿಡುಗಡೆ ಮಾಡಿದರು. ರಾಜ್ಯದಲ್ಲಿ ಮುಂಗಾರು ಮಳೆಯಿಂದ ಬೆಳೆಹಾನಿಗೊಳಗಾದ ರೈತರಿಗೆ ಪರಿಹಾರ ನೀಡಲಾಯಿತು. ೧೦೩೩ ಕೋಟಿ ಹಣ ಹೆಚ್ಚು ಪರಿಹಾರ ಬಿಡುಗಡೆ ಮಾಡಲಾಯಿತು.