ಮನೆ Latest News ರಾಜ್ಯ ಒಕ್ಕಲಿಗರ ಸಂಘದಿಂದ ಅಭಿನಂದನಾ ಸಮಾರಂಭದಲ್ಲಿ ಭಾಗಿಯಾದ ಹೆಚ್ ಡಿ ಕುಮಾರಸ್ವಾಮಿ, ಆರ್ ಅಶೋಕ್

ರಾಜ್ಯ ಒಕ್ಕಲಿಗರ ಸಂಘದಿಂದ ಅಭಿನಂದನಾ ಸಮಾರಂಭದಲ್ಲಿ ಭಾಗಿಯಾದ ಹೆಚ್ ಡಿ ಕುಮಾರಸ್ವಾಮಿ, ಆರ್ ಅಶೋಕ್

0

 

ಬೆಂಗಳೂರು; ರಾಜ್ಯ ಒಕ್ಕಲಿಗರ ಸಂಘದಿಂದ ಕಿಮ್ಸ್ ವೈದ್ಯಕೀಯ ವಿವಿಗೆ ೧೦೦ ಯುಜಿ ಹಾಗೂ ೬೮ ಪಿಜಿ ಹೆಚ್ಚುವರಿ ಸೀಟುಗಳು ಮಂಜೂರಾಗಲು ಸಹಕರಿಸಿದ ಗಣ್ಯರಿಗೆ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ಒಕ್ಕಲಿಗರ ಸಂಘದ ಕುವೆಂಪು ಸಭಾಂಗಣದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಸಮಾರಂಭದಲ್ಲಿ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ, ವಿಪಕ್ಷ ನಾಯಕ ಆರ್ ಅಶೋಕ್, ನಂಜಾವದೂತ ಶ್ರೀಗಳು ಭಾಗಿಯಾಗಿದ್ದರು.

ಇನ್ನು ಕುಮಾರಸ್ವಾಮಿ  ಒಕ್ಕಲಿಗರ ಸಮಾರಂಭಕ್ಕೆ ಆಗಮಿಸುತ್ತಿದ್ದಂತೆ ಅಭಿಮಾನಿಗಳು ಮುಂದಿನ ಸಿಎಂ ‌ಕುಮಾರಸ್ವಾಮಿ ಎಂದು ಘೋಷಣೆ ಕೂಗಿದ್ರು. ಇನ್ನು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಆರ್ ಅಶೋಕ್  ಒಕ್ಕಲಿಗರ ಎಲ್ಲಾ ರೀತಿಯ ಕಾಲೇಜು ಗಳು ಸಮಾಜಮುಖಿ ಪರ ಕೆಲಸ ಮಾಡೋ ಸಂಸ್ಥೆ ಗಳು. ಸಂಘಕ್ಕೆ ಆರಾರು ತಿಂಗಳಲ್ಲಿ ಚುನಾವಣೆ ಬೇಕಾ ಎಂದು ಕುಮಾರಸ್ವಾಮಿ ಅವ್ರು ಕೇಳುತ್ತಿದ್ದರು. ಅನ್ನ ಮತ್ತು ಆರೋಗ್ಯ ರಂಗ ಎರಡೂ ಒಂದೊಕ್ಕೊಂದು ಬಿಟ್ಟು ಇರೋಕೆ ಆಗಲ್ಲ. ಕೋವಿಡ್ ವೇಳೆಯೂ ನಾನೇ ಇಲ್ಲಿಗೆ ಬಂದಿದ್ದೆ. ರೆವಿನ್ಯೂ ಮಿನಿಸ್ಟರ್ ಆಗಿದ್ದೆ, ಕೋವಿಡ್ ವೇಳೆ ಡಾಕ್ಟರ್ ಕಾಣ್ತಿರಲಿಲ್ಲ. ಎರಡನೇ ವೇವ್ಹ್ ನಲ್ಲಿ ಕೆಲಸ ಮಾಡಿದವರಿಗೆ ಧನ್ಯವಾದ‌ ಹೇಳುತ್ತೇನೆ. ಇವತ್ತು ಫೀಸ್ ಹೆಚ್ಚು ಮಾಡಿದ್ದಾರೆ, ಒಂದೇ ಸ್ಟಂಟ್ ಗೆ ಮೂರೂವರೆ ಲಕ್ಷ ಫೀಸ್ ಆಗಿದೆ. ಫೀಸ್ ಹೆಚ್ಚು ಮಾಡಿದೆ ಸರ್ಕಾರ. ಎಕ್ಸ್ ರೇ, ರಕ್ತ ಪರೀಕ್ಷೆ ಸೇರಿ ಎಲ್ಲಾ ಫೀಸ್ ಹೆಚ್ಚು ಮಾಡಿದ್ದಾರೆ. ಸರ್ಕಾರ ಇದರ ಕುರಿತು ಗಮನ ಹರಿಸಬೇಕಾಗಿದೆ. ಆರೋಗ್ಯ ಕ್ಷೇತ್ರ ಇನ್ನೂ ಸರಳ ಮಾಡಬೇಕು. ಅಂದಾಗ ಮಾತ್ರ ಸರ್ಕಾರದ ಮೇಲೆ ಜನರಿಗೆ ವಿಶ್ವಾಸ ಬರುತ್ತದೆ ಎಂದ್ರು. ಅಲ್ಲದೇ : ಸೀಟು ತರೋಕೆ ಕಾರಣನೇ ಕುಮಾರಣ್ಣ. ನಡ್ಡಾ ಅವರ ಬಳಿ ಕುಮಾರಸ್ವಾಮಿ ಮನವಿ ಮಾಡಿ ಸೀಟು ಹೆಚ್ಚಿಗೆ ತಂದಿದ್ದಾರೆ. ಅವರಿಗೆ ಧನ್ಯವಾದ ಹೇಳುತ್ತೇನೆ ಎಂದರು.

ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಮಾತನಾಡಿ ಇತ್ತೀಚಿನ ದಿನಗಳಲ್ಲಿ ಒಕ್ಕಲಿಗರ ಸಂಘದ ಮೆಡಿಕಲ್ ಕಾಲೇಜಿನ ಚಟುವಟಿಕೆಗಳಿಗೆ ಶಕ್ತಿ ತುಂಬು ಕೆಲಸ ಆಗಿದೆ. ಯುಜಿ ಮತ್ತು ಪಿಜಿ ಹೆಚ್ಚುವರಿ ಸೀಟುಗಳನ್ನ ನಡ್ಡಾ ಅವರ ಮೂಲಕ ಸಿಕ್ಕಿದೆ..ಅವರಿಂದ ಕಾಣಿಕೆ ಸಿಕ್ಕಿದೆ. ಸಂಘದಲ್ಲಿ ಉತ್ತಮ ಕೆಲಸ ಮಾಡಿದ್ದಾರೆ. ಕಳೆದ ೧೮ ತಿಂಗಳಲ್ಲಿ ಸಂಘ ಬೆಳವಣಿಗೆ ಕಂಡಿದೆ. ಇಲ್ಲಿಗೆ ಬರದೇ ಇರುವವರಿಗೆ ಮನವಿ ಮಾಡುತ್ತೇವೆ. ಹಿರಿಯರಿಗೆ ಗೌರವ ಸಲ್ಲಿಸಬೇಕೆ ಎಂದು ಇದ್ರೆ ಸಂಘದ ಬಗ್ಗೆ ಸಣ್ಣ ತನದಲ್ಲಿ ಮಾತಾಡುತ್ತಾರೆ ಅನ್ನೋದನ್ನ ನೋವಿನಿಂದ ಹೇಳುತ್ತೇನೆ. ಸಂಘ ಬೆಳೆದಿದೆ, ಇದ್ರಿಂದ ಸಮಾಜದಲ್ಲಿ ಉತ್ತಮ ಕೆಲಸ ಮಾಡುತ್ತೇವೆ, ಆದ್ರೆ ಇನ್ನೂ ಕೆಲವರು ಸಮಾಜದಲ್ಲಿ ಇದ್ದುಕೊಂಡು ಬೇರೆ ಕೆಲಸ ಮಾಡುತ್ತಾರೆ. ಒಕ್ಕಲಿಗ ಸಮಾಜದ ಹಿನ್ನಲೆ ಒಬ್ಬೊರೇ ಬದುಕಬೇಕು ಎಂಬ ಸಮಾಜ ಅಲ್ಲ, ಎಲ್ಲರೂ ಬದುಕಬೇಕು ಎಂಬ ಸಮಾಜ ಇದು. ಕಿದ್ವಾಯಿಯಲ್ಲಿ ಅತ್ಯಂತ ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ ನೀಡುವ ಕೆಲಸ ಮಾಡಿಸಬೇಕು ಎಂದು ಇದ್ದೇನೆ. ಈಗಿನ ರಾಜ್ಯ ಸರ್ಕಾರದಲ್ಲಿ ಸರ್ಕಾರಿ ಆಸ್ಪತ್ರೆ ಮೇಲೆ ಬಡ ರೋಗಿಗಳ ಮೇಲೆ ಎಂದ್ರು.

ನಮ್ಮ ಬಗ್ಗೆ ಕೆಲವರು ಲಘುವಾಗಿಯೂ ಮಾತನಾಡುತ್ತಾರೆ. ನಾವು ಸಂಘದಿಂದ ಯಾವುದೇ ಲಾಭ ಪಡೆದುಕೊಂಡಿಲ್ಲ. ದೇವೇಗೌಡರು, ನಾನು ಸಂಘವನ್ನು ದುರುಪಯೋಗಪಡಿಸಿಕೊಂಡಿಲ್ಲ. ವಿದೇಶಕ್ಕೆ ಹೋಗಿ ಗುಂಪು ಕಟ್ಟಿಕೊಂಡು ಏನು ಸಾಧಿಸುತ್ತೀರಿ. ಒಂದು ಬಾರಿ ಚುನಾವಣೆ ಆದಮೇಲೆ ಸಂಘದಲ್ಲಿ ಒಡಕು ಯಾಕೆ ?. ನಾನು ಅಧ್ಯಕ್ಷನಾಗಬೇಕು ಇನ್ನೇನೋ ಆಗಬೇಕೆಂದು ಪೈಪೋಟಿ ಯಾಕೆ ?. ನಮ್ಮಿಂದ ಬೆಳೆದವರೇ ನಮಗೆ ಪೆಟ್ಟು ನೀಡುತ್ತಾರೆ. ಕಿಮ್ಸ್ ಆಸ್ಪತ್ರೆ ಬೆಂಗಳೂರು ನಗರದ ಹೃದಯ ಭಾಗದಲ್ಲಿದೆ. ಕರ್ನಾಟಕದಲ್ಲೇ ಮೊದಲೆ ಸ್ಥಾನಕ್ಕೆ ತರುವ ಅವಕಾಶ ಇತ್ತು. ಆದರೆ ಇಲ್ಲಿ ಯಾಕೆ ಈ ಪರಿಸ್ಥಿತಿ ಬಂದಿದೆ. ಅಭಿವೃದ್ಧಿ ಆಗಿದ್ದರೂ ಇದನ್ನ ಒಪ್ಪಲು ಸಾಧ್ಯವಿಲ್ಲ. ಇನ್ನೂ ಹೆಚ್ಚಿನ ಮಟ್ಟದಲ್ಲಿ ಸಂಘ ಬೆಳೆಯಬೇಕಿತ್ತು. ಸಂಘದಲ್ಲಿ ಉತ್ತಮ ವೈದ್ಯರಿದ್ದೀರಿ. ಸಂಶೋಧನೆಗೂ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.