ಬೆಂಗಳೂರು; ಸಿಎಸ್ ವಿರುದ್ಧ ಅವಾಚ್ಯ ಪದ ಬಳಕೆ ಬಗ್ಗೆ ಬಿಜೆಪಿ ಎಂಎಲ್ ಸಿ ರವಿಕುಮಾರ್ ವಿರುದ್ಧ ಸಭಾಪತಿ ಬಸವರಾಜ್ ಹೊರಟ್ಟಿಗೆ ಕಾಂಗ್ರೆಸ್ ದೂರು ನೀಡಿದೆ.ಮನೋಹರ್ ನೇತೃತ್ವದ ನಿಯೋಗದಿಂದ ದೂರು ನೀಡಿದೆ. ಎಂಎಲ್ ಸಿ ಸ್ಥಾನದಿಂದ ವಜಾಗೊಳಿಸುವಂತೆ ಸಭಾಪತಿ ಬಸವರಾಜ್ ಹೊರಟ್ಟಿಗೆ ನಿಯೋಗ ಮನವಿ ಮಾಡಿದೆ.
ಹೆಣ್ಣುಮಕ್ಕಳ ಬಗ್ಗೆ ಕೀಳಾಗಿ ಮಾತನಾಡಿದ್ದಾರೆ. ಅಸಂವಿಧಾನ ಪದ ಬಳಕೆ ಮಾಡಿದ್ದಾರೆ. ಹಿಂದೆ ಸಚಿವೆಯ ವಿರುದ್ಧವೂ ಇದೇ ರೀತಿ ಮಾಡಿದ್ರು.ಅಂಸವಿಧಾನಿಕ ಪದ ಬಳಸಿ ಅವಹೇಳನ ಮಾಡಿದ್ರು.ಹಾಗಾಗಿ ಎಂಎಲ್ ಸಿ ಸ್ಥಾನದಿಂದ ವಜಾಗೊಳಿಸಬೇಕು ಎಂದು ಮೇಲ್ಮನೆ ಸಭಾಪತಿಗೆ ಕಾಂಗ್ರೆಸ್ ದೂರು ನೀಡಿದೆ.
ಇನ್ನು ಈ ಬಗ್ಗೆ ವಿಧಾನಸೌಧದಲ್ಲಿ ಮಾತನಾಡಿದ ವಿಧಾನ ಪರಿಷತ್ ಸಭಾಪತಿ ಹೊರಟ್ಟಿ ಕಾಂಗ್ರೆಸ್ ನಿಂದ ನನಗೆ ದೂರು ಕೊಟ್ಟಿದ್ದಾರೆ. ರವಿಕುಮಾರ್ ಅವರು ಸಿಎಸ್ ಗೆ ಅಸಂಬದ್ಧ ಪದ ಬಳಕೆ ಮಾಡಿದ್ದಾರೆ.ಅವರ ಮೇಲೆ ಕ್ರಮಕ್ಕೆ ಮನವಿ ಮಾಡಿದ್ದಾರೆ. MLC ಸ್ಥಾನದಿಂದ ಅಮಾನತು ಮಾಡಬೇಕು ಅಂತ ಕೇಳಿದ್ದಾರೆ. ರವಿ ಕುಮಾರ್ ಗೆ ನಾನು ಪತ್ರ ಬರೆಯುತ್ತೇನೆ. ಹೀಗೆ ದೂರು ಬಂದಿದೆ.ನಿಮ್ಮ ಅಭಿಪ್ರಾಯ ಕೊಡಿ ಅಂತ ಕೇಳ್ತೀನಿ.ಅವರು ಅಭಿಪ್ರಾಯ ಕೊಟ್ಟ ಮೇಲೆ ಮುಂದಿನ ತೀರ್ಮಾನ ಮಾಡ್ತೀನಿ ಎಂದಿದ್ದಾರೆ.
ಕೆಪಿಸಿಸಿಯ ಮನೋಹರ್ ಅನ್ನೋರು ದೂರು ಕೊಟ್ಟಿದ್ದಾರೆ. ಈಗ ಕಾಂಗ್ರೆಸ್ MLC ಅವರು ದೂರು ಕೊಡೋದಾಗಿ ಹೇಳಿದ್ದಾರೆ. ಅವರಿಗೆ ಬನ್ನಿ ಅಂತ ಹೇಳಿದ್ದೇನೆ.ರವಿಕುಮಾರ್ ಗೆ ಪತ್ರ ಬರೆದಿದ್ದೇನೆ, ಅವರ ಉತ್ತರ ಬರಲಿ. ಅವರ ಸದಸ್ಯರ ರದ್ದು ಮಾಡೋ ಅಧಿಕಾರ ನನಗೆ ಇಲ್ಲ.ಕಾನೂನು ಅಭಿಪ್ರಾಯ ಪಡೆದು ಮುಂದಿನ ತೀರ್ಮಾನ ಮಾಡ್ತೀವಿ.ವಿಧಾನ ಪರಿಷತ್ ನಿಯಮದ ಪ್ರಕಾರ ಮುಂದಿನ ಕ್ರಮ ತೆಗೆದುಕೊಳ್ತೀವಿ. ಡಿಸಿಗೆ ಹೀಗೆ ಮಾತಾಡಿದಾಗ ನಾನೇ ರವಿಕುಮಾರ್ ಗೆ ಕ್ಷಮೆ ಕೇಳು ಅಂತ ಹೇಳಿದ್ದೆ. ಕೋರ್ಟ್ ನಲ್ಲಿ ಅದು ಹೋಗಿ ಅಮೇಲೆ ಮುಗೀತು.ಇದು ಹೊಸ ವಿಚಾರ. ಈ ಬಗ್ಗೆ ತಜ್ಞರ ಸಲಹೆ ಪಡೆದು ಮುಂದಿನ ತೀರ್ಮಾನ ಮಾಡ್ತೀವಿ. ರವಿ ಕುಮಾರ್ ಅಭಿಪ್ರಾಯ ಪಡೆಯದೇ ನಾನೇನು ಮಾಡಲು ಆಗೊಲ್ಲ.ನಿಯಮದ ಪ್ರಕಾರ ನಾನು ಕ್ರಮ ತೆಗೆದುಕೊಳ್ತೀನಿ.ಇದು ವಿಧಾನಸೌಧದ ಪರಿಮಿತಿಯಲ್ಲಿ ನಡೆದಿದೆ.ಅದಕ್ಕೆ ನಾನು ರವಿಕುಮಾರ್ ಗೆ ಪತ್ರ ಬರೆದಿದ್ದೇನೆ. ಪತ್ರಕ್ಕೆ ಅವರ ಅಭಿಪ್ರಾಯ ಬರಲಿ.ರಾಜ್ಯಸಭೆ ಸೆಕ್ರೆಟರಿ ಜನರಲ್ ಅವರ ಅಭಿಪ್ರಾಯ ಪಡೆಯುತ್ತೇನೆ ಎಂದು ಹೇಳಿದ್ದಾರೆ.
ಪೊಲೀಸ್ ಕೇಸ್ ಬಗ್ಗೆ ನನಗೆ ಗೊತ್ತಿಲ್ಲ.ಶಾಸಕರನ್ನ ಅರೆಸ್ಟ್ ಮಾಡಿದ್ರೆ ನಮಗೆ ಮಾಹಿತಿ ಕೊಡಬೇಕು ಅಷ್ಟೆ. ನಾವು ರವಿಕುಮಾರ್ ಅಭಿಪ್ರಾಯ ಪಡೆದು ನಿಯಮದ ಪ್ರಕಾರ ಕ್ರಮ ತೆಗೆದುಕೊಳ್ತೀನಿ.ನಾನು ಯಾವುದೇ ದುಡುಕಿನ ನಿರ್ಧಾರ ಮಾಡೋದಿಲ್ಲ. ಎಲ್ಲಾ ಕೂಲಂಕಷವಾಗಿ ಚರ್ಚೆ ಮಾಡಿ ತೀರ್ಮಾನ ಮಾಡ್ತೀನಿ. ಲಕ್ಷ್ಮೀ ಹೆಬ್ಬಾಳ್ಕರ್ ಕೇಸ್ ನಲ್ಲಿ ಎಥಿಕ್ಸ್ ಕಮಿಟಿಗೆ ಕೊಡಲಾಗಿದೆ. ಇನ್ನು ಅವರು ಯಾವುದೇ ವರದಿ ಈವರೆಗೂ ಕೊಟ್ಟಿಲ್ಲ ಎಂದು ತಿಳಿಸಿದ್ದಾರೆ.