ಬೆಂಗಳೂರು;ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಪರಪ್ಪನ ಅಗ್ರಹಾರ ಜೈಲು ಸೇರಿ ಜುಲೈ 22ಕ್ಕೆ ಒಂದು ತಿಂಗಳಾಗುತ್ತೆ. ಜೈಲಿನ ಊಟ, ವಾತಾವರಣ ಇದಕ್ಕೆಲ್ಲಾ ಹೊಂದಿಕೊಳ್ಳಲು ಸಾಧ್ಯವಾಗದೆ ನಟ ದರ್ಶನ್ ಅಲ್ಲಿ ಕ್ಷಣ ಕ್ಷಣಕ್ಕೂ ಪರದಾಟ ನಡೆಸುತ್ತಿದ್ದಾರೆ. ಇನ್ನು ಜೈಲಿ ಊಟ ಸೇವೆನೆಯಿಂದ ನಟ ದರ್ಶನ್ ಅವರ ಆರೋಗ್ಯಗಲ್ಲಿ ಏರುಪೇರಾಗಿದೆ ಎಂದು ಹೇಳಲಾಗುತ್ತಿದೆ. ಅಲ್ಲದೇ ಅವರಿಗೆ ಬೇಧಿ ಕಾಣಿಸಿಕೊಂಡಿದ್ದು ಅದಕ್ಕಾಗಿ ಮನೆಯೂಟಕ್ಕೆ ವ್ಯವಸ್ಥೆ ಕಲ್ಪಿಸುವಂತೆ ಈಗಾಗಲೇ ಹೈಕೋರ್ಟ್ ಗೆ ಅರ್ಜಿ ಕೂಡ ಸಲ್ಲಿಸಿದ್ದಾರೆ. ಈ ಅರ್ಜಿಯ ವಿಚಾರಣೆ ನಾಳೆ ನಡೆಯಲಿದೆ.
ಇನ್ನು ನಾಳೆಗೆ ದರ್ಶನ್ ಸೇರಿದಂತೆ ರೇಣುಕಾಸ್ವಾಮಿ ಕೊಲೆ ಪ್ರಕರಣದ ಎಲ್ಲಾ 17 ಆರೋಪಿಗಳ ನ್ಯಾಯಾಂಗ ಬಂಧನದ ಅವಧಿ ಮುಕ್ತಾಯವಾಗಲಿದೆ. ನಾಳೆ ಜೈಲಾಧಿಕಾರಿಗಳು ಅವರನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಿದ್ದಾರೆ. ಜುಲೈ 4 ರಂದು ಅವರ ನ್ಯಾಯಾಂಗ ಬಂಧನದ ಅವಧಿ ಮುಕ್ತಾಯವಾದಾಗ ಅವರನ್ನು ವೀಡಿಯೋ ಕಾನ್ಫರೆನ್ಸ್ ಮೂಲರ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿತ್ತು. ಇನ್ನು ನಾಳೆಯೂ ಪರಪ್ಪನ ಅಗ್ರಹಾರ ಹಾಗೂ ತುಮಕೂರು ಜೈಲಿನಲ್ಲಿರುವ ರೇಣುಕಾಸ್ವಾಮಿ ಕೊಲೆ ಪ್ರಕರಣ ಎಲ್ಲಾ 17 ಆರೋಪಿಗಳನ್ನು ವೀಡಿಯೋ ಕಾನ್ಫರೆನ್ಸ್ ಮೂಲಕ ಜಡ್ಜ್ ಮುಂದೆ ಹಾಜರುಪಡಿಸಲಿದ್ದಾರೆ.
ಇದರ ಮಧ್ಯೆ ಪೊಲೀಸರು ಡಿ ಗ್ಯಾಂಗ್ ಆರೋಪಿಗಳಿಗೆ ಯಾಕೆ ಜಾಮೀನು ನೀಡಬಾರದು ಎಂಬುವುದಕ್ಕೆ ಒಂದಷ್ಟು ಕಾರಣಗಳ ಪಟ್ಟಿಯನ್ನು ರೆಡಿ ಮಾಡಿದ್ದಾರೆ ಎನ್ನಲಾಗಿದೆ. ಅದರಂತೆ ನಾಳೆ ನ್ಯಾಯಾಲಯಕ್ಕ ಪೊಲೀಸರು ರಿಮಾಂಡ್ ಅರ್ಜಿ ಸಲ್ಲಿಸಲಿದ್ದಾರೆ.
ಪೊಲೀಸರು ರೆಡಿ ಮಾಡಿರುವ ಕಾರಣಗಳು ಇಂತಿವೆ
ತಾವು ಮಾಡುತ್ತಿರೋದು ಬಹು ದೊಡ್ಡ ಅಪರಾಧ ಅಂತಾ ಗೊತ್ತಿದ್ರಬ ಆರೋಪಿಗಳು ಕೊಲೆ ಮಾಡಿದ್ದಾರೆ.
ಕೊಲೆ ಬಳಿಕ ಅರೋಪಿಗಳು ಸಾಕ್ಷ್ಯ ಮಾಡಲು ಮುಂದಾಗಿದ್ದರು.
ಇನ್ನು ಆರೋಪಿಗಳು ಸಾಕ್ಷ್ಯ ನಾಶ ಮಾಡಿರುವ ಬಗ್ಗೆ FSL ರಿಪೋರ್ಟ್ ಬಂದಿಲ್ಲ.
ಒಂದೇ ವೇಳೆ ಈಗಲೇ ಅವರಿಗೆ ಜಾಮೀನು ನೀಡಿದ್ರೆ ಅವರು ಪ್ರಕರಣದ ಸಾಕ್ಷಿಗಳ ಮೇಲೆ ಪ್ರಭಾವ ಬೀರ್ತಾರೆ
ಜಾಮೀನು ಪಡೆದ್ರೆ ಕೋರ್ಟ್ ಮುಂದೆ ವಿಚಾರಣೆಗೆ ಬಾರದೇ ತಪ್ಪಿಸಿಕೊಳ್ಳಬಹುದು
A2 (ದರ್ಶನ್) ಆರೋಪಿಗೆ ಹಣ ಮತ್ತು ಅಭಿಮಾನಿ ಬಳಗ ಇರೋದರಿಂದ ಅವರ ಮೂಲಕ ಸಾಕ್ಷಿಗಳನ್ನು ನಾಶಪಡಿಸಬಹುದು
ಜಾಮೀನು ಪಡೆದು ಆರೋಪಿಗಳು ವಿದೇಶಕ್ಕೆ ಪರಾರಿಯಾಗಬಹುದು
ಇನ್ನು ತನಿಖೆ ನಡೆಯುತ್ತಿರೋದರಿಂದ ಈಗಲೇ ಬೇಲ್ ಸಿಕ್ರೆ ಅವರು ಸಾಕ್ಷಿಗಳ ಮೇಲೆ ಪ್ರಭಾವ ಬೀರಿ ತನಿಖೆಗೆ ತೊಡಕಾಗಬಹುದು.
ಈ ರೀತಿ ಒಂದಷ್ಟು ಕಾರಣಗಳನ್ನು ಪೊಲೀಸರು ಸಿದ್ಧಪಡಿಸಿಕೊಂಡಿದ್ದು, ಆರೋಪಿಗಳಿಗೆ ಸದ್ಯಕ್ಕೆ ಜಾಮೀನು ನೀಡಬಾರದು ಎಂದು ಕೋರ್ಟ್ ಗೆ ಮನವಿ ಸಲ್ಲಿಸಲಿದ್ದಾರೆ. ಮತ್ತೊಂದು ಕಡೆ ಇನ್ನೂ ಕೂಡ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ಜಾರ್ಜ್ ಶೀಟ್ ಸಲ್ಲಿಸದೇ ಇರೋದರಿಂದ ಆರೋಪಿಗಳಿಗೆ ಸದ್ಯಕ್ಕೆ ಜಾಮೀನು ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ. ಪೊಲೀಸರು ಯಾವಾಗ ಚಾರ್ಜ್ ಶೀಟ್ ಸಲ್ಲಿಸುತ್ತಾರೆ ಎಂದು ಆರೋಪಿಗಳ ಪರವಾದ ವಕೀಲರು ಕಾದು ಕುಳಿತಿದ್ದಾರೆ.