ಚಿತ್ರದುರ್ಗ; ದರ್ಶನ್ ಆಂಡ್ ಗ್ಯಾಂಗ್ ನಿಂದ ಕೊಲೆಯಾದ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ನಿವಾಸಕ್ಕೆ ಇಂದು ಹಿರಿಯ ನಟ ವಿನೋದ್ ರಾಜ್ ಭೇಟಿ ನೀಡಿದರು. ಮೊನ್ನೆ ದರ್ಶನ್ ಅವರನ್ನು ಪರಪ್ಪನ ಅಗ್ರಹಾರ ಜೈಲಿನಲ್ಲಿ ಭೇಟಿಯಾದ ಬೆನ್ನಲ್ಲೇ ಇಂದು ರೇಣುಕಾಸ್ವಾಮಿ ನಿವಾಸಕ್ಕೆ ಅವರು ಭೇಟಿ ನೀಡಿದ್ದಾರೆ. ಅಲ್ಲದೇ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ರು. ರೇಣುಕಾಸ್ವಾಮಿ ಪತ್ನಿ ಸಹನಾ ಅವರಿಗೆ 1 ಲಕ್ಷ ರೂಪಾಯಿ ಸಹಾಯಧನ ನೀಡಿದ್ರು.
ಬಳಿಕ ಮಾತನಾಡಿದ ಅವರು ರೇಣುಕಾಸ್ವಾಮಿ ಕುಟುಂಬ ಮನೆಗೆ ಆಧಾರ ಸ್ತಂಭವಾಗಿದ್ದ ಮಗನ ಕಳೆದುಕೊಂಡಿದೆ . ಅವರ ಪರಿಸ್ಥಿತಿ ನೋಡಿದ್ರೆ ಎಂಥವರಿಗಾದ್ರು ಕರುಳು ಕಿತ್ತು ಬರುತ್ತೆ. ಕಲಾವಿದರನ್ನು ನೋಡಿ ಜನ ಅನುಕರಣೆ ಮಾಡ್ತಾರೆ.ಇದು ಆಘಾತಕಾರಿ ಘಟನೆ. ಹೆಸರು, ಕೀರ್ತಿಯಲ್ಲಿರುವ ನಾವು ತುಂಬಾ ಎಚ್ಚರವಾಗಿರಬೇಕು.ನಮ್ಮದು ಉನ್ನತವಾದ ಸ್ಥಾನ. ಎತ್ತರದ ಮಟ್ಟದಲ್ಲಿರುವವರು ನಾವು ವಿವೇಕ ಮರೆಯಬಾರದು.ಅಚಾತುರ್ಯ ನಡೆಯುತ್ತವೆ. ಮುಂದಿನ ತಲೆಮಾರುಗಳು ಹೀಗೆ ಆಗದಂತೆ ಎಚ್ಚರವಹಿಸಬೇಕು.ಮಾಧ್ಯಮ ತಿದ್ದಿಬುದ್ದಿ ಹೇಳಿದಂತೆ ಅನುಸರಿಸಿಕೊಂಡು ಸಾಗಬೇಕು ಎಂದರು.
ಇನ್ನು ದರ್ಶನ್ ಭೇಟಿ ವೇಳೆ ರೇಣುಕಾಸ್ವಾಮಿ ಕುಟುಂಬದ ಬಗ್ಗೆ ಯಾವುದೇ ಮಾತನಾಡಿಲ್ಲ ಎಂದು ಅವರು ದರ್ಶನ್ ಪರವಾಗಿ ಮಾತುಕತೆಗೆ ಬಂದಿದ್ದೀರಾ ಎಂಬ ಪ್ರಶ್ನೆಗೆ ನಿರಾಕರಿಸಿದ ಅವರು ಛೇ ಛೇ ಹಾಗೆಲ್ಲ ಇಲ್ಲ, ದರ್ಶನ್ ಭೇಟಿ ವೇಳೆ ಮಾತಾಡಲೇ ಅಗಿಲ್ಲ.ದರ್ಶನ್ ನೋಡಿದರೆ ಅಲ್ಲೂ ಅದೇ ಪರಿಸ್ಥಿತಿ.ಇಲ್ಲಿ ನೋಡಿದರೆ ಅದಕ್ಕಿಂತ ಭಯಾನಕ ಸ್ಥಿತಿ ಇದೆ ಎಂದರು.
ಇನ್ನು ಇದೇ ವೇಳೆ ಮಾತನಾಡಿದ ಕೊಲೆಯಾದ ರೇಣುಕಾಸ್ವಾಮಿ ತಂದೆ ಕಾಶಿನಾಥ್ ಶಿವನಗೌಡ ಪ್ರಕರಣದ ಬಗ್ಗೆ ನಾವು ಸಂಧಾನ ಮಾಡೋದಕ್ಕೆ ಹೊರಟಿದ್ದೇವೆ ಅಂತ ಪ್ರಚಾರ ಮಾಡಲಾಗುತ್ತಿದೆ. ಆದರೆ ಅದು ಸರಿಯಲ್ಲ.ಮಗನ ಕಳೆದುಕೊಂಡು ನಮ್ಮ ಕರಳು ಕಿತ್ತು ಬಂದ ಹಾಗಾಗಿದೆ.ಪ್ರಕರಣದಿಂದ ನಾವು ತುಂಬಾ ನೊಂದಿದ್ದೇವೆ.ನನ್ನ ತಾಯಿಗೆ 98 ವರ್ಷವಾಗಿದೆ. ನಮ್ಮ ಮಗ ರೇಣುಕಾಸ್ವಾಮಿ ಪ್ರತಿ ನಿತ್ಯ ಅಜ್ಜಿಗೆ ಆರೈಕೆ ಮಾಡ್ತಿದ್ದನು.ನಮ್ಮ ಇಡೀ ಕುಟುಂಬವೇ ಸಂಕಷ್ಟದಲ್ಲಿದೆ. ಮಗನ ಕೊಂದ ಆರೋಪಿಗಳು ಯಾರು ಅಂತ ನಮಗೆ ಗೊತ್ತಿಲ್ಲ.ಪ್ರಕರಣದ ಆರೋಪಿಗೆ ತಕ್ಕ ಶಿಕ್ಷೆ ಆಗಬೇಕು.ವಿನೋದ್ ರಾಜ್ ತಾಯಿ ಬಗ್ಗೆ ಅಪಾರ ಗೌರವವಿದೆ.ಅವರ ದೈವಭಕ್ತಿ ಬಗ್ಗೆ ಕೇಳಿದ್ದೇವೆ. ವಿನೋದ ರಾಜ್‍ಕುಮಾರ್ ಬಂದಿದ್ದು ಸಮಾಧಾನ ತಂದಿದೆ ಎಂದು ಅವರು ಹೇಳಿದ್ರು.
ನಟ ದರ್ಶನ್ ಅವರನ್ನು ನೋಡಿ ಕಣ್ಣೀರು ಹಾಕಿದ ನಟ ವಿನೋದ್ ರಾಜ್
ನಟ ದರ್ಶನ್ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿ ನಿನ್ನೆಗೆ (ಜುಲೈ 22)ಕ್ಕೆ ಒಂದು ತಿಂಗಳಾಯ್ತು. ಈ ಒಂದು ತಿಂಗಳಲ್ಲಿ ಸಾಕಷ್ಟು ಮಂದಿ ದರ್ಶನ್ ಅವರನ್ನು ಭೇಟಿ ಮಾಡಿದ್ದಾರೆ.
ದರ್ಶನ್ ಕುಟುಂಬಸ್ಥರು ಮಾತ್ರವಲ್ಲದೇ ಅನೇಕ ನಟ ನಟಿಯರು ದರ್ಶನ್ ಅವರನ್ನು ಭೇಟಿಯಾಗಿದ್ದಾರೆ. ರಕ್ಷಿತಾ, ಪ್ರೇಮ್, ವಿನೋದ್ ರಾಜ್, ಧನ್ವೀರ್, ತರುಣ್ ಸುಧೀರ್ ಹೀಗೆ ಅನೇಕರು ಡಿ ಬಾಸ್ ನ್ನು ಭೇಟಿ ಮಾಡಿ ಅವರಿಗೆ ಧೈರ್ಯ ಹೇಳಿದ್ದಾರೆ.
ಇನ್ನು ನಿನ್ನೆ ದರ್ಶನ್ ಅವರನ್ನು ನೋಡೋದಕ್ಕೆ ಹಿರಿಯ ನಟ ವಿನೋದ್ ರಾಜ್ ಅವರು ಒಂದಷ್ಟು ತಿನಿಸುಗಳ ಸಹಿತ ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ಬಂದಿದ್ದರು. ಅವರನ್ನು ದರ್ಶನ್ ಅವರನ್ನು ಭೇಟಿಯಾಗಿ ಕೆಲ ಹೊತ್ತು ಮಾತನಾಡಿದ್ದಾರೆ. ಇನ್ನು ಭೇಟಿಯ ಬಳಿಕ ವಿನೋದ್ ರಾಜ್ ತೀರಾ ಭಾವುಕರಾಗಿದ್ದರು.
ಮಾಧ್ಯಮದ ಜೊತೆ ಮಾತನಾಡಿದ ಅವರು ದರ್ಶನ್ ಅವರನ್ನು ಭೇಟಿ ಮಾಡಲು ನಾವು ಐದು ಜನ ಹೋಗಿದ್ದೆವು. ನಾನು, ವಿಜಯಲಕ್ಷ್ಮೀ, ದಿನಕರ್ ತೂಗುದೀಪ್, ದರ್ಶನ್ ಪರ ವಕೀಲರು ಹೋಗಿದ್ದೆವು. ಆದರೆ ನನಗೆ ಹೆಚ್ಚೇನು ಮಾತನಾಡಲು ಸಾಧ್ಯವಾಗಲಿಲ್ಲ. ಹೀಗೆ ಕಷ್ಟ ಸುಖ ಅಷ್ಟೇ ಮಾತನಾಡಿದೆವು. ಅವರ ವಕೀಲರು ದರ್ಶನ್ ಜೊತೆ ಮಾತನಾಡಿದರು. ಜೈಲಿನ ಒಂದಷ್ಟು ನಿಯಮಗಳು ಇರುತ್ತವೆ. ಅದರಂತೆ ನಡೆದುಕೊಳ್ಳಬೇಕಾಗುತ್ತದೆ. ಅವರನ್ನು ಈ ಸ್ಥಿತಿ ನೋಡ ಬೇಕಾಯಿತಲ್ವಾ ಅಂತಾ ನನಗೆ ಅನ್ನಿಸ್ತು. ನನ್ನ ಕಣ್ಣುಗಳನ್ನು ನಾನೇ ನಂಬದಾದೆ. ನನಗೆ ಕಣ್ಣೀರು ಬಿಟ್ಟು ಬೇರೇನು ಗೊತ್ತಿಲ್ಲ ಎಂದು ತೀರಾ ಭಾವುಕರಾಗಿದ್ದಾರೆ ವಿನೋದ್ ರಾಜ್. ದರ್ಶನ್ ಅವರು ಆದಷ್ಟು ಬೇಗ ಹೊರ ಬರಲಿ ಅವರ ಸಂಸಾರ, ಅಭಿಮಾನಿಗಳ ಜೊತೆ ಅವರು ಖುಷಿಯಾಗಿರಲಿ ಎಂದು ವಿನೋದ್ ರಾಜ್ ಹಾರೈಸಿದ್ದಾರೆ. ಅಲ್ಲದೇ ದರ್ಶನ್ ಆ ನಾಲ್ಕು ಗೋಡೆಗಳ ಮಧ್ಯೆ ಏಕಾಂಗಿಯಾಗಿ ಸಮಯ ಕಳೆಯಲು ಅದೆಷ್ಟು ಕಷ್ಟಪಡುತ್ತಿರಬಹುದು ಎಂದಿದ್ದಾರೆ.
ಇನ್ನು ನೀವೇನು ದರ್ಶನ್ ಅವರ ಜೊತೆ ಮಾತನಾಡಿದ್ರಿ ಅಂತಾ ಕೇಳಿದ್ದಕ್ಕೆ ಉತ್ತರಿಸಿದ ವಿನೋದ್ ರಾಜ್ ಏನು ಅಪ್ಪಾಜಿ ಈ ರೀತಿ ಪರಿಸ್ಥಿತಿ ಆಗೋಯ್ತಲ್ವಾ ಎಂದು ನಾನು ಅವರನ್ನು ಕೇಳಿದೆ. ಅದಕ್ಕೆ ಅವರು ‘ಏನ್ ಮಾಡೋಕೆ ಆಗುತ್ತಣ್ಣಾ ಎಂದ್ರು. ಏನು ಆಗಬೇಕು ಅದು ವಿಧಿ ಲಿಖಿತ ಅಂತಾ ಅತ್ಯಂತ ನೋವಿನಿಂದ ಹೇಳಿದ್ರು ಅಂತಾ ವಿನೋದ್ ರಾಜ್ ಹೇಳಿದ್ದಾರೆ.
.