ಮನೆ Latest News ಮುಡಾ ವಿಚಾರವಾಗಿ ಬಿಜೆಪಿಯಿಂದ ಮೈಸೂರು ಪಾದಯಾತ್ರೆ; ವಿಧಾನಸೌಧದ ಬಿಜೆಪಿ ಶಾಸಕಾಂಗ ಕಚೇರಿಯಲ್ಲಿ ಬಿಜೆಪಿ ನಾಯಕರ...

ಮುಡಾ ವಿಚಾರವಾಗಿ ಬಿಜೆಪಿಯಿಂದ ಮೈಸೂರು ಪಾದಯಾತ್ರೆ; ವಿಧಾನಸೌಧದ ಬಿಜೆಪಿ ಶಾಸಕಾಂಗ ಕಚೇರಿಯಲ್ಲಿ ಬಿಜೆಪಿ ನಾಯಕರ ಮಹತ್ವದ ಸಭೆ

0

ಬೆಂಗಳೂರು;  ಮುಡಾ ವಿಚಾರವಾಗಿ ಬಿಜೆಪಿ ಮೈಸೂರಿಗೆ ಪಾದಯಾತ್ರೆ ಹಮ್ಮಿಕೊಂಡಿದೆ. ಈ ಹಿನ್ನೆಲೆ ವಿಧಾನಸೌಧದ ಬಿಜೆಪಿ ಶಾಸಕಾಂಗ ಕಚೇರಿಯಲ್ಲಿ ಬಿಜೆಪಿ ನಾಯಕರ ಮಹತ್ವದ ಸಭೆ ನಡೆಯಿತು. ವಿಧಾನಸೌಧದ ಬಿಜೆಪಿ ಶಾಸಕಾಂಗ ಕಚೇರಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹಾಗೂ ಅಶೋಕ್ ನೇತೃತ್ವದಲ್ಲಿ ಸಭೆ ನಡೆಯಿತು.ಸಭೆಯಲ್ಲಿ ಬಿಜೆಪಿ ಶಾಸಕರು ಭಾಗಿಯಾಗಿದ್ರು. ಆದರೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರೇ ಬಸವರಾಜ್ ಯತ್ನಾಳ್ ಅವರಿಗೆ ಆಹ್ವಾನ ನೀಡಿದ್ರೂ ಅವರು ಸಭೆಗೆ ಬಂದಿರಲಿಲ್ಲ.

ಇನ್ನು ಸಭೆ ಬಳಿಕ ಮಾತನಾಡಿದ ವಿಧಾನಪರಿಷತ್ ಸದಸ್ಯ ಸಿ ಟಿ ರವಿ ಮೈಸೂರಿಗೆ ಪಾದಯಾತ್ರೆ ಮಾಡೋ ತೀರ್ಮಾನ ಮಾಡಿದ್ದೇವೆ. ಜುಲೈ 28 ಕ್ಕೆ ಎನ್ ಡಿ ಎ ಸಭೆ ಮಾಡ್ತೀವಿ.ಆ ಸಭೆಯಲ್ಲಿ ಪಾದಯಾತ್ರೆಯನ್ನು ಯಾವಾಗ ಮಾಡಬೇಕು ಮತ್ತು ಪಾದಯಾತ್ರೆಯ ರೂಪರೇಷೆಗಳು ಏನು ಅನ್ನೋದನ್ನು ತೀರ್ಮಾನ ಮಾಡ್ತೀವಿ.ಅಗತ್ಯಬಿದ್ದರೆ ರಾಜಭವನಕ್ಕೂ ನಾವು ಭೇಟಿ ನೀಡ್ತೀವಿ ಎಂದರು. ಇನ್ನು ಮುಡಾ ವಿಚಾರವಾಗಿ ಎರಡೂ ಸದನದಲ್ಲಿ ಸಭಾಧ್ಯಕ್ಷ, ಸಭಾಪತಿ ಇಬ್ಬರಿಗೂ ಮನವರಿಕೆಗೆ ಕೇಳಿದ್ದೇವೆ. ನಮ್ಮ ಚರ್ಚೆಗೆ ಅವಕಾಶವೇ ಕೊಡದೆ ಬಿ ರಿಪೋರ್ಟ್‌ ಕೊಟ್ಟುಕೊಂಡಿದ್ದಾರೆ.*ನಮ್ಮ ಚರ್ಚೆಗೆ ಅವಕಾಶವೇ ಕೊಡದೆ,‌ ಮಿಸ್ಟರ್ ಕ್ಲೀನ್ ಅಂತ ಕ್ಲೀನ್ ಚಿಟ್ ಕೊಟ್ಟಿಕೊಂಡಿದ್ದಾರೆ.ನಿವೃತ್ತ ನ್ಯಾಯಾಧೀಶರೀಗೆ ಕೊಟ್ಟಿದ್ದು, ಇವರ ವಿರುದ್ಧ ಹೇಗೆ ವರದಿ ಕೊಡ್ತಾರೆ ಎಂದು ಪ್ರಶ್ನಿಸಿದ್ರು.ಹಾಲಿ ಹೈಕೋರ್ಟ್ ಅಥವಾ ಸುಪ್ರೀಂ ಕೋರ್ಟ್ ನ್ಯಾಯಾಧೀಶರ ತನಿಖೆ ನಡೆಯಬೇಕು ಎಂದರು.

ಇತ್ತ ಬಿಜೆಪಿ ಅವರ ಪಾದಾಯಾತ್ರೆ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವ ಪ್ರಿಯಾಂಕ್ ಖರ್ಗೆ ಬಹಳ‌ ಸಂತೋಷ, ಹೋಗಲಿ.ಸಾರ್ವಜನಿಕರಿಗೆ ದಾಖಲೆ ಕೊಟ್ಟು  ಅವರು ಮಾತನಾಡಲಿ. ವೆದರ್ ತುಂಬಾ ಚೆನ್ನಾಗಿದೆ, ನಡೆದುಕೊಂಡು ಹೋಗಲಿ. ದೇವರಾಜ್ ಟ್ರಕ್ ಟರ್ಮಿನಲ್, ಅತಿವೃಷ್ಟಿ, ಇಡಿ ಪ್ರಕರಣ ಇತ್ತು. ಇವೆಲ್ಲ ಚರ್ಚೆ ಮಾಡದೆ ಮುಡಾವನ್ನೇ ಇಟ್ಟುಕೊಂಡಿದ್ದಾರೆ. ಏನೇನು ದಾಖಲೆಗಳಿವೆ ಕೊಡಲಿ, ಬೇಡ ಅಂದೋರು ಯಾರು ಎಂದಿದ್ದಾರೆ.

ದಾಖಲೆ ಇಟ್ಟು ಬಿಜೆಪಿ-ಜೆಡಿಎಸ್ ಮಾತನಾಡಲಿ. ಕೇಂದ್ರದ ಬಜೆಟ್ ನಿಂದ ಕರ್ನಾಟಕಕ್ಕೆ ಅನ್ಯಾಯ ಆಗಿದೆ.ಇದರ ಬಗ್ಗೆ ಮಾತನಾಡಲು‌ ಅವರು ರೆಡಿ ಇಲ್ಲ.ಭೋವಿ ನಿಗಮ, ಬಾಸ್ಕೋ ಕೇಸ್ ಬಗ್ಗೆ ಚರ್ಚೆ ನಡೆಸಲು ತಯಾರಿಲ್ಲ.ಅವರ ಹಾಕಿದ ತಾಳಕ್ಕೆ ಕುಣಿಯಲು ನಾವು ರೆಡಿಯಿಲ್ಲ ಎಂದಿದ್ದಾರೆ.ಅಲ್ಲದೇ ಬಿಜೆಪಿ ಪಾದಯಾತ್ರೆಗೆ ಕಾಂಗ್ರೆಸ್ ಕೌಂಟರ್ ಕೊಡಲು ಸಿದ್ಧವಾಗಿದೆ.ಕಾಂಗ್ರೆಸ್ ನಾಯಕರಿಂದ ಪಾದಯಾತ್ರೆಗೆ ಸಿದ್ಧತೆಯಾಗುತ್ತಿದೆ. ಮೈಸೂರಿನಿಂದ ಬೆಂಗಳೂರಿಗೆ ಪಾದಯಾತ್ರೆಗೆ ಸಿದ್ಧತೆ  ಮಾಡುತ್ತಿದ್ದಾರೆ.ಬಿಜೆಪಿ ಕಾಲದ ಹಗರಣಗಳ ಮುಂದಿಟ್ಟುಕೊಂಡು ಪಾದಯಾತ್ರೆ ಮಾಡಲು ಮುಂದಾಗಿದ್ದಾರೆ.

ಮುಡಾ ಸೈಟ್ ಪ್ರಕರಣ ; ರಾಜ್ಯಪಾಲರನ್ನು ಭೇಟಿಯಾದ ಬಿಜೆಪಿ-ಜೆಡಿಎಸ್ ಶಾಸಕರ ನಿಯೋಗ

ಮುಡಾ ಸೈಟ್ ಪ್ರಕರಣಕ್ಕೆ ಸಂಬಂಧಪಟ್ಟಂತೆ  ಭೇಟಿಯಾದ ಬಿಜೆಪಿ-ಜೆಡಿಎಸ್ ಶಾಸಕರ ನಿಯೋಗ ರಾಜ್ಯಪಾಲರನ್ನು ಭೇಟಿ ಮಾಡಿ ದೂರು  ಸಲ್ಲಿಸಿತು. ಪಾದೆಯಾತ್ರೆ ಮೂಲಕ ಬಿಜೆಪಿ ‌ಜೆಡಿಎಸ್ ನಾಯಕರು ರಾಜಭವನ ತಲುಪಿ ರಾಜ್ಯಪಾಲರಿಗೆ ದೂರು ಸಲ್ಲಿಸಿದ್ದರು.

ಈ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ, ಸಿಟಿ ರವಿ, ವಿಪಕ್ಷ ನಾಯಕ ಆರ್ ಅಶೋಕ್, ಜನಾರ್ದನ್ ರೆಡ್ಡಿ ಸೇರಿ ಹಲವು ಉಪಸ್ಥಿತಿದ್ದರು. ಇನ್ನು ಈ ವೇಳೆ ಮಾತನಾಡಿದ ವಿಧಾನಸಭೆ ವಿಪಕ್ಷ ನಾಯಕ ಆರ್ ಅಶೋಕ್ ಮುಡಾ ಹಗರಣದಲ್ಲಿ ೫೦:೫೦ ಸ್ಕೀಮ್ ಅಡಿ ಲೂಟಿ ಮಾಡಿದ್ದಾರೆ.ಸದನದಲ್ಲಿ‌ ಚರ್ಚೆ ಗೆ ಅವಕಾಶ ನೀಡಿಲ್ಲ.ದಾಖಲೆ ಕೋಡೋದು, ಚರ್ಚೆ ಮಾಡುವ ಹಕ್ಕು ಇದೆ.ಆದ್ರೆ ಅವರ ಭ್ರಷ್ಟಾಚಾರ ಹೊರಗೆ ಬರುತ್ತೆ ಅಂತ ಹೀಗೆ ಮಾಡಿದ್ದಾರೆ.೧೪ ಸೈಟು ಸಿದ್ದರಾಮಯ್ಯ ‌ಅವರ ಕುಟುಂಬಕ್ಕೆ ಕೊಟ್ಟಿದ್ದಾರೆ.ಇಂತಹ ಒಂದು ಕರ್ಮಕಾಂಡ ಮಾಡಿರೋ‌ ಸರ್ಕಾರ ವಾಲ್ಮೀಕಿ ಹಾಗೂ ಮುಡಾ ಹಗರಣ ‌ದಲಿತರ ಜಮೀನು ಲೂಟಿ ಮಾಡಿದೆ.ದಲಿತರ ಹಣ ಬೇರೆ ಯೋಜನೆಗೆ ಬಳಸಿಕೊಂಡಿದ್ದಾರೆ.ಸಿಎಂ ಸಿದ್ದರಾಮಯ್ಯಗೆ ಮರ್ಯಾದೆ ಇದ್ರೆ ರಾಜೀನಾಮೆ ನೀಡಲಿ.ಅವರಿಗೆ ನೈತಿಕತೆ ಇದ್ರೆ ರಾಜೀನಾಮೆ ನೀಡಲಿ.ಅದೇ ಕಾರಣಕ್ಕೆ ‌ನಾವು ರಾಜ್ಯಪಾಲರಿಗೆ ದೂರು ನೀಡಿದ್ದೇವೆ ಎಂದರು. ನಮ್ಮ ಬೇಡಿಕೆ ಸಿಎಂ ರಾಜೀನಾಮೆ ಕೊಡಬೇಕು.ಇದೇ ಮನವಿಯನ್ನ ನಾವು ಅವರಿಗೆ ನೀಡಿದ್ದೇವೆ ಎಂದ್ರು.

ಇನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಮಾತನಾಡಿ ಇಡಿ ವಿರುದ್ದ ಬೆದರಿಕೆ ಹಾಕುವ ತಂತ್ರ ಹಾಕಿದ್ರು.ಇದೀಗ ಅದಕ್ಕೆ ಸ್ಟೇ ಇದೆ.ಎಲ್ಲೂ ಒಂದು ಕಡೆ ವಾಲ್ಮೀಕಿ ಹಗರಣದಿಂದ ಮಂತ್ರಿಗಳ ರಾಜೀನಾಮೆ ಆಗಿದೆ.ಇದೀಗ ಸಿಎಂ ಸಿದ್ದರಾಮಯ್ಯ ಕೂಡ ಹೆದರಿದ್ದಾರೆ.ಸಿಎಂ ಅವರು ಓಡಿ ಹೋಗುವಂತಹ ಕೆಲಸ ಮಾಡಿದ್ದಾರೆ.ಮುಡಾ ಹಗರಣ ಸಿಬಿಐ ತನಿಖೆ ಗೆ ಕೊಡಬೇಕು.ನಮ್ಮ ಒತ್ತಾಯವನ್ನ ರಾಜ್ಯಪಾಲರ ಗಮನಕ್ಕೆ‌ ತಂದಿದ್ದೇವೆ.ಇದರ ಕುರಿತು ಸಿಎಂ ಸಿದ್ದರಾಮಯ್ಯಗೆ ರಾಜ್ಯಪಾಲರು ಸ್ಪಷ್ಟನೆ ಕೇಳಿದ್ದಾರೆ ಎಂದು ತಿಳಿಸಿದರು.

ಜೆಡಿಎಸ್ ಶಾಸಕ ಸುರೇಶ್ ಬಾಬು  ಮಾತನಾಡಿ  ದಲಿತರ ಹಣ ಚುನಾವಣೆಗೆ ಬಳಸಿಕೊಂಡಿದ್ದಾರೆ.ಇದರ ಬಗ್ಗೆತನಖೆ ನಡೀತಿದೆ.ಇನ್ನು ಮುಡಾ ಹಗರಣದ ವಿಷಯ ವಾಗಿ ಸಿಎಂ ಚರ್ಚೆಗೆ ಅವಕಾಶ ಕೊಟ್ಟಿಲ್ಲ.ಸಿದ್ದರಾಮಯ್ಯ ಈ ರೀತಿ ರಾಜಕೀಯ ಮಾಡುತ್ತಾರೆ ಅಂದುಕೊಂಡಿರಲಿಲ್ಲ ಎಂದರು. ಇನ್ನು  ಇದೇ ವೇಳೆ ಮಾತನಾಡಿದ ವಿಧಾನಪರಿಷತ್ ಸದಸ್ಯ  ಸಿ ಟಿ ರವಿ ಕಾಂಗ್ರೆಸ್ ಪಾದಯಾತ್ರೆಗೆ ಲೇವಡಿ ಮಾಡಿದ್ರು.ಅವರ ಪಾಪದ ಪಶ್ಚಾತ್ತಾಪಕ್ಕೆ ಉರುಳು ಸೇವೆ ಮಾಡಲಿ.ಚಾಮುಂಡಿ ಬೆಟ್ಟದಿಂದ ಉರುಳು ಸೇವೆ ಮಾಡಿಕೊಂಡು ಬೆಂಗಳೂರಿಗೆ ಬರಲಿ.ಅವರಿಗೆ ಸದನದಲ್ಲಿ ಉತ್ತರಿಸುವ ಹಕ್ಕು ಇದೆ.ಸದನದಲ್ಲಿ ಅವರು ಯಾಕೆ ಸುಮ್ಮನಾದ್ರು?.ಅರೋಪ ಪ್ರತ್ಯಾರೋಪ ಯಾರು ಬೇಕಾದ್ರೂ ಮಾಡಬಹುದು.ಸದನದಲ್ಲಿ ಅವರು ಪ್ರಶ್ನಿಸಲು ಅವಕಾಶ ನೀಡಿಲ್ಲ.ಅಲ್ಲಿಂದ ಪಲಾಯನ ಮಾಡಿದ್ರು ಎಂದರು.