ಮನೆ Latest News ಬಾಗಲಕೋಟೆ ಕಲ್ಲು ತೂರಾಟ ಪ್ರಕರಣದಲ್ಲಿ ಯಾರು ತಪ್ಪು ಮಾಡಿದ್ದಾರೆ ಖಂಡಿತಾ ಕ್ರಮ ಆಗುತ್ತೆ; : ಸಚಿವ...

ಬಾಗಲಕೋಟೆ ಕಲ್ಲು ತೂರಾಟ ಪ್ರಕರಣದಲ್ಲಿ ಯಾರು ತಪ್ಪು ಮಾಡಿದ್ದಾರೆ ಖಂಡಿತಾ ಕ್ರಮ ಆಗುತ್ತೆ; : ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆ

0

ಬೆಂಗಳೂರು; ಬಾಗಲಕೋಟೆ ಕಲ್ಲು ತೂರಾಟ ಪ್ರಕರಣದಲ್ಲಿ ಯಾರು ತಪ್ಪು ಮಾಡಿದ್ದಾರೆ ಖಂಡಿತಾ ಕ್ರಮ ಆಗುತ್ತೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಈಗ ಕಲ್ಲು ತೂರಾಟ ಯಾರು ಮಾಡಿದ್ದಾರೆ ಅಂತಾ ಪ್ರಾಥಮಿಕ ತನಿಖೆಯಲ್ಲಿ  ಗೊತ್ತಾಗಿದೆ. ಯಾರಿಗೂ ನಿಯಮ ಬೇರೆ ಇರಲ್ಲ, ಕಾನೂನು, ಸಂವಿಧಾನ ಕರ್ನಾಟಕದಲ್ಲಿ ಎಲ್ಲರಿಗೂ ಒಂದೇ. ಯಾರು ಕಾನೂನನ್ನ ಕೈಗೆ ತೆಗೆದುಕೊಳ್ತಾರೆ ಅವರಿಗೆ ಶಿಕ್ಷೆ ಖಂಡಿತಾ ಆಗುತ್ತೆ. ಇದರಲ್ಲಿ ಯಾವುದೇ ಮುಲಾಜ್ ಇಲ್ಲ, ಬಿಜೆಪಿ ಅವರು ಏನೇ ಆರೋಪ ಮಾಡಲಿ. ಕಲ್ಲು ತೂರಾಟ ನನ್ನಿಂದ ಆಗಿದ್ದರೆ ನಾನು ಜೈಲಿನಲ್ಲಿ ಇರುತ್ತೇನೆ. ಎಲ್ಲದಕ್ಕೂ ಒಂದು ನಿಯಮ ಅಂತಿದೆ ಅದನ್ನ ಯಾರು ಮೀರಿ ಹೋಗಲಿಕ್ಕೆ ಸಾಧ್ಯವಿಲ್ಲ ಎಂದಿದ್ದಾರೆ.

ಡಿಸಿಎಂ‌ ಡಿಕೆಶಿ ಭೇಟಿ ವಿಚಾರದ ಬಗ್ಗೆ ಮಾತನಾಡಿದ ಅವರು  ಬಜೆಟ್ ಬರುತ್ತಿದೆ.. ನಾರಾಯಣ ಪುರ ಡ್ಯಾಂನಿಂದ ಒಂದು ಯೋಜನೆ ಬೇಕಾಗಿದೆ. ಇದು 1500-1600 ಕೋಟಿಯ ಯೋಜನೆ. ಮೊನ್ನೆ ಸಿಎಂ ಸಿದ್ದರಾಮಯ್ಯ ಅವರನ್ನ ಭೇಟಿಯಾಗಿ ಮನವಿ ಸಲ್ಲಿಕೆ ಮಾಡಿದ್ವಿ. ಇವತ್ತು ಡಿಸಿಎಂ ಡಿಕೆಶಿ ಅವರನ್ನ ಭೇಟಿ ಮಾಡಿ ಮನವಿ ಮಾಡಿದ್ದೇನೆ ಎಂದು ತಿಳಿಸಿದ್ದಾರೆ.

ಶಾಸಕರ ದೆಹಲಿ ಭೇಟಿ ವಿಚಾರದ ಬಗ್ಗೆ ಮಾತನಾಡಿದ ಅವರು ನಾನು ದೆಹಲಿಯಲ್ಲೇ ಇದ್ದೆ. ಆಗ ಏನು ವಿಶ್ಲೇಷಣೆ ಮಾಡಿದ್ರಿ?. ದೆಹಲಿಯಲ್ಲಿ ಅವರವರ ಇಲಾಖೆ ಕಾರ್ಯಕ್ಕೆ ಹೋಗಿದ್ದಾರೆ. ಶಾಸಕರು ಖಾಸಗೀ ಪ್ರವಾಸ ಹೋಗೋದು ಸಹಜ. ಯಾರು ಯಾರು ಹೋಗಿದ್ದಾರೆ ಏನಕ್ಕೆ‌ ಹೋಗಿದ್ದಾರೆ ನಂಗೆ ಗೊತ್ತಿಲ್ಲ ಎಂದ ಅವರು ಶಾಸಕರ ಫಾರಿನ್ ಟೂರ್ ವಿಚಾರದ ಬಗ್ಗೆ ಮಾತನಾಡಿ ಬಜೆಟ್ ಟೈಂನಲ್ಲಿ ಹೋದ್ರೆ ನೀವು ಆತಂಕ ಪಡಬೇಕು. ಬಜೆಟ್ ಇನ್ನೂ ಮಾರ್ಚ್ 6ರಂದು ಇದೆ. ಈಗ ಖಾಸಗಿ ಪ್ರವಾಸಕ್ಕೆ ಹೋಗಬಾರದು ಅಂದ್ರೆ ಹೇಗೆ?. ಅವರು ಸ್ನೇಹಿತರು, ಕುಟುಂಬದ ಜೊತೆ ಹೋಗಿದ್ದಾರೆ.ಇದರಲ್ಲಿ ರಾಜಕೀಯ ಹೇಗೆ ಬಂತು? ಎಂದಿದ್ದಾರೆ.

ಸ್ನೇಹಮಯಿ ಕೃಷ್ಣ ಬಂಧನ ವಿಚಾರದ ಬಗ್ಗೆ ಮಾತನಾಡಿದ ಅವರು ಸಾಕ್ಷಿ ಆಧಾರ ಇಲ್ಲದೇ ನಾವು ಏನಾದರೂ ಮಾಡಕ್ಕೆ ಆಗುತ್ತಾ?. ವೆರಿಫಿಕೇಶನಿಗೆ ಏನೆನೂ ಬೇಕೋ ಅದಕ್ಕೆ ಕ್ಲಾರಿಫಿಕೇಶನಿಗೆ ಕರೆಯೋದು ತಪ್ಪಾ?. ಇವರು ಹೇಳಿದ್ದೇ ಎಲ್ಲ ಸರಿನಾ?. ಮೂಡಾ ಹಗರಣದ ಬಗ್ಗೆ ಕೋರ್ಟ್ ಆದೇಶ ನೀಡಿದೆ ಅಲ್ವಾ?. ಅವರು ಮಾಧ್ಯಮದಲ್ಲಿ ಏನೆನೂ ಹೇಳ್ತಾರೆ ಅಲ್ವ. ಅದರ ಅಥೆಂಟಿಸಿಟಿ ಪ್ರೂ ಮಾಡಬೇಕು ಅಲ್ವಾ?.ಮಾಡಲಿ ಅದರಲ್ಲಿ ಏನಾದ್ರೂ ಲೋಪ ಇದ್ರೆ.We are ready to ಎಕ್ಸಾಮಿನೇಟ್. ಇದರಲ್ಲಿ ದ್ವೇಷ ಅಂದ್ರೆ ಹೇಗೆ? ಸಾಕ್ಷಿ ಆಧಾರದ ಮೇಲೆ ನಡೀತಿದೆ ಎಂದಿದ್ದಾರೆ.

ಸಿಎಂ ಸರಣಿ ಟ್ವೀಟ್ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ ಯಾಕೆ ಮಾಡಿದ್ದಾರೆ ಗೊತ್ತಿಲ್ಲ. ಸಹಿಸಿಕೊಳ್ಳಕ್ಕೆ ಆಗಲ್ಲ ಅಂದ್ರೆ ಅವರು ಇಷ್ಟೊಂದು ಬಜೆಟ್ ದಾಖಲೆ ಮಾಡ್ತಿದ್ರಾ?. ದೇವರಾಜ್ ಅರಸು ಅವರ ದಾಖಲೆ ಮುರಿದಿದ್ದಾರೆ. ಒಳ್ಳೆಯ ಆಡಳಿತ ನೀಡ್ತಿದ್ದಾರೆ, ಹಿಂದೆ ಹಲವು ಭಾಗ್ಯಗಳನ್ನ ನೀಡಿದ್ರು. ಈಗ ಗ್ಯಾರಂಟಿ ಯೋಜನೆಗಳನ್ನ ನೀಡಿದ್ದಾರೆ.

ಸಮಾಜದ ಕಟ್ಡಕಡೆಯ ವ್ಯಕ್ತಿಗೂ ಕೂಡ ಸಾಮಾಜಿಕ ಆರ್ಥಿಕ ಯೋಜನೆ ರೂಪಿಸಿದ್ದಾರೆ. ಇವೆಲ್ಲ ರೂಪಿಸಿರೋದು ಅವರ ಜೊತೆ ಎಲ್ಲರೂ ಇದ್ದಾರೆ ಅಂತಾ ಅಲ್ವಾ ಎಂದ ಅವರು ಸಿಎಂ ರಾಜಕೀಯ ಎದುರಾಳಿಗಳು ಯಾರು ಎಂಬ ವಿಚಾರದ ಬಗ್ಗೆ ಮಾತನಾಡಿ ಅವರ ಬದ್ದತೆಗೆ ಎದುರಾಳಿಗಳು ಯಾರು?.ಬಿಜೆಪಿ ಅವರು ಆರ್ ಎಸ್ ಎಸ್ ನವರು. ಅವರೇ ಓಪನ್ ಆಗಿ ಹೇಳಿದ್ದಾರೆ ಅಲ್ವಾ. ಬುದ್ದ ಬಸವ ಅಂಬೇಡ್ಕರ್ ಅವರ ತತ್ವಗಳನ್ನ ಪಾಲಿಸಿಕೊಂಡು ಬಂದವರು. ಆ ವಿಚಾರಕ್ಕೆ ವಿರೋಧ ಮಾಡಿದವ್ರೆ ಬಿಜೆಪಿ ಅವರು. ನಮ್ಮ ಪಕ್ಷದಲ್ಲಿ ಯಾರು ಕೂಡ ಸಿದ್ದರಾಮಯ್ಯ ಸಾಹೇಬರ ವಿರುದ್ದ ಇಲ್ಲ. ಎಲ್ಲರೂ ಕೂಡ ಅವರ ಅಭಿಮಾನಿಗಳೇ ಎಂದಿದ್ದಾರೆ.