ಯಾವನಿಗೊತ್ತು ನಾಳೆ ಸತ್ರು ಸಾಯ್ಬಹುದು. ಇನ್ಯಾರಿಗೊತ್ತು ಸೆಂಚುರಿ ಹೊಡ್ದು ಶತಕವೀರರ ದಾಖಲೆನೂ ಮುರಿಬಹುದು. ಫೈನಲಿ ನಮ್ ಲೈಫ್ expiry ಡೇಟ್ ನಮ್ಗೆ ಗೊತ್ತಿಲ್ಲ. ಹೀಗಿರುವಾಗ ತಲೆಮೇಲೆ ಆಕಾಶ ಬಿದ್ದಿರೊ ಹಾಗೆ, ಭೂಮಿ ಬಾಯಿ ಬಿಟ್ಟಿರೊ ಹಾಗೆ ಟೆಂನ್ಶನ್ ಯಾಕೆ. ಚಿಕ್ಕದಾದ ಈ ಜೀವ್ನಕ್ಕೆ ಬೇಲಿ ಯಾವ ಕಾರಣಕ್ಕೆ ಹಾಕೊಬೇಕು. ಬದುಕಿನ ಚಿಕ್ಕ ಚಿಕ್ಕ ಕ್ಷಣಗಳನ್ನ ಎಂಜಾಯ್ ಮಾಡೋಣ. ಬದ್ಕಲ್ಲೊಂದು ಶಿಸ್ತಿರ್ಬೇಕು ಹೌದು. ಆದ್ರೆ ಅದೇ ಶಿಸ್ತು ಲೈಫ್ ಗೆ ಜೈಲಾಗಬಾರದಲ್ವಾ.
ಆಗಾಗ ಮನ್ಸಿಗ್ ಬಂದಾಗ ಏಳೋಣ, ಬೆಳ್ಗಾಗೋಕೆ ಎರಡ್ ಗಂಟೆ ಬಾಕಿ ಇದೆ ಅನ್ನುವಾಗ ಮಲ್ಗೋಣ. ಇಂತದ್ದೆ ತಿನ್ಬೇಕು ಅನ್ನೊ ರೂಲ್ಸ್ ಯಾಕೆ? ನಾಲ್ಗೆ ಏನ್ ಕೇಳುತ್ತೆ ಅದೆಲ್ಲವನ್ನು ತಿನ್ನೋಣ. ಜೀರ್ಣ ಆಗ‌್ತಿಲ್ಲ ಅಂದ್ರೆ ಮನ್ಸಾದಾಗ ಬೆಳ್ಗೆ ಎದ್ದು ಎರಡು ರೌಂಡ್ ಓಡಿದ್ರೆ ಆಯ್ತು. ಕುಡಿಬೇಕು ಅನ್ಸಿದ್ರೆ ಕುಡಿಯೋಣ, ಸಿಗ್ರೇಟ್ ಎಳೆಯೋದ್ರಲ್ಲೂ ಮಜಾ ಇದೆ ಅನ್ಸದ್ರೆ ‘ನಾನು ಮುಖೇಶ್’ ನನ್ನ ಮಾತ್ರ ನೆನಪು ಮಾಡಿಕೊಳ್ದೆ ಹಾಗೆ ಒಂದ್ ಧಮ್ ಎಳೆಯೋಣ. ಆದ್ರೆ ಅತಿಯಾದ್ರೆ ಅಮೃತಾನೂ ವಿಷ ಅನ್ನೋದು ಮನ್ಸಲ್ಲಿರ್ಲಿ ಸಾಕಷ್ಟೆ. ಒಮ್ಮೊಮ್ಮೆ ಬಾಸ್ ಗೆ ಸುಳ್ಳು ಹೇಳಿ ರಜೆ ಹಾಕೋಣ. ಅಜ್ಜಿ ಹೋಗ್ಬಿಟ್ರು ಅಂತಾ ಕಥೆ ಕಟ್ಟಿ ಫ್ರೆಂಡ್ಸ್ ಜೊತೆ ಜಾಲಿ ಟ್ರಿಪ್ ಮಾಡೋಣ. ಆದ್ರೆ ಆ ಸುಳ್ಳು ಮತ್ತೆ ಮತ್ತೆ ಸುಳ್ಳು ಪೋಣಿಸೊ ಹಾಗೆ ಮಾಡ್ದೆ ಇರ್ಲಿ ಅಷ್ಟೆ. ಸ್ವಲ್ಪ ಸೋಮಾರಿತನಾನೂ ಇರ್ಲಿ ಒಂದ್ ಸ್ವಲ್ಪ ಜವಬ್ಧಾರಿನೂ ಇರ್ಲಿ. ಉಡಾಫೆ ನೂ ಇರ್ಲಿ ಹಾಗೆ ಬದ್ಕಲ್ಲೊಂದು ಛಲಾನೂ ಇರ್ಲಿ. ಆಗಾಗ ಇವ್ನಿಗೇನು ಹುಚ್ಚಾ ಅನ್ನೋ ಹಾಗೆ ತಮಾಷೆ ತರ್ಲೆ ಮಾಡೋಣ, ಲೈಫ್ ಬಗ್ಗೆ ಗಂಭೀರವಾಗಿ ಬೋಧನೆ ಮಾಡುವಷ್ಟು ಗಂಭೀರ ವ್ಯಕ್ತಿ ಅಂತಾನೂ ಅನ್ನಿಸ್ಕೊಳ್ಳೋಣ. ಒಮ್ಮೊಮ್ಮೆ ಇವ್ನಿಗೆ ಶಿಸ್ತೇ ಇಲ್ವಾ ಅನ್ನೊ ಹಾಗೆ ಡ್ರೆಸ್ ಮಾಡೋಣ, ಒಮ್ಮೊಮ್ಮೆ ಶಿಸ್ತಿನ ಸಿಪಾಯಿನೂ ಮೀರಿಸೊ ಹಾಗೆ ಟಿಪ್ ಟಾಪ್ ಆಗಿ ಹೋಗಣ. ಜೊತೆಗೆ ಒಂದ್ ಲವ್ವು ಆಗ್ಲಿ ಒಂದೆರಡ್ ಲವ್ ಫೇಲ್ಯೂರ್ ಕೂಡ ಆಗೋಗ್ಲಿ. ಇದ್ರ ನಡುವೆ ನಾನು ಕುಳ್ಳಕ್ಕಿದ್ದೀನಿ, ದಪ್ಪಕ್ಕಿದ್ದೇನೆ, ಜಾಸ್ತಿ ಉದ್ದ ಆಗ್ಬಿಟ್ಟೆ ಅಥವಾ ನನ್ ಸೊಡ್ಡು ಸರಿಯಿಲ್ಲ ಹೀಗೆ ನಮ್ ಬಗ್ಗೇನೆ ಜಿಗುಪ್ಸೆ ಆಗುವಂತಹ ಯೋಚ್ನೆ ಅಂತೂ ಬೇಡ್ವೆ ಬೇಡ. ಹೇಗಿದ್ದಿವೋ ಹಾಗೆ ಬದ್ಕೋಣ.
ಫೈನಲಿ ಹೀಗೆ ಬದುಕಬೇಕು ಅನ್ನೊ ಹಠ ಯಾಕೆ? ಹೇಗ್ ಆಗುತ್ತೋ ಹಾಗೆ ಬದ್ಕೋಣ.. ಹೆಂಗೆಂಗೊ ಬದ್ಕೋದೆ ಲೈಫ್ ಕಣ್ರಿ. ಏನಂತೀರಿ?