ಬೆಂಗಳೂರು; ವಿಧಾನಸೌಧಕ್ಕೆ ಆಂಧ್ರಪ್ರದೇಶ ಡಿಸಿಎಂ ಪವನ್ ಕಲ್ಯಾಣ್ ನಿನ್ನೆ ಬೆಂಗಳೂರಿಗೆ ಭೇಟಿ ನೀಡಿದ್ರು. ವಿಧಾನಸೌಧದ ಮೂರನೇ ಮಹಡಿಯಲ್ಲಿ ಆನೆ ಹಾವಳಿ ತಡೆಗೆ ಸಂಬಂಧ ಪಟ್ಟಂತೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರ ಜೊತೆ ಸಭೆ ನಡೆಸಿದ್ರು. ಇನ್ನು ಪವರ್ ಸ್ಟಾರ್ ಬೆಂಗಳೂರಿಗೆ ಬಂದ ವೇಳೆ ಅವರ ಬೆಂಗಾವಲು ವಾಹನದಲ್ಲಿ ಹೆಬ್ಬಾವು ಕಾಣಿಸಿಕೊಂಡಿದೆ.
ವಿಧಾನಸೌಧದ ಮೂರನೇ ಮಹಡಿಯಲ್ಲಿ ಅರಣ್ಯ ಸಚಿವ ಈಶ್ವರ್ ಖಂಡ್ರೆ ಜೊತೆಗೆ ಪವನ್ ಕಲ್ಯಾಣ ಸಭೆ ನಡೆಸಿದ್ದರು. ಆನೆಗಳ ಸೆರೆ ಕಾರ್ಯಾಚರಣೆ, ಮತ್ತು ಪಳಗಿಸುವ ಕ್ರಮ, ಮಾವುತರಿಗೆ ತರಬೇತಿ ವಿಚಾರವಾಗಿ ಸಭೆ ನಡೆಸಿದ್ರು. ಈ ಸಭೆಯ ಬಳಿಕ ಅರಣ್ಯ ಇಲಾಖೆಗೆ ಪವನ್ ಕಲ್ಯಾಣ್ ಭೇಟಿ ನೀಡಿದ್ದರು. ಈ ವೇಳೆ ಪವನ್ ಕಲ್ಯಾಣ್ ಬೆಂಗಾವಲು ವಾಹನದಲ್ಲಿ ಹೆಬ್ಬಾವು ಕಾಣಿಸಿಕೊಂಡಿದೆ.ವಿಷಯ ತಿಳಿಯುತ್ತಿದ್ದಂತೆ ಹೆಬ್ಬಾವು ಹೊರ ತೆಗೆಯಲು ಅರಣ್ಯ ಇಲಾಖೆ ಸಿಬ್ಬಂದಿ ಹರಸಾಹಸ ಪಟ್ಟರು. ಬಳಿಕ ಹೆಬ್ಬಾವನ್ನು ಸೆರೆ ಹಿಡಿಯಲಾಯಿತು.
ಅರಣ್ಯ ಸಚಿವ ಈಶ್ವರ್ ಖಂಡ್ರೆ ಜೊತೆಗೆ ಆಂಧ್ರಪ್ರದೇಶದ ಡಿಸಿಎಂ ಪವನ್ ಕಲ್ಯಾಣ್ ಮಾತುಕತೆ
ಬೆಂಗಳೂರು; ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರನ್ನು ಆಂಧ್ರಪ್ರದೇಶದ ಡಿಸಿಎಂ ಪವನ್ ಕಲ್ಯಾಣ್ ಭೇಟಿಯಾಗಿ ಮಾತುಕತೆ ನಡೆಸಿದರು. ಅದಕ್ಕೂ ಮೊದಲು ಸಿಎಂ ಸಿದ್ದರಾಮಯ್ಯ ಅವರನ್ನು ಕಾವೇರಿ ನಿವಾಸದಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದರು.
ಇದಾದ ಬಳಿಕ ವಿಧಾನಸೌಧದ ಮೂರನೇ ಮಹಡಿಯಲ್ಲಿ ಆನೆ ಹಾವಳಿ ತಡೆಗೆ ಸಂಬಂಧ ಪಟ್ಟಂತೆ ಸಭೆ ನಡೆಯಿತು. ಸಭೆಯಲ್ಲಿ ಆನೆಗಳ ಸೆರೆ ಕಾರ್ಯಾಚರಣೆ, ಮತ್ತು ಪಳಗಿಸುವ ಕ್ರಮ, ಮಾವುತರಿಗೆ ತರಬೇತಿ ವಿಚಾರವಾಗಿ ಚರ್ಚೆ ಮಾಡಲಾಯಿತು.
ಇನ್ನು ವಿಧಾನಸೌಧಕ್ಕೆ ಪವನ್ ಕಲ್ಯಾಣ್ ಬರುತ್ತಿದ್ದಂತೆ ಅವರನ್ನು ನೋಡಲು ನೂಕು ನುಗ್ಗಲು ಉಂಟಾಯಿತು.ಕೆಲಸ ಕಾರ್ಯ ಬಿಟ್ಟು ವಿಧಾನಸೌಧ ಸಿಬ್ಬಂದಿ, ಅಧಿಕಾರಿಗಳು ಕಾರಿಡಾರ್ ಗೆ ಬಂದಿದ್ದರು. ಸಭೆಯಲ್ಲಿ ಅರಣ್ಯ ಸಚಿವ ಈಶ್ವರ್ ಖಂಡ್ರೆ, ಪವನ್ ಕಲ್ಯಾಣ್, ಹಿರಿಯ ಐಎಫ್ಎಸ್ ಅಧಿಕಾರಿಗಳು ಭಾಗಿಯಾಗಿದ್ದರು,. ಈ ವೇಳೆ ಸಚಿವ ಈಶ್ವರ್ ಖಂಡ್ರೆಗೆ ಶಾಲು ಹೊದಿಸಿ ಪವನ್ ಕಲ್ಯಾಣ್ ಸನ್ಮಾನಿಸಿದ್ರು.
ಸಭೆ ಬಳಿಕ ಪವನ್ ಕಲ್ಯಾಣ್ ಹಾಗೂ ಈಶ್ವರ್ ಖಂಡ್ರೆ ಜಂಟಿ ಸುದ್ದಿಗೋಷ್ಟಿ ನಡೆಸಿದ್ರು.ಈ ವೇಳೆ ಮಾತನಾಡಿದ ಈಶ್ವರ್ ಖಂಡ್ರೆ ಕರ್ನಾಟಕದ ಪರವಾಗಿ ಪವನ್ ಕಲ್ಯಾಣ್ ಗೆ ಸ್ವಾಗತ ಕೋರುತ್ತೇನೆ.ಆಂಧ್ರಪ್ರದೇಶದ ಉಪ ಮುಖ್ಯ ಮಂತ್ರಿ ನಮ್ಮ ರಾಜ್ಯಕ್ಕೆ ಭೇಟಿ ಕೊಡ್ತಾ ಇದ್ದಾರೆ.ಇದು ಆಂಧ್ರಪ್ರದೇಶ ಹಾಗೂ ಕರ್ನಾಟಕದ ಮಟ್ಟಿಗೆ ಅತ್ಯಂತ ಮಹತ್ವದ ಭೇಟಿ ಎಂದರು.ಕರ್ನಾಟಕದ ರೀತಿಯಲ್ಲೇ ಆಂಧ್ರಪ್ರದೇಶದ ದಲ್ಲೂ ಶ್ರೀಮಂತ ಅರಣ್ಯವಿದೆ.ಅಲ್ಲಿಯೂ ವನ್ಯಜೀವಿ ಸಂಪತ್ತು ಹೇರಳವಾಗಿದೆ.ನಮ್ಮಲ್ಲಿ ಶ್ರೀಗಂಧ ಇದ್ದಹಾಗೇ ಅಲ್ಲಿ ರಕ್ತ ಚಂದನ ಇದೆ. ರಕ್ತಚಂದನ ಸಂರಕ್ಷಣೆ ಉತ್ತಮವಾಗಿ ಆಂಧ್ರದಲ್ಲಿ ಮಾಡಲಾಗುತ್ತಿದೆ.ಮಾನವ ಪ್ರಾಣಿ ಸಂಘರ್ಷ ದಿನೇ ದಿನೇ ಜಾಸ್ತಿ ಆಗುತ್ತಿದೆ.ಹುಲಿ ಆನೆ ಚಿರತೆ ಅರಣ್ಯದಿಂದ ಹೊರಗೆ ಬಂದು ಜೀವ ಹಾನಿಗಳಾಗುತ್ತಿದೆ.ಜೀವ ಉಳಿಸುವುದು ನಮ್ಮೆಲ್ಲರ ಅದ್ಯ ಕರ್ತವ್ಯ.ನಮ್ಮ ರಾಜ್ಯದಲ್ಲಿಯೇ 30-35 ಜನ ಆನೆ ತುಳಿತಕ್ಕೆ ಒಳಗಾಗುತ್ತಿದ್ದಾರೆ.6035 ಆನೆಗಳು ನಮ್ಮಲ್ಲಿ ಇವೆ.563 ಹುಲಿಗಳು ರಾಜ್ಯದಲ್ಲಿದ್ದು ದೇಶದಲ್ಲಿ ಎರಡನೇ ಸ್ಥಾನದಲ್ಲಿ ಇದ್ದೇವೆ.ಆನೆಗಳಿಗೆ ಪಳಗಿಸುವುದರಲ್ಲಿ ಕರ್ನಾಟಕ ಪರಿಣಿತ ಹೊಂದಿದೆ.ಪವನ್ ಕಲ್ಯಾಣರವು ಮಾನವ ಆನೆ ಸಂಘರ್ಷ ತಡೆಯಲು ಕರ್ನಾಟಕದ ಸಹಕಾರ ಕೇಳಿದ್ದಾರೆ. ಇಕೋ ಟೂರಿಸಂನಲ್ಲೂ ಸಹಕಾರ ಕೋರಿದ್ದಾರೆ.ಅರಣ್ಯ ಒತ್ತುವರಿ ತಡೆಯಲು ಉಪಗ್ರಹ ಆಧಾರಿತ ವೈಜ್ಞಾನಿಕ ಪದ್ದತಿ ಬಳಸುತ್ತೇವೆ.ಆನೆಗಳ ವರ್ಗಾವಣೆಗೆ ಸಂಬಂಧಿಸಿ ಚರ್ಚೆಗಳಾಗಿವೆ ಎಂದರು.
ಇದೇ ವೇಳೆ ಮಾತನಾಡಿ ಅವರು ಅರಣ್ಯ ಸಂರಕ್ಷಣೆ ಜೊತೆಗೆ ಜೀವಜೀವನೋಪಾಯ ನಡೆಯಬೇಕು.ಆಂಧ್ರದ ಜಿತೆಗೆ ಎಂಓಯು ಮಾಡಿಕೊಳ್ಳುತ್ತಿದ್ದೇವೆ.ತಿಳುವಳಿಕೆ ಒಪ್ಪಂದ ಮಾಡಿಕೊಳ್ಳುತ್ತಿದ್ದೇವೆ.ಎರಡು ರಾಜ್ಯಗಳ ಅರಣ್ಯ ಇಲಾಖೆ ನಡುವೆ ಒಪ್ಪಂದ ಮಾಡಿಕೊಳ್ಳುತ್ತಿದ್ದೇವೆ.ಆನೆ ಸೆರೆ ಕಾರ್ಯಾಚರಣೆಗೆ SOP ಮಾಡಿದ್ದೇವೆ.ಆನೆ ಮಾನವ ಸಂಘರ್ಷ ನಿಯಂತ್ರಣ ಮಾಡಲು ಕಾರ್ಯಾಗಾರ ಮಾಡುತ್ತಿದ್ದೇವೆ. 8 ಕುಮ್ಕಿ ಆನೆಗಳನ್ನು ಆಂಧ್ರಪ್ರದೇಶಕ್ಕೆ ಕಳುಹಿಸಲು ಮನವಿ ಮಾಡಿದ್ದಾರೆ.ಉತ್ತರ ಪ್ರದೇಶ ಛತ್ತೀಸ್ಗಢ ಮಹಾರಾಷ್ಟ್ರ ಕ್ಕೂ ನಾವು ಹಿಂದೆ ಕುಮ್ಕಿ ಆನೆಗಳನ್ನು ವರ್ಗಾವಣೆ ಮಾಡಿದ್ದೆವೆ.ಸೆಮಿ ಟ್ರೇನ್ಡ್ 103 ಕುಮ್ಕಿ ಆನೆಗಳು ನಮ್ಮಲ್ಲಿವೆ.ತಕ್ಷಣಕ್ಕೆ ಆನೆಗಳನ್ನು ಕಳಿಸುವುದಿಲ್ಲ.ಮೊದಲು ಮಾವುತರಿಗೆ ಕಾವಾಡಿಗರಿಗೆ ತರಬೇತಿ ನೀಡಿ ಎಂದು ಹೇಳಿದ್ದೇವೆ ಎಂದರು.
ಇನ್ನು ಪವನ್ ಕಲ್ಯಾಣ್ ಮಾತನಾಡಿ ಕುವೆಂಪು ಅವರ ಬಗ್ಗೆ ನಾನು ಓದಿಕೊಂಡೆ.ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪ ಅವರ ಪುಸ್ತಕಗಳ ಬಗ್ಗೆ ಬಹಳ ಗೌರವ ಇದೆ. ಕನ್ನಡ ಭಾಷೆ ಕಲಿಬೇಕು ಎಂಬ ಉತ್ಸಾಹ ಹೆಚ್ಚಾಯ್ತು.ಕರ್ನಾಟಕದ ಜನರ ಪ್ರೀತಿಗೆ ಪಾತ್ರನಾಗಬೇಕು ಎಂದು ಬಯಸುತ್ತೇನೆ.ಕನ್ನಡ ಕಲಿಬೇಕು, ಕನ್ನಡದಲ್ಲೇ ಮುಂದೆ ಮಾತನಾಡಬೇಕು ಎಂದು ನಿರ್ಧಾರ ಮಾಡಿದ್ದೇನೆ.ಕನ್ನಡಿಗರು ಕೂಡ ನನಗೆ ಸಿನಿಮಾ ನಟನಾಗಿ ಬಹಳ ಪ್ರೀತಿ ನೀಡಿದ್ದಾರೆ.ರಾಜಕುಮಾರ್ ಅವರ ಗಂಧದಗುಡಿ ಸಿನಿಮಾ ಮೂಲತಃ ಇರುವುದೇ ಅರಣ್ಯ ಸಂರಕ್ಷಣೆ ಬಗ್ಗೆ.ವಸುದೈವ ಕುಟುಂಬಕಂ ಎಂಬಹಾಗೇ ನಾವು ನಮ್ಮ ಭೂಮಿ ತಾಯಿಯನ್ನು ರಕ್ಷಣೆ ಮಾಡಬೇಕಿದೆ. ನಾನು ಡಿಸಿಎಂ ಎನ್ನುವುದಕ್ಕಿಂತ ಹೆಚ್ಚು ಪರಿಸರ ಸಂರಕ್ಷಣೆ ಬಗ್ಗೆ ಹೆಚ್ಚು ಗಮನ ಹರಿಸುತ್ತೇನೆ ಎಂದರು.
ಏಳು ವಿಷಯಗಳ ಮೇಲೆ ಚರ್ಚೆ ಮಾಡಿದ್ದೇವೆ.ಎಂಓಯು ಸಹಿ ಹಾಕುವ ಸಂದರ್ಭದಲ್ಲಿ ನಾನು ಸಾಧ್ಯವಾದರೆ ಹಾಜರಿ ಇರುತ್ತೇನೆ.ರಕ್ತ ಚಂದನ ಸಂರಕ್ಷಣೆ ಗೆ ಸಂಬಂಧಿಸಿ ನಾನು ಸುದ್ದಿ ನೋಡಿದೆ.140 ಕೋಟಿ ಮೌಲ್ಯದ ರಕ್ತ ಚಂದನ ಕರ್ನಾಟಕದಲ್ಲಿ ಸಂರಕ್ಷಣೆ ಮಾಡಲಾಗಿತ್ತು.ಶ್ರೀಶೈಲಂ ಹಾಗೂ ತಿರುಮಲದಲ್ಲಿ ಜಮೀನು ಹಸ್ತಾಂತರಕ್ಕೆ ಸಂಬಂಧಿಸಿ ನಾನು ಸಿಎಂ ಜೊತೆಗೆ ಚರ್ಚೆ ಮಾಡುತ್ತೇನೆ.ಸಿದ್ದರಾಮಯ್ಯ ಭೇಟಿ ಕೂಡ ಮಾಡಿ ಬಂದಿದ್ದೇನೆ ಎಂದರು.
ಸಭೆ ಬಳಿಕ ಪವನ್ ಕಲ್ಯಾಣ್ ತೆರಳುವ ವೇಳೆ ನೂಕು ನುಗ್ಗಲು ಉಂಟಾಗಿತ್ತು. ಅಭಿಮಾನಿಗಳ ನೂಕಾಟ ತಳ್ಳಾಟಕ್ಕೆ ಸಿಎಸ್ ಕಚೇರಿ ಗ್ಲಾಸ್ ಕೂಡ ಒಡೆದು ಗದ್ದಲ ಉಂಟಾಗಿತ್ತು.ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ರು.