ಬೆಂಗಳೂರು; ವಾಲ್ಮೀಕಿ ನಿಗಮದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಮಾಜಿ ಸಚಿವ ನಾಗೇಂದ್ರ,ಸಿಎಂ ,ಡಿಸಿಎಂ ಹೆಸರು ಹೇಳುವಂತೆ ವಾಲ್ಮೀಕಿ ನಿಗಮದ ಎಂಡಿ ಕಲ್ಲೇಶ್ ಗೆ ಇಡಿ ಅಧಿಕಾರಿಗಳು ಒತ್ತಡ ಹೇರುತ್ತಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಶಾಸಕರು ವಿಧಾನಸೌಧದಲ್ಲಿ ಪ್ರತಿಭಟನೆ ನಡೆಸಿದರು.ಬಂಧಿಸಿ ಬಂಧಿಸಿ ಇಡಿ ಅಧಿಕಾರಿಗಳನ್ನು ಬಂಧಿಸಿ, ಧಿಕ್ಕಾರ ಧಿಕ್ಕಾರ ಇಡಿ ಅಧಿಕಾರಿಗಳಿಗೆ ಧಿಕ್ಕಾರ ಎಂದು ಕಾಂಗ್ರೆಸ್ ಶಾಸಕರು ಘೋಷಣೆ ಕೂಗಿದ್ರು. ಸಿಬಿಐ, ಇಡಿ ವಿರುದ್ದ ರಾಜ್ಯ ಕಾಂಗ್ರೆಸ್ ಆಕ್ರೋಶ ಹೊರ ಹಾಕಿತು. ಅಲ್ಲದೇ ಬಂಧಿಸಿ ಬಂಧಿಸಿ ಇಡಿ ಅಧಿಕಾರಿಗಳನ್ನ ಬಂಧಿಸಿ ಎಂದು ಘೋಷಣೆ ಕೂಗಿದ್ರು.
ತನಿಖಾ ಸಂಸ್ಥೆಗಳನ್ನ ಬಳಸಿಕೊಳ್ತಿರೋ ಕೇಂದ್ರಕ್ಕೆ ಧಿಕ್ಕಾರ.ಅಧಿಕಾರ ದುರುಪಯೋಗ ಮಾಡುವ ಇಡಿಗೆ ಧಿಕ್ಕಾರ.ಇಡಿ ಅಧಿಕಾರಿಗಳನ್ನ ಬಂಧಿಸಿ ಎಂದು ಆಗ್ರಹಿಸಿದರು.ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದ್ರು.ಅಮಿತ್ ಶಾ ರಾಜೀನಾಮೆ ಕೊಡಿ ಎಂದು ಒತ್ತಾಯಿಸಿದರು, ಕೈಯಲ್ಲಿ ಭಿತ್ತಿ ಪತ್ರ ಹಿಡಿದು ಆಕ್ರೋಶ ಹೊರ ಹಾಕಿದ್ರು.ಕೇಂದ್ರದ ತನಿಖಾ ಸಂಸ್ಥೆಗಳನ್ನ ದುರುಪಯೋಗ ಮಾಡಿಕೊಳ್ತಿದ್ದಾರೆ.ಕೇಂದ್ರ ಕೈಗೊಂಬೆಯಾಗಿರುವ ಇಡಿ, ಸಿಬಿಐಗೆ ಧಿಕ್ಕಾರ. ಪ್ರಜಾಪ್ರಭುತ್ವ ಮೇಲೆ ದಾಳಿ ಮಾಡುತ್ತಿರೋ ಬಿಜೆಪಿಗೆ ಧಿಕ್ಕಾರ ಎಂದು ಆಕ್ರೋಶ ಹೊರ ಹಾಕಿದ್ರು,
ಸರ್ಕಾರವನ್ನ ಬುಡಮೇಲೆ ಮಾಡುತ್ತಿರುವ ಬಿಜೆಪಿ ಇಡಿಗೆ ಧಿಕ್ಕಾರ ಎಂದು ಕಾಂಗ್ರೆಸಿಗರು ಇಡಿ ಇಡಿ ರೌಡಿ ಎಂದು ಘೋಷಣೆ ಕೂಗಿದ್ರು. ಇಡಿ ಇಡಿ ಗೂಂಡಾ.. ಇಡಿ ಇಡಿ ಗೂಂಡಾ ಎಂದು ಆಕ್ರೋಶ ಹೊರ ಹಾಕಿದ್ರು. ಈ ಪ್ರತಿಭಟನೆಯಲ್ಲಿ
ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿ, ಸಚಿಚ ಪ್ರಿಯಾಂಕ್ ಖರ್ಗೆ, ಹೆಚ್ ಕೆ ಪಾಟೀಲ್, ಗುಂಡೂರಾವ್, ಎಂ ಬಿ ಪಾಟೀಲ್, ಕೃಷ್ಣಭೈರೇಗೌಡ, ಪರಮೇಶ್ವರ್ ಸೇರಿದಂತೆ ಹಲವು ಸಚಿವರು, ಶಾಸಕರು ಮತ್ತು ಪರಿಷತ್ ಸದಸ್ಯರು ಭಾಗಿಯಾಗಿದ್ದರು.
ಈ ವೇಳೆ ಮಾತನಾಡಿದ ಡಿಸಿಎಂ ಡಿ ಕೆ ಶಿವಕುಮಾರ್ ಸರ್ಕಾರದ ಎಲ್ಲಾಮಂತ್ರಿಗಳು ಶಾಸಕರು ದೊಡ್ಡ ಪ್ರತಿಭಟನೆ ಮಾಡುತ್ತಿದ್ದೇವೆ.ವಾಲ್ಮೀಕಿ ಹಗರಣ ಬೆಳಕಿಗೆ ಬಂದಿದೆ.ತಪ್ಪಾಗಿದೆ ಎಂದು ನಮಗೆ ಮನವರಿಕೆ ಯಾಗಿದೆ.ಅಧಿಕಾರಿಗಳು ದುರ್ಬಳಕೆ ಮಾಡಿದ್ದಾರೆ ಅನ್ನೋದು ಗೊತ್ತಾಗಿದೆ.ಈಗಾಗಲೇ ೫೦ ರಷ್ಟು ಹಣ ರಿಕವರಿ ಮಾಡಿದ್ದಾರೆ.ಈ ನಡುವೆ ಸಿಬಿಐ ತನಿಖೆ ಮಾಡುತ್ತಿದೆ. ಇದ್ರ ಜೊತೆ ಇಡಿ ಕೂಡ ತನಿಖೆ ಮಾಡುತ್ತಿದೆ.ಆದ್ರೆ ತನಿಖೆ ನಡೀತಿರೋವಾಗ್ಲೇ ಇಡಿ ಬೇರೆ ಕಡೆ ಡೈವರ್ಟ್ ಮಾಡುತ್ತಿದೆ. ಮಂತ್ರಿ ಶಾಸಕರನ್ನು ವಿಚಾರಣೆ ನಡೆಸ್ತಿದೆ.ವಿಚಾರಣೆ ವೇಳೆ ಸರ್ಕಾರಿ ಅಧಿಕಾರಿ ಕಲ್ಲೇಶ್ ಗೆ ಒತ್ತಡ ಹೇರುತ್ತಿದೆ.ನೀನು ಮಂತ್ರಿ, ಮುಖ್ಯಮಂತ್ರಿ ಹೆಸರು ಹೇಳುವಂತೆ ಒತ್ತಡ ಹೆದರಿಸುತ್ತಿದೆ ಎಂದರು.
ಅಲ್ಲದೇ ಇವರ ಮಾರ್ಗದರ್ಶನದಲ್ಲಿ ಇದೆಲ್ಲಾ ಮಾಡಿದ್ದೇವೆ ಎಂದು ಹೇಳು ಎಂದು ಒತ್ತಾಯಿಸಿದ್ದಾರೆ.ಹೀಗಾಗಿ ಅವರು ವಿಲ್ಸನ್ ಗಾರ್ಡನ್ ಠಾಣೆಯಲ್ಲಿ ದೂರು ನೀಡಿದ್ದಾರೆ.ಇಡಿ ಸಿಬಿಐ ಬಳಸಿ ನಮ್ಮ ಸರ್ಕಾರದ ವಿರುದ್ದ ಷಡ್ಯಂತ್ರ ಮಾಡುತ್ತಿದೆ.ಕಲಾಪದಲ್ಲಿ ಉತ್ತರ ಹೇಳೋಕೆ ಬಿಜೆಪಿಯವರು ಬಿಡುತ್ತಿಲ್ಲ .ಅವರ ಅವಧಿಯಲ್ಲಿ ಇದೇ ರೀತಿ ಹಗರಣ ನಡೆದಿವೆ.ಈಗ ಇದನ್ನೆಲ್ಲಾ ತಿಳಿದುಕೊಂಡು ನಮ್ಮ ಬಾಯಿ ಮುಚ್ಚಬೇಕು.ನಮ್ಮ ಮುಖ್ಯಮಂತ್ರಿ ಹೆಸರು ಹೇಳುವಂತೆ ಒತ್ತಾಯ ಮಾಡಿದ್ದಾರೆ.ಏಳು ವರ್ಷ ಜೈಲಿಗೆ ಹಾಕಿಸುತ್ತೇವೆ ಎಂದು ಒತ್ತಾಯಿಸಿದ್ದಾರೆ.ರಾಜ್ಯದ ಮುಖ್ಯಮಂತ್ರಿ ಅವರನ್ನೇ ಟಾರ್ಗೆಟ್ ಮಾಡಿರೋ ವ್ಯವಸ್ಥೆ ನಡಿತಿದೆ.ನಮ್ಮ ಶಾಸಕರು, ಸಚಿವರು ನ್ಯಾಯಕ್ಕಾಗಿ ಕೇಂದ್ರ, ಇಡಿ ವಿರುದ್ದ ಕ್ರಮಕ್ಕೆ ಇಲ್ಲಿ ಬಂದಿದ್ದೇವೆ,.ಮುಂದೆ ಹೊರಗಡೆ ಯಾವ ರೀತಿ ಪ್ರತಿಭಟನೆ ಮಾಡಬೇಕು ಅನ್ನೋದು ಹೇಳುತ್ತೇವೆ ಎಂದರು.
ಇನ್ನು ಸಿಎಂ ಸಿದ್ದರಾಮಯ್ಯ ಮಾತನಾಡಿ ವಾಲ್ಮೀಕಿ ಪ್ರಕರಣದಲ್ಲಿ ಎಸ್ ಐಟಿ ತನಿಖೆ ಮಾಡುತ್ತಿದೆ.ಸಿಬಿಐ ಕೂಡ ತನಿಖೆ ಮಾಡುತ್ತಿದೆ.ಒಂದೇ ಹಗರಣದಲ್ಲಿ ಮೂರು ತನಿಖಾ ಸಂಸ್ಥೆಗಳು ವಿಚಾರಣೆ ಮಾಡ್ತಿರೋ ಇದೇ ಮೊದಲು.ಈ ಹಿಂದೆ ಯಾವ ಪ್ರಕರಣದಲ್ಲಿ ಆಗಿಲ್ಲ.ನಾವು ವಾಲ್ಮೀಕಿ ನಿಗಮದಲ್ಲಿ ಅಕ್ರಮ ನಡೆದಿಲ್ಲ ಅಂತ ಹೇಳಿಲ್ಲ.ವಿಪಕ್ಷಗಳು ಪದೇ ಪದೇ ೧೮೬ ಕೋಟಿ ದುರುಪಯೋಗ ಆಗಿದೆ ಅಂತಿದೆ.ಆದ್ರೆ ತನಿಖೆ ವೇಳೆ ತೆಲಂಗಾಣಕ್ಕೆ ಹೋಗಿರೋದು ೮೭ ಕೋಟಿ ಮಾತ್ರ ಅಂತ ಗೊತ್ತಾಯ್ತು.ಎಸ್ ಐ ಟಿ ಮಾಡಿದ್ಮೇಲೆ ತನಿಖೆ ಪ್ರಗತಿ ಹೆಚ್ಚಾಗಿದೆ.ಈಗಾಗಲೇ ೧೨ ಜನರನ್ನ ಬಂಧಿಸಿದ್ದಾರೆ.೩೪ ಕೋಟಿ ರಿಕವರಿ ಮಾಡಿದ್ದಾರೆ.ಅದನ್ನ ಕೆಲವರಿಂದ ರಿಕವರಿ ಮಾಡಿದ್ದಾರೆ ಎಂದರು.