ಬೆಂಗಳೂರು; ವಿಧಾನಸಭೆದಿಂದ ವಿಧಾನಪರಿಷತ್ತಿಗೆ ನಡೆದ ಉಪ ಚುನಾವಣೆಯಲ್ಲಿ ಆಯ್ಕೆಯಾದ ಬಸನಗೌಡ ಬಾದರ್ಲಿ ಎಂಎಲ್ಸಿಯಾಗಿ ಇಂದು ಪ್ರಮಾಣವಚನ ಸ್ವೀಕರಿಸಿದರು. ಸಭಾಪತಿ ಬಸವರಾಜ್ ಹೊರಟ್ಟಿಯವರು ಪ್ರಮಾಣವಚನ ಭೋದನೆ ಮಾಡಿದ್ರು.
ಈ ಕಾರ್ಯಕ್ರಮದಲ್ಲಿ ಡಿಸಿಎಂ ಡಿಕೆಶಿವಕುಮಾರ್, ಸಚಿವರಾದ ಕೆ.ಹೆಚ್.ಮುನಿಯಪ್ಪಎನ್.ಎಸ್.ಬೋಸರಾಜು,ಮಾಜಿ ಸಂಸದ ಉಗ್ರಪ್ಪ,ಸಲೀಂ ಅಹ್ಮದ್ ಉಪಸ್ಥಿತರಿದ್ದರು.
ಬಳಿಕ ಮಾತನಾಡಿದ ಡಿಸಿಎಂ ಡಿಕೆಶಿವಕುಮಾರ್ ನೂತನವಾಗಿ ಆಯ್ಕೆಯಾದ ಬಸನಗೌಡ ಬಾದರ್ಲಿಯವರು ಬಹಳ ವರ್ಷಗಳ ಪಕ್ಷ ಕ್ಕಾಗಿ ಹೋರಾಟ ಮಾಡಿಕೊಂಡ ಬಂದವರು.ಮಲ್ಲಿಕಾರ್ಜುನ, ಸಿಎಂ ನಾನು,ರಾಹುಲ್ ಗಾಂಧಿ ಯೋಚನೆ ಮಾಡಿ ಎಂಎಲ್ಸಿ ಸ್ಥಾನ ನೀಡಿದ್ದೇವೆ.ಪಕ್ಷಕ್ಕೆ ದೊಡ್ಡ ಆಸ್ತಿಯಾಗಬೇಕು.ಸ್ಥಳೀಯ ಮಟ್ಟದಲ್ಲಿ ಭಿನ್ನಮತ ಸೈಡಿಗೆ ಇಟ್ಟು 2028ರ ವಿಧಾನಸಭೆ ಚುನಾವಣೆಯಲ್ಲಿ ಈಗ ಇರುವ ಸ್ಥಾನಕ್ಕಿಂತ ಹೆಚ್ಚು ಸ್ಥಾನಗಳಿಸಬೇಕು.ಆ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ಕಾರ್ಯಕರ್ತರಿಗೆ,ಮುಖಂಡರಿಗೆ ಡಿಸಿಎಂ ಡಿ ಕೆ ಶಿವಕುಮಾರ್ ಕರೆ ನೀಡಿದ್ರು.
ಇನ್ನು ವಿಧಾನಸೌಧದಲ್ಲಿ ಫ್ಲೆಕ್ಸ್ ಹಾಕಿದವರ ವಿರುದ್ದ ಗರಂ ಆದ ಡಿ ಕೆ ಶಿವಕುಮಾರ್, ಯಾರೋ ಫ್ಲೆಕ್ಸ್ ಹಾಕಿಸಿದ್ದು ಕೇಸ್ ಹಾಕಿಸ್ತೀನಿ ಎಂದು ಗುಡುಗಿದ್ರು. ಮೊಹಮ್ಮದ್ ನಲಪಾಡ್ ಗೆ ಡಿಸಿಎಂ ಡಿಕೆಶಿ ಇದೇ ವೇಳೆ ವಾರ್ನಿಂಗ್ ನೀಡಿದ್ರು.ವಿಧಾನಸೌಧದ ಸುತ್ತಮುತ್ತ ಬಸನಗೌಡ ಬಾರ್ದಲಿ ಪ್ರಮಾಣ ವಚನ ಸ್ವೀಕಾರ ಹಿನ್ನೆಲೆ ಕಾರ್ಯಕ್ರಮಕ್ಕೆ ನಲಪಾಡ್,ಇತರರಿಂದ ಶುಭ ಕೋರುವ ಫ್ಲೆಕ್ಸ್ ಹಾಕಲಾಗಿತ್ತು.ಇದನ್ನು ಕಂಡು ನಲಪಾಡ್ ಗೆ ಡಿಸಿಎಂ ಡಿ ಕೆ ಶಿವಕುಮಾರ್ ವಾರ್ನಿಂಗ್ ಕೊಟ್ಟಿದ್ದಾರೆ.ಕಾರ್ಯಕ್ರಮಕ್ಕೂ ಮುನ್ನ ವಿಧಾನಸೌಧದ ಸಮ್ಮೇಳನ ಸಭಾಂಗಣಕ್ಕೆ ಆಗಮಿಸಿದ ಯೂತ್ ಕಾಂಗ್ರೆಸ್ ಅಧ್ಯಕ್ಷ ನಲಪಾಡ್ ಅವರಿಗೆ ವಾರ್ನಿಂಗ್ ಕೊಟ್ಟಿದ್ದಾರೆ.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಲಪಾಡ್ ಅವರನ್ನು ನೋಡಿದ ಕೂಡಲೇ ಯಾರೋ ಫ್ಲೆಕ್ಸ್ ಹಾಕಿಸಿದ್ದು.ಕೇಸ್ ಹಾಕಿಸ್ತೀನಿ ಅಂತ ನಲಪಾಡ್ ಮೇಲೆ ಡಿಕೆ ಆಕ್ರೋಶ ಹೊರಹಾಕಿದ್ದಾರೆ. ಆಗ ನಲಪಾಡ್ ನಾನು ಹಾಕಿಸಿಲ್ಲ ಎಂದಿದ್ದಾರೆ.ಕೂಡಲೇ ಹಿಂದೆ ಇದ್ದ ಫ್ಲೆಕ್ಸ್ ಹಾಕಿಸಿದ್ದ ಕಾರ್ಯಕರ್ತನಿಗೆ ಯಾಕೆ ಹಾಕಿದ್ದು.ಅವನ್ಯಾರು ಕೋಲಾರದವನು,ಕೇಸ್ ಹಾಕಿಸೋಕೆ ಹೇಳಿದ್ದೀನಿ ಅಂತ ಗದರಿದ್ದಾರೆ ಡಿಕೆಶಿವಕುಮಾರ್.