ಬೆಂಗಳೂರು;ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಪರಪ್ಪನ ಅಗ್ರಹಾರ ಜೈಲು ಸೇರಿರುವ ನಟ ದರ್ಶನ್ ಸೇರಿದಂತೆ ಎಲ್ಲಾ 17 ಆರೋಪಿಗಳ ನ್ಯಾಯಾಂಗ ಬಂಧನದ ಅವಧಿ ಇಂದಿಗೆ ಮುಕ್ತಾಯವಾಗುತ್ತೆ.ಹಾಗಾಗಿ ಇಂದು ಎಲ್ಲಾ 17 ಆರೋಪಿಗಳನ್ನು ಜೈಲಾಧಿಕಾರಿಗಳು ಜಡ್ಜ್ ಮುಂದೆ ಹಾಜರುಪಡಿಸಲಿದ್ದಾರೆ.
ಜುಲೈ 4 ರಂದು ಅವರ ನ್ಯಾಯಾಂಗ ಬಂಧನದ ಅವಧಿ ಮುಕ್ತಾಯವಾದಾಗ ಅವರನ್ನು ವೀಡಿಯೋ ಕಾನ್ಫರೆನ್ಸ್ ಮೂಲರ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿತ್ತು. ಇನ್ನು ಇಂದು ಕೂಡ ಪರಪ್ಪನ ಅಗ್ರಹಾರ ಹಾಗೂ ತುಮಕೂರು ಜೈಲಿನಲ್ಲಿರುವ ರೇಣುಕಾಸ್ವಾಮಿ ಕೊಲೆ ಪ್ರಕರಣ ಎಲ್ಲಾ 17 ಆರೋಪಿಗಳನ್ನು ವೀಡಿಯೋ ಕಾನ್ಫರೆನ್ಸ್ ಮೂಲಕ ಜಡ್ಜ್ ಮುಂದೆ ಹಾಜರುಪಡಿಸಲಿದ್ದಾರೆ. ಮಧ್ಯಾಹ್ನದ ಬಳಿಕ ಆರೋಪಿಗಳನ್ನು ಜಡ್ಜ್ ಮುಂದೆ ವೀಡಿಯೋ ಕಾನ್ಫರೆನ್ಸ್ ಮೂಲಕ ಹಾಜರು ಪಡಿಸಲಿದ್ದಾರೆ. ಅಲ್ಲದೇ ಇನ್ನು ಕೂಡ ಪ್ರಕರಣಕ್ಕೆ ಸಂಬಂಧಪಟ್ಟಂತೆ ಚಾರ್ಜ್ ಶೀಟ್ ಸಲ್ಲಿಕೆಯಾಗಿಲ್ಲ ಹಾಗಾಗಿ ಆರೋಪಿಗಳು ಬೇಲ್ ಗೆ ಅರ್ಜಿ ಸಲ್ಲಿಸಲು ಸಾಧ್ಯವಾಗಿಲ್ಲ. ಹೀಗಾಗಿ ಬಹುತೇಕ ಆರೋಪಿಗಳ ನ್ಯಾಯಾಂಗ ಬಂಧನದ ಅವಧಿ ವಿಸ್ತರಣೆಯಾಗಲಿದೆ.
ಇನ್ನು ಪ್ರಕರಣಕ್ಕೆ ಸಂಬಂಧಪಟ್ಟಂತೆ ಈಗಾಗಲೇ ಪೊಲೀಸರು ಮತ್ತೆ ಒಂದಷ್ಟು ಜನರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಪವಿತ್ರ ಗೌಡ ಸ್ನೇಹಿತ ಸಮತಾ ಗೌಡ, ಆರೋಪಿ ಪ್ರದೂಶ್ ಸ್ನೇಹಿತ ಕಾರ್ತಿಕ್ ಪುರೋಹಿತ್, ದರ್ಶನ್ ಅವರಿಗೆ ಹಣದ ಸಹಾಯ ಮಾಡಿದ ಮಾಜಿ ಉಪಮೇಯರ್ ಮೋಹನ್ ರಾಜ್, ದರ್ಶನ್ ಅವರ ಡೆವಿಲ್ ಸಿನಿಮಾದ ನಿರ್ದೇಶಕರಾದ ಮಿಲನ ಪ್ರಕಾಶ್ ಇವರಿಗೆಲ್ಲಾ ನೋಟಿಸ್ ನೀಡಿ ತನಿಖಾಧಿಕಾರಿ ಚಂದನ್ ವಿಚಾರಣೆಗೆ ಹಾಜರಾಗುವಂತೆ ತಿಳಿಸಿದ್ದರು. ಅದರಂತೆ ಅವರೆಲ್ಲಾ ವಿಚಾರಣೆಗೆ ಹಾಜರಾಗಿದ್ದರು.
ಇದರ ಮಧ್ಯೆ ಪೊಲೀಸರು ಡಿ ಗ್ಯಾಂಗ್ ಆರೋಪಿಗಳಿಗೆ ಯಾಕೆ ಜಾಮೀನು ನೀಡಬಾರದು ಎಂಬುವುದಕ್ಕೆ ಒಂದಷ್ಟು ಕಾರಣಗಳ ಪಟ್ಟಿಯನ್ನು ರೆಡಿ ಮಾಡಿದ್ದಾರೆ ಎನ್ನಲಾಗಿದೆ. ಅದರಂತೆ ನಾಳೆ ನ್ಯಾಯಾಲಯಕ್ಕ ಪೊಲೀಸರು ರಿಮಾಂಡ್ ಅರ್ಜಿ ಸಲ್ಲಿಸಲಿದ್ದಾರೆ.
ಪೊಲೀಸರು ರೆಡಿ ಮಾಡಿರುವ ಕಾರಣಗಳು ಇಂತಿವೆ
ತಾವು ಮಾಡುತ್ತಿರೋದು ಬಹು ದೊಡ್ಡ ಅಪರಾಧ ಅಂತಾ ಗೊತ್ತಿದ್ರಬ ಆರೋಪಿಗಳು ಕೊಲೆ ಮಾಡಿದ್ದಾರೆ.
ಕೊಲೆ ಬಳಿಕ ಅರೋಪಿಗಳು ಸಾಕ್ಷ್ಯ ಮಾಡಲು ಮುಂದಾಗಿದ್ದರು.
ಇನ್ನು ಆರೋಪಿಗಳು ಸಾಕ್ಷ್ಯ ನಾಶ ಮಾಡಿರುವ ಬಗ್ಗೆ FSL ರಿಪೋರ್ಟ್ ಬಂದಿಲ್ಲ.
ಒಂದೇ ವೇಳೆ ಈಗಲೇ ಅವರಿಗೆ ಜಾಮೀನು ನೀಡಿದ್ರೆ ಅವರು ಪ್ರಕರಣದ ಸಾಕ್ಷಿಗಳ ಮೇಲೆ ಪ್ರಭಾವ ಬೀರ್ತಾರೆ
ಜಾಮೀನು ಪಡೆದ್ರೆ ಕೋರ್ಟ್ ಮುಂದೆ ವಿಚಾರಣೆಗೆ ಬಾರದೇ ತಪ್ಪಿಸಿಕೊಳ್ಳಬಹುದು
A2 (ದರ್ಶನ್) ಆರೋಪಿಗೆ ಹಣ ಮತ್ತು ಅಭಿಮಾನಿ ಬಳಗ ಇರೋದರಿಂದ ಅವರ ಮೂಲಕ ಸಾಕ್ಷಿಗಳನ್ನು ನಾಶಪಡಿಸಬಹುದು
ಜಾಮೀನು ಪಡೆದು ಆರೋಪಿಗಳು ವಿದೇಶಕ್ಕೆ ಪರಾರಿಯಾಗಬಹುದು
ಇನ್ನು ತನಿಖೆ ನಡೆಯುತ್ತಿರೋದರಿಂದ ಈಗಲೇ ಬೇಲ್ ಸಿಕ್ರೆ ಅವರು ಸಾಕ್ಷಿಗಳ ಮೇಲೆ ಪ್ರಭಾವ ಬೀರಿ ತನಿಖೆಗೆ ತೊಡಕಾಗಬಹುದು.
ಈ ರೀತಿ ಒಂದಷ್ಟು ಕಾರಣಗಳನ್ನು ಪೊಲೀಸರು ಸಿದ್ಧಪಡಿಸಿಕೊಂಡಿದ್ದು, ಆರೋಪಿಗಳಿಗೆ ಸದ್ಯಕ್ಕೆ ಜಾಮೀನು ನೀಡಬಾರದು ಎಂದು ಕೋರ್ಟ್ ಗೆ ಮನವಿ ಸಲ್ಲಿಸಲಿದ್ದಾರೆ. ಮತ್ತೊಂದು ಕಡೆ ಇನ್ನೂ ಕೂಡ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ಜಾರ್ಜ್ ಶೀಟ್ ಸಲ್ಲಿಸದೇ ಇರೋದರಿಂದ ಆರೋಪಿಗಳಿಗೆ ಸದ್ಯಕ್ಕೆ ಜಾಮೀನು ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ. ಪೊಲೀಸರು ಯಾವಾಗ ಚಾರ್ಜ್ ಶೀಟ್ ಸಲ್ಲಿಸುತ್ತಾರೆ ಎಂದು ಆರೋಪಿಗಳ ಪರವಾದ ವಕೀಲರು ಕಾದು ಕುಳಿತಿದ್ದಾರೆ.