ಮನೆ Latest News ಮುಡಾ ಸೈಟ್ ಹಂಚಿಕೆ ಪ್ರಕರಣ; ಸಿಎಂ ಸಿದ್ದರಾಮಯ್ಯ ವಿರುದ್ಧ ಚುನಾವಣೆ ಆಯೋಗಕ್ಕೆ ಎರಡನೇ ದೂರು

ಮುಡಾ ಸೈಟ್ ಹಂಚಿಕೆ ಪ್ರಕರಣ; ಸಿಎಂ ಸಿದ್ದರಾಮಯ್ಯ ವಿರುದ್ಧ ಚುನಾವಣೆ ಆಯೋಗಕ್ಕೆ ಎರಡನೇ ದೂರು

0

ಬೆಂಗಳೂರು : ಮುಡಾ ಸೈಟ್ ಹಂಚಿಕೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಿಎಂ ಸಿದ್ದರಾಮಯ್ಯ ವಿರುದ್ಧ ಚುನಾವಣೆ ಆಯೋಗಕ್ಕೆ ಎರಡನೇ ದೂರು ನೀಡಲಾಗಿದೆ.

ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಎರಡು ಪ್ರತ್ಯೇಕ ದೂರು ಸಲ್ಲಿಸಲಾಗಿದೆ. ದೂರಿನಲ್ಲಿ 2018-23ರ ಚುನಾವಣಾ ಅಫೀಡಿವೇಟ್ ನಲ್ಲಿ ಸುಳ್ಳು ಮಾಹಿತಿ ನೀಡಿದ್ದಾರೆ ಎಂದು ಆರೋಪ ಮಾಡಲಾಗಿದೆ. ಸಾಮಾಜಿಕ ಕಾರ್ಯಕರ್ತ ಟಿಜೆ ಅಬ್ರಹಾಂ ಎನ್ನುವವರು ಸಿಎಂ ಸಿದ್ದರಾಮಯ್ಯ ಅವರು ಸುಳ್ಳು ಮಾಹಿತಿ ನೀಡಿದ್ದಾರೆ ಎಂದು ಮುಖ್ಯ ಚುನಾವಣಾಧಿಕಾರಿಗಳಿಗೆ ದೂರು ಕೊಟ್ಟಿದ್ದಾರೆ.

2018ರ ವಿಧಾನಸಭೆ ಚುನಾವಣೆಯ ವೇಳೆ ತಾನು  3.16 ಎಕರೆ ಕೃಷಿ ಜಮೀನು ಹೊಂದಿದ್ದು, ಪತ್ನಿ ಪಾರ್ವತಿ ಬಳಿ 3 ಕೆರೆ 16 ಗುಂಟೆ ಜಮೀನು ಎಂದು ಆಫೀಡಿವೇಟ್ ನಲ್ಲಿ ಸುಳ್ಳು ಮಾಹಿತಿ ನೀಡಿದ್ದರು.  3 ಎಕರೆ 16 ಗುಂಟೆ ಕೃಷಿ ಜಮಿನು ಎಂದು ಹೇಳಿದ್ದರು. ಇದರ ಮೌಲ್ಯ 25 ಲಕ್ಷ ಎಂದು ಸಿಎಂ ಸಿದ್ದರಾಮಯ್ಯ ಆಫೀಡಿವೇಟ್ ನಲ್ಲಿ  ಉಲ್ಲೇಖಿಸಿದ್ದರು. 2005ರಲ್ಲಿ ಜಮೀನು ಪರಿವರ್ತನೆ ಮಾಡಿಸಿದ್ದ ದಾಖಲೆ ನೀಡಿ ದೂರು ಸಲ್ಲಿಕೆಯಾಗಿದೆ.

ಮುಡಾದ 14 ಸೈಟ್ಗಳ ಅಸಲಿ ಮಾರುಕಟ್ಟೆಯ ಮೌಲ್ಯ 34 ಕೋಟಿ . ಆದರೆ 2023ರ ವಿಧಾನಸಭೆ ಚುನಾವಣೆಯ ವೇಳೆ 14 ಮುಡಾ ಸೈಟ್ಗಳ ಮೌಲ್ಯ ಕೇವಲ 8 ಕೋಟಿ ಎಂದು ಅಫಿಡಿಟ್ ನಲ್ಲಿ ಸಿಎಂ ಸಿದ್ದರಾಮಯ್ಯ  ನಮೂದಿಸಿದ್ದಾರೆ. ಬೇಕು ಅಂತಲೇ ಉದ್ದೇಶಪೂರ್ವಕವಾಗಿ ಸಿಎಂ ಸಿದ್ದರಾಮಯ್ಯ ತಪ್ಪು ಮಾಹಿತಿ ನೀಡಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ಟಿಜೆ ಅಬ್ರಹಾಂ ಅವರು ಮುಖ್ಯ ಚುನಾವಣಾ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.

ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯ ಅವರ ಮುಖವಾಡ  ಕಳಚಿ ಬಿದ್ದಿದೆ; ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ‌

ಮುಡಾ ಪ್ರಕರಣದಲ್ಲಿ ಮುಂದಿನ ಹೋರಾಟ ಕುರಿತು ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ‌ ಸುದ್ದಿಗೋಷ್ಟಿ ನಡೆಸಿದ್ರು. ಈ ವೇಳೆ ಮಾತನಾಡಿದ ಅವರು ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯ ಅವರ ಮುಖವಾಡ  ಕಳಚಿ ಬಿದ್ದಿದೆ ಎಂದರು.

ಭ್ರಷ್ಟಾಚಾರ ರಹಿತ ಆಡಳಿತ ಕೊಡೋದಾಗಿ‌ ಅಧಿಕಾರಕ್ಕೇರುವ ಸಮಯದಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ ಕೆ ಶಿವಕುಮಾರ್ ಅವರು ರಾಜ್ಯದ ಜನರಿಗೆ ಭರವಸೆ ಕೊಟ್ಟಿದ್ರು. ಆದರೆ ಅಧಿಕಾರಕ್ಕೆ ಬಂದು ಒಂದು ವರ್ಷ ಎರಡು ತಿಂಗಳು ತುಂಬಿದೆ. ಒಂದೇ ವರ್ಷದಲ್ಲಿ ಈ ಸರ್ಕಾರದ ಮುಖವಾಡ ಕಳಚಿ ಬಿದ್ದಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಹಲವು ಭ್ರಷ್ಟಾಚಾರ ಪ್ರಕರಣಗಳು ಬಯಲಾಗಿರೋದರಿಂದ ಕಾಂಗ್ರೆಸ್ ಸರ್ಕಾರದ ನೈಜ ಬಣ್ಣ ಜನತೆಗೆ ಅರ್ಥವಾಗಿದೆ ಎಂದು ಅವರು ಹೇಳಿದ್ದಾರೆ.ಸಿದ್ದರಾಮಯ್ಯ ಅವರು ನಾನು ಸಾಮಾಜಿಕ ನ್ಯಾಯ ಕೊಡ್ತೀನಿ ಅಂತಾ  ಭರವಸೆ ಕೊಟ್ಟು ಸಿಎಂ ಸ್ಥಾನದಲ್ಲಿ ಕೂತಿದ್ದಾರೆ. ಆದರೆ ಈಗ ಅವರ ನಿಜ ಬಣ್ಣ ಬಯಲಾಗಿದೆ ಎಂದಿದ್ದಾರೆ.

ಇನ್ನು ವಾಲ್ಮೀಕಿ ಅಭಿವೃದ್ಧಿ ನಿಗಮದ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾತನಾಡಿದ ಅವರು ಯೂನಿಯನ್ ಬ್ಯಾಂಕ್ ಬರೆದ ಪತ್ರದ ಆಧಾರದಲ್ಲಿ ಸಿಬಿಐ ತನಿಖೆ ನಡೀತಿದೆ.ಇನ್ನೊಂದು ಕಡೆ ಎಸ್ಐಟಿ ತನಿಖೆ ನಡೆಯುತ್ತಿದೆ. ಇದರ ಮಧ್ಯೆ ಇಂದು ಇಡಿ ದಾಳಿ ಕೂಡ ನಡೆದಿದೆ. ರಾಜ್ಯದಲ್ಲಿ  ಕಂಡರಿಯದ ಭ್ರಷ್ಟಾಚಾರ ನಡೆದಿದೆ ಎಂದರು.

ಅಲ್ಲದೇ ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು 1991 ರ ನಿಯಮದ ಪ್ರಕಾರ, 1 ಎಕರೆ ಜಮೀನು ಕಳೆದುಕೊಂಡರೆ 40*60 ವಿಸ್ತೀರ್ಣದ ಒಂದೇ ನಿವೇಶನ‌ ಕೊಡಬೇಕು.3-4 ಎಕರೆ ಕಳೆದುಕೊಂಡರೆ 40*60 ವಿಸ್ತೀರ್ಣದ ಎರಡು ನಿವೇಶನ ಮಾತ್ರ ಕೊಡಬೇಕು. ಅಂದರೆ ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಅವರ 3.26 ಎಕರೆ ಜಮೀನಿಗೆ ಪರಿಹಾರವಾಗಿ ಎರಡೇ ನಿವೇಶನ ಕೊಡಬೇಕಾಗಿತ್ತು.ಆದರೆ ಮುಡಾ ಅವಿರಗೆ 14 ನಿವೇಶನ ಕೊಟ್ಟಿದೆ.ಇದು ಸಂಪೂರ್ಣವಾಗಿ ಕಾನೂನು ಬಾಹಿರ ಕ್ರಮ ಎಂದ್ರು.

ಮೈಸೂರಿನಲ್ಲಿ ಮುಡಾದಲ್ಲಿ ಬದು ದೊಡ್ಡ ಲ್ಯಾಂಡ್ ಸ್ಕ್ಯಾಂ ನಡೆದಿದೆ.ಮುಡಾದಲ್ಲಿ ಸಾಕಷ್ಟು ವಿಚಾರಗಳು ಈಗ ಒಂದೊಂದಾಗೇ ಬಯಲಿಗೆ ಬರ್ತಿವೆ.ಅನೇಕ ತಪ್ಪು ಮಾಹಿತಿಗಳನ್ನು ಸಿದ್ದರಾಮಯ್ಯ ಮುಡಾ ವಿಚಾರದಲ್ಲಿ ಹೇಳಿದ್ದಾರೆ.ಸಿದ್ದರಾಮಯ್ಯ ಅವರ ಮುಖವಾಡ ಈ‌ಪ್ರಕರಣದಲ್ಲಿ ಕಳಚಿ ಬಿದ್ದಿದೆ.ಇಲ್ಲಿ ಬೆಲೆ ಬಾಳುವ ಭೂಮಿ ಕಬಳಿಸಲಾಗಿದೆ.ಅಧಿಕಾರದ ಪ್ರಭಾವ ಬಳಸಿ, ನಿಯಮ ಮೀರಿ ಪ್ರತೀ ಹಂತದಲ್ಲೂ ಅಕ್ರಮ ನಡೆದಿದೆ.ಇದರ ನೈತಿಕ ಹೊಣೆ ಸಿದ್ದರಾಮಯ್ಯ ಹೊರಬೇಕು ಎಂದು ವಿಜಯೇಂದ್ರ ಆಗ್ರಹಿಸಿದ್ದಾರೆ.

ಮಹಾದೇವಪ್ಪನವರೇ ನಿಮ್ಮ ಹೆಂಡ್ತಿಗೂ ಫ್ರೀ ನನ್ನ ಹೆಂಡ್ತಿಗೂ ಫ್ರೀ, ಕಾಕಾ ಸಾಹೇಬ್ ನಿನಗೂ ಫ್ರೀ ಅಂದಿದ್ರು. ಬಡ ಹೆಣ್ಣು ಮಕ್ಕಳಿಗೆ ಎರಡು ಸಾವಿರ ರೂ ಕೊಡ್ತೀವಿ ಅಂತ ಹೇಳಿ, ತಮ್ಮ ಪತ್ನಿಗೆ ಕೋಟಿ ಬೆಲೆ ಬಾಳುವ 14 ನಿವೇಶನಗಳನ್ನು ಹಂಚಿಕೆ ಮಾಡಿಸಿದ್ದಾರೆ.ಇದನ್ನು ರಾಜ್ಯದ ಜನ ಪ್ರಶ್ನೆ ಮಾಡ್ತಿದ್ದಾರೆ.ತಮ್ಮ ಅಧಿಕಾರದ ಅವಧಿಯಲ್ಲಿ ಸೈಟುಗಳನ್ನು ಮಾಡಿಸಿ ತಮ್ಮದೇ ಸರ್ಕಾರದ ಅವಧಿಯಲ್ಲಿ ಪರಿಹಾರ ಕೇಳಿದ್ದಾರೆ.ಸಿಎಂ ಪತ್ನಿ ಪಾರ್ವತಿಯವರಿಗೆ 14 ನಿವೇಶನಗಳು ಹಂಚಿಕೆ ಆಗಿದೆ, ಇದಕ್ಕೆ ಸಿಕ್ಕಿದ್ದು ಕಡಿಮೆ, ಮಾರುಕಟ್ಟೆ ಮೌಲ್ಯ 62 ಕೋಟಿ ಕೊಡಬೇಕಾಗುತ್ತದೆ ಅಂದಿದ್ದಾರೆ.2012 ರಲ್ಲಿ ಆ ಜಮೀನಿಗೆ ಕ್ರಯ ಪತ್ರ ಆಗಿದೆ.ಮುಡಾ ಸ್ವಾಧೀನ ಪ್ರಕ್ರಿಯೆ 2004 ರಲ್ಲೂ ಜಾರಿಯಲ್ಲಿ ಇತ್ತು.ಇದು ಮುಡಾ ಆರ್‌ಟಿಸಿಯಲ್ಲಿ ಈ ಜಮೀನು ಸ್ವಾಧೀನ ಬಗ್ಗೆ ಉಲ್ಲೇಖ ಇದೆ.ಇಷ್ಟಾದರೂ ಪಾರ್ವತಿ ಅವರಿಗೆ ಅವರ ಸೋದರ ಗಿಫ್ಟ್ ಡೀಡ್ ರೂಪದಲ್ಲಿ ಹೇಗೆ ಕೊಡಲು ಸಾಧ್ಯ? ಎಂದು ಪ್ರಶ್ನೆ ಮಾಡಿದ್ದಾರೆ.

ಆ ಜಮೀನು ಕೃಷಿ ಭೂಮಿ‌ ಅಂದಿದ್ದೂ ತಪ್ಪು ಮಾಹಿತಿಯೇ?ಸಿದ್ದರಾಮಯ್ಯ ಅವರ 2013 ರ ಅಫಿಡವಿಟ್ ನಲ್ಲಿ ಈ ಜಮೀನಿನ ಉಲ್ಲೇಖವೇ ಆಗಿಲ್ಲ.ಇದು ಚುನಾವಣಾ ನೀತಿ ಸಂಹಿತೆ ಹಾಗೂ ಜನಪ್ರತಿನಿಧಿಗಳ ಕಾಯ್ದೆಗಳಿಗೆ ವಿರುದ್ಧವಾಗಿದೆ.ಇದರ ಬಗ್ಗೆ ಚುನಾವಣಾ ಆಯೋಗಕ್ಕೆ ಬಿಜೆಪಿಯಿಂದ ದೂರು ಕೊಡ್ತೇವೆ. ಶುಕ್ರವಾರ ನಾನು, ಅಶೋಕ್ , ಅಶ್ವತ್ಥ್ ನಾರಾಯಣ್ ಸೇರಿ ಮೈಸೂರಲ್ಲಿ ಬೃಹತ್ ಪ್ರತಿಭಟನೆ ಮಾಡುತ್ತೇವೆ. ಸಿಎಂ ಹಾಗೂ ಅವರ ಸಚಿವರ ವಿರುದ್ಧ ‌ಪ್ರತಿಭಟನೆ ಮಾಡುತ್ತೇವೆ ಎಂದಿದ್ದಾರೆ.ಇನ್ನು ವಿಜಯೇಂದ್ರ ಅವರ ಸುದ್ದಿಗೋಷ್ಟಿಯಸಲ್ಲಿ ಶಾಸಕ ಡಾ.ಸಿ.ಎನ್.ಅಶ್ವತ್‌ನಾರಾಯಣ, ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ಮಾಜಿ ಸಚಿವ ನಾರಾಯಣ ಗೌಡ ಉಪಸ್ಥಿತರಿದ್ದರು.