ಮನೆ Latest News ಜಿ.ಟಿ ಮಾಲ್ ಗೆ ಪಂಚೆ ಧರಿಸಿ ಹೋಗಿದ್ದಕ್ಕೆ ರೈತನಿಗೆ ಪ್ರವೇಶ ನಿರಾಕರಣೆ ಪ್ರಕರಣ; ವಿಧಾನಸೌಧದಲ್ಲಿ ಸ್ಪೀಕರ್...

ಜಿ.ಟಿ ಮಾಲ್ ಗೆ ಪಂಚೆ ಧರಿಸಿ ಹೋಗಿದ್ದಕ್ಕೆ ರೈತನಿಗೆ ಪ್ರವೇಶ ನಿರಾಕರಣೆ ಪ್ರಕರಣ; ವಿಧಾನಸೌಧದಲ್ಲಿ ಸ್ಪೀಕರ್ ಯು.ಟಿ ಖಾದರ್ ರನ್ನು ಭೇಟಿಯಾದ ರೈತ ಫಕೀರಪ್ಪ ದಂಪತಿ

0

ಬೆಂಗಳೂರು; ಜಿ.ಟಿ ಮಾಲ್ ಗೆ ಪಂಚೆ ಧರಿಸಿ ಹೋಗಿದ್ದಕ್ಕೆ ರೈತನಿಗೆ ಪ್ರವೇಶ ನಿರಾಕರಣೆ ಮಾಡಿದ್ದು ರಾಜ್ಯದಾದ್ಯಂತ ಭಾರೀ ಸದ್ದು ಮಾಡಿತ್ತು. ಇಂದು ಫಕೀರಪ್ಪ ದಂಪತಿ ವಿಧಾನಸೌಧದಲ್ಲಿ ಸ್ಪೀಕರ್ ಯು.ಟಿ ಖಾದರ್ ರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

ಬಳಿಕ ಮಾತನಾಡಿದ ಫಕೀರಪ್ಪ ಇವತ್ತು ವಿಧಾನಸೌದಕ್ಕೆ ಬಂದಿದ್ದೇನೆ. ನನಗೆ ಬಹಳ ಖುಷಿಯಾಗ್ತಿದೆ. ಅವತ್ತು ಮಾಲ್ ಗೆ ಬಿಟ್ಟಿರಲಿಲ್ಲ.ಇವತ್ತು ವಿಧಾನಸೌದಕ್ಕೆ ಬಂದಿದ್ದೇನೆ. ಸ್ಪೀಕರ್ ಯು ಟಿ ಖಾದರ್ ಅವರನ್ನ ಭೇಟಿ ಮಾಡಿದೆ.ಚೆನ್ನಾಗಿದ್ದೀರಾ ಅಂತಾ  ಕೇಳಿ ಸ್ಪೀಕರ್ ಯು ಟಿ ಖಾದರ್ ಸನ್ಮಾನ ಮಾಡಿದ್ರು. ಇವತ್ತೇ ಮೊದಲ ಬಾರಿಗೆ ವಿಧಾನಸೌದ ನೋಡಿದ್ದು. ಸಿಎಂ ಸಾಹೇಬರನ್ನ ನೋಡಬೇಕಿತ್ತು ಆದ್ರೆ ಅವರು ನಮಗೆ ಸಿಗಲಿಲ್ಲ ಎಂದು ಅವರು ವಿಧಾನಸೌಧಕ್ಕೆ ಭೇಟಿ ನೀಡಿದ್ದಕ್ಕೆ ಹರ್ಷ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನ ಜಿ.ಟಿ. ಮಾಲ್ ಪಂಚೆ ಪ್ರಕರಣದ ಬಗ್ಗೆ ಸದನದಲ್ಲಿ ಮಾತನಾಡಿದ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್ ಮಾಲ್ ಮತ್ತು ದೊಡ್ಡ ಪ್ರದೇಶಗಳಲ್ಲಿ ವಸ್ತ್ರದ ಬಗ್ಗೆ ಮಾರ್ಗಸೂಚಿ ಜಾರಿಗೊಳಿಸುತ್ತೇವೆ.ಜಿ.ಟಿ. ಮಾಲ್ ನದ್ದು 2 ಕೋಟಿ ತೆರಿಗೆ ಬಾಕಿ ಇತ್ತು.ನೋಟೀಸ್ ಕೊಟ್ಟಿದ್ದೇವೆ, ಚೆಕ್ ಕೊಟ್ಟಿದ್ದಾರೆ ಎಂದು ಸದನದಲ್ಲಿ ಹೇಳಿದ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ.‌ ಶಿವಕುಮಾರ್ ಹೇಳಿದ್ದಾರೆ.

ಈ ವೇಳೆ ಕ್ಲಬ್ ಗಳಲ್ಲಿ ವಸ್ತ್ರ ಸಂಹಿತೆ ಬಗ್ಗೆ ಮಾರ್ಗಸೂಚಿ ಹೊರಡಿಸುವಂತೆ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು ಆಗ್ರಹಿಸಿದ್ದಾರೆ.ಈ ವೇಳೆ ವಿಪಕ್ಷ ನಾಯಕ ಅಶೋಕ್ ಮಧ್ಯಪ್ರವೇಶ ಮಾಡಿದ್ದಾರೆ.ಸುರೇಶ್, ಜಿ.ಟಿ. ಮಾಲ್ ಬೀಗ ಹಾಕಿಸಿದ್ಯಾ? ನಿನ್ನೆ ಮಾಲ್ ತೆಗೆದಂತೆ ಇತ್ತು ಎಂದು ಹೇಳಿದ್ದಾರೆ ಅಶೋಕ್.ಇಲ್ಲ ಯಾಕೆ ಹಾಗೆ ಹೇಳುತ್ತೀರಾ, ಗೊತ್ತಿದ್ದೂ ಹೇಳಿದರೆ ಹೇಗೆ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಲೈಸೆನ್ಸ್ ಕೊಡುವಾಗಲೇ ಗ್ರಾಮೀಣ ಉಡುಪು ಅವಕಾಶ ಕೊಡುವಂತೆ ಮಾಡಿ ಎಂದ ವಿಪಕ್ಷ ನಾಯಕ ಅಶೋಕ್ ಹೇಳಿದ್ದಾರೆ.ಈ ವೇಳೆ ಕ್ಲಬ್ ಗಳ ಬಗ್ಗೆ ಸದಸ್ಯರು ಪ್ರಸ್ತಾಪ ಮಾಡಿದ್ದಾರೆ.ನಾಲಾಯಕ್ ಗಳು ಇವರೆಲ್ಲಾ, ಏನು ಹುಡುಗಾಟ ಇದು ಎಂದು ಮಾಲ್ ವಿಚಾರಕ್ಕೆ ಶಾಸಕ ಬಸವರಾಜ ರಾಯರೆಡ್ಡಿ ಆಕ್ರೋಶ ಹೊರಹಾಕಿದ್ದಾರೆ.ಈ ವೇಳೆ ಸ್ಪೀಕರ್ ಯು ಟಿ ಖಾದರ್ ಬಡವರ ಬಗ್ಗೆ ಮಾತಾಡಿ ಮಾರಾಯರೇ, ಕ್ಲಬ್ ಬಗ್ಗೆ ಇಲ್ಲಿ ನಾನು ಎಂತ ಮಾತಾಡಲಿ ಎಂದು ಚರ್ಚೆ ಕೊನೆಗೊಳಿಸಿದ್ದಾರೆ