ಮನೆ Latest News ಜೈಲಿನಲ್ಲಿ ಡಿ ಬಾಸ್ ಅನ್ನು ಭೇಟಿಯಾದ ನಟ ಧನ್ವೀರ್

ಜೈಲಿನಲ್ಲಿ ಡಿ ಬಾಸ್ ಅನ್ನು ಭೇಟಿಯಾದ ನಟ ಧನ್ವೀರ್

0

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್ ಅವರನ್ನು ಇಂದು ನಟ ಧನ್ವೀರ್ ಭೇಟಿಯಾಗಿ ಮಾತುಕತೆ ನಡೆಸಿದರು.

ದರ್ಶನ್ ಅವರನ್ನು ಭೇಟಿಯಾದ ಬಳಿಕ ಮಾತನಾಡಿದ ಧನ್ವೀರ್ ಯಾರೂ ಕೂಡ ದರ್ಶನ್ ಅವರ ಬಗ್ಗೆ ಚಿಂತೆ ಮಾಡುವಂತಹ ಅವಶ್ಯಕತೆ ಇಲ್ಲ. ಜೈಲಿನಲ್ಲಿ ಅವರು ಮಾನಸಿಕವಾಗಿ ಕುಗ್ಗಿ ಹೋಗಿಲ್ಲ. ಅವರು ಜೋಶ್ ನಲ್ಲೇ ಇದ್ದಾರೆ ಅನ್ನೋ ಮೂಲಕ ಅಭಿಮಾನಿಗಳಿಗೆ ಧೈರ್ಯ ತುಂಬ ಕೆಲಸ ಮಾಡಿದ್ದಾರೆ.

ಡಿ ಬಾಸ್ ನ್ಯಾಯಾಂಗ ಬಂಧನದಲ್ಲಿರುವ ಕಾರಣ ಹೆಚ್ಚು ಮಾತನಾಡುತ್ತಿಲ್ಲ. ಅವರಿಗೆ ಕಾನೂನು , ಪೊಲೀಸರು ಮಾಡುತ್ತಿರುವ ಕೆಲಸದ ಬಗ್ಗೆ ಗೌರವವಿದೆ. ನಾನು ಇಲ್ಲಿ ಮಾತನಾಡೋದರಿಂದ ಪ್ರಾಬ್ಲಂ ಸಾಲ್ವ್ ಆಗಲ್ಲ ಎಂದು ಧನ್ವೀರ್ ಹೇಳಿದ್ದಾರೆ.ನಟ ದರ್ಶನ್ ತಪ್ಪು ಮಾಡಿದ್ದರೇ ಅವರಿಗೆ ಶಿಕ್ಷೆಯಾಗಲೀ, ಅವರು ಅದರ ಬಗ್ಗೆ ತಲೆ ಕೆಡಿಸಿಕೊಳ್ಳಲ್ಲ ಎಂದು ಧನ್ವೀರ್ ಹೇಳಿದ್ದಾರೆ.

ಇನ್ನು ದರ್ಶನ್ ಅವರ ಜೊತೆ ಮಾತನಾಡಿದ್ದನ್ನು ಎಲ್ಲವನ್ನೂ ನಾನು ಹೇಳೋದಕ್ಕೆ ಆಗಲ್ಲ. ಅಭಿಮಾನಿಗಳ ಬಗ್ಗೆ ಅವರಿಗೆ ಕಾಳಜಿ ಕಿಂಚಿತ್ತೂ ಕಮ್ಮಿಯಾಗಿಲ್ಲ. ಯಾರೂ ಧೈರ್ಯ ಕಳೆದುಕೊಳ್ಳುವ ಅವಶ್ಯಕತೆ ಇಲ್ಲ ಎಂದು ಧನ್ವೀರ್ ಹೇಳಿದ್ದಾರೆ.ಈಗಾಗಲೇ ದರ್ಶನ್ ಅವರನ್ನು ನಟ ವಿನೋದ್ ಪ್ರಭಾಕರ್, ಸ್ನೇಹಿತೆ ರಕ್ಷಿತಾ ಪ್ರೇಮ್, ನಿರ್ದೇಶಕ ಪ್ರೇಮ್ ಭೇಟಿಯಾಗಿ ಧೈರ್ಯ ತುಂಬಿದ್ದರು. ಇದೀಗ ಧನ್ವೀರ್ ಕೂಡ ದರ್ಶನ್ ಅವರನ್ನು ಭೇಟಿಯಾಗಿದ್ದಾರೆ. ಇನ್ನು ದರ್ಶನ್ ತಾಯಿ ಮೀನಾ ತೂಗುದೀಪ ಹಾಗೂ ಸಹೋದರ ದಿನಕರ್ ಅವರು ದರ್ಶನ್ ಅವರನ್ನು ಭೇಟಿಯಾದ ಸಂದರ್ಭ ದರ್ಶನ್ ಭಾವುಕರಾಗಿದ್ದರು. ತಾಯಿಯನ್ನು ತಬ್ಬಿಕೊಂಡು ಕಣ್ಣೀರು ಹಾಕಿದ್ದರು.

ಮೂರನೇ ಬಾರಿಗೆ ದರ್ಶನ್ ಅವರನ್ನು ಭೇಟಿಯಾದ ಪತ್ನಿ ವಿಜಯಲಕ್ಷ್ಮೀ

ಡಿ ಬಾಸ್ ದರ್ಶನ್ ಅವರನ್ನು 19 ದಿನಗಳಲ್ಲಿ ಅವರ ಪತ್ನಿ ಮೂರು ಬಾರಿ ಭೇಟಿಯಾಗಿದ್ದಾರೆ,. ಮೊದಲಿಗೆ ಪುತ್ರ ವಿನೀಶ್ ಹಾಗೂ ವಿಜಿ ಅವರು ದರ್ಶನ್ ಅವರನ್ನು ಭೇಟಿಯಾಗಿದ್ದರು. ಈ ವೇಳೆ ದರ್ಶನ್ ಪತ್ನಿ ಹಾಗೂ ಪುತ್ರನ ಮುಂದೆ ಕಣ್ಣೀರು ಹಾಕಿದ್ರು. ಅದಾದ ಮೇಲೆ ದರ್ಸನ್ ಪತ್ನಿ, ಪುತ್ರ, ತಾಯಿ ಮೀನಾ ತೂಗುದೀಪ, ತಮ್ಮ ದಿನಕರ್ ದರ್ಶನ್ ಅವರನ್ನು ಭೇಟಿ ಮಾಡಿದ್ದರು.

ಇದರ ಮಧ್ಯೆ ದರ್ಶನ್ ಅವರ ಆರೋಗ್ಯದಲ್ಲೂ ಏರುಪೇರಾಗಿದೆ. ಜೈಲೂಟ ಮಾಡಲು ಸಾಧ್ಯವಾಗುತ್ತಿಲ್ಲ. ಭೇದಿ ಕಾಣಿಸಿಕೊಂಡಿರೋದರಿಂದ ಮನೆಯೂಟ ಕೊಡುವಂತೆ ರಿಟ್ ಅರ್ಜಿಯನ್ನು ಹೈಕೋರ್ಟ್ ಗೆ ಸಲ್ಲಿಸಿದ್ದಾರೆ. ಪತಿಯ ಕಷ್ಟ ನೋಡಲು ಸಾಧ್ಯವಾಗದೇ ಇವತ್ತು ವಿಜಯಲಕ್ಷ್ಮೀ ಅವರು ಪತಿಗಾಗಿ ಜೈಲಿನ ಬಳಿ ಓಡೋಡಿ ಬಂದಿದ್ರು. ಅವರ ಜೊತೆ ಪುತ್ರ ವಿನೀಶ್ ಹಾಗೂ ದರ್ಶನ್ ಅಕ್ಕನ ಮಗ ಚಂದನ್ ಇದ್ದರು. ಪತಿಗಾಗಿ ವಿಜಯಲಕ್ಷ್ಮೀ ಬಟ್ಟೆ, ಬೆಡ್ ಶೀಟ್, ಹಣ್ಣು, ಸ್ನ್ಯಾಕ್ಸ್ ಹೊತ್ತು ತಂದಿದ್ದರು.ಆದರೆ ಚೆಕ್ ಪೋಸ್ಟ್ ನಲ್ಲಿ ಪೊಲೀಸ್ ಸಿಬ್ಬಂದಿ ಬಟ್ಟೆ ಹಾಗೂ ಹಣ್ಣುಗಳನ್ನು ಮಾತ್ಪರ ಕೊಂಡೊಯ್ಯಲು ಅಕಾಶ ನೀಡಿದ್ರು. ಹಾಗಾಗಿ ಅಷ್ಟನ್ನೇ ಕೊಡೊಯ್ದರು. ಇದರ ಮಧ್ಯೆ ಊಟದ ವಿರಾಮದ ಸಮಯದಲ್ಲಿ ವಿಜಯಲಕ್ಷ್ಮೀ ಅವರು ಜೈಲಿಗೆ ಹೋದದ್ದರಿಂದ ಅವರನ್ನು ಕೂಡಲೇ ಜೈಲಿನ ಒಳಗೆ ಬಿಡಲಿಲ್ಲ. ಊಟದ ಅವಧಿ ಮುಗಿದ ಬಳಿಕ ಒಳಗೆ ಕಳುಹಿಸಲಾಯಿತು. ಮೂರು ಜನ ಕೆಲ ಹೊತ್ತು ದರ್ಶನ್ ಅವರ ಜೊತೆ ಮಾತನಾಡಿ ವಾಪಾಸ್ ಬಂದಿದ್ದಾರೆ. ವಿಜಿ ಅವರು ದರ್ಶನ್ ಅವರಿಗೆ ಧೈರ್ಯ ಹೇಳಿ ವಾಪಾಸ್ಸಾಗಿದ್ದಾರೆ.