ಮನೆ Latest News ಕೇಂದ್ರ ಸರ್ಕಾರದ ಮಲತಾಯಿ ಧೋರಣೆ ಖಂಡಿಸಿ ರಾಜ್ಯ ಕಾಂಗ್ರೆಸ್ ಪ್ರತಿಭಟನೆ

ಕೇಂದ್ರ ಸರ್ಕಾರದ ಮಲತಾಯಿ ಧೋರಣೆ ಖಂಡಿಸಿ ರಾಜ್ಯ ಕಾಂಗ್ರೆಸ್ ಪ್ರತಿಭಟನೆ

0

 

ಬೆಂಗಳೂರು; ಕೇಂದ್ರ ಸರ್ಕಾರದ ಮಲತಾಯಿ ಧೋರಣೆ ಖಂಡಿಸಿ ಬೆಂಗಳೂರಿನ ಫ್ರೀಡಂಪಾರ್ಕ್ ನಲ್ಲಿ ರಾಜ್ಯ ಕಾಂಗ್ರೆಸ್ ಪ್ರತಿಭಟನೆ ನಡೆಸಿತು.ಕೇಂದ್ರದ ಬಜೆಟ್ ನಲ್ಲಿ ರಾಜ್ಯಕ್ಕೆ ಅನ್ಯಾಯ ಆಗಿದೆ. ಕೇಂದ್ರದ ಯಾವುದೇ ಯೋಜನೆ, ಅನುದಾನ ನೀಡದಿರೋದನ್ನು ಖಂಡಿಸಿ ಚೆಂಬು ಪ್ರದರ್ಶಿಸುವ ಮೂಲಕ‌ ಕಾಂಗ್ರೆಸ್ ನಾಯಕರು ಆಕ್ರೋಶ ಹೊರ ಹಾಕಿದ್ರು.ಬೆಂಗಳೂರು ಕೇಂದ್ರ, ಪಶ್ಚಿಮ, ಪೂರ್ವ, ದಕ್ಷಿಣ ಹಾಗೂ ಉತ್ತರ ಜಿಲ್ಲಾ ಸಮಿತಿಯಿಂದ ಪ್ರತಿಭಟನೆ ನಡೆಯಿತು.ವೇದಿಕೆ ಮೇಲೆ ಚೆಂಬು ಇಟ್ಟು ಕಾಂಗ್ರೆಸ್ ವಿಭಿನ್ನ ಪ್ರತಿಭಟನೆ ನಡೆಸಿತು. ಈ ವೇಳೆ ಕರ್ನಾಟಕಕ್ಕೆ ಮೋದಿ‌ ಸರ್ಕಾರ ನೀಡಿದ್ದು ಚೊಂಬು ಎಂದು ಅಸಮಾಧಾನ ಹೊರ ಹಾಕಿದ್ರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ್ ಭಂಡಾರಿ, ಕೆಪಿಸಿಸಿ ಉಪಾಧ್ಯಕ್ಷರು ನಾರಾಯಣಸ್ವಾಮಿ, ಮಂಜುಳಾ‌ ನಾಯ್ಡು, ಪದ್ಮಾವತಿ, ಉದಯ್ ಶಂಕರ್, ಧರ್ಮಸೇನಾ, ಪದಾಧಿಕಾರಿಗಳು ಸೇರಿದಂತೆ ಐದು ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಭಾಗಿಯಾಗಿದ್ದರು.

ಇನ್ನು ಈ ವೇಳೆ ಮಾತನಾಡಿದ ಮಾಜಿ ಎಂಎಲ್ಸಿ ನಾರಾಯಣಸ್ವಾಮಿ ಯಾವುದೇ ಸರ್ಕಾರ ಇದ್ರೂ ಅದು ದೇಶಕ್ಕೆ ತಾಯಿ ಇದ್ದಂತೆ.ರಾಜ್ಯಗಳ ಅಭಿವೃದ್ಧಿ ಅವರ ಮುಖ್ಯ ಗುರಿ ಆಗಿರ್ಬೇಕು. ಆದ್ರೆ ಕೇಂದ್ರ ಸರ್ಕಾರ ಮಲತಾಯಿ ಧೋರಣೆ ಮಾಡುತ್ತಿದೆ.ಮೂರನೇ ಬಾರಿಗೆ ಬಿಜೆಪಿಗೆ ಬಹುಮತ ಸಿಕ್ಕಿಲ್ಲ.ಆದ್ರೂ ಸಹ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡು ಸರ್ಕಾರ ರಚನೆ ಮಾಡಿದೆ.ನಮ್ಮ ರಾಜ್ಯದಿಂದ ಆಯ್ಕೆಯಾಗಿ ಕೇಂದ್ರದಲ್ಲಿ ಮಂತ್ರಿಯಾಗಿರೋ ನಿರ್ಮಲಾ ಸೀತಾರಾಮನ್ ಏನ್ ಮಾಡುತ್ತಿದ್ದಾರೆ.. ರಾಜ್ಯಕ್ಕೆ ಅನ್ಯಾಯ ಮಾಡುತ್ತಿರೋ ನಿಮಗೆ ಏನೂ ಅನ್ನಿಸ್ತಿಲ್ಲಾ?ದೇಶದಲ್ಲಿ ಅತೀ‌ಹೆಚ್ಚು ಜಿಎಸ್ ಟಿ ತುಂಬುವ ರಾಜ್ಯಕ್ಕೆ ‌ಅನುದಾನ ನೀಡುತ್ತಿಲ್ಲ.ವಾಲ್ಮೀಕಿ ಹಾಗೂ ಮುಡಾ ಹಗರಣ ಖಂಡಿಸಿ ನೀವು ಪ್ರತಿಭಟನೆ ಮಾಡುತ್ತಿದ್ದೀರಿ.ಇದನ್ನ ಬಿಟ್ಟು ರಾಜ್ಯಕ್ಕೆ ಕೇಂದ್ರ ಕೊಟ್ಟಿರೋ ಚೆಂಬು ಖಂಡಿಸಿ ಪ್ರತಿಭಟನೆ ಮಾಡಿ. ದ್ವೇಷದ ರಾಜಕೀಯ ಮಾಡಬಾರದು.ಏನಾದ್ರೂ ಮಾಡಿ ಕಾಂಗ್ರೆಸ್ ಕಿತ್ತು ಹಾಕುವ ಪ್ರಯತ್ನ ಮಾಡುತ್ತಿದ್ದೀರಿ.ಕೇಂದ್ರದಲ್ಲಿ ರಾಜ್ಯದ ಐದು ಕೇಂದ್ರ ಸಚಿವರು ಆಗಿದ್ದೀರಿ, ನಿಮಗೆ ನಾಚಿಕೆ ಆಗಲ್ವಾ? ಎಂ ಪ್ರಶ್ನಿಸಿದ್ದಾರೆ.

ಕರ್ನಾಟಕಕ್ಕೆ ಮೋದಿ ಕೊಟ್ಟ ಚೊಂಬು ಎಂಬ ಪೋಸ್ಟರ್ ಹಿಡಿದು ಧಿಕ್ಕಾರ ಕೂಗಿದ್ರು.ಕೇಂದ್ರ ಸರ್ಕಾರಕ್ಕೆ, ಮೋದಿ ಸರ್ಕಾರಕ್ಕೆ‌ ಧಿಕ್ಕಾರ ಎಂದು ಘೋಷಣೆ ಕೂಗಿದ್ರು.ರಾಜ್ಯಕ್ಕೆ ಚೊಂಬು ಕೊಟ್ಟ ಮೋದಿ ಸರ್ಕಾರಕ್ಕೆ ಧಿಕ್ಕಾರ ಎಂದು ಘೋಷಣೆ ಕೂಗಿದ್ರು.ಕೈಯಲ್ಲಿ ಚೊಂಬು ಹಿಡಿದು ಆಕ್ರೋಶ ಹೊರ ಹಾಕಿದ್ರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ್ ಭಂಡಾರಿ ಮಾತನಾಡಿ ಬಜೆಟ್ ನಲ್ಲಿ ರಾಜ್ಯಕ್ಕೆ ಏನೂ ಸಿಕ್ಕಿಲ್ಲ.ನೀರಾವತಿ ಯೋಜನೆ, ಅಭಿವೃದ್ಧಿ ಯೋಜನೆಗಳಿಗೆ ಹಣ ನೀಡಿಲ್ಲ.ಕೇವಲ ಎರಡೇ ರಾಜ್ಯಕ್ಕೆ ಹೆಚ್ಚೆಚ್ಚು ಅನುದಾನ ಕೊಟ್ಟಿದ್ದಾರೆ.ರಾಜ್ಯದಿಂದ ಹೋಗಿರೋ ಐದು ಜನ ಮಂತ್ರಿಗಳು ಇದ್ದಾರೆ.ಒಬ್ಬೊಬ್ಬರು ಒಂದೊಂದು ಯೋಜನೆ ತಂದಿದ್ರೆ ಸಾಕಿತ್ತು.ಹತ್ತು ವರ್ಷಗಳ ಕಾಲ ಬಿಜೆಪಿ ಸರ್ಕಾರ ಆಡಳಿತ ನಡೆಸಿದೆ.ಈಗ ಮೂರನೇ ಬಾರಿಗೆ ಕೇಂದ್ರದ‌ ಚುಕ್ಕಾಣಿ ಹಿಡಿದಿದೆ.ಆದ್ರೆ ಈಗ ಅಕ್ಕಪಕ್ಕದಲ್ಲಿ ನಿತೀಶ್ ಹಾಗೂ ಬಾಬು ನಿಲ್ಲಿಸಿಕೊಂಡಿದ್ದಾರೆ, ಅವರು ಯಾವಾಗ ಕೈ ಕೊಡ್ತಾರೋ ಗೊತ್ತಿಲ್ಲ ಎಂದರು.

ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಮಾಜಿ ಸಂಸದ ಉಗ್ರಪ್ಪ ಕೇಂದ್ರದ ಜನ ವಿರೋಧಿ ನೀತಿ ಖಂಡಿಸಿ ನಾವು ಪ್ರತಿಭಟನೆ ಮಾಡುತ್ತಿದ್ದೇವೆ.೨೦೧೪ ರಿಂದಲೂ ಮೋದಿ ಕೇವಲ ಆಶ್ವಾಸನೆ ಕೊಟ್ಟಿದ್ದಾರೆ.ಈಗ ೧೧ ವರ್ಷಗಳ ‌ಬಳಿವೂ ಎಲ್ಲ ವಸ್ತು ಹಾಗೂ ಗ್ಯಾಸ್, ತೈಲ‌ ಬೆಲೆ ಏರಿಕೆಯಾಯಿತು.ನಮ್ಮ ಸರ್ಕಾರದಲ್ಲಿ ತೈಲ ಹಾಗೂ ಗ್ಯಾಸ್ ಬೆಲೆ ಕಡಿಮೆ‌ ಇತ್ತು.ಈಗ ಎಲ್ಲದರ ದರ ಗಗನಕ್ಕೆ ಏರಿದೆ.ದೇಶ ಕಂಡ ಅತ್ಯಂತ ದುರ್ಬಲ ಪ್ರಧಾನಿ, ಅತ್ಯಂತ ಭ್ರಷ್ಟ ಪ್ರಧಾನಿ ಅಂದ್ರೆ ಅದು ಮೋದಿ ಎಂದರು.